ಚೀನಾ, ಜಪಾನ ಮತ್ತು ತೈವಾನಗಳ ನಡುವಿನ ಶತ್ರುತ್ವ ಮತ್ತು ರಾಷ್ಟ್ರ ಹಿತದ ಜೋಪಾಸನೆಯಲ್ಲಿ ಭಾರತದ ಪಾತ್ರ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ಚೀನಾವು ತೈವಾನನ ಮೇಲೆ ಹಾಕಿದ ೧೧ ಕ್ಷಿಪಣಿಗಳಲ್ಲಿ ೫ ಕ್ಷಿಪಣಿಗಳು ಜಪಾನಿನ ಗಡಿ ರೇಖೆಯಲ್ಲಿ ಬೀಳುವುದು ಮತ್ತು ಅದರ ಹಿಂದಿರುವ ಕಾರಣ ಮೀಮಾಂಸೆ.

‘ಅಮೇರಿಕೆಯ ಪ್ರತಿನಿಧಿ ಸಂಸತ್ತಿನ ಸ್ಪೀಕರ ನ್ಯಾನ್ಸಿ ಪೆಲೋಸಿಯವರು ತೈವಾನಗೆ ಹೋದ ಬಳಿಕ ಚೀನಾ ತನ್ನ ಆಕ್ರೋಶವನ್ನು ಹೊರಹಾಕತೊಡಗಿದೆ. ಚೀನಾವು ತೈವಾನ ವಿರುದ್ಧ ಅನೇಕ ಕ್ರಮಗಳನ್ನು ಪ್ರಾರಂಭಿಸಿದೆ. ಅದು ತೈವಾನ ದೇಶವನ್ನು ಎಲ್ಲ ದಿಕ್ಕುಗಳಿಂದಲೂ ಸುತ್ತುವರಿದಿದೆ. ಹೊರಗಿನಿಂದ ಬರುವ ವ್ಯಾಪಾರಿ ಹಡಗುಗಳನ್ನು ಕೂಡ ಅಲ್ಲಿ ತಡೆಯಲು ಪ್ರಯತ್ನಿಸುತ್ತಿದೆ. ಕೆಲವು ದಿನಗಳ ಹಿಂದೆ ಚೀನಾ ತೈವಾನ ಮೇಲೆ ೧೧ ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಅದರಲ್ಲಿ ೫ ಕ್ಷಿಪಣಿಗಳು ಜಪಾನನ ಸಮುದ್ರದಲ್ಲಿ ಬಿದ್ದಿವೆ. ಗುರಿ ತೈವಾನ ಮೇಲಿತ್ತು; ಆದರೆ ಅದು ಜಪಾನ ಮೇಲೆ ಬಿದ್ದಿತು. ಇಲ್ಲಿ ಒಂದು ವಿಷಯವನ್ನು ಗಮನಿಸಬೇಕಾಗಿದೆ, ನ್ಯಾನ್ಸಿ ಪೆಲೋಸಿ ತೈವಾನ ಭೇಟಿಯನ್ನು ಮುಗಿಸಿ ದಕ್ಷಿಣ ಕೊರಿಯಾಕ್ಕೆ ಹೋದರು ಮತ್ತು ಅಲ್ಲಿಂದ ಅವರು ಜಪಾನ ತಲುಪಿದ್ದರು. ಈ ಕಾರಣದಿಂದಲೇ ಜಪಾನಿಗೆ ಎಚ್ಚರಿಕೆಯನ್ನು ನೀಡುವುದಕ್ಕಾಗಿಯೇ ಚೀನಾ ಇಂತಹ ದುಸ್ಸಾಹಸವನ್ನು ಮಾಡಿರುವ ಸಾಧ್ಯತೆಯಿದೆ. ಇದರಲ್ಲಿ ಎರಡು ವಿಷಯಗಳು ನಡೆದಿರಬಹುದು. ಒಂದು ಆ ಕ್ಷಿಪಣಿಗಳು ತಪ್ಪಾಗಿ ತಲುಪಿರಬಹುದು ಅಥವಾ ಅದನ್ನು ಜಪಾನಿಗೆ ಬೇಕೆಂತಲೇ ಹಾಕಿರಬಹುದು. ಚೀನಾದ ಶಸ್ತ್ರಾಸ್ತ್ರಗಳ ಬಗ್ಗೆ ವಿಶ್ವಾಸವಿಡಲು ಸಾಧ್ಯವಿಲ್ಲ. ಅವರು ತಯಾರಿಸುವ ಅಡಿ ಪಾಯವೇ ಸುದೃಢವಾಗಿರುವುದಿಲ್ಲ. ಅವರ ಉತ್ಪಾದನೆಗಳ ಗುಣಮಟ್ಟವು ಅತ್ಯಂತ ಕೆಳಮಟ್ಟದ್ದಾಗಿರುತ್ತವೆಯೆನ್ನುವುದುಅನೇಕ ಬಾರಿ ಸಿದ್ಧಗೊಂಡಿದೆ. ‘ಅನೇಕ ಬಾರಿ ಚೀನಿಯರು‘ ಮೇಡ ಇನ್ ಚೈನಾ’ ಸಾಮಗ್ರಿಗಳನ್ನು ಉಪಯೋಗಿಸುವುದಿಲ್ಲ, ಎಂದು ಹೇಳಲಾಗುತ್ತದೆ. ಅವರು ಹೊರಗಿನ ಸಾಮಗ್ರಿಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ.

