ಪಾಕಿಸ್ತಾನದ ವಿಮಾನದಲ್ಲಿ ಯಾತ್ರಿಕನಿಂದ ನಮಾಜ್

ಪೇಶಾವರ – ‘ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ ಲೈನ್ಸ್’ ನ ಪೇಶಾವರ – ದುಬೈ ವಿಮಾನದಲ್ಲಿ ಒಬ್ಬ ಯಾತ್ರಿಕನು ದಾಂಧಲೆ ನಡೆಸಿರುವ ವಿಡಿಯೋ ಪ್ರಸಾರಗೊಂಡಿದೆ. ಈ ಯಾತ್ರಿಕನು ವಿಮಾನದಲ್ಲಿ ನಮಾಜ ಮಾಡಲು ಪ್ರಯತ್ನಿಸಿದನು. ಅದರ ನಂತರ ಅವನು ಆಸನವನ್ನು ಜೋರಾಗಿ ಒದೆಯಲಾರಂಭಿಸಿದನು. ಆ ಯಾತ್ರಿಕನು ವಿಮಾನದ ಕಿಟಕಿಯ ಗಾಜು ಒಡೆಯುವ ಪ್ರಯತ್ನ ಕೂಡ ಮಾಡಿದನು. ವಿಮಾನದಲ್ಲಿನ ಸುರಕ್ಷಾ ಸಿಬ್ಬಂದಿಗಳು ಅವನನ್ನು ಆಸನದಲ್ಲಿ ಕಟ್ಟಿಹಾಕಿದರು. ಅದರ ನಂತರ ಅವನು ದುಬೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೆ ಸುರಕ್ಷಾ ಅಧಿಕಾರಿಗಳು ಅವನನ್ನು ಬಂಧಿಸಿದರು.