‘ಅಗ್ನಿಪಥ ಯೋಜನೆ ದೇಶ ಮತ್ತು ಯುವ ಪೀಳಿಗೆಯ ದೃಷ್ಟಿಯಿಂದ ಲಾಭದಾಯಕ ! 

(ನಿವೃತ್ತ) ಲೆಫ್ಟನೆಂಟ್ ಜನರಲ್ ಡಿ.ಬಿ. ಶೇಕಟ್ಕರ್

ಯಾವಾಗ ಕೇಂದ್ರ ಸರಕಾರವು ಯಾವು ದಾದರೊಂದು ಜನಹಿತ ಯೋಜನೆಯನ್ನು ತರುತ್ತದೆಯೋ, ಆಗ ರಾಜಕೀಯ ಉದ್ದೇಶದಿಂದ ಅದರ ವಿರುದ್ಧ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತದೆ. ಪೂರ್ಣ ಮಾಹಿತಿಯನ್ನು ಪಡೆಯದೇ ಅದರ ವಿರುದ್ಧ ಜನರನ್ನು ಉದ್ರೇಕಿಸಲಾಗುತ್ತದೆ. ಇತ್ತೀಚೆಗಿನ ಅದರ ಒಂದು ಉದಾಹರಣೆ ಎಂದರೆ, ಸಂರಕ್ಷಣ ಮಂತ್ರಾಲಯವು ತಂದಿರುವ ಅಲ್ಪಾವಧಿಯ ಸೈನ್ಯ ಭರ್ತಿಯ ‘ಅಗ್ನಿಪಥ ಯೋಜನೆಗೆ ಆಗುತ್ತಿರುವ ವಿರೋಧ ! ಈ ವಿಷಯದಲ್ಲಿ ‘ವಿವೇಕ ಡಿಜಿಟಲ್ ಮಿಡಿಯಾದ ‘ಸಾಪ್ತಾಹಿಕ ಲಕ್ಷವೇಧೀ ಎಂಬ ಚರ್ಚೆಯಲ್ಲಿ (ನಿವೃತ್ತ) ಲೆಫ್ಟನೆಂಟ್ ಜನರಲ್ ಡಿ.ಬಿ. ಶೇಕಟ್ಕರ್ ಇವರು ಭಾಗವಹಿಸಿದ್ದರು. ಇದರಲ್ಲಿ ಅವರು ಭಾರತೀಯ ಯುವಕರು ಮತ್ತು ಭಾರತೀಯ ಸಂರಕ್ಷಣ ವಿಭಾಗದ ದೃಷ್ಟಿಯಿಂದ ಈ ಯೋಜನೆಯು ಹೇಗೆ ಉಪಯುಕ್ತವಾಗಿದೆ ? ಎಂಬುದರ ಮೇಲೆ ಪ್ರಕಾಶ ಬೀರಿದ್ದಾರೆ. ಅವರೊಂದಿಗಿನ ಸಂವಾದದಿಂದ ಆಯ್ದುಕೊಂಡಿರುವ ಕೆಲವು ಅಂಶವನ್ನು ನಮ್ಮ ವಾಚಕರಿಗಾಗಿ ಇಲ್ಲಿ ನೀಡುತ್ತಿದ್ದೇವೆ.

೧. ‘ಅಗ್ನಿಪಥ’ ಮತ್ತು ‘ಅಗ್ನಿವೀರ’ ಈ ಹೆಸರುಗಳನ್ನು ಕೊಡುವುದರ ಹಿಂದಿನ ಕಾರಣಗಳು

ಸೈನಿಕ ಯುದ್ಧಕ್ಕಾಗಿ ಹೋಗುತ್ತಾನೆ, ಅಂದರೆ ಅವನು ಒಂದು ಕಠಿಣ ಮಾರ್ಗದಲ್ಲಿ ಹೋಗುತ್ತಿರುತ್ತಾನೆ. ಆದ್ದರಿಂದ ಅದಕ್ಕೆ ‘ಅಗ್ನಿ ಪಥ’ ಎಂದು ಮತ್ತು ಆ ಕ್ಷೇತ್ರದಿಂದ ವೀರತೆಯನ್ನು ಪಡೆದು ಹಿಂತಿರುಗಿ ಬರುವ ಸೈನಿಕನಿಗೆ ‘ಅಗ್ನಿವೀರ’ ಎಂದು ಹೇಳಲಾಗಿದೆ. ಈ ಹೆಸರುಗಳನ್ನು ತುಂಬಾ ವಿಚಾರ ಮಾಡಿ ನೀಡಲಾಗಿದೆ.

