ಬಿಲ್ವದ ಕಾಯಿ ಹೇಗೆ ಶಿವಪೂಜೆಯಲ್ಲಿ ಮಹತ್ವದ್ದಾಗಿದೆಯೋ, ಹಾಗೆಯೇ ನೆಲ್ಲಿಕಾಯಿ ವಿಷ್ಣುಪೂಜೆಯಲ್ಲಿ ಮಹತ್ವದ್ದಾಗಿದೆ ! ಯಾರಾದರೂ ನೆಲ್ಲಿಕಾಯಿಯನ್ನು ಕೊಟ್ಟು ಕುಂಬಳಕಾಯಿಯನ್ನು ತೆಗೆದುಕೊಳ್ಳಲು ಹೋದರೆ ಅವರು ತಮ್ಮ ಹಾನಿಯನ್ನು ತಾವೇ ಮಾಡಿಕೊಳ್ಳುವರು; ಏಕೆಂದರೆ ನೆಲ್ಲಿಕಾಯಿಯು ವಯಃಸ್ಥಾಪನ, ಅಂದರೆ ‘ಡಿಜನರೆಟಿವ್ ಚೆಂಜೆಸ್’ನ (degenerative changes), ಶರೀರ ಸವೆಯುವ ವೇಗವನ್ನು ಕಡಿಮೆ ಮಾಡಲು ಅತ್ಯುತ್ತಮವಾಗಿದೆ !

ದಾಯಿಯಂತೆ ಅದು ತನ್ನನ್ನು ತಾನು ಪೋಷಿಸಿಕೊಳ್ಳುವುದರಿಂದ ಅದಕ್ಕೆ ದಾಯಿಯ ಅರ್ಥದಲ್ಲಿ ಧಾತ್ರಿ ಎಂಬ ಪರ್ಯಾಯ ಶಬ್ದವನ್ನು ಆಯುರ್ವೇದವು ನೀಡಿದೆ. ಮೃತ್ಯುಭಯವಿರುವ ಸ್ಥಿತಿಯಲ್ಲಿ ‘ಸ್ವರ್ಣಧಾತ್ರಿಯೋಗ ರಸಾಯನ’ವನ್ನು ಸುಶ್ರುತಾಚಾರ್ಯರು ಹೇಳಿದ್ದಾರೆ. ಉತ್ತಮ ನೆಲ್ಲಿಕಾಯಿಯು ರಸಭರಿತ ಮತ್ತು ಪಾರದರ್ಶಕವಾಗಿರುತ್ತದೆ. ಅದರ ಪಾರದರ್ಶಕದ ಉದಾಹರಣೆ ಎಂದು ಸಾಹಿತ್ಯದಲ್ಲಿ ಬಳಸಿದ್ದು ಕಂಡುಬರುತ್ತದೆ. ಗೋಸ್ವಾಮಿ ತುಳಸಿದಾಸರು ಮಹರ್ಷಿ ಯಾಜ್ಞವಲ್ಕ್ಯ ಮತ್ತು ಮಹರ್ಷಿ ಭರದ್ವಾಜ ಇವರನ್ನು ವರ್ಣಿಸುವಾಗ ‘ರಾಮಚರಿತಮಾನಸ’ದಲ್ಲಿ ‘ಜಾನಹಿಂ ತೀನಿ ಕಾಲ ನಿಜ ಗ್ಯಾನಾ | ಕರತಲ ಗತ ಆಮಲಕ ಸಮಾನ |’ ಅಂಗೈ ಮೇಲೆ ಇಟ್ಟಿರುವ ನೆಲ್ಲಿಕಾಯಿಯಷ್ಟು ಪಾರದರ್ಶಕವಾಗಿರುವ ಭೂತ, ವರ್ತಮಾನ ಮತ್ತು ಭವಿಷ್ಯದ ಜ್ಞಾನವು ಈ ಮುನಿಗಳಲ್ಲಿದೆ.
ವನಸ್ಪತಿಶಾಸ್ತ್ರ ಮತ್ತು ಪಾಶ್ಚಾತ್ಯ ವೈದ್ಯಕೀಯ ಶಾಸ್ತ್ರಕ್ಕನುಸಾರ ನೆಲ್ಲಿಕಾಯಿಯಲ್ಲಿ ‘ಎಂಟಿಡೈಬೆಟಿಕ್’ (ಮಧುಮೇಹವಿರೋಧಿ), ‘ಹೈಪೋಲಿಪಿಡೆಮಿಕ್’ (ರಕ್ತದ ಸೀರಮ್‌ನಲ್ಲಿನ ಲಿಪಿಡ್‌ಗಳ ಗುಣಮಟ್ಟವನ್ನು ಕಡಿಮೆ ಮಾಡುವುದು), ‘ಎಂಟಿಮೈಕ್ರೋಬಿಯಲ್’ (ಸೂಕ್ಷ್ಮ ಜೀವನಾಶಕ), ‘ಎಂಟೀನಫ್ಲೆಮೆಟರಿ’ (ಬಾವುನಿರೋಧಕ), ‘ಎಂಟಿಆಕ್ಸಿಡೆಂಟ್’, ‘ಹೆಪೆಟೊಪ್ರೊಟೆಕ್ಟಿವ್’ (ಯಕೃತ್ತಿನ ಹಾನಿಯನ್ನು ತಡೆಗಟ್ಟುವುದು) ಮತ್ತು ‘ಎಂಟಿಎಮೇಟಿಕ್’ (ವಾಂತಿಯನ್ನು ತಡೆಗಟ್ಟುವುದು) ಈ ಗುಣಗಳನ್ನು ಪ್ರಯೋಗದ ನಂತರ ಸಿದ್ಧಪಡಿಸಲಾಗಿದೆ.
– ವೈದ್ಯ ಪರೀಕ್ಷಿತ ಶೇವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ. (೨೦.೩.೨೦೨೪)