ರಾಷ್ಟ್ರಪತಿಗಳ ಶ್ರದ್ಧೆಯ ಬಗ್ಗೆ ಪ್ರಗತಿಪರರ ಟೀಕೆ ಮತ್ತು ಅದರ ಖಂಡನೆ !

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ರಾಷ್ಟ್ರಪತಿ ದ್ರೌಪದಿ ಮುರ್ಮು ಇವರು ಪುರೋಹಿತರಿಂದ ಧಾರ್ಮಿಕ ವಿಧಿಗಳನ್ನು ಮಾಡಿಸಿಕೊಂಡಿದ್ದರಿಂದ ಪ್ರಗತಿಪರರ ಸಿಟ್ಟು ನೆತ್ತಿಗೇರುವುದು ಮತ್ತು ಅವರು ಅದರ ವಿರುದ್ಧ ಪ್ರಶ್ನೆಗಳ ಸುರಿಮಳೆಗರೆಯುವುದು

ಇತ್ತೀಚೆಗೆ ‘ಭಾರತದ ರಾಷ್ಟ್ರಪತಿಗಳೆಂದು ಗೌರವಾನ್ವಿತ ದ್ರೌಪದಿ ಮುರ್ಮು ಇವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಅದೇ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ಪ್ರಸಾರವಾಗಿತ್ತು. ಅದರಲ್ಲಿ ರಾಷ್ಟ್ರಪತಿಗಳು ಕೆಲವು ಪಂಡಿತರು, ಬ್ರಾಹ್ಮಣರು ಮತ್ತು ಪುರೋಹಿತರೊಂದಿಗೆ ನಿಂತಿರುವುದು ಕಾಣಿಸುತ್ತಿತ್ತು. ಅಲ್ಲಿಯ ಮಂತ್ರೋಚ್ಚಾರಗಳಿಂದ ಅಲ್ಲಿ ಯಾವುದೋ ಧಾರ್ಮಿಕ ವಿಧಿಗಳು ನಡೆದಿವೆ ಎಂದೆನಿಸುತ್ತಿತ್ತು. ಈ ವಿಡಿಯೋ ಪ್ರಸಾರವಾದ ಬಳಿಕ ಪ್ರಗತಿ(ಅಧೋಗತಿ)ಪರರು ಮತ್ತು ಸಂವಿಧಾನದ ತಥಾಕಥಿತ ರಕ್ಷಕರೆಲ್ಲರೂ (ಯಾವಾಗಲೂ ಸಂವಿಧಾನವನ್ನು ತಲೆಯ ಮೇಲಿಟ್ಟುಕೊಂಡು ತಿರುಗುವವರು) ಪ್ರಧಾನಮಂತ್ರಿ ಮತ್ತು ಸರಕಾರಕ್ಕೆ ಪ್ರಶ್ನೆಗಳನ್ನು ಕೇಳತೊಡಗಿದರು, ‘ಸ್ವಾತಂತ್ರ್ಯ ದೊರೆತು ೭೫ ವರ್ಷಗಳಾಯಿತು; ಆದರೆ ಇಷ್ಟು ವರ್ಷಗಳಲ್ಲಿ ಯಾವುದೇ ರಾಷ್ಟ್ರಪತಿಗಳು ಧಾರ್ಮಿಕ ವಿಧಿಗಳನ್ನು ಮಾಡಿ ಪ್ರಮಾಣವಚನವನ್ನು ಸ್ವೀಕರಿಸಿರಲಿಲ್ಲ. ದ್ರೌಪದಿ ಮುರ್ಮು ಇವರು ಆದಿವಾಸಿಯಾಗಿದ್ದರಿಂದ ಅವರ ಶುದ್ಧೀಕರಣ ಮಾಡಲಾಯಿತೇ ? ಇದು ಬೇಧಭಾವವಾಗಿದ್ದು, ಅವರ ಅಪಮಾನವಾಗಿದೆ, ‘ಆದಿವಾಸಿ ಆರ್ಮಿಯ ಕಾರ್ಯಕರ್ತೆಯರು ಈ ಬಗ್ಗೆ ಮಾತನಾಡುತ್ತಾ, ‘ಪೂಜಾರಿಗಳು ಮಂತ್ರವನ್ನು