೨. ಸೈನ್ಯದ ಆಧುನಿಕೀಕರಣಕ್ಕಾಗಿ ಹೆಚ್ಚು ಹಣ ಲಭ್ಯವಾಗಲು ‘ಅಗ್ನಿಪಥ’ ಯೋಜನೆಯನ್ನು ತರಲಾಗಿದೆ

ಈ ಯೋಜನೆ ಈಗ ಘೋಷಣೆಯಾಗಿದ್ದರೂ, ಇದರ ವಿಚಾರವನ್ನು ಕಳೆದ ಎರಡುವರೆ ವರ್ಷಗಳಿಂದ ಮಾಡಲಾಗುತ್ತಿತ್ತು. ಆಗಿನ ದಿವಂಗತ ರಕ್ಷಣಮಂತ್ರಿ ಮನೋಹರ ಪರ್ರೀಕರ್ ಇವರ ಅವಧಿಯಲ್ಲಿ ‘ಕಮಿಟಿ ಆಫ್ ಎಕ್ಸ್‌ಪರ್ಟ್ಸ್ ಫಾರ್ ಡಿಫೆನ್ಸ್ ಮಾಡರ್ನೈಸೇಶನ್ ಎಂಡ್ ರಿಬ್ಯಾಲನ್ಸಿಂಗ್ ಆಫ್ ಡಿಫೆನ್ಸ್ ಬಜೆಟ್’ (ರಕ್ಷಣಾ ಕ್ಷೇತ್ರದ ಆಧುನಿಕೀಕರಣ ಮತ್ತು ಸೈನ್ಯದ ಆರ್ಥಿಕ ವ್ಯವಸ್ಥೆಯನ್ನು ಸಮತೋಲನ) ಈ ಸಮಿತಿಯನ್ನು ಸ್ಥಾಪಿಸಲಾಗಿತ್ತು. ನಾನು ಈ ಸಮಿತಿಯ ಅಧ್ಯಕ್ಷನಾಗಿದ್ದೆ ಮತ್ತು ಈ ಸಮಿತಿಯ ಅಧ್ಯಕ್ಷನೆಂದು ನಾನು ೨ ವರ್ಷ ಕಾರ್ಯವನ್ನು ಮಾಡಿದ್ದೇನೆ. ಈ ಸಮಿತಿಯಲ್ಲಿದ್ದಾಗ ನಾನು ದೇಶದ ರಕ್ಷಣೆಯ ಖರ್ಚು ಹೆಚ್ಚುತ್ತಿರುವುದನ್ನು ಮತ್ತು ಅದರಲ್ಲಿನ ಹೆಚ್ಚಿನ ಭಾಗವು ವೇತನ ಮತ್ತು ನಿವೃತ್ತಿ ವೇತನ ಮತ್ತು ನಿರ್ವಹಣೆಗಾಗಿ ಖರ್ಚಾಗುತ್ತಿರುವುದನ್ನು ಗಮನಕ್ಕೆ ತಂದು ಕೊಟ್ಟಿದ್ದೆನು.

