ಚೀನಾದ ಶ್ರೀಮಂತಿಕೆಯ ಪಾಶ; ಜಗತ್ತಿಗೆ ಅಪಾಯದ ಕರೆಗಂಟೆ !

ಡಾ. ಶೈಲೇಂದ್ರ ದೇವಳಣಕರ

ಭಾರತದ ಪಕ್ಕದ ದೇಶವಾಗಿರುವ ಶ್ರೀಲಂಕಾ ಅತಿದೊಡ್ಡ ರ‍್ಥಿಕ ಸಂಕಟದಲ್ಲಿ ಸಿಲುಕಿದ್ದು, ರ‍್ಥಿಕ ಸಮಸ್ಯೆಯಿಂದ ಅಲ್ಲಿ ರಾಜಕೀಯ ಅಸ್ಥಿರತೆ ನರ‍್ಮಾಣವಾಗಿದೆ. ಅಲ್ಲಿಯ ಜನರು ಮಾಡಿದ ತೀವ್ರ ಪ್ರತಿಭಟನೆಗಳು, ರಾಷ್ಟ್ರಪತಿ ಕರ‍್ಯಾಲಯವನ್ನು ವಶಕ್ಕೆ ಪಡೆಯುವುದು, ಪ್ರಧಾನಮಂತ್ರಿಗಳ ನಿವಾಸಸ್ಥಾನಕ್ಕೆ ಬೆಂಕಿ ಹಚ್ಚುವುದು, ಇವೆಲ್ಲ ಘಟನೆಗಳಿಂದ ನೈರ‍್ಗಿಕ ಸೌಂರ‍್ಯದ ವರದಾನವಿರುವ ಈ ದೇಶದಲ್ಲಿ ಎಲ್ಲೆಡೆ ಅರಾಜಕತೆ ಹರಡಿದೆ. ಶ್ರೀಲಂಕಾದ ರ‍್ಥಿಕ ದಿವಾಳಿಯ ಮೂಲ ಕಾರಣ ಚೀನಾದಿಂದ ಪಡೆದ ಸಿಕ್ಕಾಪಟ್ಟೆ ಸಾಲ, ಈ ಸಾಲವನ್ನು ಮರಳಿಸುವಲ್ಲಿ ಶ್ರೀಲಂಕೆಯ ಆಡಳಿತಾಧಿಕಾರಿಗಳಿಗೆ ಬಂದಿರುವ ವೈಫಲ್ಯ, ತದನಂತರ ಚೀನಾವು ಕಬಳಿಸಿರುವ ಅಲ್ಲಿಯ ಭೂಮಿ ಇವೆಲ್ಲವೂ ಅತ್ಯಂತ ಮಹತ್ವದ ಕಾರಣ ಗಳಾಗಿವೆ. ಸದ್ಯ ಶ್ರೀಲಂಕಾದಂತೆ ಕೆನ್ಯಾ ಲಾವೋಸ ಮತ್ತು ಪಾಕಿಸ್ತಾನ ಈ ೩ ದೇಶಗಳಲ್ಲಿನ ಜನರೂ ರ‍್ಥಿಕ ಸಮಸ್ಯೆಗಳಿಂದ ಅಲ್ಲಿಯ ಸರಕಾರದ ವಿರುದ್ಧ ರಸ್ತೆಗಿಳಿದಿದ್ದಾರೆ. ಕೆನ್ಯಾದಲ್ಲಿ ಆಹಾರಕ್ಕಾಗಿ ಜನರು ರಸ್ತೆಗಿಳಿದು ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ಲಾವೋಸನಲ್ಲಿಯೂ ಇದೇ ರೀತಿಯ ಸ್ಥಿತಿಯಿದೆ. ಹಾಗೆಯೇ ಪಾಕಿಸ್ತಾನದಲ್ಲಿಯೂ ಈ ಹಿಂದೆ ಇಂತಹ ಪ್ರತಿಭಟನೆಗಳು ನಡೆದಿವೆ. ಈ ಎಲ್ಲ ದೇಶಗಳು ಚೀನಾದ ಸಾಲದ ಪಾಶದಲ್ಲಿ ಸಿಲುಕಿವೆ.

