ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ನೆರೆಯ ಸಂಕಷ್ಟದ ಬಗ್ಗೆ ಸಂತಾಪ ಸೂಚಿದ್ದರಿಂದ ಪಾಕಿಸ್ತಾನದ ಪ್ರಧಾನಿಯಿಂದ ಆಭಾರಮನ್ನಣೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಬಂದಿರುವ ಭಯಾನಕ ನೆರೆಯಿಂದ ೧ ಸಾವಿರಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಸಾವಿರಾರು ಕೋಟಿ ರೂಪಾಯಿಯ ನಾಶವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದರು. ಇದರ ನಂತರ ಪಾಕಿಸ್ತಾನದ ಪ್ರಧಾನಿ ಶಹಾಬಾದ್ ಶರೀಫ್ ಇವರು ಸಹ ಟ್ವಿಟ್ ಮೂಲಕ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಹಾಗೂ ಪಾಕಿಸ್ತಾನ ಈ ಸಂಕಷ್ಟದಿಂದ ಪಾರಾಗುವುದು’, ಎಂದು ವಿಶ್ವಾಸ ಕೂಡ ವ್ಯಕ್ತಪಡಿಸಿದ್ದಾರೆ.