ಇಂದು ಸೈನ್ಯದಲ್ಲಿ ೧೪ ಲಕ್ಷದ ೫೦ ಸಾವಿರ ಜನರು ಸಕ್ರಿಯರಾಗಿದ್ದಾರೆ. ಅವರಿಗಾಗಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತದೆ. ಇದರಿಂದ ನಮಗೆ ಸೈನ್ಯದ ಆಧುನಿಕೀಕರಣಕ್ಕಾಗಿ ಹಣ ಕಡಿಮೆ ಬೀಳುತ್ತದೆ. ಆದ್ದರಿಂದ ಭಾರತೀಯ ಸೈನ್ಯದ ಸಂಖ್ಯೆಯನ್ನು ಕಡಿಮೆ ಮಾಡಬೇಕು, ಎಂದು ನಾನು ವರದಿಯಲ್ಲಿ ಶಿಫಾರಸು ಮಾಡಿದ್ದೆ. ‘ಇದು ಕೂಡಲೇ ಆಗುವುದಿಲ್ಲ; ಅದನ್ನು ಕ್ರಮೇಣವಾಗಿ ಮಾಡಬೇಕಾಗುವುದು. ಅದಕ್ಕಾಗಿ ನಾವು ಯುವಕರನ್ನು ೫-೬ ವರ್ಷಗಳಿಗಾಗಿ ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳಬಹುದು. ಅನಂತರ ಅವರು ಬೇರೆ ಕಡೆಗಳಲ್ಲಿ ಕೆಲಸವನ್ನು ಮಾಡಬಹುದು’, ಎಂದು ನಾನು ಸೂಚಿಸಿದ್ದೆ ಮತ್ತು ಸರಕಾರ ಅದನ್ನು ಒಪ್ಪಿಕೊಂಡಿತು.

೩. ಎಲ್ಲರ ಒಪ್ಪಿಗೆಯಿಂದ ‘ಅಗ್ನಿಪಥ’ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಮತ್ತು ಈ ಯೋಜನೆಯ ವಿರುದ್ಧ ಹಿಂಸಾಚಾರ ಮಾಡುವುದು ಮೂರ್ಖತನವಾಗಿದೆ ! 

ನಾವು ವರದಿಯಲ್ಲಿ ‘ಅಗ್ನಿಪಥ’ ಈ ಶಬ್ದವನ್ನು ಉಲ್ಲೇಖಿಸಿ ರಲಿಲ್ಲ; ಆದರೆ ಇಂತಹ ಒಂದು ಸಂಕಲ್ಪನೆಯನ್ನು ಕೇಂದ್ರ ಸರಕಾರಕ್ಕೆ ಕೊಟ್ಟಿದ್ದೆವು. ಹಾಗೆಯೇ ‘ಈ ವಿಷಯವನ್ನು ಸೈನ್ಯದ ಮುಖ್ಯಾಲಯ, ಭೂದಳ ಪ್ರಮುಖ, ನೌಕಾದಳ ಪ್ರಮುಖ ಮತ್ತು ವಾಯುದಳ ಪ್ರಮುಖರೊಂದಿಗೆ ಚರ್ಚೆಯನ್ನು ಮಾಡಿ ಎಂದು ಹೇಳಲಾಗಿತ್ತು. ಎಲ್ಲರಿಗೂ ಈ ಸಂಕಲ್ಪನೆಯು ಒಪ್ಪಿಗೆಯಾದರೆ, ನೀವು ಅದನ್ನು ಮುಂದುವರಿಸಬಹುದು’, ಎಂದು ಹೇಳಿದ್ದೆವು. ಆದ್ದರಿಂದ ಈ ಯೋಜನೆಯನ್ನು ಎಲ್ಲರ ಒಪ್ಪಿಗೆಯಿಂದಲೇ ಸಿದ್ಧಪಡಿಸಲಾಗಿದೆ, ಈ ಯೋಜನೆಯ ವಿರುದ್ಧ ಹಿಂಸಾಚಾರ ಮಾಡುವುದು ಮೂರ್ಖತನವಾಗಿದೆ. ಕೆಲವು ರಾಜಕೀಯ ಪಕ್ಷಗಳಿಗೆ ಪ್ರಸ್ತುತ ಕೇಂದ್ರ ಸರಕಾರ ಬೇಡವಾಗಿದೆ. ಆದ್ದರಿಂದ ಅವರು ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುತ್ತಿದ್ದಾರೆ. ದೇಶದಲ್ಲಿ ಕೆಲವು ದೇಶವಿರೋಧಿ ಘಟಕಗಳು ಕಾರ್ಯನಿರತವಾಗಿವೆ. ಅವರಿಗೆ ವಿದೇಶಗಳಿಂದ ಆರ್ಥಿಕ ಸಹಾಯ ಸಿಗುತ್ತದೆ. ಅವರು ೨ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರವನ್ನು ಮಾಡಿದರು ಮತ್ತು ಸಂಪೂರ್ಣ ದೇಶದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದರು. ವಿರೋಧಿ ಪಕ್ಷಗಳು ಮತ್ತು ಕೆಲವು ರಾಷ್ಟ್ರಗಳು ದೇಶದ ವಿರುದ್ಧ ಮಾನಸಿಕ ಯುದ್ಧವನ್ನು ಮಾಡುತ್ತಿವೆ. ಇದರಲ್ಲಿ ಸಾಮಾಜಿಕ ಪ್ರಸಾರ ಮಾಧ್ಯಮಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಅಪಪ್ರಚಾರ ಮಾಡಲಾಗುತ್ತದೆ. ಇದರಿಂದ ತುಂಬಾ ಕೆಟ್ಟ ಪರಿಣಾಮವಾಗಲಿದೆ.

