ಭೀಕರ ಆಪತ್ಕಾಲವನ್ನು ಎದುರಿಸಲು ಸಾಧನೆಯ ಬಲವನ್ನು ಸತತವಾಗಿ ಹೆಚ್ಚಿಸುವುದು ಆವಶ್ಯಕ !

ಪೂ. ರಮಾನಂದ ಗೌಡ

ಕೊರೊನಾ ಮಹಾಮಾರಿಯ ಪ್ರಕೋಪದ ಸಮಯದಲ್ಲಿ ‘ಸಾಧಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಆಧಾರವೆನಿಸಬೇಕು ಮತ್ತು ಸಾಧನೆ ಪ್ರೇರಣೆ ಸಿಗಬೇಕೆಂದು’, ಒಂದು ಸತ್ಸಂಗದ ಆಯೋಜನೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾರ್ಗದರ್ಶನ ಸಿಗಬೇಕೆಂಬ ಉದ್ದೇಶದಿಂದ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನವನ್ನು ಆಯೋಜಿಸಲಾಗಿತ್ತು. ಈ ‘ಆನ್‌ಲೈನ್’ ಮಾರ್ಗದರ್ಶನದಿಂದ ೧ ಸಹಸ್ರ ೮೨೦ ಸಾಧಕರು ಮತ್ತು ಧರ್ಮಪ್ರೇಮಿಗಳು ಲಾಭವನ್ನು ಪಡೆದರು. ಆ ಮಾರ್ಗದರ್ಶನದ ಕೆಲವು ಅಂಶಗಳನ್ನು ಇಲ್ಲಿ ಕೊಡಲಾಗಿದೆ.

ಸೌ. ಮಂಜುಳಾ ಗೌಡ

೧. ಸಮಾಜವು ಧರ್ಮಾಚರಣೆಯನ್ನು ಮಾಡದಿರುವುದರಿಂದ ರಜ-ತಮವು ಅಪಾರ ಪ್ರಮಾಣದಲ್ಲಿ ಹೆಚ್ಚಿದುದರಿಂದ ಸಮಷ್ಟಿ ಪ್ರಾರಬ್ಧವೂ ಹೆಚ್ಚಾಗುವುದು, ಅದರಿಂದ ಮುಂದೆ ಬಹಳಷ್ಟು ದೊಡ್ಡ ಸಂಕಟಗಳು ಬರಲಿವೆ ಮತ್ತು ಈ ಆಪತ್ಕಾಲದಲ್ಲಿ ಬದುಕುಳಿಯಲು ಸಾಧನೆಯ ಅವಶ್ಯಕತೆ ಬಹಳ ಇರುವುದು

ಸದ್ಯ ಸಮಾಜದ ಜನರು ಸಾಧನೆ ಮತ್ತು ಧರ್ಮಾಚರಣೆಯನ್ನು ಮಾಡುವುದಿಲ್ಲ. ಅದರಿಂದ ವಾತಾವರಣದಲ್ಲಿ ರಜ-ತಮವು ಹೆಚ್ಚಾಗಿ ಪ್ರತಿಯೊಂದು ವಿಷಯದ ಮೇಲೆ ಅದರಿಂದ ಪರಿಣಾಮವಾಗುತ್ತಿದೆ. ಅದರಿಂದ ಸಮಷ್ಟಿ ಪ್ರಾರಬ್ಧವೂ ಹೆಚ್ಚಾಗಿದೆ. ಸಮಷ್ಟಿ ಪಾಪವನ್ನು ಎಲ್ಲರೂ ಸಹಿಸಲೇಬೇಕಾಗುತ್ತದೆ. ಈ ಹೆಚ್ಚಾಗಿರುವ ರಜ-ತಮವನ್ನು ನಾಶಗೊಳಿಸಲು ಭಗವಂತನು ಪ್ರಕೃತಿ (ನಿಸರ್ಗ) ಮತ್ತು ಮಾನವನನ್ನೇ ಮಾಧ್ಯಮವನ್ನಾಗಿಸುತ್ತಾನೆ. ಪರಿಣಾಮವಾಗಿ ‘ಮುಂಬರುವ ಕಾಲದಲ್ಲಿ ದೊಡ್ಡ ಘಟನೆಗಳು, ನೈಸರ್ಗಿಕ ಆಪತ್ತುಗಳು ಮತ್ತು ಸೊಂಕು ರೋಗಗಳ ಪ್ರಮಾಣವು ಹೆಚ್ಚಾಗಲಿವೆ’, ಹೀಗೆಂದು ದಾರ್ಶನಿಕರು, ಸಂತರು ಮತ್ತು ಭವಿಷ್ಯಕಾರರು ಮೊದಲೆ ಹೇಳಿಟ್ಟಿದ್ದಾರೆ. ಇಂತಹ ಭೀಕರ ಆಪತ್ಕಾಲದಲ್ಲಿ ಬದುಕುಳಿಯಲು ಸಾಧನೆಯ ಅವಶ್ಯಕತೆಯು ಬಹಳಷ್ಟಿದೆ.