೨. ಜಪಾನ ಚೀನಾದ ಶತ್ರುವಾಗಿರುವುದರಿಂದ ಚೀನಾ ಅದಕ್ಕೆ ಎಚ್ಚರಿಕೆ ನೀಡುವುದಕ್ಕಾಗಿಯೇ ಕ್ಷಿಪಣಿಯನ್ನು ಹಾಕಿರುವ ಸಾಧ್ಯತೆಯಿರುವುದು

ಪೆಲೊಸಿ ಜಪಾನ ತಲುಪಿದ ಬಳಿಕ ಅಲ್ಲಿ ಕ್ಷಿಪಣಿಯನ್ನು ಹಾಕ ಲಾಯಿತು. ಇದರಿಂದ ‘ಚೀನಾ ಉದ್ದೇಶಪೂರ್ವಕವಾಗಿಯೇ ಮಾಡಿರಬೇಕು’, ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಜಪಾನ ಚೀನಾದ ಶತ್ರುವಾಗಿದೆ ಮತ್ತು ‘ಸೆನಕಾಕು’ ಬಂದರಿನ ಬಗ್ಗೆ ಈ ಎರಡೂ ದೇಶಗಳಲ್ಲಿ ವಿವಾದವಿದೆ. ಇಷ್ಟು ವರ್ಷಗಳ ವರೆಗೆ ಜಪಾನ ತನ್ನ ರಕ್ಷಣೆಗಾಗಿ ಹಣವನ್ನು ವ್ಯಯಿಸಲು ಸಿದ್ಧವಿರಲಿಲ್ಲ; ಆದರೆ ಚೀನಾದ ಹೆದರಿಕೆಯಿಂದ ಜಪಾನ ತನ್ನ ಸ್ವಂತ ರಕ್ಷಣೆಗಾಗಿ ‘ಬಜೆಟ’ ಹೆಚ್ಚಿಸಲು ಪ್ರಾರಂಭಿಸಿದೆ. ಎರಡನೇಯ ಮಹಾಯುದ್ಧದ ಬಳಿಕ ಇದು ಮೊದಲ ಬಾರಿ ಜರುಗಿದೆ. ಈ ಘಟನೆಯಿಂದ ‘ಚೀನಾ ಈಗ ಜಪಾನಿನ ದಾರಿಗಡ್ಡವಾಗುತ್ತಿದೆಯೇ ?’, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

೩. ಚೀನಾ ತೈವಾನ ವಿರುದ್ಧ ಪಾರಂಪರಿಕ ಯುದ್ಧವನ್ನು ಮಾಡಿದರೆ ಅದು ದೊಡ್ಡ ಪ್ರಮಾಣದಲ್ಲಿ ರಕ್ತವನ್ನು ಹರಿಸಬೇಕಾಗುವುದು.

