ಭಾರತೀಯ ಶಾಸ್ತ್ರೀಯ ನೃತ್ಯದ ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಳ್ಳಿರಿ !

‘ಭಾರತೀಯ ಶಾಸ್ತ್ರೀಯ ನೃತ್ಯಗಳಿಂದ ನಿರ್ಮಾಣವಾಗುವ ಲಯಬದ್ಧ ನಾದಲಹರಿಗಳಲ್ಲಿ ದೇವತೆಯನ್ನು ಸ್ಪರ್ಶಿಸಿ ಅವಳನ್ನು ಜಾಗೃತಗೊಳಿಸುವ ಸಾಮರ್ಥ್ಯವಿರು ತ್ತದೆ. ಆದ್ದರಿಂದ ನೃತ್ಯದಿಂದ ಸಾಧನೆ ಮಾಡುವ ಜೀವಕ್ಕೆ ಈಶ್ವರನ ಸಮೀಪ ಶೀಘ್ರಗತಿಯಲ್ಲಿ ತಲುಪಲು ಸಾಧ್ಯವಾಗುತ್ತದೆ. ಚಿತ್ರಕಲೆ, ಸಂಗೀತ, ನೃತ್ಯ ಮುಂತಾದ ಎಲ್ಲ ಕಲೆಗಳು ಈಶ್ವರನಿಂದಲೇ ಉತ್ಪತ್ತಿಯಾಗಿವೆ. ಆದ್ದರಿಂದ ಈಶ್ವರನ (ಸರ್ವೋಚ್ಚ ಮತ್ತು ನಿರಂತರವಾಗಿ ಸಿಗುವ ಆನಂದದ) ಅನುಭೂತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಈ ಎಲ್ಲ ಕಲೆಗಳ ಅಂತಿಮ ಸಾಧ್ಯವಾಗಿದೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಭಾರತೀಯ ಶಾಸ್ತ್ರೀಯ ನೃತ್ಯಗಳು, ಹಾಗೆಯೇ ಪಾಶ್ಚಾತ್ಯ ನೃತ್ಯಗಳ ಸಂದರ್ಭದಲ್ಲಿ ವಿಪುಲ ಸಂಶೋಧನೆಯನ್ನು ಮಾಡಲಾಗಿದೆ.

‘ವ್ಯಕ್ತಿಯು ನೃತ್ಯ ಮಾಡಿದ ನಂತರ ಅವರ ಸೂಕ್ಷ್ಮ-ಊರ್ಜೆಯ ಮೇಲೆ (‘ಔರಾ’ದ ಮೇಲೆ) ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಈ ಉಪಕರಣದಿಂದ ಕೆಲವು ಪರೀಕ್ಷಣೆಗಳನ್ನು ಮಾಡಲಾಯಿತು. ಈ ಉಪಕರಣದಿಂದ ವಸ್ತು, ವಾಸ್ತು ಮತ್ತು ವ್ಯಕ್ತಿಯಲ್ಲಿನ ನಕಾರಾತ್ಮಕ ಹಾಗೂ ಸಕಾರಾತ್ಮಕ ಊರ್ಜೆಯನ್ನು ಅಳೆಯಬಹುದು. ಈ ಪರೀಕ್ಷಣೆಯಲ್ಲಿನ ನೊಂದಣೀಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಗಳಲ್ಲಿನ ನೋಂದಣಿ

ಮೇಲಿನ ನೋಂದಣಿಯಿಂದ (ಕೋಷ್ಟಕದಿಂದ) ಕಂಡುಬರುವುದೇನೆಂದರೆ, ವ್ಯಕ್ತಿಗಳು ಭಾರತೀಯ ಶಾಸ್ತ್ರೀಯ ನೃತ್ಯವನ್ನು ಮಾಡಿದ ನಂತರ ಅವರಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆ ಅಥವಾ ಇಲ್ಲವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ತುಂಬಾ ಹೆಚ್ಚಾಯಿತು. ಬದಲಾಗಿ ಅವರು ಪಾಶ್ಚಿಮಾತ್ಯ ನೃತ್ಯವನ್ನು ಮಾಡಿದ ನಂತರ ಅವರಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಗಿ ಅವರಲ್ಲಿನ ನಕಾರಾತ್ಮಕ ಊರ್ಜೆ ತುಂಬಾ ಹೆಚ್ಚಾಯಿತು.

೨. ನಿಷ್ಕರ್ಷ

ಇದರಿಂದ ‘ಭಾರತೀಯ ಶಾಸ್ತ್ರೀಯ ನೃತ್ಯವನ್ನು ಮಾಡುವುದರಿಂದ ವ್ಯಕ್ತಿಯ ಸೂಕ್ಷ್ಮ-ಊರ್ಜೆಯ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ ಮತ್ತು ಅವಳು ಪಾಶ್ಚಿಮಾತ್ಯ ನೃತ್ಯವನ್ನು ಮಾಡಿದ ನಂತರ ಅವಳ ಸೂಕ್ಷ್ಮ-ಊರ್ಜೆಯ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತದೆ’, ಎಂಬುದು ಗಮನಕ್ಕೆ ಬಂದಿತು.