೨. ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನ ಪ್ರಕ್ರಿಯೆ, ಎಂದರೆ ಆತ್ಮವನ್ನು ಪರಮಾತ್ಮನ ಜೊತೆಗೆ ಜೋಡಿಸುವ ಪ್ರಕ್ರಿಯೆ

ನಮ್ಮ ಜೀವನದಲ್ಲಿ ಮತ್ತು ಸಾಧನೆಯಲ್ಲಿನ ಅಡಚಣೆಗಳನ್ನು ಉಂಟು ಮಾಡುವ ನಮ್ಮ ಸ್ವಭಾವದೋಷಗಳನ್ನು ದೂರಗೊಳಿಸಲು ಎಷ್ಟು ತಳಮಳದಿಂದ ಪ್ರಯತ್ನಿಸುತ್ತೇವೆಯೋ, ಅಷ್ಟು ಬೇಗ ನಮ್ಮಲ್ಲಿ ಬದಲಾವಣೆಯಾಗುತ್ತದೆ ಮತ್ತು ಕೊಡುಕೊಳ್ಳುವಿಕೆಯ ಲೆಕ್ಕ ಬೇಗನೆ ಮುಗಿಯುತ್ತದೆ. ಮನಸ್ಸು, ಬುದ್ಧಿ ಮತ್ತು ಚಿತ್ತ ಇವುಗಳ ಶುದ್ಧಿಯಾಗಬೇಕು. ಅಹಂ ಕಡಿಮೆಯಾಗಬೇಕು. ಅದಕ್ಕಾಗಿ ಗುರುದೇವರು ಹೇಳಿರುವ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಬೇಕು. ಇದು ಸತ್ಯ-ಶೋಧನೆಯ ಪ್ರಕ್ರಿಯೆಯಾಗಿದೆ. ಇದು ಅಂತಿಮ ಸತ್ಯಕ್ಕೆ ಅಂದರೆ ಆತ್ಮವನ್ನು ಪರಮಾತ್ಮನಿಗೆ ಜೋಡಿಸುವ ಪ್ರಕ್ರಿಯೆಯಾಗಿರುವುದರಿಂದ ಆನಂದದಾಯಿಯಾಗಿದೆ. ಅದನ್ನು ನಾವು ಜಿಗಟುತನದಿಂದ, ಸಂಪೂರ್ಣ ಶ್ರದ್ಧೆಯಿಂದ ಮತ್ತು ಸತತವಾಗಿ ಮಾಡಬೇಕು.

