ಪ್ರೇಮಭಾವ, ಸಮಯಪಾಲನೆ ಮತ್ತು ನಿರಂತರ (ನಿಯಮಿತವಾಗಿ) ದತ್ತಗುರುಗಳ ನಾಮಜಪವನ್ನು ಮಾಡುವ ಸಾಗರದ (ಶಿವಮೊಗ್ಗ ಜಿಲ್ಲೆ) ಜಯಂತ ಹರಗಿ (೬೫ ವರ್ಷ) !

ದಿ. ಜಯಂತ ಹರಗಿ

೮.೮.೨೦೨೨ ರಂದು ಸಾಗರದ ಶ್ರೀ. ಜಯಂತ ಹರಗಿ (೬೫ ವರ್ಷ) ಇವರು ಹೃದಯಾಘಾತದಿಂದ ನಿಧನರಾದರು. ೨೩.೮.೨೦೨೨ ರಂದು ಅವರ ವೈಕುಂಠ ಸಮಾರಾಧನೆ ಆಯಿತು.ಆ ನಿಮಿತ್ತ ಅವರ ನಿಧನದ ಮೊದಲು ಅವರ ಪತ್ನಿಗೆ ಅರಿವಾದ ಗುಣವೈಶಿಷ್ಟ್ಯ ಮತ್ತು ಕುಟುಂಬದವರಿಗೆ ನಿಧನದ ನಂತರ ಅರಿವಾದ ಅಂಶಗಳನ್ನು ಕೊಡಲಾಗಿದೆ.

ಶ್ರೀಮತಿ ರೇವತಿ ಹರಗಿ

೧. ಶ್ರೀಮತಿ ರೇವತಿ ಹರಗಿ (ಆಧ್ಯಾತ್ಮಿಕ ಮಟ್ಟ ಶೇ. ೬೪, ವಯಸ್ಸು ೫೯ ವರ್ಷ) (ದಿ. ಜಯಂತ ಹರಗಿಯವರ ಪತ್ನಿ)

೧ ಅ. ಪ್ರೇಮಭಾವ : `ಯಾವ ಸಾಧಕರು ನಮ್ಮ ಮನೆಗೆ ಬರುವರಿದ್ದರೆ, ಯಜಮಾನರು (ದಿ.) ಜಯಂತ ಹರಗಿ ಇವರು ಸಾಧಕರನ್ನು ಬಸ್‌ನಿಲ್ದಾಣದಿಂದ ಕರೆದುಕೊಂಡು ಬರುತ್ತಿದ್ದರು ಮತ್ತು ಸೇವೆ ಪೂರ್ತಿಯಾದ ನಂತರ ಅವರನ್ನು ಪುನಃ ಬಿಟ್ಟು ಬರುತ್ತಿದ್ದರು. ಸಾಧಕರು ಮನೆಗೆ ಬಂದ ನಂತರ ಅವರೊಂದಿಗೆ ಆನಂದದಿಂದ ಇರುತ್ತಿದ್ದರು.

೧ ಆ. ಆಯೋಜನಾ ಕೌಶಲ್ಯ : ಯಾವುದೇ ಕೆಲಸವು ಸಮಯಕ್ಕೆ ಸರಿಯಾಗಿ ಆಗಬೇಕು; ಎಂದು ಅವರು ಪೂರ್ಣ ಆಯೋಜನೆಯನ್ನು ಮಾಡುತ್ತಿದ್ದರು. ಆದುದರಿಂದ ಅವರ ಎಲ್ಲ ಕೃತಿಗಳು ಆಯೋಜನೆಯಂತೆ ಆಗುತ್ತಿದ್ದವು. ಅವರು ಕೊನೆಯುಸಿರಿನ ತನಕ ತೋಟದಲ್ಲಿ ಕೆಲಸ ಮಾಡಿದರು.