ಸೌ. ಮಧುರಾ ಧನಂಜಯ ಕರ್ವೆ

೩. ಪಾಶ್ಚಿಮಾತ್ಯ

ನೃತ್ಯದಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸುವುದು ಪಾಶ್ಚಿಮಾತ್ಯ ನೃತ್ಯವಿಧಗಳಿಗೆ ಆಧ್ಯಾತ್ಮಿಕ ಅಡಿಪಾಯವಿಲ್ಲ. ಈ ನೃತ್ಯವಿಧ ಮತ್ತು ಅವುಗಳಿಗೆ ಸಂಬಂಧಿಸಿದ ಘಟಕಗಳು (ಉದಾ. ಉಡುಪು, ಕೇಶರಚನೆ, ಬಣ್ಣಗಳ ಯೋಜನೆ, ಪಾಶ್ಚಿಮಾತ್ಯ ಸಂಗೀತ ಇತ್ಯಾದಿ) ಅಸಾತ್ತ್ವಿಕವಾಗಿರುವುದರಿಂದ ಅವುಗಳಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸಿದವು. ಈ ನೃತ್ಯದಲ್ಲಿ ಭಾಗವಹಿಸಿದ ವ್ಯಕ್ತಿಗಳು, ‘ಈ ನೃತ್ಯವನ್ನು ಮಾಡಿದ ನಂತರ ಅವರಿಗೆ ಶಾರೀರಿಕ ದಣಿವು ಬರುವುದು, ತಲೆ ನೋವು, ಏನು ಹೊಳೆಯದಿರುವುದು ಇತ್ಯಾದಿಗಳ ತೊಂದರೆಗಳಾದವು’ ಎಂದು ಹೇಳಿದರು.

೪. ಭಾರತೀಯ ಶಾಸ್ತ್ರೀಯ ನೃತ್ಯದಿಂದ ಸಾತ್ತ್ವಿಕ ಸ್ಪಂದನಗಳು ಪ್ರಕ್ಷೇಪಿಸುವುದು

ಭಾರತೀಯ ಶಾಸ್ತ್ರೀಯ ನೃತ್ಯಗಳಿಗೆ ಆಧ್ಯಾತ್ಮಿಕ ಅಡಿಪಾಯವಿದೆ. ಭರತನಾಟ್ಯಮ್, ಕಥ್ಥಕ್‌ ಇತ್ಯಾದಿ ನೃತ್ಯದ ವಿಧಗಳನ್ನು ಪ್ರಸ್ತುತ ಪಡಿಸುವಾಗ ಸಾತ್ತ್ವಿಕ ಉಡುಪು, ಕೇಶರಚನೆ, ರಂಗಭೂಷಣ  ಇವುಗಳು ಒಳಗೊಂಡಿದ್ದು ಅವುಗಳಿಗೆ ಸಾತ್ತ್ವಿಕ ಶಾಸ್ತ್ರೀಯ ಸಂಗೀತವನ್ನು ಸೇರಿಸಲಾಗುತ್ತದೆ. ಈ ನೃತ್ಯದಲ್ಲಿನ ಪದನ್ಯಾಸ, ಹಾಗೆಯೇ ಕೈಗಳ ಮುದ್ರೆಗಳು ಸಾತ್ತ್ವಿಕ ಮತ್ತು ಲಯಬದ್ಧವಾಗಿವೆ. ಈ ನೃತ್ಯಗಳು ದೇವತೆಗಳ ಕಥೆಯ ಆಧಾರದ ಮೇಲೆ ಅಥವಾ ದೇವತೆಗಳಿಗೆ ಸಂಬಂಧಿಸಿರುವುದರಿಂದ ನೃತ್ಯವನ್ನು ಮಾಡುವವರ ಮನಸ್ಸಿನಲ್ಲಿ ಮತ್ತು ಮುಖದ ಮೇಲೆ ಸಾತ್ತ್ವಿಕ ಭಾವವಿರುತ್ತದೆ. ನೃತ್ಯದ ಮಾಧ್ಯಮದಿಂದ ಈಶ್ವರನೊಂದಿಗೆ ಅನುಸಂಧಾನವನ್ನು ಸಾಧಿಸಲಾಗುವುದುರಿಂದ ನೃತ್ಯವನ್ನು ಮಾಡುವವರಿಗೆ ಅವರ ಭಾವಕ್ಕನುಸಾರ ಆಧ್ಯಾತ್ಮಿಕ ಅನುಭೂತಿಗಳು ಬರುತ್ತವೆ. ಸಾತ್ತ್ವಿಕ ನೃತ್ಯದಿಂದ ಸಾತ್ತ್ವಿಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಆದ್ದರಿಂದ ನೃತ್ಯವನ್ನು ಮಾಡುವವರಿಗೆ ಮತ್ತು ಅದನ್ನು ನೋಡುವವರಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ. ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ ಭಾಗವಹಿಸಿದ ವ್ಯಕ್ತಿಗಳು, ‘ನೃತ್ಯವನ್ನು ಮಾಡುವಾಗ ಅವರಿಗೆ ದೇವಿಯ ಅಸ್ತಿತ್ವದ ಅರಿವಾಗುತ್ತಿತ್ತು. ಹಾಗೆಯೇ ಸೂಕ್ಷ್ಮದಿಂದ ದೇವಿಯ ದರ್ಶನವೂ ಆಯಿತು’ ಎಂದು ಹೇಳಿದರು.

ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೊಂಡಾ, ಗೋವಾ. (೩೦.೪.೨೦೨೪)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಅನುಭೂತಿ : ಅನುಭೂತಿಗಳಿಂದ ದೇವರ ಮೇಲಿನ/ಸಾಧನೆಯ ಮೇಲಿನ ಉಪಾಸಕನ ಶ್ರದ್ಧೆಯು ಹೆಚ್ಚಾಗಿ ಅವನ ಸಾಧನೆಯಲ್ಲಿ ಹೆಚ್ಚಳವಾಗಲು ಸಹಾಯವಾಗುತ್ತದೆ.