ಚೀನಾ ಮೊದಲಿನಿಂದಲೂ ತೈವಾನಗೆ ಕಿರುಕುಳ ಕೊಡುತ್ತಲೇ ಬಂದಿದೆ. ಚೀನಾ ತೈವಾನನ ಮೇಲೆ ಸೈಬರ ಆಕ್ರಮಣ ಮಾಡಿದೆ. ‘ಜಗತ್ತಿನ ಎಲ್ಲಕ್ಕಿಂತ ದೊಡ್ಡ ಸೈಬರ (ಮಾಹಿತಿ-ತಂತ್ರಜ್ಞಾನ) ಆಕ್ರಮಣ ಚೀನಾ ತೈವಾನಿನ ಸರಕಾರಿ ರಕ್ಷಣಾ ವ್ಯವಸ್ಥೆ ಮತ್ತು ‘ನೆಟವರ್ಕ ಮೇಲೆ ನಡೆಸಿದೆಯೆಂದು ಹೇಳಲಾಗುತ್ತಿದೆ. ಆದರೆ ತೈವಾನಿನ ಭದ್ರತಾ ವ್ಯವಸ್ಥೆ ಸುದೃಢವಾಗಿರುವುದರಿಂದ ಅದರ ಮೇಲೆ ಇದರ ವಿಶೇಷ ಪರಿಣಾಮ ಬೀರಲಿಲ್ಲ. ಚೀನಾ ತೈವಾನನೊಂದಿಗೆ ಇರುವ ವ್ಯಾಪಾರವನ್ನು ನಿರ್ಬಂಧಿಸಲು ಪ್ರಯತ್ನಿಸುತ್ತಿದೆ. ಆದರೆ ಇದರಿಂದ ಚೀನಾ ದೇಶಕ್ಕೆ ಹಾನಿಯಾಗಲಿದೆ; ಕಾರಣ ತೈವಾನಿನಲ್ಲಿ ತಯಾರಾಗುವ ‘ಸೆಮಿಕಂಡಕ್ಟರ’ (ಇಲೆಕ್ಟ್ರಾನಿಕ ಉಪಕರಣದ ಒಂದು ಬಿಡಿಭಾಗ’ ಇದನ್ನು ದೊಡ್ಡ ಪ್ರಮಾಣದಲ್ಲಿ ಚೀನಾ ದೇಶದಲ್ಲಿ ಖರೀದಿಸಲಾಗುತ್ತದೆ. ಸದ್ಯ ಚೀನಾ ವಿಮಾನಗಳು ತೈವಾನ ಗಡಿಯಲ್ಲಿ ನುಗ್ಗಲು ಪ್ರಯತ್ನಿಸುತ್ತಿರುತ್ತವೆ. ಅವುಗಳಿಗೆ ತೈವಾನ ತಕ್ಷಣವೇ ಪ್ರತ್ಯುತ್ತರ ನೀಡುತ್ತದೆ. ತೈವಾನ ಕೂಡ ತನ್ನ ಕ್ಷಿಪಣಿಗಳನ್ನು ಸಕ್ರಿಯಗೊಳಿಸಿದೆ. ತೈವಾನನ ಮೂರು ದಳಗಳು ಅತ್ಯಂತ ಸುದೃಢವಾಗಿವೆ. ಅವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಇದರಿಂದ ಯುದ್ಧ ನಡೆದರೆ, ಯಾವ ರೀತಿ ಉಕ್ರೇನ ರಶಿಯಾಕ್ಕೆ ಪ್ರತ್ಯುತ್ತರ ನೀಡಿತೋ, ಅದೇ ರೀತಿ ತೈವಾನ ಕೂಡ ಚೀನಾಕ್ಕೆ ಪ್ರತ್ಯುತ್ತರ ನೀಡಬಲ್ಲದು. ‘ಒಂದು ವೇಳೆ ಚೀನಾ ತೈವಾನ ಮೇಲೆ ಸಮುದ್ರ ಮೂಲಕ ಆಕ್ರಮಣ ನಡೆಸಬಹುದು’, ಎಂದು ಗಮನಿಸಿ ತೈವಾನ ಸಮುದ್ರ ತಟದ ರಕ್ಷಣಾ ವ್ಯವಸ್ಥೆಯನ್ನು ಸುದೃಢಗೊಳಿಸಿದೆ. ಇದರಿಂದ ಚೀನಾ ಪಾರಂಪರಿಕ ಆಕ್ರಮಣ ಮಾಡಲು ಪ್ರಯತ್ನಿಸಿದರೆ, ಅಲ್ಲಿ ಅದಕ್ಕೆ ಅಧಿಕ ರಕ್ತ ಹರಿಸಬೇಕಾಗಬಹುದು.