೧ ಇ. ವ್ಯಷ್ಟಿ ಸಾಧನೆ : ಅವರು ಪ್ರತಿದಿನ ಬೆಳಗ್ಗೆ ನಿಯಮಿತವಾಗಿ ದತ್ತಗುರುಗಳ ನಾಮಜಪವನ್ನು ಮಾಡುತ್ತಿದ್ದರು ಮತ್ತು ಪ್ರತಿದಿನ ಪೂಜೆಯನ್ನು ಮಾಡುವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಪೂಜೆಯನ್ನೂ ಮಾಡುತ್ತಿದ್ದರು. ಅವರು ನಿಯಮಿತವಾಗಿ ಕರ್ಪೂರ, ಅತ್ತರ ಮತ್ತು ನಾಮಜಪ ಮುಂತಾದ ಉಪಾಯಗಳನ್ನು ಮಾಡುತ್ತಿದ್ದರು.

೧ ಈ. ಸೇವೆಯಲ್ಲಿ ಪಾಲ್ಗೊಳ್ಳುವುದು : ಯಾರಿಂದಲಾದರೂ ಪಾರ್ಸೆಲ್ ತರುವುದಿದ್ದರೆ ಅದನ್ನು ತೆಗೆದುಕೊಂಡು ಬರುವುದು ಮತ್ತು ಸರಿಯಾದ ಸ್ಥಳದಲ್ಲಿ ತಲುಪಿಸುವುದು, ಹಾಗೆಯೇ ಸಾಧಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಏನಾದರೂ ಕೊಡುವುದಿದ್ದರೆ, ಅದನ್ನು ಕೊಟ್ಟು ಬರುತ್ತಿದ್ದರು. ಸಾಪ್ತಾಹಿಕ `ಸನಾತನ ಪ್ರಭಾತ’ದ ಚಂದಾದಾರರು ಚಂದಾದ ಹಣ ಅಥವಾ ಯಾರು ಜಾಹೀರಾತುಗಳ ಹಣವನ್ನು ಕೊಟ್ಟಿದ್ದರೆ, ಆ ಹಣವನ್ನು ಸಮಯಕ್ಕೆ ಸರಿಯಾಗಿ ತಂದು ಕೊಡುತ್ತಿದ್ದರು. ಸ್ವತಃ ಅರ್ಪಣೆ ಮತ್ತು ಜಾಹೀರಾತು ಕೊಡುತ್ತಿದ್ದರು. ಅವರು ದೀಪಾವಳಿ ಹಬ್ಬಕ್ಕಾಗಿ ಸನಾತನದ ಆಕಾಶದೀಪಗಳನ್ನು ತಯಾರಿಸಿ ಸಾಧಕರ ಮನೆಮನೆಗಳಿಗೆ ಹೋಗಿ ತಲುಪಿಸುವ ಸೇವೆಯನ್ನು ಮಾಡುತ್ತಿದ್ದರು.

೧ ಉ. ನಿಧನದ ನಂತರ ಅರಿವಾದ ಅಂಶಗಳು

೧ ಉ ೧. ಯಜಮಾನರ ನಿಧನದ ನಂತರ ಪೂ. ರಮಾನಂದ ಗೌಡರು ಧೈರ್ಯವನ್ನು ನೀಡಿ ನಾಮಜಪವನ್ನು ಮಾಡಲು ಹೇಳುವುದು ಮತ್ತು ಪೂ. ಉಮೇಶ ಅಣ್ಣನವರು ಸಂಚಾರವಾಣಿಯಿಂದ ಮಾತನಾಡಿ ಸಮಾಧಾನ ಪಡಿಸುವುದು ಮತ್ತು ಆ ಸಮಯದಲ್ಲಿ `ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ನಮ್ಮ ಜೊತೆಯಲ್ಲಿದ್ದಾರೆ’, ಎಂದೆನಿಸು ವುದು : `ಯಜಮಾನರ ನಿಧನದ ನಂತರ ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡರು ನನಗೆ ಧೈರ್ಯವನ್ನು ನೀಡಿ ನಾಮಜಪಿಸಲು ಹೇಳಿದರು. ನಂತರ ನಾನು `ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಗ್ರಂಥವನ್ನು ನನ್ನ ಬಳಿಯಲ್ಲಿಟ್ಟು ಪೂ. ಅಣ್ಣನವರು ಹೇಳಿದ ನಾಮಜಪವನ್ನು ಮಾಡಿದೆನು. ಸನಾತನದ ೧೭ ನೇ ಸಂತರಾದ ಪೂ. ಉಮೇಶ ಅಣ್ಣನವರು ಸಹ ನನಗೆ ಸಂಚಾರವಾಣಿಯಿಂದ ಗುಣವೈಶಿಷ್ಟ್ಯ ನನಗೆ ಸಮಾಧಾನ ಪಡಿಸಿದರು. ನನಗೆ ಅವರು, “ಕಾಳಜಿ ಮಾಡಬೇಡಿರಿ. ದೇವರಿದ್ದಾನೆ” ಎಂದು ಹೇಳಿದರು. ಆಗ ನನಗೆ `ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ನನ್ನ ಜೊತೆಯಲ್ಲಿದ್ದಾರೆ’, ಎಂದೆನಿಸಿತು.

