`ಕಾಶಿ ವಿಶ್ವನಾಥ ಕಾರಿಡೊರ್’ನ ದರ್ಶನ ಮತ್ತು ಅನುಭವಗಳು

ಕಾಶಿ ವಿಶ್ವನಾಥ ದೇವಸ್ಥಾನ

ಸಪ್ತ ಮೋಕ್ಷನಗರಗಳಲ್ಲಿನ ಒಂದು ಮತ್ತು ೧೨ ಜೋತಿರ್ಲಿಂಗಗಳಲ್ಲಿನ ಒಂದಾಗಿರುವ ಶ್ರೀಕ್ಷೇತ್ರ ಕಾಶಿಯು ಹಿಂದೂಗಳ ಜೀವನದರ್ಶನದ ಅತ್ಯಂತ ಮಹತ್ವದ ಸ್ಥಾನವಾಗಿದೆ. ಇತ್ತೀಚೆಗೆ ಅಲ್ಲಿ ಭಗವಾನ ಕಾಶಿ ವಿಶ್ವನಾಥನ ದರ್ಶನ ಪಡೆಯುವ ಸುಯೋಗ ಬಂದಿತು. ಈ ನಿಮಿತ್ತ `ಕಾಶಿ ವಿಶ್ವನಾಥ ಕಾರಿಡೊರ’ನ ದರ್ಶನ ಮತ್ತು ಅದರ ಅನುಭವವನ್ನು ಹೇಳುವ ಲೇಖನ…

ಶ್ರೀ. ಚೇತನ ರಾಜಹಂಸ

೧. ಕಾಶಿ ವಿಶ್ವನಾಥ ಕಾರಿಡೊರ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ `ಕಾಶಿ ವಿಶ್ವನಾಥ ಕಾರಿಡೊರ’ಅನ್ನು ನಿರ್ಮಿಸಲಾಗಿದೆ. ಇದರ ಮೂಲಕ ಕಾಶಿ ವಿಶ್ವನಾಥ ದೇವಸ್ಥಾನದಿಂದ ಭಕ್ತರಿಗೆ ನೇರವಾಗಿ ಗಂಗಾ ದರ್ಶನಕ್ಕೆ ಹೋಗಲು ಬರುತ್ತದೆ. ಈ ಪ್ರಕಲ್ಪದ ಮೂಲಕ ಒಂದು ರೀತಿಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಜೀರ್ಣೋದ್ಧಾರವಾಗಿದೆ. ಈ ಹಿಂದೆ ಕಾಶಿ ವಿಶ್ವನಾಥನ ದರ್ಶನ ಪಡೆಯಲು ಚಿಕ್ಕ ಚಿಕ್ಕ ಓಣಿಗಳಿಂದ ಹೋಗಬೇಕಾಗುತ್ತಿತ್ತು. ಓಣಿಗಳ ನಗರ ಎಂದೇ ಕಾಶಿ ವಾರಣಾಸಿಯ ಗುರುತಾಗಿತ್ತು. ಜಗತ್ತಿನಾದ್ಯಂತದ ತಜ್ಞರು ಈ ಓಣಿಗಳಲ್ಲಿನ ಸಂಸ್ಕೃತಿಯ ಶೋಧ-ಬೋಧವನ್ನು ತಿಳಿದು ಕೊಳ್ಳಲು ಬರುತ್ತಿದ್ದರು. ಕಾಶಿ ವಿಶ್ವನಾಥ ಕಾರಿಡೊರ್ ಯೋಜನೆ ಯಿಂದ ದರ್ಶನಕ್ಕಾಗಿ ಬರುವ ಭಕ್ತರ ಮಾರ್ಗವು ಸುಲಭವಾಗಿದೆ. ಕಾಶಿಯಂತಹ ಪ್ರಾಚೀನ ಮತ್ತು ದಟ್ಟನೆಯ ನಗರದಲ್ಲಿ ಈ ರೀತಿಯ ಬದಲಾವಣೆಯಾಗುವುದು ಅಸಾಧ್ಯವೇ ಅನಿಸುತ್ತಿತ್ತು ಆದರೆ ಕೊರೋನಾದ ಸಂಚಾರಸಾರಿಗೆ ನಿರ್ಬಂದ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಪ್ರಧಾನಿ ಮೋದಿಯವರ ಇಚ್ಛಾಶಕ್ತಿಯ ಪ್ರಭಾವದಿಂದಾಗಿ ಈ ಬದಲಾವಣೆ ಸಾಧ್ಯವಾಯಿತು, ಎಂದು ಹೇಳಬಹುದು.

