ಅಫ್ಘಾನಿಸ್ತಾನದ ತಾಲಿಬಾನ ವಿರೋಧಿ ಪಂಜಶೀರ ನಾಯಕ ಅಹಮದ ಶಾಹ ಮಸೂದರ ಹೇಳಿಕೆ
ಕಾಬೂಲ (ಅಫ್ಘಾನಿಸ್ತಾನ) – ದೇಶದಲ್ಲಿ ತಾಲಿಬಾನ ಸರಕಾರ ಬಂದ ಬಳಿಕ ಭಾರತವು ಅಫಘಾನಿ ನಾಗರಿಕರಿಗೆ ಸಹಾಯ ಮಾಡಿದೆ ಮತ್ತು ಮಾಡುತ್ತಿದೆ. ಭಾರತವು ೪೦ ಸಾವಿರ ಟನ್ ಗೋಧಿ ಪಾಕಿಸ್ತಾನ ಮಾರ್ಗದ ಮೂಲಕ ಅಫಘಾನಿಸ್ತಾನಕ್ಕೆ ಕಳುಹಿಸಿದೆ. ಹಾಗೆಯೇ ಈಗ ಭಾರತವು ಕಾಬುಲನಲ್ಲಿ ಪುನಃ ತನ್ನ ರಾಯಭಾರ ಕಚೇರಿಯನ್ನು ತೆರೆದಿದೆ. ಈ ಹಿನ್ನೆಲೆಯಲ್ಲಿ ಅಫಘಾನಿಸ್ತಾನದ ತಾಲಿಬಾನ ವಿರೋಧಿಸುವ ಮತ್ತು ಭಾರತದ ಸ್ನೇಹಿತ ‘ನಾರ್ದನ ಅಲಾಯನ್ಸ’ ನಾಯಕ ಅಹಮದ ಶಾಹ ಮಸೂದನ ಮಗ ಮತ್ತು ಪಂಜಶೀರ ಕಣಿವೆಯ ನಾಯಕ ಅಹಮದ ಮಸೂದ ಭಾರತವನ್ನು ಎಚ್ಚರಿಸಿದ್ದಾರೆ. ಅವರು, ತಾಲಿಬಾನಿ ಭಯೋತ್ಪಾದಕರು ಭಾರತದಿಂದ ನೀಡಲಾಗಿರುವ ಸಹಾಯವನ್ನು ಅವಶ್ಯಕತೆಯಿರುವವರಿಗೆ ಕೊಡುತ್ತಿಲ್ಲ. ಈ ಸಹಾಯವನ್ನು ಅಫಘಾನಿ ನಾಗರಿಕರಿಗೆ ಕೊಡುವ ಬದಲಾಗಿ ಸೈನಿಕರಿಗೆ ಮತ್ತು ಅವರ ಕುಟುಂಬದವರ ಹೊಟ್ಟೆ ಹೊರೆಯಲು ಕೊಡಲಾಗುತ್ತಿದೆ. ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯದ ಹಿಂದೆಯೂ ತಾಲಿಬಾನ ಇದೆಯೆಂದು ಹೇಳಿದ್ದಾರೆ.
೧. ಭಾರತದಲ್ಲಿರುವ ಒಂದು ಆಂಗ್ಲ ದಿನಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅಹಮದ ಮಸೂದ ಅವರು, ತಾಲಿಬಾನ ಅಫ್ಘಾನಿಸ್ತಾನಕ್ಕೆ ಅಲ್-ಕಾಯ್ದಾ, ಜೈಶ-ಎ-ಮಹಮ್ಮದ ಮುಂತಾದ ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ತಾಣವಾಗಿದೆ. ಇದು ಭಾರತ ಮತ್ತು ಇನ್ನಿತರೆ ದೇಶಗಳಿಗೆ ಅಪಾಯಕಾರಿಯಾಗಿದೆ. ಪಾಕಿಸ್ತಾನ ತಾಲಿಬಾನಿಗಳ ರಕ್ಷಕನಾಗಿದ್ದಾನೆ. ಪಾಕಿಸ್ತಾನ ಬೆಂಕಿಯೊಂದಿಗೆ ಸರಸವಾಡುತ್ತಿದ್ದು, ಒಂದು ದಿನ ಈ ಬೆಂಕಿ ಅದನ್ನು ಸುಡಲಿದೆ ಎಂದು ಹೇಳಿದನು.
೨. ಮಸೂದನು ಮುಂದುವರಿಸುತ್ತಾ, ಅಫ್ಘಾನಿಸ್ತಾನದಲ್ಲಿ ತಾಲಿಬಾನ ಸರಕಾರ ಬಂದ ಬಳಿಕ ಕಾಶ್ಮೀರದ ಹಿಂಸಾಚಾರದಲ್ಲಿ ಅನೇಕ ಪಟ್ಟುಗಳಷ್ಟು ಹೆಚ್ಚಾಗಿದೆ. ಈ ಭಯೋತ್ಪಾದಕ ಸಂಘಟನೆಗಳಿಗೆ ಒಂದು ವೇಳೆ ಅವರು ತಾಲಿಬಾನಿಗಳಂತೆ ಹಿಂಸಾಚಾರ ಮಾಡುತ್ತಾ ಹೋದರೆ, ಭಯೋತ್ಪಾದಕ ಕೃತ್ಯವನ್ನು ಮಾಡುತ್ತಲೇ ಉಳಿದರೆ, ಅವರಿಗೆ ಬೆಂಬಲ ಸಿಗುವುದು ಮತ್ತು ಇತರೆ ದೇಶಗಳಲ್ಲಿಯೂ ಭಯೋತ್ಪಾದಕ ಸರಕಾರ ಸ್ಥಾಪನೆಯಾಗುವುದು ಎಂದು ಹೇಳಿದ್ದಾರೆ.
೩. ಮಸೂದ ತಮ್ಮ ಮಾತನ್ನು ಮುಂದುವರೆಸುತ್ತಾ, ನಾವೆಲ್ಲರೂ ಸಂಘಟಿತರಾಗಿ ಇಂತಹ ಭಯೋತ್ಪಾದಕರನ್ನು ಸೋಲಿಸಬೇಕಾಗಲಿದೆ. ಭಾರತ ಸಧ್ಯಕ್ಕೆ ಹೆದರುತ್ತಿದೆ ಮತ್ತು ಪರಿಸ್ಥಿತಿಯ ಮಾಹಿತಿಯನ್ನು ಪಡೆಯುತ್ತಿದೆ ಈ ರೀತಿಯ ಭಯ ಅಪಾಯವನ್ನು ತರಬಹುದು. ನಾವು ಭಾರತದ ಬಳಿ ಎಲ್ಲಾ ರೀತಿಯ ಸಹಾಯವನ್ನು ಕೇಳಿದ್ದೇವೆ ನಮ್ಮ ೩ ಸಾವಿರದ ೫೦೦ ಸೈನಿಕರು ಇಂದಿಗೂ ಪಂಜಶೀರ ಹಾಗೂ ಇತರ ಪ್ರಾಂತ್ಯಗಳಲ್ಲಿ ಸಕ್ರೀಯರಾಗಿದ್ದಾರೆ ಎಂದು ಹೇಳಿದರು.