೪. ಅಗ್ನಿಪಥ ಯೋಜನೆಯಿಂದ ಭಾರತದ ರಕ್ಷಣಾ ಕ್ಷಮತೆ ಕಡಿಮೆಯಾಗುವುದಿಲ್ಲ, ಅದು ಹೆಚ್ಚಾಗುವುದು

ಈ ಸಂಪೂರ್ಣ ಯೋಜನೆಯು ಭಾರತದ ರಕ್ಷಣಾಸಿದ್ಧತೆಯನ್ನು ಹೆಚ್ಚಿಸಲಿಕ್ಕಾಗಿಯೇ ಇದೆ. ಇಂದು ಭಾರತದಲ್ಲಿ ೧೪ ಲಕ್ಷದ ೫೦ ಸಾವಿರ ಸೈನಿಕರಿದ್ದಾರೆ. ಇದನ್ನು ೨೦ ಲಕ್ಷದವರೆಗೆ ಹೆಚ್ಚಿಸಿ ಅವರಿಗೆ ತಂತ್ರಜ್ಞಾನ, ಆಧುನಿಕ ಶಸ್ತ್ರಗಳ ತರಬೇತಿ ನೀಡದಿದ್ದರೆ, ಆ ಸೈನಿಕರಿಂದ ಏನೂ ಲಾಭವಾಗಲಾರದು. ಈಗಿರುವ ಸೈನಿಕರಿಗೆ ಯುದ್ಧದ ಎಲ್ಲ ರೀತಿಯ ತರಬೇತಿಯನ್ನು ನೀಡಿದರೆ ಅದರಿಂದ ಹೆಚ್ಚು ಲಾಭವಾಗಲಿದೆ. ಈ ಯೋಜನೆಯಿಂದ ಭಾರತದ ರಕ್ಷಣಾ ಸಿದ್ಧತೆಯು ಹೆಚ್ಚಾಗಲಿದೆ. ಇದರಲ್ಲಿ ಯುವಕರು ಯುವತಿಯರೂ ಇದ್ದಾರೆ.