೨. ಭಕ್ತರು ಎಲೆ-ಅಡಿಕೆ (ಪಾನ) ತಿಂದು ಉಗಿದು ಕೆಂಪಾದ ದೇವಸ್ಥಾನದ ಅಂಗಳದಲ್ಲಿನ ಗೋಡೆಗಳ ಮೂಲೆಗಳು !

೬ ತಿಂಗಳ ಹಿಂದೆ ಪ್ರಧಾನಿ ಮೋದಿ ಇವರು ಕಾಶಿ-ವಿಶ್ವನಾಥ ಕಾರಿಡೊರ್‌ನ್ನು ಭಕ್ತರಿಗೆ ಒಪ್ಪಿಸಿದರು. ಸಂಪೂರ್ಣ ಕಟ್ಟಡ ಕಾಮಗಾರಿ ಭವ್ಯ-ದಿವ್ಯವಾಗಿದೆ. ರಸ್ತೆಯಿಂದ ದೇವಸ್ಥಾನದ ಅಂಗಳದಲ್ಲಿ ಪ್ರವೇಶ ಮಾಡುವಾಗ ಭಕ್ತರ ದಟ್ಟಣೆ ಯನ್ನು ತಡೆಗಟ್ಟಲು ವ್ಯವಸ್ಥಿತವಾದ ಸಾಲು ಗಳನ್ನು ಮಾಡಲಾಗಿದೆ. ಈ ವ್ಯವಸ್ಥೆಯಲ್ಲಿ ಕಂಡು ಬಂದಿ ಕಪ್ಪುಚುಕ್ಕೆ (ಕಂಳಕ) ಎಂದರೆ ಭಕ್ತರು ಎಲೆ-ಅಡಿಕೆ ತಿಂದು ಉಗಿದು ಕೆಂಪು ಮಾಡಿದ ಪ್ರತಿಯೊಂದು ಗೋಡೆಯ ಮೂಲೆಗಳು ! ನೂತನ ಕಟ್ಟಡ ಕಾಮಗಾರಿ ಮತ್ತು ಚೆನ್ನಾಗಿ ಬಣ್ಣದ ಕೆಲಸವನ್ನು ಮಾಡಿದ ಈ ಗೋಡೆಗಳ ಮೇಲಿನ ಎಲೆ-ಅಡಿಕೆಯ ಕೆಂಪು ಬಣ್ಣ ಆಕ್ರೋಶ ತರಿಸುವಂತೆ ಇತ್ತು. ಕಾಶಿಯಲ್ಲಿನ `ಬನಾರಸಿ ಪಾನ’ ಪ್ರಸಿದ್ಧವಾಗಿದೆ. ಪಾನ ತಿಂದು ಎಲ್ಲೆಡೆ ಉಗುಳುವುದು ಇದು ಅಲ್ಲಿಯ ಕೆಟ್ಟ ರೂಢಿಯಾಗಿದೆ. ಈ ಕೆಟ್ಟ ರೂಢಿಯು ಎಷ್ಟು ಸೀಮಾತೀತವಾಗಿದೆ ಎಂದರೆ ಬನಾರಸಿ ಎಲೆ-ಅಡಿಕೆ (ಪಾನ)ಯನ್ನು ತಿನ್ನುವವವರು `ದೇವಸ್ಥಾನವು ಒಂದು ಪವಿತ್ರ ಕ್ಷೇತ್ರವಾಗಿದೆ’, ಎಂಬುದನ್ನೇ ಮರೆತಿ ದ್ದಾರೆ. ವಾಸ್ತವದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು ಎಂಬುದು ಲೋಕಶಿಕ್ಷಣವಾಗಿದೆ ಮತ್ತು ಪವಿತ್ರ ಸ್ಥಳಗಳಲ್ಲಿ ಉಗುಳಬಾರದು ಎಂಬುದು ಧರ್ಮಶಿಕ್ಷಣವಾಗಿದೆ. ಈ ಎರಡೂ ಶಿಕ್ಷಣದ ಅವಶ್ಯಕತೆ ಎಷ್ಟಿದೆ ? ಎಂಬುದು ಇದರಿಂದ ಗಮನಕ್ಕೆ ಬಂದಿತು.