೧. ಚೀನಾದ ಸಾಲದ ಪಾಶದ ವ್ಯಾಪ್ತಿ ಮತ್ತು ಕೂಟನೀತಿ

ವಿಶ್ವಬ್ಯಾಂಕ ಇತ್ತೀಚೆಗಷ್ಟೆ ಸಿದ್ಧಪಡಿಸಿದ ಒಂದು ವರದಿಯಲ್ಲಿ ಜಗತ್ತಿನ ೭೫ ಬಡ, ಅಭಿವೃದ್ಧಿ ಹೊಂದಿರದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಶ್ರೀಲಂಕಾದಂತಹ ರ‍್ಥಿಕ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಇದರಲ್ಲಿ ಹೆಚ್ಚಿನ ದೇಶಗಳು ಚೀನಾದಿಂದ ಸಾಲವನ್ನು ಪಡೆದಿವೆ. ಇದರಿಂದ ಜಗತ್ತಿನಾದ್ಯಂತ ಚೀನಾದ ಸಾಲದ ಪಾಶ ಮತ್ತು ‘ಡೆಬ್ಟ್ ಟ್ರ‍್ಯಾಪ್ ಡಿಪ್ಲೊಮಸಿಯ (ದಿವಾಳಿತನದ ಸಾಲದ ಪಾಶದಲ್ಲಿ ಸಿಲುಕಿಸಿ ಮಾಡಿರುವ ರಾಜತಾಂತ್ರಿಕ ಕೂಟುನೀತಿ) ರ‍್ಚೆ ಪ್ರಾರಂಭವಾಗಿದೆ.

ಚೀನಾ ಕಳೆದ ಒಂದು ದಶಕದಲ್ಲಿ ಸಾಧಾರಣ ೧೦ ಟ್ರಿಲಿಯನ್ ಡಾರ‍್ಸಗಳಷ್ಟು ದೊಡ್ಡ ಮೊತ್ತದ ಸಾಲವನ್ನು ೧೦೦ ಕ್ಕಿಂತ ಹೆಚ್ಚು ದೇಶಗಳಿಗೆ ನೀಡಿದೆ. ಈ ಸಾಲದ ಮೊತ್ತ ಎಷ್ಟಿದೆಯೆಂದರೆ, ಇಲ್ಲಿಯವರೆಗೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ, ವಿಶ್ವ ಬ್ಯಾಂಕ, ಯುರೋಪಿಯನ ಯೂನಿಯನ್, ಅಮೇರಿಕಾ ಮತ್ತು ಯುರೋಪಿಯನ ದೇಶಗಳು ಕೂಡಿಯೂ ಇಷ್ಟೊಂದು ಮೊತ್ತದ ಸಾಲವನ್ನು ನೀಡಿಲ್ಲ. ಇದರಿಂದ ಚೀನಾದ ಸಾಲದ ಪಾಶದ (ಬಲೆಯ) ವ್ಯಾಪ್ತಿ ಗಮನಕ್ಕೆ ಬರುತ್ತದೆ.

ಡಾ. ಶೈಲೇಂದ್ರ ದೇವಳಣಕರ

೨. ಚೀನಾ ಆಫ್ರಿಕಾ ಖಂಡದಲ್ಲಿನ ದೇಶಗಳಿಗೆ ಸಾಲ ನೀಡಿ ಆ ದೇಶಗಳನ್ನು ರ‍್ಥಿಕ ಪಾಶದಲ್ಲಿ ಸಿಲುಕಿಸುವುದು