೩. ಆಪತ್ಕಾಲದಲ್ಲಿ ಗುರುದೇವರು ಕೊಟ್ಟಿರುವ ಸೇವೆಯನ್ನು ಅವರ ಪ್ರಸಾದವೆಂದು ಸ್ವೀಕರಿಸಬೇಕು

ಸೇವೆ ಎಂದರೆ ಗುರುದೇವರು ಕೊಟ್ಟಿರುವ ಮಹಾಪ್ರಸಾದವಾಗಿದೆ. ಯಾವ ಸಾಧಕರು ತಳಮಳದಿಂದ, ಜವಾಬ್ದಾರಿ ತೆಗೆದುಕೊಂಡು, ಮತ್ತು ಪರಿಶ್ರಮಪೂರ್ವಕವಾಗಿ ಸೇವೆ ಮಾಡುತ್ತಾರೋ, ಆ ಜೀವಗಳ ಮೇಲೆ ಅಖಂಡವಾಗಿ ಗುರುಕೃಪೆಯು ಕಾರ್ಯನಿರತವಾಗಿರುತ್ತದೆ. ಯಾವ ಜೀವಗಳು ಇತರ ಜೀವಗಳನ್ನು ಸಾಧನೆಗೆ ಜೋಡಿಸಲು ಸತತವಾಗಿ ಪ್ರಯತ್ನಿಸುತ್ತವೆಯೋ, ಅವುಗಳಿಗೆ ಭಗವಂತನ ಸಹಾಯ ಸತತವಾಗಿ ಸಿಗುತ್ತದೆ. ಸಮಯ ವ್ಯರ್ಥ ಮಾಡದೆ ಎಲ್ಲ ಸೇವೆಗಳನ್ನು ಒಳ್ಳೆಯ ರೀತಿಯಲ್ಲಿ ಆಯೋಜಿಸಿ ಸತತವಾಗಿ ಭಾವಪೂರ್ಣ ಗುರುಸೇವೆ ಮಾಡುವ ಪ್ರಯತ್ನಿಸೋಣ ಮತ್ತು ಸತತವಾಗಿ ಸತ್‌ನಲ್ಲಿ ಇರುವ ಪ್ರಯತ್ನಿಸೋಣ.

೪. ‘ಭಗವಂತನ ಬಗ್ಗೆ ಉತ್ಕಟ ಭಕ್ತಿ ಮತ್ತು ಭಾವ’ ಇರುವ ಜೀವದ ಆರೈಕೆಯನ್ನು ಭಗವಂತನೇ ಮಾಡುತ್ತಿರುವುದು

ಈಗಿನ ಕಾಲದಲ್ಲಿ ಭಕ್ತಿಭಾವ ಹೆಚ್ಚಿಸುವುದು ಅನಿವಾರ್ಯವಾಗಿದೆ. ಭಾವವೆಂದರೆ ‘ಈಶ್ವರನೇ ಬೇಕು’, ಎಂಬ ಉತ್ಕಟ ಇಚ್ಛೆ ಇರುವುದು ! ಭಾವವಿರುವ ಜೀವಕ್ಕೆ ‘ಸತತವಾಗಿ ಭಗವಂತನು ತನ್ನ ಜೊತೆಯಲ್ಲಿರುವನು’, ಎಂಬ ಅರಿವಿರುತ್ತದೆ. ಈ ಜೀವದ ಆರೈಕೆಯನ್ನು ಸಾಕ್ಷಾತ ಭಗವಂತನೇ ಸತತವಾಗಿ ಮಾಡುತ್ತಿರುತ್ತಾನೆ. ಇಂತಹ ಭಕ್ತಿಭಾವದ ಒಳ್ಳೆಯ ಉದಾಹರಣೆಯೆಂದರೆ ಭಕ್ತ ಪ್ರಹ್ಲಾದ ! ನರಸಿಂಹ ದೇವರು ಕೇವಲ ಭಕ್ತ ಪ್ರಹ್ಲಾದನಿಗಾಗಿ ಅವತಾರ ತಾಳಿದರು. ನಾವು ಸಹ ಹೀಗೆ ಭಕ್ತನಾಗಲು ಸತತವಾಗಿ ಪ್ರಯತ್ನಿಸಬೇಕು. ಅದಕ್ಕಾಗಿ ನಾವೆಲ್ಲರೂ ಶ್ರೀಗುರುಗಳು ಇಚ್ಛಿಸಿದ ರೀತಿಯಲ್ಲಿ ಸಾಧನೆಯನ್ನು ಮಾಡೋಣ ಮತ್ತು ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ.

