ಚಿಕನಗುನಿಯಾ : ಚಿಕನಗುನಿಯಾ ರೋಗದ ಲಕ್ಷಣಗಳು ಮತ್ತು ಉಪಚಾರ !

ಚಿಕನಗುನಿಯಾ ಹರಡುವ ಸೊಳ್ಳೆ

೧. `ಚಿಕನಗುನಿಯಾ’ ರೋಗ ತ್ರಾಸದಾಯಕವಾಗಿದೆ; ಆದರೆ ಅದು ನಿಶ್ಚಿತ ಗುಣವಾಗುತ್ತದೆ !

`ಕೆಲವು ವರ್ಷಗಳ ಹಿಂದೆ `ಚಿಕನ ಗುನಿಯಾ’ ರೋಗವು ಕರ್ನಾಟಕದಲ್ಲಿ ತುಂಬಾ ಜನರಿಗೆ ತೊಂದರೆಗಳನ್ನು ಕೊಟ್ಟಿತ್ತು. `ಚಿಕನಗುನಿಯಾ’ ರೋಗವು ಸಾಮಾನ್ಯವಾಗಿ ಒಂದೇ ಸಮಯದಲ್ಲಿ ಮನೆಯಲ್ಲಿನ ಎಲ್ಲರಿಗೂ ಬರುತ್ತದೆ. ಎಲ್ಲರೂ ರೋಗದಿಂದ ಬಳಲುವುದರಿಂದ ಯಾರೂ ಯಾರಿಗೂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಆಗುವ ಸಂದುಗಳ (ಕೀಲುಗಳ) ನೋವು ತೀವ್ರ ಮತ್ತು ದೀರ್ಘಕಾಲದ ವರೆಗೆ ತೊಂದರೆಗಳನ್ನು ಕೊಡುವುದರಿಂದ ರೋಗದಿಂದ ತಕ್ಷಣವೇ ಬಿಡುಗಡೆ ಆಗುವುದಿಲ್ಲ. ಒಟ್ಟಾರೆ ಈ ರೋಗ ಎಷ್ಟು ತೊಂದರೆದಾಯಕ ಆಗಿರುತ್ತದೆ ಎಂದರೆ, ಇದರಿಂದ ಪೀಡಿತನಾಗಿರುವ ಒಬ್ಬ  ರೋಗಿಯನ್ನು ನೋಡಿದರೂ ನಮಲ್ಲಿ ಭಯ ಹುಟ್ಟುತ್ತದೆ.

`ಚಿಕನಗುನಿಯಾ’ ಈ ಶಬ್ದವು ಸಾಹಿಲಿ ಭಾಷೆಯದ್ದಾಗಿದೆ. ಮೊದಲು ಈ ರೋಗ ಮಂಗಗಳಿಗೆ ಬರುತ್ತಿತ್ತು. `ಏಡೀಸ ಇಜಿಪ್ಟಿ’ ಹೆಸರಿನ ಹೆಣ್ಣು ಸೊಳ್ಳೆಗಳು ಈ ರೋಗವನ್ನು ಹರಡುತ್ತವೆ. ಅವುಗಳ ಕಚ್ಚುವಿಕೆಯಿಂದ `ಅರಬೊ ವೈರಸ್’ ಎಂಬ ಹೆಸರಿನ ವಿಷಾಣುಗಳು ಮನುಷ್ಯನ ಶರೀರವನ್ನು ಪ್ರವೇಶಿಸಿದ ನಂತರ, ಅವುಗಳ ಸಂಖ್ಯೆ ಹೆಚ್ಚಾಗಿ ರೋಗ ಹೊರಗೆ ಕಾಣಿಸುವ ಕಾಲಾವಧಿ ಸುಮಾರ ೫ ರಿಂದ ೮ ದಿನಗಳಾಗಿರುತ್ತವೆ.

೨. `ಚಿಕನಗುನಿಯಾ’ದ ಲಕ್ಷಣಗಳು

೨ ಅ. ಜ್ವರ : ಕೆಲವೊಮ್ಮೆ ಲೋ ಗ್ರೇಡ್ (೯೯ ರಿಂದ ೧೦೧ `ಫ್ಯಾರಾನಿಟ್’) ಮತ್ತು ಕೆಲವೊಮ್ಮೆ ಹೈ ಗ್ರೇಡ್ (೧೦೧ ರಿಂದ ೧೦೩ `ಫ್ಯಾರಾನಿಟ’)  ಜ್ವರ ಬರುತ್ತದೆ. ಜ್ವರ ಹೆಚ್ಚಾಗಿ ೨-೩ ದಿನಗಳ ವರೆಗೆ ಇರುತ್ತದೆ; ಆದರೆ ಕೆಲವು ದಿನಗಳ ಬಳಿಕ ಅದು ಪುನಃ ಪುನಃ ಬರಬಹುದು.