೧ ಉ ೨. ಸ್ಥಳೀಯ ಸಾಧಕರಿಗೆ ಮತ್ತು ಹೊರಗಿನ ಅನೇಕ ವ್ಯಕ್ತಿಗಳಿಗೆ ಅರಿವಾದ ಅಂಶಗಳು : ಅನೇಕ ಜನರು ಮತ್ತು ಸ್ಥಳೀಯ ಸಾಧಕರಿಗೆ ಯಜಮಾನರನ್ನು ನೋಡುವಾಗ ಅವರು ಜೀವಂತರಾಗಿದ್ದು ಅವರು ಮಂದಹಾಸ ಬೀರುತ್ತಿದ್ದಾರೆ ಎಂದು ಅನಿಸುತ್ತಿತ್ತು. `ಹೊರಗಿನಿಂದ ಅಳುತ್ತ ಬರುತ್ತಿದ್ದ ಜನರು ಯಜಮಾನರನ್ನು ನೋಡಿ ಅಳುವುದನ್ನು ನಿಲ್ಲಿಸಿದರು’, ಎಂದು ಕೆಲವರು ಹೇಳುತ್ತಿದ್ದರು. ಅನೇಕ ಸಾಧಕರು ಮತ್ತು ಬಂದಿರುವ ಅನೇಕ ಜನರಿಗೆ ಸಂಪೂರ್ಣ ಮನೆಯು ಚೈತನ್ಯಮಯ ಮತ್ತು ಸಜೀವವೆನಿಸಿತು.’

೨. ಶ್ರೀ. ಅವಿನಾಶ ಜಯಂತ ಹರಗಿ (ದಿ. ಜಯಂತ ಹರಗಿ ಇವರ ಮಗ)

`ನಾನು ತಂದೆಯವರನ್ನು ನೋಡುತ್ತಿರುವಾಗ, `ನನಗೆ ಅವರು ಜೀವಂತವಾಗಿದ್ದು ಶಾಂತವಾಗಿ ಮಲಗಿದ್ದಾರೆ’, ಎಂದೆನಿಸಿತು. ಆಗ ನನಗೆ `ಇದು ಸಾಧನೆಯಿಂದಲೇ ಸಾಧ್ಯವಾಗುತ್ತಿದೆ ಎಂದು ಗಮನಕ್ಕೆ ಬಂದು `ನಾನು ಇನ್ನೂ ಸಾಧನೆಯನ್ನು ಮಾಡಬೇಕು’, ಎಂದೆನಿಸಿತು.

೩. ಸೌ. ಅಶ್ವಿನಿ ನಾಗರಾಜ (ದಿ. ಜಯಂತ ಹರಗಿ ಇವರ ಮಗಳು)

ಅ. `ತಂದೆಯವರ ಮುಖವನ್ನು ನೋಡಿದಾಗ ನನಗೆ ಆನಂದ ವೆನಿಸುತ್ತಿತ್ತು. ನನಗೆ `ನನ್ನ ತಂದೆಯವರ ಮೃತದೇಹವನ್ನು ಇಟ್ಟಿರುವ ಕೋಣೆಯಲ್ಲಿ ಕುಳಿತು ನಾನುಜಪವನ್ನು ಮಾಡಬೇಕು’, ಎಂದೆನಿಸಿತು. ಅಲ್ಲಿ ಕುಳಿತ ನಂತರ ನನ್ನ ನಾಮಜಪವು ತನ್ನಿಂದ ತಾನೇ ಆಗುತ್ತಿತ್ತು.