೫. ಗುರುದೇವರು ಇದು ವರೆಗೆ ಅನೇಕ ಪ್ರಸಂಗಗಳಲ್ಲಿ ರಕ್ಷಿಸಿದ್ದಾರೆ, ಮುಂದೆ ಬರುವ ಆಪತ್ಕಾಲದಲ್ಲೂ ಅವರು ರಕ್ಷಿಸುವವರೇ ಇದ್ದಾರೆ

ಒಂದು ಪಕ್ಷ ನಮ್ಮ ಜೀವನದಲ್ಲಿ ಗುರುಗಳು ಬರದೇ ಇದ್ದರೆ, ನಮ್ಮ ಜೀವನಕ್ಕೆ ಅರ್ಥವೇ ಇಲ್ಲದಂತಾಗುತ್ತಿತ್ತು. ನಾವೂ ಎಲ್ಲರಂತೆ ಭೀತಿ, ಒತ್ತಡ ಮತ್ತು ದುಃಖದಲ್ಲಿ ಇರುತ್ತಿದ್ದೆವು. ಗುರುದೇವರು ನಮ್ಮನ್ನು ಅನೇಕ ಪ್ರಸಂಗ ಮತ್ತು ಪರಿಸ್ಥಿತಿಗಳಿಂದ ಹೊರ ತೆಗೆದಿದ್ದಾರೆ. ಅವರ ದಿವ್ಯದೃಷ್ಟಿ ನಮ್ಮ ಮೇಲೆ ಇರುವುದರಿಂದ ಇಂದು ನಾವು ಜೀವಂತವಾಗಿದ್ದೇವೆ. ನಾವೆಲ್ಲರೂ ಅವರಿಗೆ ಅಪೇಕ್ಷಿತ ರೀತಿಯಲ್ಲಿ ಸಾಧನೆಯನ್ನು ಮಾಡೋಣ. ಗುರುದೇವರ ‘ಹಿಂದು ರಾಷ್ಟ್ರ’ ಸ್ಥಾಪನೆಯ ಮಹಾನ ಕಾರ್ಯದಲ್ಲಿ ಭಾಗವಹಿಸಿ ನಮ್ಮ ಜೀವನವನ್ನು ಸಾರ್ಥಕಗೊಳಿಸುವ ಗುರುದೇವರು ಇದು ವರೆಗೆ ನಮಗಾಗಿ ಏನೆಲ್ಲ ಮಾಡಿದ್ದಾರೆ, ಅದೆಲ್ಲವನ್ನು ಜೀವನದ ಅಂತ್ಯದ ವರೆಗೆ ಸ್ಮರಣೆಯಲ್ಲಿಟ್ಟು ನಾವು ಕೃತಜ್ಞತೆಯ ಭಾವದಲ್ಲಿರೋಣ.’

೬. ಸಾಧಕರ ಅರಿವಿಗೆ ಬಂದ ಅಂಶಗಳು

೬ ಅ. ಸೌ. ಉಮಾ ಉಪಾಧ್ಯೆ, ಕುಣಿಗಲ, ತುಮಕೂರು ಜಿಲ್ಲೆ.

೬ ಅ ೧. ೫ ದಿನಗಳಲ್ಲಿ ನನ್ನ ಕುಟುಂಬದ ಮೂರು ಮಂದಿ ನಿಧನವಾದುದರಿಂದ ನನ್ನ ಮನಸ್ಸಿನಲ್ಲಿ ಬಹಳಷ್ಟು ನಕಾರಾತ್ಮಕ ವಿಚಾರಗಳು ಬರುತ್ತಿದ್ದವು. ‘ನನಗೂ ತೊಂದರೆಯಾದರೆ ?’, ಎಂಬ ಭಯವೂ ಆಗುತ್ತಿತ್ತು. ಪೂ. ಅಣ್ಣನವರ ಮಾರ್ಗ ದರ್ಶನ ಕೇಳಿದ ಮೇಲೆ ಮನಸ್ಸಿನಲ್ಲಿ ಸಕಾರಾತ್ಮಕತೆಯು ಮೂಡಿತು. ‘ಗುರುದೇವರು ನನ್ನ ರಕ್ಷಣೆ ಮಾಡುವರು’, ಎಂಬ ವಿಶ್ವಾಸವು ಹೆಚ್ಚಾಯಿತು. ಅದಕ್ಕಾಗಿ ಗುರುಚರಣಗಳಲ್ಲಿ ಕೋಟಿಕೋಟಿ ಕೃತಜ್ಞತೆಗಳು.’

೬ ಆ. ಓರ್ವ ಸಾಧಕ

೬ ಆ ೧. ಶಾರೀರಿಕ ತೊಂದರೆಗೆ ಪ್ರಾರಂಭವಾದಾಗ ಪೂ. ಅಣ್ಣನವರ ಮಾರ್ಗದರ್ಶನದಿಂದ ಮನಸ್ಸು ವಿಚಲಿತವಾಗಲಿಲ್ಲ : ‘ಪೂ. ಅಣ್ಣನವರು ‘ಆಪತ್ಕಾಲದಲ್ಲಿ ಅಥವಾ ಕೊರೊನಾದ ಬಗ್ಗೆ ಭಯ ಉಂಟಾದಾಗ ಯಾವರೀತಿಯಲ್ಲಿ ಸ್ವಯಂಸೂಚನೆಯನ್ನು ಕೊಟ್ಟು ಅದರಿಂದ ಹೊರಗೆ ಬರುವುದು ?’, ಈ ವಿಷಯದಲ್ಲಿ ವಿಸ್ತಾರವಾಗಿ ಮಾರ್ಗದರ್ಶನ ಮಾಡಿದರು. ಅನಂತರ ಒಂದು ದಿನ ನನಗೆ ಜ್ವರ, ಮೈಕೈ ಮತ್ತು ತಲೆನೋವು ಹೀಗೆ ಎಲ್ಲವೂ ಪ್ರಾರಂಭವಾಯಿತು; ಆದರೆ ಪೂ. ಅಣ್ಣನವರ ಮಾರ್ಗದರ್ಶನದಿಂದಾಗಿ ಸ್ಥಿರವಾಗಿದ್ದ ಕಾರಣ ನನ್ನ ಮನಸ್ಸು ವಿಚಲಿತವಾಗಲಿಲ್ಲ. ಇದು ಕೇವಲ ಗುರುಕೃಪೆಯಿಂದಲೇ ಸಾಧ್ಯವಾಯಿತು.’

೭ ಅ. ಸೌ. ಶೀಲಾ ದಾತಾರ, ಹನುಮಂತ ನಗರ, ಬೆಂಗಳೂರು.

೭ ಅ ೧. ‘ವಾಣಿಯಲ್ಲಿ ಚೈತನ್ಯವಿದ್ದರೆ ಭಾಷೆಗೆ ಮಹತ್ವವಿಲ್ಲ’, ಇದು ಕಲಿಯಲು ಸಿಕ್ಕಿತು : ‘ನಾನು ಅಹಮದಾಬಾದಿನಿಂದ ಇತ್ತಿಚಿಗೆ ಬೆಂಗಳೂರಿಗೆ ಬಂದಿದ್ದೇನೆ. ನನಗೆ ಕನ್ನಡಭಾಷೆಯು ತಿಳಿಯುವುದಿಲ್ಲ; ಆದರೆ ನನಗೆ ಪೂ. ಅಣ್ಣಾನವರ ಮಾರ್ಗದರ್ಶನ ಸಂಪೂರ್ಣವಾಗಿ ತಿಳಿಯಿತು. ಆ ಮಾರ್ಗದರ್ಶನವು ನನಗೆ ಬರೆಯಲು ಸಾಧ್ಯವಾಯಿತು. ಅದರಿಂದ ‘ವಾಣಿಯಲ್ಲಿ ಚೈತ್ಯನ್ಯವಿದ್ದರೆ, ಭಾಷೆಗೆ ಮಹತ್ವವಿಲ್ಲ’, ಇದು ನನ್ನ ಗಮನಕ್ಕೆ ಬಂದಿತು. ಅದರಿಂದ ನನಗೆ ಗುರುದೇವರು ಮತ್ತು ಪೂ. ಅಣ್ಣನವರ ಬಗ್ಗೆ ಬಹಳಷ್ಟು ಕೃತಜ್ಞತೆ ಎನಿಸಿತು.’