೨ ಆ. ಚಳಿ : ವಿಪರೀತ ಚಳಿ ಬಂದು ನಂತರ ಜ್ವರ ಬರುತ್ತದೆ. ಹೆಚ್ಚು ಹೊದಿಕೆಗಳನ್ನು ಹೊದ್ದುಕೊಂಡರೂ ಚಳಿ ಕಡಿಮೆಯಾಗುವುದಿಲ್ಲ.

೨ ಇ. ತಲೆನೋವು : ತಲೆ ಭಾರವಾಗಿ ನೋಯಿಸುತ್ತದೆ.

೨ಈ. ಹೊಟ್ಟೆ ತೊಳೆಸುವುದು ಅಥವಾ ವಾಂತಿ : ಈ ಲಕ್ಷಣಗಳು ಕೆಲವು ಜನರಲ್ಲಿ ಮಾತ್ರ ಕಂಡು ಬರುತ್ತವೆ.

೨ಉ. ಸಂಧಿಗಳ ನೋವು : ಈ ಲಕ್ಷಣ ಬಹಳ ತೀವ್ರವಾಗಿರುತ್ತದೆ. ಒಂದೇ ಬಾರಿಗೆ ಬಹಳಷ್ಟು ಸಂಧಿಗಳಿಗೆ ಬಾವು ಬರುತ್ತದೆ ಮತ್ತು ಅವು ತುಂಬಾ ನೋಯುತ್ತವೆ. `ಸಂಧಿಗಳಲ್ಲಿ ಚೇಳು ಕಡಿದಂತೆ ವೇದನೆಗಳು ಆಗುತ್ತವೆ’, ಎಂದು ಕೆಲವು ರೋಗಿಗಳು ಹೇಳುತ್ತಾರೆ. ರೋಗಿಗೆ ಮಗ್ಗಲು ಬದಲಾಯಿಸಲು ಕೂಡ ಸಾಧ್ಯವಾಗುವುದಿಲ್ಲ. ಅವನಿಗೆ ತನ್ನ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಅವನ ಬೆರಳುಗಳ ಸಂಧಿಗಳೂ ಕೆಲಸವನ್ನು ಮಾಡುವು ದಿಲ್ಲ. ಈ ವೇದನೆಗಳು ನಿಧಾನವಾಗಿ ಕಡಿಮೆಯಾಗುತ್ತವೆ. ಈ ವೇದನೆಗಳು ಕಡಿಮೆಯಾಗಲು ೪ ತಿಂಗಳುಗಳಿಂದ ೨ ವರ್ಷ ಗಳಷ್ಟು ಕಾಲಾವಧಿ ಬೇಕಾಗುತ್ತದೆ. ಕೆಲವು ರೋಗಿಗಳಲ್ಲಿ ಚಳಿ, ಮಳೆ ಮತ್ತು ಆಹಾರದಲ್ಲಿ ಬದಲಾವಣೆಯಾದಾಗಲೂ ವೇದನೆಗಳು ಪುನಃ ಪುನಃ ಬರುತ್ತವೆ. ಕೆಲವರಿಗೆ ಸಂಧಿನೋವು ಶತ್ರುಗಳಂತೆ ತೊಂದರೆಗಳನ್ನು ಕೊಡುತ್ತವೆ.

೨ ಊ. ಬೊಕ್ಕೆಗಳು ಏಳುವುದು : ಸಂಪೂರ್ಣ ತ್ವಚೆಯ ಮೇಲೆ ಎಲ್ಲಿಯೂ ಬೊಕ್ಕೆಗಳು ಏಳುತ್ತವೆ. ಅವುಗಳಿಗೆ ತುರಿಕೆ ಬರುತ್ತದೆ ಅಥವಾ ಉರಿಉರಿ ಆಗುತ್ತದೆ. ೩ ರಿಂದ ೪ ದಿನಗಳ ಬಳಿಕ ಬೊಕ್ಕೆಗಳು ಕರಗಿ ಅಲ್ಲಿಯ ತ್ವಚೆ ಸುಲಿಯಲು ಪ್ರಾರಂಭವಾಗುತ್ತದೆ.