ಆ. ನಾನು ಅವರಿಗೆ ಊದುಬತ್ತಿಯಿಂದ ಬೆಳಗುತ್ತಿರುವಾಗ ಅವರ ತಲೆಯ ಮೇಲೆ ಇಟ್ಟಿರುವ ಹೂವು ಕೆಳಗೆ ಬಿದ್ದಿತು. ಆಗ ನನಗೆ ತುಂಬಾ ಆನಂದವಾಯಿತು.

ಇ. ತಂದೆಯವರ ಮೃತದೇಹವನ್ನು ಇಟ್ಟಿರುವ ಕೋಣೆಯಲ್ಲಿ ದಿನವಿಡಿ ಪರಿಮಳ ಬರುತ್ತಿತ್ತು.

ಈ. ಅಂತ್ಯಕ್ರಿಯೆ ಆದನಂತರ ಅಕ್ಕಿಹಿಟ್ಟನ್ನು ಹರಡಿಟ್ಟಿದ್ದೆವು. ಬೆಳಗ್ಗೆ ನಾನು ಆ ಹಿಟ್ಟನ್ನು ನೋಡಿದಾಗ ನನಗೆ ಅದರಲ್ಲಿ ಹಸುವಿನ ಕಾಲು ಮತ್ತು ಅದರೊಳಗೆ `ಓಂ’ ಎಂಬ ಆಕೃತಿ ಕಾಣಿಸಿತು.’

(`ಅಂತ್ಯಕ್ರಿಯೆ ಆದ ನಂತರ ಮೂಲೆಯಲ್ಲಿ ಹಿಟ್ಟು ಹರಡಿ ಅದನ್ನು ಮುಚ್ಚಿಡುತ್ತಾರೆ. `ಮೃತದ ಆತ್ಮವು ಆ ಹಿಟ್ಟಿನ ಮೇಲೆ ಚಿಹ್ನೆಗಳನ್ನಿಟ್ಟು ಹೋಗುತ್ತದೆ’, ಎಂದು ನಂಬಿಕೆ ಇದೆ. ಹಿಟ್ಟಿನ ಮೇಲೆ ಯಾವ ಚಿಹ್ನೆ ಇರುತ್ತದೆಯೋ, ಅದರ ಮೇಲಿಂದ `ಅವನಿಗೆ ಮುಂದಿನ ಜನ್ಮ ಯಾವುದಿರಬಹುದು ?’, ಎಂದು ತಿಳಿಯುತ್ತದೆ.’ – ಸಂಕಲನಕಾರರು)

೪. ಶ್ರೀಮತಿ ಮಾಲತಿ ನಾರಾಯಣ (ಶ್ರೀಮತಿ ರೇವತಿ ಹರಗಿಯವರ ತಂಗಿ)

`ನನ್ನ ಅಕ್ಕನಿಗೆ `ಸನಾತನ ಸಂಸ್ಥೆಯ ಸಾಧಕರ ಆಧಾರವಿದೆ’, ಎಂಬುದನ್ನು ನೋಡಿ ತುಂಬಾ ಸಮಾಧಾನವೆನಿಸುವುದು : `ನನ್ನ ಅಕ್ಕನ ಮನೆಗೆ ಬರುವಾಗ ನನಗೆ ತುಂಬಾ ದುಃಖವೆನಿಸುತ್ತಿತ್ತು. ನನ್ನ ಮನಸ್ಸಿನಲ್ಲಿ `ಅಕ್ಕನನ್ನು ಹೇಗೆ ಸಮಾಧಾನಪಡಿಸಬೇಕು ?’, ಎಂಬ ವಿಚಾರ ತುಂಬಾ ಬರುತ್ತಿತ್ತು. ಮನೆಗೆ ಬಂದ ನಂತರ `ಅಕ್ಕನಿಗೆ ಸನಾತನ ಸಂಸ್ಥೆಯ ಸಾಧಕರ ಆಧಾರವಿದೆ’, ಎಂದು ನೋಡಿದ ನಂತರ ನನಗೆ ತುಂಬಾ ಸಮಾಧಾನವೆನಿಸಿತು.’

(ಎಲ್ಲ ಅಂಶಗಳ ದಿನಾಂಕ : ೧೪.೮.೨೦೨೨)