೫. ಅಗ್ನಿವೀರರಿಗೆ ಅವರ ಯೋಗ್ಯತೆಗನುಸಾರ ಸೈನ್ಯದಲ್ಲಿ ಅಧಿಕಾರಿಗಳಾಗಲು ಬರುತ್ತದೆ

ಈ ರೀತಿಯ ಯೋಜನೆಯು ಸೈನ್ಯದಲ್ಲಿ ಮೊದಲಿನಿಂದಲೂ ಇದೆ. ನಾನು ೧೯೬೨ ಮತ್ತು ೧೯೬೫ ರ ಯುದ್ಧವನ್ನು ನೋಡಿದ್ದೇನೆ. ೧೯೭೧ ರ ಯುದ್ಧದಲ್ಲಿ ಚೀನಾದ ಗಡಿಯ ಸಂಪೂರ್ಣ ಜವಾಬ್ದಾರಿ ನನ್ನಲ್ಲಿತ್ತು. ಸೈನ್ಯದಲ್ಲಿ ಕೇವಲ ಸೈನ್ಯಾಧಿಕಾರಿಗಳಿಗೆ ಒಂದು ‘ಎಮರ್ಜನ್ಸಿ ಕಮಿಶನ್’ಗಳು (ಸಂಕಟಕಾಲಿಕ ಆಯೋಗಗಳು) ಇದ್ದವು. ೫ ವರ್ಷಗಳ ನಂತರ ‘ಎಮರ್ಜನ್ಸಿ’ ಮುಗಿದ ನಂತರ ಅವರು ಹಿಂತಿರುಗಿ ಹೋಗಿ ಇತರ ಕಡೆಗಳಲ್ಲಿ ಕೆಲಸವನ್ನು ಮಾಡುವ ಸೌಲಭ್ಯವನ್ನು ನೀಡಲಾಗಿತ್ತು. ಅಲ್ಲಿಂದ ಹೊರಬಂದಿರುವ ವ್ಯಕ್ತಿಗಳು ಇಂದು ಪೊಲೀಸ್ ಆಯುಕ್ತರು, ಪೊಲೀಸ್ ಮಹಾಸಂಚಾಲಕರು ಮುಂತಾದ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರತರಾಗಿದ್ದಾರೆ. ಅದೇ ರೀತಿ ‘ಶಾರ್ಟ್ ಸರ್ವಿಸ್ ಕಮಿಶನ್’ (ಸ್ವಲ್ಪ ಕಾಲಾವಧಿಗಾಗಿ ಸೇವೆ) ಇದೆ.