ಜಿಬುತಿ, ಲಾವೋಸ, ಜಾಂಬಿಯಾ, ಕರ‍್ಗಿಸ್ಥಾನಗಳಂತಹ ದೇಶಗಳಿಗೆ ಒಟ್ಟು ಜಿಡಿಪಿಯಲ್ಲಿ (ಎಲ್ಲ ದೇಶಗಳ ಆಂತರಿಕ ಉತ್ಪನ್ನದಲ್ಲಿ) ಚೀನಾದ ಸಾಲದ ಭಾಗ ವೃದ್ಧಿಸುತ್ತಾ ಹೋಗಿ ಅದು ಶೇ. ೨೦ ಕ್ಕಿಂತ ಹೆಚ್ಚಾಗಿದೆ. ಕಳೆದ ಕೆಲವು ರ‍್ಷಗಳಲ್ಲಿ ಚೀನಾದ ಮರ‍್ಚಾ ಖನಿಜ ಸಂಪತ್ತುಗಳಿಂದ ಸಮೃದ್ಧವಾಗಿರುವ ಆಫ್ರಿಕಾದ ದೇಶಗಳ ಕಡೆಗೆ ಹೊರಳಿದೆ. ಪರ‍್ವ ಆಫ್ರಿಕಾದ ಜಿಬುತಿ ದೇಶ ದಲ್ಲಿಯಂತೂ ಚೀನಾ ತನ್ನ ನೌಕಾನೆಲೆಯನ್ನು ಸ್ಥಾಪಿಸಿದೆ. ಆಫ್ರಿಕಾದ ದೇಶಗಳಲ್ಲಿ ಬಡತನ ದೊಡ್ಡ ಪ್ರಮಾಣದಲ್ಲಿದೆ ಎನ್ನುವುದನ್ನು ಗಮನಿಸಿ ಚೀನಾ ಆ ದೇಶಗಳಿಗೆ ಬೃಹತ್ ಪ್ರಮಾಣದಲ್ಲಿ ಸಾಲವನ್ನು ನೀಡುತ್ತಿದೆ. ಝಿಂಬಾಬ್ವೆಯಂತಹ ದೇಶಗಳಲ್ಲಿ ಚೀನಾದ ಅತಿ ಹೆಚ್ಚು ಯೋಜನೆಗಳು ಕರ‍್ಯನಿರತವಾಗಿವೆ. ಇತ್ತೀಚೆಗಷ್ಟೇ ಅಲ್ಲಿಯ ಸಂಸತ್ತಿನ ನೂತನ ಕಟ್ಟಡದ ಕೆಲಸ ಪರ‍್ಣಗೊಂಡಿದ್ದು, ಈ ಕಾಮಗಾರಿಯನ್ನು ಚೀನಾ ಮಾಡಿದೆ. ಇದಕ್ಕಾಗಿ ೧೪೦ ದಶಲಕ್ಷ (೧೪ ಕೋಟಿ) ಡಾರ‍್ಸಗಳನ್ನು ವೆಚ್ಚ ಮಾಡಲಾಗಿದೆ. ಮೌಂಟ್ ಹ್ಯಾಂಪ್ಡನ್ (ಝಿಂಬಾಬ್ವೆ) ಕಟ್ಟಡದ ಮಾಧ್ಯಮದಿಂದ ಚೀನಾಗೆ ಈ ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವುದಿದೆ. ೨೦೨೦ ರ ಒಂದು ವರದಿಗನುಸಾರ ಅಂಗೋಲಾ ದೇಶಕ್ಕೆ ಚೀನಾ ಅತ್ಯಧಿಕ ಅಂದರೆ ೨೫ ಅಬ್ಜ ಡಾರ‍್ಸಗಳ ಸಾಲವನ್ನು ನೀಡಿದೆ. ಇಥಿಯೋಪಿಯಾ ದೇಶಕ್ಕೆ ೧೩.೫ ಅಬ್ಜ ಡಾರ‍್ಸ, ಜಾಂಬಿಯಾಕ್ಕೆ ೭.೪. ಅಬ್ಜ ಡಾರ‍್ಸ, ಕಾಂಗೋಲಾ ೭.೩. ಅಬ್ಜ ಡಾರ‍್ಸ ಮತ್ತು ಸುಡಾನ್ ದೇಶಕ್ಕೆ ೬.೪. ಅಬ್ಜ ಡಾರ‍್ಸ ಸಾಲವನ್ನು ಚೀನಾ ನೀಡಿದೆ. ಆಫ್ರಿಕಾದ ಸರಕಾರಗಳು ಈಗ ಸುಮಾರು ೧೪೩ ಅಬ್ಜ ಡಾರ‍್ಸ ಚೀನಾ ಸಾಲದ ಪಾಶದಲ್ಲಿ ಸಿಕ್ಕಿವೆ. ಪಾಕಿಸ್ತಾನ, ಶ್ರೀಲಂಕಾ, ಮಾಲ್ದೀವಗಳಂತಹ ದೇಶಗಳು ಇಂದು ಚೀನಾದ ದೊಡ್ಡ ಸಾಲಗಾರವಾಗಿವೆ. ಲಾವೋಸ್ ನಲ್ಲಿ ೬ ಅಬ್ಜ ಡಾರ‍್ಸ ವೆಚ್ಚ ಮಾಡಿ ಅಭಿವೃದ್ಧಿಗೊಳಿಸಿದ ರೈಲ್ವೆ ಯೋಜನೆಯಲ್ಲಿ ಶೇ. ೭೦ ರಷ್ಟು ಭಾಗ ಚೀನಾದ್ದಾಗಿದೆ. ಲಾವೋಸನ ವಿದೇಶಿ ಮೀಸಲು ಹಣ ೧ ಅಬ್ಜ ಡಾರ‍್ಸಗಳಿಗಿಂತ ಕೆಳಗೆ ಹೋಗಿದೆ.