ಹೇಳುತ್ತಾ ರಾಷ್ಟ್ರಪತಿ ದ್ರೌಪದಿ ಮುರ್ಮು ಇವರ ತಲೆಯ ಮೇಲೆ ಅಕ್ಷತೆಗಳನ್ನು ಹಾಕುತ್ತಿದ್ದರು. ಇದು ಓರ್ವ ಮಹಿಳೆಯ ಅಪಮಾನವಾಗಿದೆ ಎಂದರು. ಇನ್ನೊಂದು ಪ್ರಶ್ನೆ ಕೇಳಿ ಬಂದಿತು, “ಇದು ರಾಷ್ಟ್ರಪತಿ ಭವನ ಅಥವಾ ರಾಷ್ಟ್ರಪತಿಗಳ ಕೇಸರೀಕರಣವಾಗಿದೆಯೇ ? ರಾಷ್ಟ್ರಪತಿ ಮುರ್ಮು ಇವರು ಕೈಜೋಡಿಸಿರಲಿಲ್ಲ. ಹಾಗೆಯೇ ಈ ಮಂತ್ರೋಚ್ಛಾರ ಅವರ ಇಚ್ಛೆಯ ವಿರುದ್ಧ ನಡೆದಿದೆ ಎಂದು ಅವರ ಮುಖಭಾವದಿಂದ ಕಂಡುಬರುತ್ತಿತ್ತು. ರಾಷ್ಟ್ರಪತಿಗಳು ಕೇವಲ ವಿಧಿಯ ಸ್ಥಳದಲ್ಲಿ ಉಪಸ್ಥಿತರಿದ್ದುದರಿಂದ ಅವರ ಆದಿವಾಸಿ ಪ್ರತಿಷ್ಠೆ ಹೋಗುತ್ತದೆಯೇ ? ಅವರು ಆದಿವಾಸಿಗಳಾಗಿದ್ದಾರೆ ಮತ್ತು ಮುಂದೆಯೂ ಆದಿವಾಸಿಯಾಗಿಯೇ ಇರಲಿದ್ದಾರೆ. ಒಂದು ಧಾರ್ಮಿಕ ಕಾರ್ಯಕ್ರಮದ ವೀಡಿಯೊದಲ್ಲಿ ಮೊದಲಿನ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ ಇವರೂ ಕೂಡ ಕೆಲವು ಪುರೋಹಿತರೊಂದಿಗೆ ಕಾಣಿಸುತ್ತಾರೆ. ಎರಡೂ ವಿಡಿಯೊಗಳನ್ನು ಉದ್ದೇಶಪೂರ್ವಕವಾಗಿ ಒಟ್ಟಿಗೆ ಅಥವಾ ಒಂದಾದ ಮೇಲೆ ಒಂದು ಹೀಗೆ ಪ್ರಸಾರ ಮಾಡಿದ್ದಾರೇನು ? ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದರು ೨ ವರ್ಷಗಳ ಹಿಂದೆ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಮಾಡಿದ್ದರು. ಇದು ಅದರ ವೀಡಿಯೊ ಆಗಿತ್ತು; ಸಾಮಾಜಿಕ ಮಾಧ್ಯಮಗಳಿಗೆ ಹೇಳಿದ್ದೇನೆಂದರೆ, ಇಬ್ಬರು ಉನ್ನತ ಪದವಿಯ ವ್ಯಕ್ತಿಗಳು ಪ್ರತಿಷ್ಠೆಯ ಪದವನ್ನು ಬಿಡುವಾಗ ಮತ್ತು ಪಡೆಯುವಾಗ ದೇವರು, ಬ್ರಾಹ್ಮಣರು, ಪುರೋಹಿತರು ಮತ್ತು ಸಮಾಜದಲ್ಲಿನ ವ್ಯಕ್ತಿಗಳನ್ನು ಸಾಕ್ಷಿಯಾಗಿಟ್ಟುಕೊಂಡು ತಮ್ಮ ಪದವನ್ನು ಹಸ್ತಾಂತರಿಸುತ್ತಿದ್ದರು. ಆದುದರಿಂದ ಪ್ರಗತಿಪರರಿಗೆ ದುಃಖವಾಗಲು ಕಾರಣವೇ ಇಲ್ಲ.