೮. ಧರ್ಮಪ್ರೇಮಿಗಳು ವ್ಯಕ್ತಪಡಿಸಿದ ಮನೋಗತ

೮ ಅ. ಸೌ. ರಶ್ಮಿ ಅಮೃತ, ಧರ್ಮಪ್ರೇಮಿ, ಕುಶಾಲನಗರ.

೮ ಅ ೧. ಪೂ. ಅಣ್ಣನವರ ಮಾರ್ಗದರ್ಶನ ಕೇಳಿ ನಿರುತ್ಸಾಹವು ದೂರವಾಗುವುದು : ಪೂ. ಅಣ್ಣನವರ ಮಾರ್ಗದರ್ಶನದ ದಿನ ಸತ್ಸಂಗ ಪ್ರಾರಂಭವಾಗುವ ಮುನ್ನ ಅನೇಕ ಸಾಧಕರಿಗೆ ತೊಂದರೆಯಾಗಿ ಶಾರೀಕ ಅಡೆತಡೆಗಳು ಬರುತ್ತಿದ್ದವು. ಸಾಧರಿಗೆ ‘ಈ ಸತ್ಸಂಗವನ್ನು ಮಲಗಿಕೊಂಡೆ ಕೇಳೋಣ’, ಎನ್ನುವಷ್ಟು ನಿರುತ್ಸಾಹವು ಬಂದಿತ್ತು. ಆದರೆ ಪೂ. ಅಣ್ಣನವರ ಮಾರ್ಗದರ್ಶನ ಕೇಳಿದ ತಕ್ಷಣವೇ ಎಲ್ಲರ ನಿರುತ್ಸಾಹ ಮತ್ತು ತೊಂದರೆಯು ದೂರವಾಗಿ ಅವರಲ್ಲಿ ಉತ್ಸಾಹವು ನಿರ್ಮಾಣವಾಯಿತು.

೮ ಅ ೨. ತೀವ್ರ ಶಾರೀರಿಕ ತೊಂದರೆ ಆಗುತ್ತಿದ್ದಾಗಲೂ ಮಾರ್ಗದರ್ಶನದ ಸಮಯದಲ್ಲಿ ಅದರ ಅರಿವಾಗದೆ ಇರುವುದು : ‘ನಾವು ಸಾಧನೆಯನ್ನು ಹೆಚ್ಚಾಗಿ  ಹೇಗೆ ಮತ್ತು ಏಕೆ ಮಾಡಬೇಕು ?’, ಇದರ ಅರಿವು ನಿರ್ಮಾಣವಾಯಿತು. ನಮ್ಮ ಮನೆಯಲ್ಲಿ ೪ ಜನ ತೀವ್ರ ಜ್ವರದಿಂದ ಬಳಲುತ್ತಿದ್ದರು. ನನ್ನ ರೋಗನಿರೋಧಕ ಶಕ್ತಿಯು ಕಡಿಮೆ ಇದ್ದು ನನಗೆ ಇತರ ಶಾರೀರಿಕ ತೊಂದರೆಗಳೂ ಇವೆ. ಪೂ. ಅಣ್ಣನವರ ಮಾರ್ಗದರ್ಶನದ ಸಮಯದಲ್ಲಿ ನನಗೆ ಯಾವುದರ ಅರಿವಾಗಲಿಲ್ಲ. ಇದಕ್ಕಾಗಿ ನನಗೆ ಗುರುದೇವರ ಬಗ್ಗೆ ಬಹಳಷ್ಟು ಕೃತಜ್ಞತೆ ಎನಿಸುತ್ತದೆ.