ಚೆನ್ನೈಯಲ್ಲಿ ‘ಆಫಿಸರ್ಸ್ ಟ್ರೇನಿಂಗ್ ಎಕಾಡಮಿ’ (ಅಧಿಕಾರಿ ತರಬೇತಿ ಕೇಂದ್ರ) ಇದೆ. ಅಲ್ಲಿ ಯುವತಿಯರಿಗೆ ಒಂದು ವರ್ಷದ ತರಬೇತಿ ನೀಡಲಾಗುತ್ತದೆ. ಅನಂತರ ಅವರು ಲೆಫ್ಟಿನಂಟ್ ಆಗುತ್ತಾರೆ, ಅವರು ೫ ವರ್ಷ ಕೆಲಸ ಮಾಡಿದ ನಂತರ ಅವರಿಗೆ ‘ನಿಮಗೆ ಮುಂದೆ ಇಲ್ಲಿಯೇ ಕೆಲಸ ಮಾಡಲಿಕ್ಕಿದೆಯೆ?’, ಎಂದು ಕೇಳಲಾಗುತ್ತದೆ. ಅವರ ಅರ್ಹತೆಯನ್ನು ನೋಡಿ ೫ ವರ್ಷಗಳಲ್ಲಿ ಅವರನ್ನು ಶಾಶ್ವತ ಸೇನಾಧಿಕಾರಿಗಳನ್ನಾಗಿ ಮಾಡಲಾಗುತ್ತದೆ. ಅವರಲ್ಲಿನ ಯುವತಿಯರು ಇಂದು ಲೆಫ್ಟಿನೆಂಟ್ ಕರ್ನಲ್, ಮತ್ತು ಕೆಲವರು ಕರ್ನಲ್ ಹುದ್ದೆಯಲ್ಲಿ ಕೆಲಸ ವನ್ನು ಮಾಡುತ್ತಿದ್ದಾರೆ. ಅದೇ ರೀತಿ ಈಗ ಸೈನಿಕರಿಗಾಗಿ ‘ಅಗ್ನಿಪಥ ಯೋಜನೆ’ಯನ್ನು ತರಲಾಗಿದೆ. ಈಗಲೂ ಭಾರತೀಯ ಸೈನ್ಯದಲ್ಲಿ ಸೈನಿಕರೆಂದು ಸೇರಿಕೊಂಡವರು ಅರ್ಹತೆಗನುಸಾರ ಅಧಿಕಾರಿಗಳಾಗುತ್ತಾರೆ. ಅದಕ್ಕೆ ಸೈನ್ಯದ ಭಾಷೆಯಲ್ಲಿ ‘ರೆಜಿಮೆಂಟಲ್ ಕಮಿಶನ್ ಆಫಿಸರ್ಸ್’ ಎಂದು ಹೇಳಲಾಗುತ್ತದೆ. ಸಿಪಾಯಿ ಕಾರಕೂನರ ಹುದ್ದೆಗೆ ಸೇರಿ ಕೊಳ್ಳುವವರಿಗೆ ‘ಸ್ಪೆಶಲಿಸ್ಟ್ ಕಮಿಶನ್ ಆಫಿಸರ್ಸ್’ ಎಂದು ಹೇಳಲಾಗುತ್ತದೆ. ಅವರು ಕಾಗದಪತ್ರಗಳ ಕಾರ್ಯವನ್ನು ನಿರ್ವಹಿಸುತ್ತಾರೆ, ಆದರೆ ಅವರು ಕೂಡ ಅಧಿಕಾರಿಗಳೇ ಆಗಿರುತ್ತಾರೆ. ಅದೇ ರೀತಿ ಅಗ್ನಿವೀರರೂ ಮುಂದೆ ಅಧಿಕಾರಿಗಳಾಗುವರು. ಆದ್ದರಿಂದ ಜನರು ಸುಳ್ಳು ಪ್ರಚಾರ ಮಾಡುವವರ ಮೇಲೆ ವಿಶ್ವಾಸವನ್ನಿಡಬಾರದು. ಅದರಿಂದ ನಿಜ ಅರ್ಥದಲ್ಲಿ ಯುವಪೀಳಿಗೆಗೆ ಹಾನಿಯಾಗಬಹುದು.

೬. ಅಗ್ನಿಪಥ ಯೋಜನೆಯು ದೇಶದ ದೃಷ್ಟಿಯಿಂದ ಒಳ್ಳೆಯದಾಗಿದ್ದು ಅದಕ್ಕೆ ಪ್ರೋತ್ಸಾಹಿಸುವುದು ಆವಶ್ಯಕ !