೨. ಭಾರತದ ಮೇಲೆ ಆಡಳಿತವನ್ನು ನಡೆಸಲು ಆಂಗ್ಲರು ‘ಒಡೆದಾಳುವ ನೀತಿಯನ್ನು ಅವಲಂಬಿಸಿ ಹಿಂದೂಗಳಲ್ಲಿ ಒಡಕುಂಟು ಮಾಡುವುದು ಮತ್ತು ದುರ್ಲಕ್ಷಿತರೆಂದು ಕೆಲವು ಜಾತಿಗಳ ಜನರಿಗೆ ಮೀಸಲಾತಿಯನ್ನು ನೀಡುವುದು

ಈಗ ಪ್ರಗತಿಪರರು ಎತ್ತಿರುವ ಕೆಲವು ಪ್ರಶ್ನೆಗಳನ್ನು ನೋಡೋಣ. ಅವರ ಪ್ರಕಾರ ಆದಿವಾಸಿಗಳು ಹಿಂದೂಗಳಲ್ಲ. ಆದುದರಿಂದ ರಾಷ್ಟ್ರಪತಿಗಳ ಮುಖ ಚಿಂತೆಯಿಂದ ಕೂಡಿತ್ತು. ಅವರು ಪುರೋಹಿತರ ಧಾರ್ಮಿಕ ಕಾರ್ಯಕ್ರಮದಲ್ಲಿ ಕೈ ಜೋಡಿಸಿಕೊಂಡಿರಲಿಲ್ಲ. ‘ಹಿಂದೂ ವಿವಾಹ ಕಾನೂನು ಆದಿವಾಸಿಗಳಿಗೆ ಅನ್ವಯಿಸುವುದಿಲ್ಲ. ಇದಕ್ಕಾಗಿ ಪರಿಶಿಷ್ಟ ಜಾತಿ-ಪಂಗಡಗಳು ಅಥವಾ ಪ್ರತಿಯೊಂದು ರಾಜ್ಯವು ತಮ್ಮ ರಾಜ್ಯಗಳಲ್ಲಿ ಘೋಷಿಸಿರುವ ಕೆಲವು ಅಲೆಮಾರಿ ಮತ್ತು ಬುಡಕಟ್ಟು ಜನಾಂಗದವರ ವಿಚಾರ ಮಾಡೋಣ. ಭಾರತದ ಮೇಲೆ ರಾಜ್ಯವಾಳಲು ಬಂದ ಆಂಗ್ಲರು ‘ಒಡೆದಾಳುವ ನೀತಿಗನುಸಾರ ಪ್ರಾರಂಭದಲ್ಲಿ ಮುಸಲ್ಮಾನ ಮತ್ತು ಹಿಂದೂಗಳಲ್ಲಿ ನಿರಂತರವಾಗಿ ಜಗಳಗಳು ನಡೆಯಬೇಕೆಂಬ ರೀತಿಯಲ್ಲಿ ಆಡಳಿತವನ್ನು ಸಿದ್ಧಗೊಳಿಸಿದರು. ಅನಂತರ ಅವರು ಹಿಂದೂಗಳಲ್ಲಿ ಒಡಕುಂಟು ಮಾಡಲು ಪ್ರಾರಂಭಿಸಿದರು. ಆದುದರಿಂದ ಸ್ವಾತಂತ್ರ್ಯಪೂರ್ವದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳು, ಅಲೆಮಾರಿ ಮತ್ತು ಬುಡಕಟ್ಟು ಜನಾಂಗದವರು, ಹಾಗೆಯೇ ಇತರ ಹಿಂದುಳಿದ ವರ್ಗದವರು ಹೀಗೆ ಒಂದು ದೊಡ್ಡ ವರ್ಗವನ್ನು ವಿವಿಧ ವರ್ಗಗಳಲ್ಲಿ ವಿಭಜಿಸಲಾಯಿತು. ಅವರಿಗೆ ಮೀಸಲಾತಿಯನ್ನು ನೀಡಲಾಯಿತು. ‘ಈ ವರ್ಗವು ನಿರ್ಲಕ್ಷಿಸಲ್ಪಟ್ಟಿದ್ದು, ಅವರ ಅಭಿವೃದ್ಧಿಗಾಗಿ ಅವರಿಗೆ ಸ್ವಲ್ಪ ಮಟ್ಟಿಗೆ ಮೀಸಲಾತಿಯ ಆವಶ್ಯಕತೆಯಿತ್ತು, ಎನ್ನುವ ಉದ್ದೇಶವನ್ನು ಆ ಸಮಯದಲ್ಲಿ ತೋರಿಸಲಾಯಿತು; ಆದರೆ ಆಂಗ್ಲರಿಗೆ ಅವರ ಮೇಲಿರುವ ಪ್ರೀತಿಯು ತೋರಿಕೆಯದಾಗಿತ್ತು ಮತ್ತು ಹಿಂದೂ ಸಮಾಜ ಒಗ್ಗಟ್ಟಿನಿಂದ ಇರಬಾರದು ಎನ್ನುವುದೇ ಇದರ ಹಿಂದಿನ ಸಂಚಾಗಿತ್ತು. ಆ ಉದ್ದೇಶವನ್ನು ಅವರು ಸಾಧಿಸಿದರು.