೯. ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಿಂದಾದ ಲಾಭ

‘ಈ ಮಾರ್ಗದರ್ಶನದಿಂದ ಸಾಧಕರು ಮತ್ತು ಧರ್ಮಪ್ರೇಮಿಗಳಲ್ಲಿದ್ದ ಭಯ, ಚಿಂತೆ, ನಕಾರಾತ್ಮಕ ವಿಚಾರಗಳು ಕಡಿಮೆಯಾಗಿ ಅವರಿಗೆ ಆಧಾರ ಮತ್ತು ಪ್ರೇರಣೆ ಸಿಕ್ಕಿತು. ಎಲ್ಲರ ಸಾಧನೆಯ ಗತಿ ಹೆಚ್ಚಾಗಿ ಉತ್ಸಾಹ ನಿರ್ಮಾಣವಾಯಿತು.

೯ ಅ. ಮುಂದೆ ಬರಲಿರುವ ಆಪತ್ಕಾಲದ ಭೀಕರತೆಯ ಬಗ್ಗೆ ಅರಿವು ಮಾಡಿಕೊಡುವಾಗ ಸಾಧಕರಲ್ಲಿದ್ದ ಭೀತಿ ಮತ್ತು ಒತ್ತಡ ದೂರ ಮಾಡುವ ಪೂ. ಅಣ್ಣನವರ ಮಾರ್ಗದರ್ಶನ !

ಪೂ. ಅಣ್ಣನವರು ಮುಂದೆ ಬರುವ ಆಪತ್ಕಾಲದ ಭೀಕರತೆಯ ಬಗ್ಗೆ ಸಾಧಕರಿಗೆ ಅರಿವು ಮಾಡಿಕೊಡುವಾಗ ಅವರಲ್ಲಿದ್ದ ಭೀತಿ ಮತ್ತು ಒತ್ತಡವನ್ನು ದೂರ ಮಾಡಿದರು. ‘ಎಲ್ಲರಿಂದಲೂ ಯೋಗ್ಯ ಸಾಧನೆಯಾಗಬೇಕು’, ಈ ತೀವ್ರ ತಳಮಳವನ್ನು ಇಟ್ಟು ಪೂ. ರಮಾನಂದ ಅಣ್ಣನವರು ತಮ್ಮ ಮಾರ್ಗದರ್ಶನದ ನಿಯೋಜನೆಯನ್ನು ಮಾಡಿದರು. ಅದರಿಂದ ಈಗ ಎಲ್ಲರಲ್ಲಿ ‘ಸಾಧನೆಯನ್ನೇ ಮಾಡಬೇಕು. ಸಾಧನೆಯ ವೇಗವನ್ನು ಹೆಚ್ಚಿಸಬೇಕು’, ಎಂಬ ಇಚ್ಛೆಯು ನಿರ್ಮಾಣವಾಗಿ ಉತ್ಸಾಹವು ಹೆಚ್ಚಿತು ಮತ್ತು ಎಲ್ಲರಿಗೂ ಆಧಾರ ಮತ್ತು ಪ್ರೇರಣೆಯು ಸಿಕ್ಕಿತು. ಇದೆಲ್ಲವೂ ಪೂ. ಅಣ್ಣನವರ ಮಾರ್ಗದರ್ಶನ ಮತ್ತು ಶ್ರೀಗುರುಗಳ ಕೃಪೆಯಿಂದ ಸಾಧ್ಯವಾಯಿತು. ಅದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಶ್ರೀಚರಣಗಳಲ್ಲಿ ಕೋಟಿಕೋಟಿ ಕೃತಜ್ಞತೆಗಳು.’

– ಸೌ. ಮಂಜುಳಾ ಗೌಡ, (ಪೂ. ರಮಾನಂದ ಗೌಡ ಇವರ ಪತ್ನಿ) (ಆಧ್ಯಾತ್ಮಿಕ ಮಟ್ಟ ಶೇ.೬೬, (೨.೬.೨೦೨೧)