೩. ಚೀನಾ ಚಿಕ್ಕ ದೇಶಗಳಿಗೆ ಮೂಲಭೂತ ಸೌಲಭ್ಯಗಳ ವಿಕಾಸದ ಹೆಸರಿನಲ್ಲಿ ಸಾಲವನ್ನು ನೀಡಿ ಅಲ್ಲಿನ ಸಾಧನ ಸಂಪತ್ತುಗಳನ್ನು ಕೊಳ್ಳೆ ಹೊಡೆಯುವುದು

ಚೀನಾ ಪಾಕಿಸ್ತಾನಕ್ಕೆ ‘ಸದಾರ‍್ವಕಾಲದ ಸ್ನೇಹಿತ ಎಂದು ಘೋಷಿಸಿದೆ; ಆದರೆ ಈ ದೇಶಕ್ಕೆ ಸಿಕ್ಕಾಪಟ್ಟೆ ಸಾಲ ನೀಡಿ ಅದರ ಸರ‍್ವಭೌಮತ್ವವನ್ನೇ ಚೀನಾ ತನ್ನ ಬಳಿ ಅಡವಿಟ್ಟುಕೊಂಡಿದೆ. ‘ಚೀನಾ-ಪಾಕಿಸ್ತಾನ ಇಕನಾಮಿಕ್ ಕ್ವಾರಿಡೋರ ಈ ಬೃಹತ್ ಯೋಜನೆ ಗಾಗಿ ೬೨ ಅಬ್ಜ ಡಾರ‍್ಸ ವೆಚ್ಚವಾಗಲಿದೆ. ಒಂದೂವರೆ ಅಬ್ಜ ಡಾರ‍್ಸ ಸಾಲದ ಬದಲಾಗಿ ಶ್ರೀಲಂಕಾ ದೇಶಕ್ಕೆ ಹಂಬನತೋಟಾ ಎಂಬ ಬಂದರನ್ನು ಚೀನಾಕ್ಕೆ ಕೊಡಬೇಕಾಯಿತು ಮತ್ತು ಇತ್ತೀಚೆಗೆ ಕೊಲಂಬೋ ಬಂದರನ್ನು ಕೂಡ ಚೀನಾಕ್ಕೆ ನೀಡಲಾಗಿದೆ. ೨೦೧೭ ರಲ್ಲಿ ಚೀನಾ ೧ ಅಬ್ಜ ಡಾರ‍್ಸ ಸಾಲವನ್ನು ಮಂಗೋಲಿಯಾಕ್ಕೆ ನೀಡಿತ್ತು ಮತ್ತು ಅಲ್ಲಿಯ ‘ಬಿ.ಆರ್.ಐ. ಯೋಜನೆಯಡಿಯಲ್ಲಿ ೩೦ ಅಬ್ಜ ಡಾರ‍್ಸಗಳನ್ನು ಹೂಡಿತ್ತು. ಈ ಸಾಲದಿಂದ ಹೊರಗೆ ಬರಲು ಮಂಗೋಲಿಯಾಕ್ಕೆ ಅಸಾಧ್ಯವಾಗಿದೆ. ವಿಶ್ವ ಬ್ಯಾಂಕಿನ ಹೇಳಿಕೆಯಂತೆ ರ‍್ಷ ೨೦೧೮ ರಲ್ಲಿಯೇ ಈ ದೇಶದ ಜನರ ಮೇಲಿನ ಸಾಲ ಜಿಡಿಪಿಯ ಶೇ. ೮೩ ರ ವರೆಗೆ ತಲುಪಿತ್ತು. ಸಾಲದ ಹೊರೆಯಲ್ಲಿ ಸಿಲುಕಿರುವ ತಜಾಕಿಸ್ತಾನದಲ್ಲಿಯೂ ಇದೇ ಸ್ಥಿತಿಯಿದೆ. ಅವರ ಒಟ್ಟು ವಿದೇಶಿ ಸಾಲದಲ್ಲಿ ಚೀನಾದ ಸಾಲ ಶೇ. ೪೦ ರಷ್ಟಿದೆ. ಮೂಲಭೂತ ಸೌಲಭ್ಯಗಳ ವಿಕಾಸದ ಹೆಸರಿನಲ್ಲಿ ಚೀನಾವು ಕಾಂಗೊ, ಕಂಬೋಡಿಯಾ, ಬಾಂಗ್ಲಾದೇಶ, ನೈಜೇರಿಯಾ ಮತ್ತು ಜಾಂಬಿಯಾ ಗಳಂತಹ ದೇಶಗಳಿಗೆ ಅವುಗಳ ಜಿಡಿಪಿಯ ಶೇ. ೨೦ ಕ್ಕಿಂತ ಅಧಿಕ ಸಾಲವನ್ನು ನೀಡಿದೆ.