೨ಎ. ನಿಶ್ಯಕ್ತಿ : ಜೀವ ಹಿಂಡುವ ನಿಶ್ಯಕ್ತಿಯು ಈ ರೋಗದ ಮತ್ತೊಂದು ಲಕ್ಷಣವಾಗಿದೆ. ಈ ನಿಶ್ಯಕ್ತಿ ಒಂದು ವಾರವಾದರೂ ಇರುತ್ತದೆ.

ಕೆಲವು ರೋಗಿಗಳಲ್ಲಿ ಈ ಎಲ್ಲ ಲಕ್ಷಣಗಳು ತೀವ್ರ ಸ್ವರೂಪದಲ್ಲಿ ಕಾಣಿಸುತ್ತವೆ, ಕೆಲವರಲ್ಲಿ ಲಕ್ಷಣಗಳು ಸೌಮ್ಯವಾಗಿರುತ್ತವೆ. ಜ್ವರ ಮತ್ತು ಸಂಧಿ ನೋವು ಮಾತ್ರ ಎಲ್ಲರಲ್ಲಿಯೂ ಇರುತ್ತದೆ.

ಪ್ರಾರಂಭದಲ್ಲಿಯೇ ಈ ರೋಗವನ್ನು ಗುರುತಿಸಲು ಸಹಜವಾಗಿ ಸಾಧ್ಯವಾಗುತ್ತದೆ. `ಆರ್.ಟಿ.ಪಿ.ಸಿ.ಆರ್’, ರಕ್ತ ಪರೀಕ್ಷಣೆಯಲ್ಲಿ ಚಿಕನಗುನಿಯಾ ವಿಷಾಣು` ಆರ್.ಎನ್.ಎ.’ (ರೈಬೊನ್ಯೂಕ್ಲಿಕ್ ಎಸಿಡ್- ಮಾನವನ ಶರೀರದಲ್ಲಿನ ಪ್ರತಿಯೊಂದು ಜೀವಕೋಶದಲ್ಲಿ ಇರುವ ಒಂದು ರೀತಿಯ ಆಮ್ಲ)ಯನ್ನು ಪರಿಶೀಲಿಸುತ್ತಾರೆ; ಆದರೆ ಆ ವಿಷಾಣು ೭ ನೇ ದಿನದ ನಂತರ ರಕ್ತದಲ್ಲಿ ಕಾಣಿಸಬಹುದು.

೩. ಚಿಕಿತ್ಸೆ

ಜ್ವರ ಕಡಿಮೆ ಮಾಡುವ ಮತ್ತು ನೋವು ನಿವಾರಕ ಔಷಧಿಗಳನ್ನು ತೆಗೆದುಕೊಂಡರೂ ಅವುಗಳನ್ನು ಎಷ್ಟು ದಿನಗಳವರೆಗೆ ತೆಗೆದುಕೊಳ್ಳಬೇಕಾಗಬಹುದು, ಎಂಬುದರ ನಿಯಮವಿಲ್ಲ.  ಕೆಲವೊಮ್ಮೆ ಒಂದು ವಾರದ ನಂತರ ಅಥವಾ ಒಂದು ತಿಂಗಳ ನಂತರ ಜ್ವರ ಮರಳಿ  ಬರಬಹುದು ಮತ್ತು ಸಂಧಿ ನೋವು ಮತ್ತು ಸಂಧಿಗಳ ಗಟ್ಟಿತನ (stiffness) ಕೆಲವೊಮ್ಮೆ ೨ ವರ್ಷಗಳ ವರೆಗೆ ತೊಂದರೆಗಳನ್ನು ಕೊಡಬಹುದು.  ಆಯುರ್ವೇದದ ದೃಷ್ಟಿಯಿಂದ ವಿಚಾರ ಮಾಡಿದರೆ, ಈ ಜ್ವರದಲ್ಲಿ ಅಗ್ನಿಮಾಂದ್ಯ (ಹಸಿವು ಮತ್ತು ಪಚನಶಕ್ತಿ ಲೋಪ) ವಾತದೋಷದ ಕಾರ್ಯದಲ್ಲಿ ಅಡಚಣೆ, ರಸವಹಸ್ರೋತದ ಕ್ರಿಯೆಯಲ್ಲಿ ಅಡಚಣೆ (ಆಹಾರದಿಂದ ಸಿದ್ಧ ಗೊಳ್ಳುವ ಮೊದಲ ಶರೀರ ಘಟಕವೆಂದರೆ ರಸಧಾತು. ಅದನ್ನು ಇಡೀ ಶರೀರದಲ್ಲಿ ಪ್ರವಹಿಸುವ ಸ್ರೋತ, ಅಂದರೆ `ಚಾಲ’ ಎಂದರೆ ರಸವಹಸ್ರೋತ), ರಕ್ತ ಕೆಡುವುದು, ಎಲುಬು ಮತ್ತು ಸಂಧಿಗಳಲ್ಲಿ ಅಡಚಣೆ ನಿರ್ಮಾಣವಾಗಿರುತ್ತದೆ. ಚಿಕನಗುನಿಯಾ ಶಾಸ್ತçದಲ್ಲಿನ `ಆಮವಾತ’ ಈ ರೋಗದ ವರ್ಣನೆಯನ್ನು ಮಾಡಿದೆ; ಆದರೆ ಇದು ಅದಕ್ಕಿಂತ ತೀವ್ರವೇಗದಿಂದ ನಡೆದ ಪರಿಸ್ಥಿತಿ ಯಾಗಿದೆ. ಅದರ ಪ್ರತಿಬಂಧಿಸಲು ಎರಡು ಪದ್ಧತಿಗಳಲ್ಲಿ ವಿಚಾರ ಮಾಡಬೇಕು.

