ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಅಮೃತವಾಣಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಕತೃತ್ವವನ್ನು ದೇವರ ಚರಣಗಳಲ್ಲಿ ಅರ್ಪಿಸುವುದು

‘ಯಾವುದಾದರೊಬ್ಬನನ್ನು ಪ್ರಶಂಸಿಸುವಾಗ ಅವರಿಗೆ, ‘ನನ್ನ ಪ್ರಸಂಶೆಯನ್ನೇ ಮಾಡುತ್ತಿದ್ದಾರೆ.’ ಎಂದೆನಿಸಿ ತಮ್ಮ ಅಹಂಕಾರದ ಬಗ್ಗೆ ಹೆಮ್ಮೆಯೆನಿಸುತ್ತದೆ. ನಿಜ ಹೇಳುವುದಾದರೆ ಆ ಕಾರ್ಯವು ಅವರಲ್ಲಿನ ಆತ್ಮಶಕ್ತಿಯ ಮೂಲಕ (ಚೈತನ್ಯಶಕ್ತಿಯ ಮೂಲಕ), ಅಂದರೆ ಭಗವಂತನಿಂದಲೇ ಘಟಿಸಿರುತ್ತದೆ. ಆದುದರಿಂದ ‘ಪ್ರಸಂಶೆಯು ಆ ಭಗವಂತನದ್ದಾಗಿರುತ್ತದೆ’, ಎಂಬ ಅರಿವು ಇಟ್ಟರೆ (ಅಂದರೆ ಅವನ ಪ್ರಶಂಸೆಯನ್ನು ಅವನಿಗೇ ಅರ್ಪಣೆ ಮಾಡಿದರೆ) ಆನಂದ ಸಿಗುವುದು ಮತ್ತು ಅಹಂ ಹೆಚ್ಚುವುದೂ ಇಲ್ಲ. ಅದಕ್ಕಾಗಿಯೇ ಅಧ್ಯಾತ್ಮದಲ್ಲಿ ತ್ಯಾಗಕ್ಕೆ ಮಹತ್ವವಿದೆ.

ಸೌ. ಪ್ರಿಯಾಂಕಾ ರಾಜಹಂಸ

ಸಾಧನೆ

ಅ. ಚೈತನ್ಯಕ್ಕೇ ಮಹತ್ವವಿರುವುದರಿಂದ ಅದರ ಮೂಲಕವೇ ಕಾರ್ಯವನ್ನು ಮಾಡಬೇಕು. ಸನಾತನ ಧರ್ಮದ ಪ್ರಚಾರ, ಎಂದರೆ ಚೈತನ್ಯದ ಪ್ರಚಾರ !

ಆ. ‘ಎಷ್ಟೇ ಕಷ್ಟಪಡಬೇಕಾದರೂ, ‘ನನಗೆ ದೇವರೇ ಬೇಕು. ಅವನೇ ನನಗೆ ಪರಿಸ್ಥಿತಿಯಿಂದ ಹೊರಗೆ ತೆಗೆಯಲಿದ್ದಾನೆ’, ಎಂಬ ವಿಚಾರವನ್ನು ನಿರಂತರವಾಗಿ ಗಮನದಲ್ಲಿಡಬೇಕು.

ಇ. ನಮ್ಮ ಬುದ್ಧಿಯ ನಿರ್ಧರಿಸದಿರುವುದರಿಂದ ಸಾಧನೆಯಲ್ಲಿ ಸಾತತ್ಯವಿರುವುದಿಲ್ಲ. ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂ ಈ ಪ್ರತಿಯೊಂದರ ಕಾರ್ಯವು ನಿಶ್ಚಿತವಾಗಿರುತ್ತದೆ. ಮನಸ್ಸಿನ ಕಾರ್ಯವು ‘ಸಂಕಲ್ಪ ಮತ್ತು ವಿಕಲ್ಪವನ್ನು ನಿರ್ಮಾಣ ಮಾಡುವುದು’, ಆಗಿದೆ. ವಿಕಲ್ಪದಿಂದ ಅಡಚಣಿಗಳು ಬರುತ್ತವೆ. ಮನೋಲಯವಾದ ನಂತರವೇ ಮನಸ್ಸಿನಲ್ಲಿನ ಎಲ್ಲ ವಿಕಲ್ಪಗಳು ಮುಗಿಯುವವು. ಮನೋಲಯವಾಗಲು ಸಾಧನೆ, ಅಂದರೆ ನಾಮಜಪ ಮಾಡುವುದು, ಸತ್ಸಂಗಕ್ಕೆ ಹೋಗುವುದು, ಸತ್ಸೇವೆಯನ್ನು ಮಾಡುವುದು ಮತ್ತು ಸತ್‌ಗಾಗಿ ತ್ಯಾಗವನ್ನು ಮಾಡುವುದು, ಅಂದರೇ ‘ಗುರುಕೃಪಾಯೋಗಕ್ಕನುಸಾರ ಸಾಧನೆಯನ್ನು ಮಾಡುವುದು’ ಇತ್ಯಾದಿಗಳು ಆವಶ್ಯಕವಾಗಿದೆ.

ಈ. ಸಾಧನೆ ಯೋಗ್ಯವಾಗಿದ್ದರೆ, ಪರಿಸ್ಥಿತಿ ಹೇಗಿದ್ದರೂ, ನಾವು ಆನಂದದಿಂದಲೇ ಇರುತ್ತೇವೆ.

ಉ. ತುಂಬಾ ತೊಂದರೆಯಿಂದಾಗಿ ಜೀವನದಲ್ಲಿ ಸತತವಾಗಿ ಸಂಕಟಗಳನ್ನು ಅನುಭವಿಸುವಾಗ; ಭಗವಂತನು ಕಷ್ಟವನ್ನು ಅನುಭವಿಸಲಿಕ್ಕೆ ನಮ್ಮ ಆಯ್ಕೆಯನ್ನು ಮಾಡಿದ್ದಾನೆ, ಅಂದರೇ ‘ಅವನು ನಮ್ಮನ್ನು ಭೋಗವನ್ನು ಭೋಗಿಸಲಿಕ್ಕಾದರೂ ಮಾಧ್ಯಮವೆಂದು ಆಯ್ಕೆ ಮಾಡಿದ್ದಾನೆ’, ಎಂಬುದರ ಬಗ್ಗೆ ನಮಗೆ ಕೃತಜ್ಞತೆ ಎನಿಸಬೇಕು.’

– ಸೌ. ಪ್ರಿಯಾಂಕಾ ರಾಜಹಂಸ (ಆಧ್ಯಾತ್ಮಿಕ ಮಟ್ಟ ಶೇ. ೬೯), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೪.೨೦೨೦)