೪.ಚೀನಾದ ಸಾಲದ ಪಾಶವೆಂದರೆ ಒಂದು ರೀತಿಯಲ್ಲಿ ಹೊಸ ವಸಾಹತುವಾದ !

ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ ಚೀನಾ ಈ ದೇಶ ಗಳಿಗೆ ಸಾಲ ನೀಡುವಾಗ ಅದಕ್ಕೆ ಈ ದೇಶಗಳ ರ‍್ಥಿಕ ಅಭಿ ವೃದ್ಧಿ ಮಾಡುವ ಉದ್ದೇಶವಿರಲಿಲ್ಲ, ಈ ಮಾಧ್ಯಮದಿಂದ ತನ್ನ ಸಾಮ್ರಾಜ್ಯವನ್ನು ವಿಸ್ತಾರ ಮಾಡುವ ಕುಟಿಲ ಉದ್ದೇಶದಿಂದ (ರಾಜಕೀಯ ಉದ್ದೇಶದಿಂದ) ಈ ಸಾಲವನ್ನು ನೀಡಿದೆ. ಹಿಂದಿನ ಕಾಲದಲ್ಲಿ ಅಂದರೆ ಸಾಧಾರಣ ೧೮-೧೯ನೇ ಶತಕದಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಯುದ್ಧವನ್ನು ಸಾಧನವೆಂದು ಉಪ ಯೋಗಿಸಲಾಗುತ್ತಿತ್ತು; ಆದರೆ ೨೧ ನೇ ಶತಕದಲ್ಲಿ ಚೀನಾ ಒಂದು ಹೊಸ ನೀತಿಯನ್ನು ಹಾಕಿಕೊಟ್ಟಿದೆ. ಸಾಲದ ಮಾಧ್ಯಮದಿಂದ ಒಂದು ಹೊಸ ವ್ಯವಸ್ಥೆಯನ್ನು ಚೀನಾ ನರ‍್ಮಿಸಿದೆ. ಈ ಮೂಲಕ ಬಡ ದೇಶ ಗಳಿಗೆ ದೊಡ್ಡ ಮೊತ್ತದ ಸಾಲವನ್ನು ನೀಡಿ ಅದನ್ನು ಮರಳಿಸಲು ಸಾಧ್ಯವಾಗದಿದ್ದರೆ, ಆ ದೇಶವನ್ನು ತನ್ನ ಮುಷ್ಟಿಯಲ್ಲ್ಲಿ (ಗುಲಾಮ) ಇಟ್ಟುಕೊಳ್ಳುವುದು. ಚೀನಾ ಆ ದೇಶಗಳ ಭೂಮಿ, ಬಂದರುಗಳು, ವಿಕಾಸದ ಗುತ್ತಿಗೆ ಮುಂತಾದವುಗಳನ್ನು ತೆಗೆದುಕೊಳ್ಳುತ್ತದೆ. ಇದರಿಂದ ವಸಾಹತುವಾದ ಅಂತ್ಯಗೊಂಡಿದ್ದರೂ, ‘ಚೀನಾದ ಈ ಸಾಲದ ಪಾಶವೆಂದರೆ ಒಂದು ರೀತಿಯಲ್ಲಿ ಹೊಸ ವಸಾಹತುವಾದವೇ ಆಗಿದೆ, ಎಂದು ಹೇಳಬಹುದು.