೩ ಅ. ಪ್ರತಿಬಂಧ (ತಡೆ) : ಚಿಕನಗುನಿಯಾ ಸೊಳ್ಳೆಗಳಿಂದ ಬರುವುದರಿಂದ ನಮ್ಮ ಪರಿಸರದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಈ ಸಂಬಂಧದಲ್ಲಿ ಮಹಾನಗರಪಾಲಿಕೆ, ನಗರಪಾಲಿಕೆ ಮತ್ತು ಗ್ರಾಮಪಂಚಾಯತ ಆಗಾಗ ಸೂಚನೆಗಳನ್ನು ಕೊಡುತ್ತಾರೆ ಮತ್ತು ಔಷಧಿಯನ್ನೂ ಸಿಂಪಡಿಸುತ್ತಾರೆ. ಆದರೂ ಸೊಳ್ಳೆಗಳ ಕಾಟ ವೃದ್ಧಿಸುತ್ತಿದ್ದರೆ, ಮನೆಯ ಕಿಟಕಿಗಳಿಗೆ ಜಾಳಿ ಹಾಕುವುದು ಮತ್ತು ರಾತ್ರಿ ಸೊಳ್ಳೆ ಪರದೆ ಉಪಯೋಗಿಸುವುದು ಜಾಣತನವಾಗಿದೆ. ರೋಗ ಬಂದರೆ ಪ್ರಾರಂಭದಲ್ಲಿ ತಕ್ಷಣ ಹತ್ತಿರದ ವೈದ್ಯರಿಂದ ಜ್ವರ ಮತ್ತು ಸಂಧಿನೋವುಗಳಿಗೆ ಔಷಧಿ ಗಳನ್ನು ತರಬೇಕು. ವೈದ್ಯರಲ್ಲಿ ಹೋಗಲು ಸಾಧ್ಯವಾಗದಿದ್ದರೆ ಮತ್ತು ಹೋಗುವವರು ಯಾರೂ ಇಲ್ಲದಿದ್ದರೆ, ಪ್ರಾಥಮಿಕ ಉಪಚಾರ ವೆಂದು `ಮಹಾಸುದರ್ಶನ ಕಾಡಾ’ ಮತ್ತು `ದಶಮೂಲಾರಿಷ್ಟ’ ೪-೪ ಚಮಚದಷ್ಟು ತೆಗೆದುಕೊಳ್ಳಬೆಕು. ಅದರಲ್ಲಿ ಸ್ವಲ್ಪ ನೀರು ಹಾಕಬೇಕು. ವೈದ್ಯರ ಬಳಿಗೆ ಹೋಗುವ ಕ್ಷಮತೆ ಬರುವವರೆಗೆ ಈ ಉಪಚಾರ ಮಾಡಬೇಕು.