೪. ಚೀನಾ ಸೈನ್ಯಕ್ಕೆ ಪಾರಂಪರಿಕ ಯುದ್ಧವನ್ನು ಮಾಡಲು ಧೈರ್ಯ ಇಲ್ಲದಿರುವುದರಿಂದ ಚೀನಾ ಕೇವಲ ‘ಹೈಬ್ರಿಡ್ ಯುದ್ಧ’ (ಒಂದೇ ಒಂದು ಗುಂಡು ಹಾರಿಸದೇ ಮಾಡುವ ಯುದ್ಧ) ಮುಂದುವರಿಸುವ ಸಾಧ್ಯತೆಯಿರುವುದು

‘ಅಮೇರಿಕಾ ತೈವಾನಗೆ ಸಹಾಯ ಮಾಡಬಹುದೇ ?’, ಎನ್ನುವ ಪ್ರಶ್ನೆ ಏಳುತ್ತದೆ. ಅಮೇರಿಕಾ ಸೈನ್ಯವು ಉಕ್ರೇನ ಯುದ್ಧದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಲಿಲ್ಲ; ಆದರೆ ಶಸ್ತ್ರಾಸ್ತ್ರಗಳ ಸಹಾಯ ಮಾಡಿತು. ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ, ಅಮೇರಿಕಾದ ‘ಏರ ಕ್ರಾಫ್ಟ ಕ್ಯಾರಿಯರ’ (ವಿಮಾನಗಳನ್ನು ಹೊತ್ತೊಯ್ಯಬಲ್ಲ ಹಡಗು’ ದಕ್ಷಿಣ ಚೀನಾ ಸಮುದ್ರದಲ್ಲಿ ಬಂದಿದೆ. ಇದರಿಂದ ಆವಶ್ಯಕತೆ ಬಿದ್ದಲ್ಲಿ, ಅಮೇರಿಕಾದ ವಿಮಾನದಳ ಮತ್ತು ನೌಕಾದಳ ಗಳ ಸಹಾಯ ತೈವಾನಕ್ಕೆ ಒದಗಿಸಬಹುದು. ‘ಅಂತಹ ಸಹಾಯ ವನ್ನು ನೀಡುವ ಇಚ್ಛಾಶಕ್ತಿಯನ್ನು ಅಮೇರಿಕಾದ ಮುಖಂಡರು ತೋರಿಸುವರೇ ?’, ಎನ್ನುವುದೇ ನೈಜ ಪ್ರಶ್ನೆಯಾಗಿದೆ. ಚೀನಾ ಅಮೇರಿಕಾವನ್ನು ಬೆದರಿಸಿ ಹೆದರಿಸಲು ಪ್ರಯತ್ನಿಸುತ್ತಿತ್ತು. ಮಧ್ಯಂತರದಲ್ಲಿ ಚೀನಾ ಅಮೇರಿಕಾಗೆ ಬೆದರಿಕೆಯೊಡ್ಡಿತ್ತು. ನ್ಯಾನ್ಸಿ ಪೆಲೊಸಿಯವರನ್ನು ತೈವಾನಗೆ ಕಳುಹಿಸಬಾರದು. ಅವರನ್ನು ಕಳುಹಿಸಿದರೆ, ನಾವು ಅವರ ವಿಮಾನವನ್ನು ಕೆಡವುತ್ತೇವೆ ಎಂದು ಹೇಳಿತ್ತು. ಬಳಿಕ ಪೆಲೊಸಿ ತೈವಾನಗೆ ಬಂದರು, ಅವರನ್ನು ಹೊರಗೆ ಹೋಗಲು ಬಿಡುವುದಿಲ್ಲ, ಎಂದು ಬೆದರಿಕೆಯನ್ನು ಹಾಕಿತ್ತು. ಆದರೆ ಪ್ರತ್ಯಕ್ಷವಾಗಿ ಪೆಲೊಸಿಯವರ ಪ್ರವಾಸ ಕಾರ್ಯಕ್ರಮ ಮುಕ್ತಾಯ ಗೊಂಡಿತು. ಆದರೆ ಚೀನಾಕ್ಕೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಚೀನಾ ಪಾರಂಪರಿಕ ಯುದ್ಧ ಮಾಡುವ ಸಾಧ್ಯತೆ ಬಹಳ ಕಡಿಮೆ ಯೆನಿಸುತ್ತದೆ; ಆದರೆ ಅದರ ಅಪಾರಂಪರಿಕ ಯುದ್ಧ ಎಂದರೆ ‘ಹೈಬ್ರಿಡ್ ವಾರ’ (ಅಪಪ್ರಚಾರ ಯುದ್ಧ, ಸೈಬರವಾರ್, ಆರ್ಥಿಕ ಯುದ್ಧ ಇತ್ಯಾದಿ) ಇದು ಮುಂದುವರಿಯಲಿದೆ. ಇದರಲ್ಲಿ ಬೃಹತ ಪ್ರಮಾಣದಲ್ಲಿ ಹೆಚ್ಚಳವಾಗಲು ಅದು ಪ್ರಯತ್ನಿಸಬಹುದು. ಚೀನಾ ಅಮೇರಿಕಾದ ವಿರುದ್ಧ ವ್ಯಾಪಾರೀ ಯುದ್ಧ ಪ್ರಾರಂಭಿಸಬಹುದು. ಸದ್ಯಕ್ಕೆ ಚೀನಿ ಸೈನ್ಯಕ್ಕೆ ಪಾರಂಪರಿಕ ಯುದ್ಧ ಮಾಡುವ ಧೈರ್ಯವಿಲ್ಲ.