೩. ದರ್ಶನದ ಸಾಲಿನಲ್ಲಿ ಒಂದು ವಿಚಿತ್ರ ಅನುಭವ

ಕಾಶಿ-ವಿಶ್ವನಾಥನ ದರ್ಶನ ಪಡೆಯಲು ನಾವು ಸಾಮಾನ್ಯ ಸಾಲಿನಲ್ಲಿ ನಿಂತಿದ್ದೆವು. ಇನ್ನೊಂದು ಸಾಲು ವಿಶೇಷ ದರ್ಶನಕ್ಕಾಗಿ ಇತ್ತು. ೩೦೦ ರೂಪಾಯಿಯ ದರ್ಶನದ ಪಾಸ ತೆಗೆದರೆ ಆ ಸಾಲಿನಲ್ಲಿ ಹೋಗಬಹುದಾಗಿತ್ತು. ಎರಡೂ ಸಾಲುಗಳು ಸಮೀಪದಲ್ಲಿಯೇ ಇದ್ದವು. ಪ್ರತ್ಯಕ್ಷ ನಮ್ಮ ದರ್ಶನ ೧೫ ನಿಮಿಷಗಳಲ್ಲಿಯೇ ಆಯಿತು, ಆದರೆ ನಮ್ಮ ಪಕ್ಕದಲ್ಲಿರುವ ಪಾಸ ತೆಗೆದು ದರ್ಶನಕ್ಕೆ ಬಂದವರಿಗೆ ತುಂಬಾ ಸಮಯ ತಗಲುತ್ತಿತ್ತು. ಈ ಸಂದರ್ಭದಲ್ಲಿ ಮಾಹಿತಿಯನ್ನು ಪಡೆದಾಗ, ಇತ್ತೀಚೆಗೆ ಎಲ್ಲರೂ ಶೀಘ್ರ ದರ್ಶನಕ್ಕೆಂದು `ದರ್ಶನ ಪಾಸ’ ಗಳನ್ನೇ ತೆಗೆದುಕೊಳ್ಳುತ್ತಾರೆ. ಆದ್ದರಿಂದ ದರ್ಶನ ಪಾಸದ ಸಾಲು ದೊಡ್ಡದಾಗುತ್ತದೆ ಮತ್ತು ಸಾಮಾನ್ಯ ದರ್ಶನದ ಸಾಲಿನಲ್ಲಿನ ಜನರು ಕಡಿಮೆ ಇರುತ್ತಾರೆ. ಇದೊಂದು ವಿಚಿತ್ರ ಅನುಭವವಾಗಿತ್ತು. ವಾಸ್ತವದಲ್ಲಿ `ತೀರ್ಥಕ್ಷೇತ್ರದ ದರ್ಶನವು ಒಂದು ಯಾತ್ರೆಯಾಗಿದೆ’, ಈ ಭಾವದಿಂದ ದೇವರ ದರ್ಶನ ಪಡೆಯಬೇಕು; ಆದರೆ ಧರ್ಮಶಿಕ್ಷಣ ಸಿಗದೇ ಇದ್ದುದರಿಂದ ಹಣದ ಪ್ರಭಾವದಿಂದ ದೇವರ ದರ್ಶನ ಪಡೆಯುವ ದುಷ್ಟ ರೂಢಿ ದೇವಸ್ಥಾನಗಳಲ್ಲಿ ರೂಢಿಯಾಗಿದೆ, ಇದನ್ನು ನೋಡಿ ಮನಸ್ಸಿಗೆ ನೋವಾಯಿತು.