೩ ಆ. ಹಸಿವಾದರೆ  ಮಾತ್ರ ಹಗುರ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಹಸಿವಿಲ್ಲದಿದ್ದರೆ ಉಪವಾಸ ಮಾಡಬೇಕು ಅಥವಾ ಹುರಿದ ಅಕ್ಕಿಯ ಗಂಜಿ ಅಥವಾ ಹೆಸರು ಕಾಳುಗಳ ಸೂಪ ಅಥವಾ ಕಡಣ (ದ್ವಿದಳ ಧಾನ್ಯ ಗಳನ್ನು ಹಾಕಿ ಕುದಿ ಸಿದ ನೀರು) ಇಂತಹ ಹಗುರ ಪದಾರ್ಥಗಳನ್ನು ಸೇವಿಸಬೇಕು. ಸಂದಿ ಗಳಿಗೆ (ಕೀಲುಗಳಿಗೆ) ದಿನದಲ್ಲಿ ೩ ಸಲ ಬಿಸಿ ನೀರಿನ ಚೀಲ ಅಥವಾ ಹಂಚಿನ ಮೇಲೆ ಬಟ್ಟೆ ಯನ್ನಿಟ್ಟು ಅಥವಾ ಉಸುಕಿನ ಗಂಟಿನ ಶಾಖವನ್ನು ಕೊಡಬೇಕು.

೩ ಇ. ನಾಗರಮೋಥಾ, ಶುಂಠಿ, ಚಂದನ, ವಾಳಾ, ಸಾರಿವಾ ಮತ್ತು ಪಿತ್ತಪಾಪಡಾ ಈ ಔಷಧಿಗಳಿಂದ ತಯಾರಿಸಿದ (ಈ ಔಷಧಿಗಳನ್ನು ಹಾಕಿ ಕುದಿಸಿದ) ನೀರನ್ನು ಕುಡಿಯಬೇಕು.

೩ ಈ. ಅರಳು, ಕಡಧಾನ್ಯ (ದ್ವಿದಳ ಧಾನ್ಯಗಳನ್ನು ಹಾಕಿ ಕುದಿಸಿದ ನೀರು), ಹುರಿದ ಅಕ್ಕಿಯ ಖಿಚಡಿ ಮತ್ತು ಜೋಳದ ಬಿಸಿರೊಟ್ಟಿ ಇಂತಹ ಹಗುರ ಆಹಾರವನ್ನು ತೆಗೆದುಕೊಳ್ಳಬೇಕು. ರುಚಿಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಉಪಯೋಗಿಸಬೇಕು.

೩ ಉ. ಬೆಚ್ಚಗಿನ ಬಟ್ಟೆಗಳನ್ನು ಉಪಯೋಗಿಸಬೇಕು.

೩ ಊ. ಸಂಧಿಗಳಿಗೆ (ಕೀಲುಗಳಿಗೆ) ಆದಷ್ಟು ಯಾವುದೇ ಔಷಧಿಯನ್ನು ಹಚ್ಚಬಾರದು. ಏಕೆಂದರೆ ಅದರಿಂದ ಬೊಕ್ಕೆಗಳು ಹೆಚ್ಚಾಗುವ ಸಾಧ್ಯತೆಯಿರುತ್ತದೆ.

೩ ಎ. ಸ್ನಾನ, ಹಗಲುಹೊತ್ತು ಮಲಗುವುದು, ಕೆಲಸ ಮತ್ತು ಪಂಖಾ (ಫ್ಯಾನ) ಇವುಗಳಿಂದ ದೂರವಿರಬೇಕು ಮತ್ತು ಸಂಪೂರ್ಣ ವಿಶ್ರಾಂತಿಯನ್ನು ಪಡೆಯಬೇಕು.(ಅರ್ಥಾತ್ ಈ ರೋಗವು ಒತ್ತಾಯಪೂರ್ವಕ ವಿಶ್ರಾಂತಿ ನೀಡುವಂತಹದ್ದಾಗಿದೆ.)

೩ ಎ. ರಾತ್ರಿ ಜಾಗರಣೆ ಮಾಡಬಾರದು.