೫. ಭಾರತಕ್ಕೆ ತೈವಾನನೊಂದಿಗೆ ಆರ್ಥಿಕ ಸಂಬಂಧವನ್ನು ಮುಂದುವರಿಸಿ ರಾಷ್ಟ್ರೀಯ ಹಿತವನ್ನು ಕಾಪಾಡುವ ಆವಶ್ಯಕತೆ

ತೈವಾನನೊಂದಿಗೆ ಭಾರತದ ರಾಜಕೀಯ ಸಂಬಂಧಗಳಿಲ್ಲ. ಇದರಿಂದ ಆ ದೇಶದಲ್ಲಿ ಭಾರತದ ರಾಯಭಾರ ಕಚೇರಿಯಿಲ್ಲ. ಹೀಗಿದ್ದರೂ, ಭಾರತದ ತೈವಾನನೊಂದಿಗಿರುವ ವ್ಯಾಪಾರ ವಹಿವಾಟು ವೇಗವಾಗಿ ಬೆಳೆಯುತ್ತಿದೆ. ತಂತ್ರಜ್ಞಾನದ ಸಂದರ್ಭದಲ್ಲಿಯೂ ತೈವಾನ ಮತ್ತು ಭಾರತದ ಸಂಬಂಧ ಚೆನ್ನಾಗಿದೆ. ತೈವಾನ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮಾಡುತ್ತಿದೆ. ಭಾರತಕ್ಕೆ ವೇಗವಾಗಿ ಅಭಿವೃದ್ಧಿ ಹೊಂದಬೇಕಾದಲ್ಲಿ, ಅತ್ಯಾಧುನಿಕ ತಂತ್ರಜ್ಞಾನದ ಆವಶ್ಯಕತೆಯಿದೆ. ಅಮೇರಿಕಾ ಭಾರತಕ್ಕೆ ನೀಡುತ್ತಿರುವ ತಂತ್ರಜ್ಞಾನ ಬಹಳ ದುಬಾರಿಯಾಗಿದೆ. ಇಸ್ರೈಲ ಕೂಡ ಭಾರತಕ್ಕೆ ವ್ಯವಹಾರಿಕ ಮಟ್ಟದಲ್ಲಿ ತಂತ್ರಜ್ಞಾನವನ್ನು ಪೂರೈಸುತ್ತಿದೆ. ಅದರ ತುಲನೆಯಲ್ಲಿ ತೈವಾನ ಭಾರತಕ್ಕೆ ಕಡಿಮೆ ಬೆಲೆಯಲ್ಲಿ ತಂತ್ರಜ್ಞಾನವನ್ನು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ತೈವಾನನೊಂದಿಗೆ ಆರ್ಥಿಕ ಸಂಬಂಧವನ್ನು ಗೌಪ್ಯ ರೀತಿಯಲ್ಲಿ ಹೆಚ್ಚಿಸಬೇಕು; ಆದರೆ ಪಾರಂಪರಿಕ ಯುದ್ಧ ಮಾಡುವ ಆವಶ್ಯಕತೆಯಿಲ್ಲ. ಭಾರತಕ್ಕೆ ಏನು ಮಾಡಬೇಕಾಗಿದೆಯೋ, ಅದನ್ನು ಮುಂದುವರಿಸಿಕೊಂಡು ಶಾಂತರೀತಿಯಲ್ಲಿ ರಾಷ್ಟ್ರಹಿತ ಕಾಪಾಡಬೇಕಾಗಿದೆ.’
– (ನಿವೃತ್ತ ) ಬ್ರಿಗೇಡಿಯರ ಹೇಮಂತ ಮಹಾಜನ