ಪೂ. ರಮಾನಂದ ಗೌಡ ಇವರ ಶುಭಹಸ್ತದಿಂದ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ಕ್ಕೆ ಚಾಲನೆ !

‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ಉದ್ಘಾಟಿಸುತ್ತಿರುವ ಪೂ. ರಮಾನಂದ ಗೌಡ

ಶಿವಮೊಗ್ಗ : ಸೆಪ್ಟೆಂಬರ್ ೯ ರಿಂದ ಡಿಸೆಂಬರ್ ೭ ರ ವರೆಗೆ ಸನಾತನದ ಅದ್ವಿತೀಯ ಮತ್ತು ಸರ್ವಾಂಗಸ್ಪರ್ಶಿ ಗ್ರಂಥಗಳ ಕುರಿತು ದೇಶದೆಲ್ಲೆಡೆ ಪ್ರಸಾರವನ್ನು ಮಾಡಿ ನಮ್ಮ ಧರ್ಮದ ಬಗ್ಗೆ ಮಹಾನತೆಯನ್ನು ಸಾರುವ ದೃಷ್ಟಿಯಿಂದ ಸನಾತನದ ವತಿಯಿಂದ ಭಾರತದಾದ್ಯಂತ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಅನಂತ ಚತುರ್ದಶಿಯ ಶುಭದಿನದಂದು, ಅಂದರೆ ೯ ಸಪ್ಟೆಂಬರ್ ೨೦೨೨ ರಂದು ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ಕ್ಕೆ ಚಾಲನೆ ನೀಡಿದರು. ‘ಪಂಚಮ ವೇದಕ್ಕೆ ಸಮಾನವಾಗಿರುವ ಈ ಗ್ರಂಥಗಳನ್ನು ಮನೆಮನೆಗೆ ತಲುಪಿಸಿ ಪ್ರತಿಯೊಂದು ಜೀವದ ಉದ್ಧಾರ ಮಾಡೋಣ’ ಎಂದು ಈ ಸಂದರ್ಭದಲ್ಲಿ ಪೂ. ರಮಾನಂದ ಗೌಡ ಇವರು ಕರೆ ನೀಡಿದರು.