೩. ಆದಿವಾಸಿ ಸಮಾಜವು ಶಿವ ಮತ್ತು ಶಕ್ತಿಯ ಉಪಾಸಕರಾಗಿದ್ದು, ಅವರು ಹಿಂದೂ ಧರ್ಮದ ಒಂದು ಘಟಕವೇ ಆಗಿದ್ದಾರೆ ಮತ್ತು ಅವರ ರೂಢಿ-ಪರಂಪರೆಗಳು ಹಿಂದೂಗಳಂತೆಯೇ ಇರುವುದು ಗಮನಕ್ಕೆ ಬರುವುದು

ಭಾರತ ಸ್ವತಂತ್ರವಾದ ಬಳಿಕ ‘ಹಿಂದೂಗಳಲ್ಲಿ ಒಡಕು ಮೂಡಬೇಕು, ಎನ್ನುವುದು ಆಂಗ್ಲರ ಸಂಚಾಗಿತ್ತು. ಇದನ್ನು ಡಾ. ಬಾಬಾ ಸಾಹೇಬ ಆಂಬೇಡಕರರು ಅರಿತಿದ್ದರು. ಆದುದದರಿಂದ ೨೬ ಜನವರಿ ೧೯೫೦ ರಂದು ಸಂವಿಧಾನವನ್ನು ಜಾರಿಗೊಳಿಸಿದ ಬಳಿಕ ಅವರು ‘ಕೇವಲ ೧೦ ವರ್ಷಗಳ ವರೆಗೆ ಮಾತ್ರ ಮೀಸಲಾತಿ ಇರಬೇಕು, ಎಂದು ಘೋಷಿಸಿದ್ದರು. ಎಲ್ಲ ಪಕ್ಷಗಳ ರಾಜ ಕಾರಣಿಗಳು ಅದನ್ನು ತದನಂತರವೂ ಮುಂದುವರಿಸಿದರು. ಈಗ ಆಂಗ್ಲರು ರಚಿಸಿದ ಪರಿಶಿಷ್ಟ ಪಂಗಡದಲ್ಲಿ ಒಟ್ಟು ೪೭ ಪಂಗಡಗಳನ್ನು ‘ಆದಿವಾಸಿ ಎಂದು ಘೋಷಿಸಲಾಗಿದೆ. ಅವರ ಕೆಲವು ವೈಶಿಷ್ಟ್ಯಗಳನ್ನು ನೋಡಿದರೆ, ಈ ಸಮಾಜದವರು ಶಿವ ಮತ್ತು ಶಕ್ತಿಯ ಉಪಾಸಕರಾಗಿದ್ದಾರೆ. ಅವರ ವೈಶಿಷ್ಟ್ಯಪೂರ್ಣ ನಡುವಳಿಕೆ, ದೇವಿ ದೇವತೆಗಳು, ಅವರ ಉಪಾಸನೆ ಮಾಡುವ ಪದ್ಧತಿ, ಜನ್ಮ-ಮೃತ್ಯುವಿನ ನಂತರದ ಸಂಸ್ಕಾರಗಳು, ನಾಮಕರಣ ಸಂಸ್ಕಾರ ಈ ಎಲ್ಲ ವಿಷಯಗಳು ಹಿಂದೂಗಳಂತೆಯೇ ಇವೆ. ಹೋಳಿ ಮತ್ತು ದೀಪಾವಳಿ ಈ ಎಲ್ಲ ಹಬ್ಬಗಳನ್ನು ಆಚರಿಸುವ ಅವರ ಪರಂಪರೆ ವೈಶಿಷ್ಟ್ಯಪೂರ್ಣವಾಗಿದೆ. ಕೇವಲ ಅವರಿಗೆ ಹಿಂದೂ ವಿವಾಹ ಪದ್ಧತಿ ಕಾನೂನು ಅನ್ವಯಿಸುವುದಿಲ್ಲ, ಎಂದ ಮಾತ್ರಕ್ಕೆ ಅವರು ಹಿಂದೂ ಧರ್ಮದ ಶತ್ರುಗಳಾಗುವುದಿಲ್ಲ. ಸ್ವಾತಂತ್ಯದ ನಂತರ ೧೯೫೦, ೧೯೫೬ ಮತ್ತು ೧೯೭೬ ರಲ್ಲಿ ಯಾವ ಪರಿಶಿಷ್ಟ ಪಂಗಡಗಳನ್ನು ಘೋಷಿಸಲಾಯಿತೋ, ಅವೆಲ್ಲವುಗಳನ್ನು ಆದಿವಾಸಿಗಳೆಂದು