೪.ಆಯುರ್ವೇದದಿಂದ ಚಿಕನಗುನಿಯಾದ ಪರಿಣಾಮಗಳು ನಾಶವಾಗಿ ನೋವಿಲ್ಲದೇ ಜೀವಿಸುವ ಅವಕಾಶ ಲಭಿಸುವುದು

ಜ್ವರ ಮತ್ತು ಬೊಕ್ಕೆಗಳು ದೂರವಾದ ಬಳಿಕ ರೋಗದ ದೀರ್ಘ ಕಾಲೀನ ಚಿಕಿತ್ಸೆ ಪ್ರಾರಂಭವಾಗುತ್ತದೆ. ಅದರಲ್ಲಿ ವಿಶೇಷವಾಗಿ ಸಂಧಿನೋವಿನ ಉಪಚಾರಗಳನ್ನು ಮಾಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಇಲ್ಲಿಯೂ ಆಯುರ್ವೇದ ಶಾಸ್ತçವೇ ನಮ್ಮ ಸಹಾಯಕ್ಕೆ ಬರುತ್ತದೆ. ಚಿಕನಗುನಿಯಾದ ಕೆಲವು ರೋಗಿಗಳಿಗೆ ಪ್ರಾರಂಭದಲ್ಲಿ ವಿರೇಚನ ಅಥವಾ ಬಸ್ತೀ ಇಂತಹ ಪಂಚಕರ್ಮದಲ್ಲಿನ ಕೆಲವು ಉಪಚಾರಗಳನ್ನು ವೈದ್ಯರ ನಿರೀಕ್ಷಣೆಯಡಿಯಲ್ಲಿ ಮಾಡಬೇಕಾಗುತ್ತದೆ. ಅದನ್ನು ಮಾಡುತ್ತಿರುವಾಗ ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸುವುದು ಮಹತ್ವದ್ದಾಗಿದೆ. ಜ್ವರ ಹೋದಬಳಿಕವೂ ದೀರ್ಘಕಾಲದ ವರೆಗೆ ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬ ರೋಗಿಗನುಸಾರ ಈ ಔಷಧಿಗಳು ಬದಲಾಗುತ್ತವೆ: ಆದ್ದರಿಂದ ನಮ್ಮ ಮನಸ್ಸಿನಂತೆ ಔಷಧಿಗಳನ್ನು ತೆಗೆದುಕೊಳ್ಳಬಾರದು. ಮನೆಯಲ್ಲಿ ಒಬ್ಬರಿಗೆ ನೀಡಿರುವ ಅಥವಾ ಬರೆದುಕೊಟ್ಟಿರುವ ಔಷಧಿಗಳನ್ನು ಇತರರು ಉಪಯೋಗಿಸಬಾರದು. ಆಹಾರದ ಪಥ್ಯ-ಅಪಥ್ಯಗಳನ್ನು ಪಾಲಿಸಬೇಕಾಗುತ್ತದೆ. ಅದಕ್ಕಾಗಿ ವೈದ್ಯರ ಸಲಹೆ ಆವಶ್ಯಕವಾಗಿರುತ್ತದೆ. ರೋಗದಿಂದ ಸಂಧಿಗಳಿಗೆ ಆಗಿರುವ ಹಾನಿಯು ಈ ಉಪಕ್ರಮಗಳಿಂದಲೇ ಗುಣವಾಗುತ್ತದೆ. ಇದರಿಂದ ರೋಗಿಗೆ ವೇದನಾರಹಿತವಾಗಿ ಜೀವಿಸುವ ಅವಕಾಶ ಸಿಗುತ್ತದೆ.

`ಚಿಕನಗುನಿಯಾ’ ರೋಗದ ಸ್ವರೂಪ ಭಯಂಕರವಾಗಿದ್ದರೂ, ಅದು ಜೀವ ತೆಗೆದುಕೊಳ್ಳುವ ರೋಗವಾಗಿಲ್ಲ. ಅದು ಗುಣವಾಗುತ್ತದೆ, ಹಾಗೆಯೇ ಸಂಧಿನೋವುಗಳು ಗುಣವಾಗುವವು. ಕೇವಲ ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಮತ್ತು ಅದಕ್ಕೆ ಸಾಕಷ್ಟು ಕಾಲದ ವರೆಗೆ ಉಪಚಾರವನ್ನು ಮಾಡಿಸಿಕೊಳ್ಳುವುದು ಆವಶ್ಯಕವಾಗಿದೆ.

– ವೈದ್ಯೆ ಸುಚಿತ್ರಾ ಕುಲಕರ್ಣಿ(ಆಧಾರ: `ಸಾಪ್ತಾಹಿಕ ವಿವೇಕ’)