ನಾಳೆ ಸರಕಾರ ಈ ಯೋಜನೆಯನ್ನು ನಿಲ್ಲಿಸಿದರೆ, ಇದುವರೆಗೆ ಯಾವ ಯೋಜನೆಗಳು ನಡೆಯುತ್ತಿವೆಯೋ, ಅವು ಕೂಡ ನಿಲ್ಲುವವು. ಅದರಿಂದ ಯುವಪೀಳಿಗೆಗೆ ಹಾನಿಯಾಗುವುದು. ಕೆಲವರು  ಏರ್‌ಕಂಡಿಶನ್‌ಡ್ ಕಾರ್ಯಾಲಯಗಳಲ್ಲಿ ಕುಳಿತು ಹಿಂಸಾಚಾರ ಮಾಡಲು ಹೇಳುತ್ತಾರೆ, ಅವರಿಗೇನೂ ನಷ್ಟವಾಗುವುದಿಲ್ಲ; ಆದರೆ ಈ ಯುವಕರಿಗೆ ಹಾನಿ ಆಗುವುದು. ಇಸ್ರೈಲ್‌ನಲ್ಲಿ ೧೨ ನೇ ತರಗತಿ ಉತ್ತೀರ್ಣರಾದ ನಂತರ ಸೈನ್ಯದಲ್ಲಿ ಎರಡು ವರ್ಷ ಕೆಲಸ ಮಾಡದಿದ್ದರೆ, ಮಹಾವಿದ್ಯಾಲಯದಲ್ಲಿ ಪ್ರವೇಶ ಸಿಗುವುದಿಲ್ಲ ಮತ್ತು ನೌಕರಿಯೂ ಸಿಗುವುದಿಲ್ಲ. ಜಗತ್ತಿನಲ್ಲಿ ಅನೇಕ ದೇಶಗಳಲ್ಲಿ ಸೈನಿಕಸೇವೆಯನ್ನು ಅನಿವಾರ್ಯಗೊಳಿಸಲಾಗಿದೆ. ಭಾರತದಲ್ಲಿ ಅದು ಅನಿವಾರ್ಯವಾಗಿಲ್ಲ, ಅದು ಐಚ್ಛಿಕವಾಗಿದೆ. ನಾನು ಸ್ವತಃ ಸೈನ್ಯದಲ್ಲಿ ೪೦ ವರ್ಷಗಳ ಕಾಲ ನೌಕರಿ ಮಾಡಿದ್ದೇನೆ. ಈ ೪೦ ವರ್ಷಗಳಲ್ಲಿ ನಾನು ಲೆಫ್ಟಿನೆಂಟ್ ಜನರಲ್ ಈ ಹುದ್ದೆಯ ವರೆಗೆ ತಲಪಿದ್ದೇನೆ. ನನಗೆ ಯಾರೂ ಶಿಫಾರಸು ಮಾಡಲಿಲ್ಲ. ನನ್ನ ಅರ್ಹತೆಯನ್ನು ನೋಡಿ ಮೇಲಧಿಕಾರಿಗಳು ನನ್ನನ್ನು ಈ ಹುದ್ದೆಯವರೆಗೆ ತಲುಪಿಸಿದರು. ಆದ್ದರಿಂದ ನನಗೆ ಈ ಯೋಜನೆಯು ಚೆನ್ನಾಗಿದೆ ಎಂದು ಅನಿಸುತ್ತದೆ ಮತ್ತು ಇದರ ಮೇಲೆ ಕೆಲಸವನ್ನು ಮಾಡುವುದು ಆವಶ್ಯಕವಾಗಿದೆ. – (ನಿವೃತ್ತ) ಲೆಫ್ಟನೆಂಟ್ ಜನರಲ್ ಡಿ.ಬಿ. ಶೇಕಟ್ಕರ್

ಅಗ್ನಿಪಥ ಯೋಜನೆಯಿಂದ ಸೈನ್ಯದ ಕಾರ್ಯಕ್ಷಮತೆ ಹೆಚ್ಚಾಗಲು ಸಹಾಯವಾಗುವುದು ! – (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಈಗ ಸೈನ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ತಂತ್ರಜ್ಞಾನದ ಉಪ ಯೋಗವಾಗುತ್ತಿದೆ. ಆದ್ದರಿಂದ ಸೈನ್ಯಕ್ಕೆ ತಂತ್ರಜ್ಞಾನದ ಜ್ಞಾನವಿರುವ ಯುವಪೀಳಿಗೆ ಬೇಕಾಗಿದೆ. ಯುವಕರು ತಂತ್ರಜ್ಞಾನ ವನ್ನು ಅತ್ಯಂತ ಶೀಘ್ರಗತಿಯಲ್ಲಿ ಕಲಿಯುತ್ತಾರೆ. ಸೈನ್ಯದಲ್ಲಿ ತಂತ್ರಜ್ಞಾನದ ಮಾಹಿತಿಯಿರುವ ಯುವಕರು ಸೇರಿಕೊಂಡರೆ, ಸೈನ್ಯದ ಕಾರ್ಯಕ್ಷಮತೆ ಹೆಚ್ಚಾಗುವುದು. ಹಿಂದಿನ ಕಾಲದಲ್ಲಿ ವಾಹನ ನಡೆಸುವ ತರಬೇತಿಯನ್ನೂ ಸೈನ್ಯಕ್ಕೆ ಸೇರಿದ ನಂತರ ಕಲಿಯಬೇಕಾಗುತ್ತಿತ್ತು.