ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯಕ್ಕಾಗಿ ಸೂರ್ಯನ ಉಪಾಸನೆ ಮಾಡಲಾಗುತ್ತದೆ. ಸೂರ್ಯನಮಸ್ಕಾರದ ಅಭ್ಯಾಸದಿಂದ ಆರೋಗ್ಯವಂತ ದೇಹ, ನಿರ್ಮಲ ಮನಸ್ಸು ಹಾಗೂ ಎಲ್ಲಾರೀತಿಯ ಆರೋಗ್ಯಪ್ರಾಪ್ತಿ ಆಗುತ್ತದೆ. ಸಣ್ಣವರಿಂದ ಹಿಡಿದು ವಯಸ್ಸಾದವರು ಎಲ್ಲರೂ ಸೂರ್ಯನಮಸ್ಕಾರದ ಅಭ್ಯಾಸ ಮಾಡಬಹುದು. ಸೂರ್ಯನಮಸ್ಕಾರವು ಬೀಜಮಂತ್ರವಾಗಿರುವುದರ ಜೊತೆಗೆ ಸೂರ್ಯದೇವತೆಯ ವಿವಿಧ ನಾಮಗಳ ಉಚ್ಚಾರಣೆ ಮಾಡುವುದರಿಂದ ಉಪಾಸನೆ ಮತ್ತು ವ್ಯಾಯಾಮ ಹೀಗೆ ಎರಡೂ ರೀತಿಯಲ್ಲಿ ನಮಗೆ ಲಾಭವಾಗುತ್ತದೆ. ಸೂರ್ಯನಮಸ್ಕಾರದಲ್ಲಿ ಆಸನ, ಪ್ರಾಣಾಯಾಮ, ಷಟ್ಚಕ್ರ ಜಾಗರಣ ಅದೇ ರೀತಿ ಮಂತ್ರೋಚ್ಚಾರವಾಗಿರುವ ಇದೊಂದು ರೀತಿಯ ಪರಿಪೂರ್ಣ ಯೋಗಸಾಧನೆಯೇ ಆಗಿದೆ. – ವೈದ್ಯೆ (ಸೌ.) ಮುಕ್ತಾ ಲೊಟಲಿಕರ, ಪುಣೆ (೧೪.೨.೨೦೨೪)

ಸೂರ್ಯ ನಮಸ್ಕಾರದ ಲಾಭಗಳು
೧. ಎಲ್ಲಾ ಪ್ರಮುಖ ಅಂಗಗಳಿಗೆ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ.
೨. ಹೃದಯ ಮತ್ತು ಶ್ವಾಸಕೋಶದ ಕಾರ್ಯಕ್ಷಮತೆ ಹೆಚ್ಚಾಗುತ್ತದೆ.
೩. ತೋಳು ಮತ್ತು ಸೊಂಟದ ಸ್ನಾಯುಗಳು ಬಲಗೊಳ್ಳುತ್ತವೆ.
೪. ಬೆನ್ನುಮೂಳೆ ಮತ್ತು ಸೊಂಟವು ನುಣುಪಾಗುತ್ತದೆ (ಫ್ಲೆಕ್ಸಿಬಲ್).
೫. ಇದು ಹೊಟ್ಟೆಯ ಬಳಿ ಇರುವ ಕೊಬ್ಬನ್ನು ಕರಗಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ.
೬. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
೭. ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ.
(ಸಂದರ್ಭ : ಸನಾತನದ ಗ್ರಂಥ ‘ದಿನಚರಿ’)
ಸೂರ್ಯನಮಸ್ಕಾರದ ವೇಳೆ ಹೇಳುವ ಸೂರ್ಯನ ೧೨ ಮಂತ್ರಗಳು
೧. ಓಂ ಮಿತ್ರಾಯ ನಮಃ |
೨. ಓಂ ರವಯೇ ನಮಃ |
೩. ಓಂ ಸೂರ್ಯಾಯ ನಮಃ |
೪. ಓಂ ಭಾನವೇ ನಮಃ |
೫. ಓಂ ಖಗಾಯ ನಮಃ |
೬. ಓಂ ಪೂಷ್ಣೇ ನಮಃ |
೭. ಓಂ ಹಿರಣ್ಯಗರ್ಭಾಯ ನಮಃ |
೮. ಓಂ ಮರೀಚಯೇ ನಮಃ |
೯. ಓಂ ಆದಿತ್ಯಾಯ ನಮಃ |
೧೦. ಓಂ ಸವಿತ್ರೇ ನಮಃ |
೧೧. ಓಂ ಅರ್ಕಾಯ ನಮಃ |
೧೨. ಓಂ ಭಾಸ್ಕರಾಯ ನಮಃ |