ಲಾಭಪಡೆಯಲು ಮಾಡಲಾಗಿದೆ. ಮೀಸಲಾತಿಯನ್ನು ಪಡೆಯಲು ಸರಕಾರವು ನೇಮಿಸಿದ ಸತ್ಯ ಪರಿಶೀಲನಾ ಸಮಿತಿಯಿಂದ ಪ್ರಮಾಣಪತ್ರವನ್ನು ಪಡೆಯ ಬೇಕಾಗುತ್ತದೆ. ಈ ಪ್ರಮಾಣಪತ್ರವನ್ನು ಎಲ್ಲಕ್ಕಿಂತ ಮೊದಲು ಆದಿವಾಸಿ ಜನರ ರೂಢಿ, ಪರಂಪರೆ, ಮೃತ್ಯುವಿನ ನಂತರದ ದುಃಖ, ಜನ್ಮ ಮತ್ತು ವಿವಾಹ ಇವುಗಳ ಸಮಯದಲ್ಲಿನ ರೂಡಿಗಳ ವಿಚಾರವನ್ನು ಮಾಡಲಾಗುತ್ತದೆ. ಈ ಎಲ್ಲ ವಿಧಿಗಳು ಹಿಂದೂಗಳಂತೆಯೇ ಆಗಿವೆ. ಆದರೂ ಅವರ ಸಾಮಾಜಿಕ ಸ್ಥಾನವೆಂದು ಸ್ವತಂತ್ರ ಪರಿಚಯ ಉಳಿಯುತ್ತದೆ.

೪. ಮೊದಲ ಪ್ರಧಾನಮಂತ್ರಿ ಜವಾಹರಲಾಲ ನೆಹರೂ ಇವರು ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರಿಗೆ ಸೋಮನಾಥ ಮಂದಿರದ ಜೀರ್ಣೋದ್ಧಾರದ ಕಾರ್ಯಕ್ರಮಕ್ಕೆ ಹೋಗದಂತೆ ವಿರೋಧಿಸಿದ್ದರು; ಆದರೆ ರಾಷ್ಟ್ರಪತಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಹುದ್ದೆಯನ್ನು ತ್ಯಜಿಸಲು ಸಿದ್ಧರಿರುವುದಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದು ಯಾವ ರೀತಿ ಲಿಂಗಾಯತರು ಹಿಂದೂಗಳೇ ಆಗಿದ್ದು, ಅವರ ಪ್ರತ್ಯೇಕ ಧರ್ಮವೇನಿಲ್ಲ, ಅದೇ ರೀತಿ ಆದಿವಾಸಿಗಳೂ ಕೂಡ ಹಿಂದೂ ವಿರೋಧಿಗಳಲ್ಲ. ‘ಸ್ವಾತಂತ್ರ್ಯ ದೊರಕಿದ ಬಳಿಕ ೭೫ ವರ್ಷಗಳಲ್ಲಿ ಇಂತಹ ವಿಧಿ ಏಕೆ ಆಗಿಲ್ಲ ?, ಎಂಬ ಪ್ರಶ್ನೆಯನ್ನು ಪ್ರಗತಿಪರರು ಕೇಳಿದರು. ದೇಶ ಸ್ವತಂತ್ರವಾದ ಬಳಿಕ ಜವಾಹರಲಾಲ ನೆಹರೂ ಮೊದಲ ಪ್ರಧಾನಮಂತ್ರಿ ಮತ್ತು ಡಾ. ರಾಜೇಂದ್ರಪ್ರಸಾದ ಇವರು ಮೊದಲ ರಾಷ್ಟ್ರಪತಿ ಆಗಿದ್ದರು. ಒಮ್ಮೆ ಡಾ. ರಾಜೇಂದ್ರಪ್ರಸಾದರಿಗೆ ಸೋಮನಾಥ ಶಿವಮಂದಿರದ ಜೀರ್ಣೋದ್ಧಾರದ ಕಾರ್ಯಕ್ರಮಕ್ಕೆ ಹೋಗಬೇಕಾಗಿತ್ತು; ಆದರೆ ನೆಹರೂ ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ‘ಹಿಂದೂಸ್ಥಾನವು ಸರ್ವಧರ್ಮೀಯರದ್ದಾಗಿದೆ. ಇಂತಹ ಸಮಯದಲ್ಲಿ ಹಿಂದೂಗಳ ಕಾರ್ಯಕ್ರಮಕ್ಕೆ ಹೋಗುವುದು ಸೂಕ್ತವಲ್ಲ. ತಾವು ‘ಧರ್ಮ ನಿರಪೇಕ್ಷ ಭಾರತದ ರಾಷ್ಟ್ರಪತಿಗಳಾಗಿದ್ದೀರಿ. ಆದುದರಿಂದ ತಾವು ಈ ಕಾರ್ಯಕ್ರಮಕ್ಕೆ ಹೋಗಬಾರದು, ಎಂದು ಅವರು ಹೇಳಿದರು. ಆ ಸಮಯದಲ್ಲಿ ಡಾ. ರಾಜೇಂದ್ರಪ್ರಸಾದರು, “ನಾನು ಸೊರಟಿ ಸೋಮನಾಥನಲ್ಲಿಗೆ ಹೋಗುವುದು, ನನ್ನ ಪ್ರಥಮ ಕರ್ತವ್ಯವಾಗಿದೆ ಮತ್ತು ರಾಷ್ಟ್ರಪತಿ ಹುದ್ದೆಯ ಪ್ರಶ್ನೆ ಬಂದರೆ, ನಾನು ಈ ಹುದ್ದೆಗೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ತೀಕ್ಷ್ಣವಾಗಿ ಉತ್ತರಿಸಿದರು.

೫. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯೆಂದು ಘೋಷಿಸಿದ ಬಳಿಕ ಶ್ರೀಮತಿ ದ್ರೌಪದಿ ಮುರ್ಮು ಇವರು ಶಿವಮಂದಿರಕ್ಕೆ ಹೋಗಿ ಭಾವಪೂರ್ಣ ಪೂಜೆ ಮಾಡಿದ್ದನ್ನು ನೋಡಿದರೆ, ಅವರಲ್ಲಿರುವ ಸಂಸ್ಕಾರಗಳು ಕಂಡು ಬರುತ್ತವೆ ಮತ್ತು ಅದರಿಂದಲೇ ಪ್ರಗತಿ(ಅಧೋಗತಿ)ಪರರಿಗೆ ಸಿಟ್ಟು ಬರುವುದು

‘ರಾಷ್ಟ್ರಪತಿ ಹುದ್ದೆಗಾಗಿ ಶ್ರೀಮತಿ ದ್ರೌಪದಿ ಮುರ್ಮು ಇವರನ್ನು ಅಭ್ಯರ್ಥಿಯೆಂದು ಘೋಷಿಸಿದಾಗ, ಅವರು ಮೊದಲು ಕೃತಜ್ಞತೆಯನ್ನು ವ್ಯಕ್ತಪಡಿಸಲು ಒಂದು ಶಿವಮಂದಿರಕ್ಕೆ ಹೋಗಿದ್ದರು. ಅವರು ಮಂದಿರವನ್ನು ಸ್ವಚ್ಛಗೊಳಿಸಿದರು. ಅಲ್ಲಿ ಅತ್ಯಂತ ಭಾವಪೂರ್ಣ ಮತ್ತು ಶಾಸ್ತ್ರೋಕ್ತ ಪದ್ಧತಿಯಿಂದ, ಅಂದರೆ ನಂದಿಯ ೨ ಕೋಡುಗಳ ಮಧ್ಯದಿಂದ ಮತ್ತು ನಂದಿಯ ಹಿಂದೆ ನಿಂತುಕೊಂಡು ಶಿವನ ದರ್ಶನವನ್ನು ಪಡೆದು ನಮಸ್ಕರಿಸಿದರು. ಅವರು ‘ಒಂದು ರೀತಿಯಲ್ಲಿ ದೇಶಕ್ಕಾಗಿ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವ ದೃಷ್ಟಿಯಿಂದ ದೇವರ ಕೃಪೆ ಮತ್ತು ಆಶೀರ್ವಾದವನ್ನು ಪಡೆಯಲು ಈ ಕೃತಿಯನ್ನು ಮಾಡಿದರು ಎಂದು ಹೇಳಿದರೆ ಅದರಲ್ಲಿ ತಪ್ಪೇನಿಲ್ಲ. ಇದು ವೈಶಿಷ್ಟ್ಯಪೂರ್ಣ ಪದ್ಧತಿಯಾಗಿದೆ.‘ ಯಾವಾಗ ರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ಉತ್ಯುನ್ನತ ಸರಕಾರಿ ಹುದ್ದೆಯನ್ನೇರುವ ವ್ಯಕ್ತಿ ಯಾವುದಾದರೂ ದರ್ಗಾ, ಮಸೀದಿ ಅಥವಾ ಗೋರಿ ದರ್ಶನಕ್ಕೆ ಹೋದಾಗ ಮಾಧ್ಯಮದವರು ಸರ್ವ ಧರ್ಮಸಮಭಾವವನ್ನು ಸಾರಿ ಸಾರಿ ಹೇಳುತ್ತಾರೆ. ಹೊಸ ರಾಷ್ಟ್ರಪತಿಗಳು ಆದಿವಾಸಿ ಸಮಾಜದವರಾಗಿದ್ದು ಧಾರ್ಮಿಕ ವೃತ್ತಿಯವರೂ ಆಗಿದ್ದಾರೆ. ಅವರು ತಮ್ಮ ವಿಜಯದ ಎಲ್ಲ ಶ್ರೇಯಸ್ಸನ್ನು ಭಾರತೀಯ ಸಂವಿಧಾನಕ್ಕೆ ನೀಡಿದ್ದಾರೆ. ಇದರಿಂದಲೇ ಅವರು ಓರ್ವ ಪರಿಪೂರ್ಣ ಸಂಸ್ಕಾರಿತ ವ್ಯಕ್ತಿಯಾಗಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಬ್ರಾಹ್ಮಣ ಪಂಡಿತರು ಮಂತ್ರೋಚ್ಚಾರವನ್ನು ಮಾಡುತ್ತ ರಾಷ್ಟ್ರಪತಿಯವರಿಗೆ ವೇದೋಕ್ತ ಪದ್ಧತಿಯಿಂದ ಶುಭೇಚ್ಛೆಯನ್ನು ನೀಡುತ್ತಿದ್ದಾರೆ ಮತ್ತು ಅವರ ಕಾರ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇದನ್ನು ನೋಡಿದ ಬಳಿಕ ಪ್ರಗತಿ (ಅಧೋಗತಿ)ಪರರ ಚಡಪಡಿಕೆ ಅರ್ಥವಾಗುತ್ತದೆ. ಅವರಿಗೆ ತಮ್ಮ ಅಸ್ತಿತ್ವವನ್ನು ತೋರಿಸಿ ಕೊಡುವ ಅವಕಾಶ ದೊರಕಿತು ಮತ್ತು ಅವರು ಅದರ ಲಾಭವನ್ನು ಪಡೆದುಕೊಂಡರು.

ಶ್ರೀಕೃಷ್ಣಾರ್ಪಣಮಸ್ತು

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೩೧.೭.೨೦೨೨)