೪. ಜ್ಞಾನವಾಪಿಯ ದರ್ಶನ ಮತ್ತು ಭಕ್ತರಿಗೆ ಮುಕ್ತೇಶ್ವರನ ಮೇಲಿರುವ ಅಚಲ ಶ್ರದ್ಧೆ

ದೇವಸ್ಥಾನದಲ್ಲಿ ದರ್ಶನ ಪಡೆದ ನಂತರ ಜ್ಞಾನವಾಪಿಯ (ಇಂದಿನ ಜ್ಞಾನವಾಪಿ ಮಸೀದಿಯ) ದಿಕ್ಕಿನ ಕಡೆಗೆ ಮುಖ ಮಾಡಿ ನಿಂತಿರುವ ನಂದಿಯ ದರ್ಶನಕ್ಕಾಗಿ ಹೋದರೆ ಅಲ್ಲಿನ ಅನುಭವ ಬೇರೆಯೇ ಆಗಿತ್ತು. ದೇವಸ್ಥಾನಕ್ಕಿಂತ ನಂದಿಯ ಮತ್ತು ನಂದಿಯ ಮುಂದಿರುವ ಜ್ಞಾನವಾಪಿಯ ದರ್ಶನ ಪಡೆಯುವವರ ಸಂಖ್ಯೆ ಜಾಸ್ತಿ ಇತ್ತು. ಅಲ್ಲಿಯ ರಕ್ಷಕರು ಒಂದು ಸೆಕೆಂಡ ದರ್ಶನ ಪಡೆದ ನಂತರ ಭಕ್ತರನ್ನು ಮುಂದೆ ದೂಡುತ್ತಿದ್ದರು. ವಾಸ್ತವದಲ್ಲಿ ದೇವಸ್ಥಾನಗಳಲ್ಲಿ ಈ ರೀತಿಯ ಸ್ಥಿತಿ ಇರುತ್ತದೆ; ಆದರೆ ಆ ಸ್ಥಿತಿ ನಂದಿಯ ಬಳಿಯಿತ್ತು. ಇದರಿಂದ, ಭಕ್ತರಿಗೆ ಕಾಶಿಯ ಮುಕ್ತೇಶ್ವರನ ದರ್ಶನ ಪಡೆಯುವ ಹಂಬಲ ಇಂದಿಗೂ ಇದೆ ಎಂಬುದು ಗಮನಕ್ಕೆ ಬಂದಿತು. `ಹಿಂದು ಫ್ರಂಟ ಫಾರ್ ಜಸ್ಟಿಸ್’ನ ವಕ್ತಾರರಾದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರ ಅರ್ಜಿಯಿಂದಾಗಿ `ನಂದಿಯ ಮುಂದಿರುವ ಜ್ಞಾನವಾಪಿಯಲ್ಲಿ ಶಿವಲಿಂಗ ಇದೆ’, ಎಂದು ಭಕ್ತರಲ್ಲಿ ಶ್ರದ್ಧೆ ನಿರ್ಮಾಣವಾಗಿದೆ. ಇದರಿಂದ ಅಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ನಂದಿಯ ದರ್ಶನ ಪಡೆಯುವಾಗ ಓರ್ವ ಮಹಿಳೆಯು ನಂದಿಯ ಕಿವಿಯಲ್ಲಿ ಏನೋ ಹೇಳುತ್ತಿದ್ದಳು. ರಕ್ಷಕರು ಅವಳನ್ನು ಮುಂದೆ ಕಳಿಸಲು ಪ್ರಯತ್ನಿಸುತ್ತಿದ್ದರು. ನಾನು ದರ್ಶನ ಪಡೆದ ನಂತರ ಆ ಮಹಿಳೆಯನ್ನು ಭೇಟಿಯಾಗಿ,  “ನೀವು ನಂದಿಯ ಕಿವಿಯಲ್ಲಿ ಏನು ಹೇಳಿದಿರಿ ?’’ ಎಂದು ಕೇಳಿದಾಗ, ಅವಳ ಉತ್ತರದಿಂದ ನನ್ನ ಎದೆ ಝಲ್ ಎಂದಿತು ! ಅವಳು, “ನಾನು ನಂದಿಗೆ ಜ್ಞಾನವಾಪಿಯಲ್ಲಿನ ಮುಕ್ತೇಶ್ವರನಿಗೆ ನನ್ನ ನಮಸ್ಕಾರವನ್ನು ತಲುಪಿಸು’’ ಎಂದು ಪ್ರಾರ್ಥನೆ ಮಾಡಿದೆ ಎಂದಳು. ಅದು, ಜ್ಞಾನವಾಪಿಯನ್ನು (ಮಸೀದಿಯನ್ನು) ತಪ್ಪಿಸಿ `ಕಾಶಿ ವಿಶ್ವನಾಥ ಕ್ವಾರಿಡೊರ್’ ನಿರ್ಮಾಣವಾಗಿದ್ದರೂ ಇಂದಿಗೂ ಜ್ಞಾನವಾಪಿಯಲ್ಲಿನ ಮುಕ್ತೇಶ್ವರನಲ್ಲಿ ಭಕ್ತರ ಶ್ರದ್ಧೆ ಅಚಲವಾಗಿದೆ ಎಂಬುದರ ಜ್ವಲಂತ ಉದಾಹರಣೆಯಾಗಿತ್ತು !

– ಶ್ರೀ. ಚೇತನ ರಾಜಹಂಸ (ಆಧ್ಯಾತ್ಮಿಕ ಮಟ್ಟ ೬೭),ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ. (೧೮.೮.೨೦೨೨)