೫. ಚೀನಾ ರಾಜ ಮನೆತನಗಳನ್ನು ಭ್ರಷ್ಟಗೊಳಿಸಿ ಅವರನ್ನು ‘ಬ್ಲ್ಯಾಕಮೇಲ್ (ಸುಳ್ಳು ಹೇಳಿ ಬೆದರಿಸುವುದು) ಮಾಡುವುದು ಮತ್ತು ತನ್ನ ಪ್ರಭಾವವನ್ನು ಹೆಚ್ಚಿಸುವುದು

ಈ ನಿಮಿತ್ತದಿಂದ ಚೀನಾದ ‘ಡೆಬ್ಟ ಟ್ರ‍್ಯಾಪ್ ಡಿಪ್ಲೊಮಸಿಯ ‘ಮೋಡಸ ಎಪರೆಂಡಿ (ಕರ‍್ಯಪದ್ಧತಿ)ಯನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಸಾಧಾರಣ ಯಾವುದೇ ಬ್ಯಾಂಕ ಸಾಲವನ್ನು ಕೊಡುವಾಗ ವ್ಯಕ್ತಿ ಅಥವಾ ಸಂಸ್ಥೆಗೆ ಮರುಪಾವತಿಸುವ ಕ್ಷಮತೆ ಇದೆಯೇ, ಇಲ್ಲವೋ ? ಎಂದು ಪರಿಶೀಲಿಸುತ್ತದೆ. ಆ ವ್ಯಕ್ತಿ ಅಥವಾ ಆ ಸಂಸ್ಥೆ ಮರುಪಾವತಿಸುವ ಸಾರ‍್ಥ್ಯವನ್ನು ಹೊಂದಿರದಿದ್ದರೆ, ಬ್ಯಾಂಕು ಸಾಲ ನೀಡಲು ನಿರಾಕರಿಸುತ್ತವೆ; ಆದರೆ ಚೀನಾ ವಿವಿಧ ದೇಶಗಳಿಗೆ ಸಾಲ ಕೊಡುವಾಗ ಈ ರೀತಿಯ ಯಾವುದನ್ನೂ ಪರಿಶೀಲಿಸುವುದಿಲ್ಲ. ಎರಡನೇಯದೆಂದರೆ, ಚೀನಾ ಎಲ್ಲಿ ರಾಜಮನೆತನದ ಆಡಳಿತ ವಿದೆಯೋ ಅಥವಾ ಒಂದು ಮುಷ್ಟಿಯಷ್ಟು ಮನೆತನಗಳಿಂದ ರಾಜ್ಯಾಡಳಿತ ನಡೆಸಲಾಗುತ್ತದೆಯೋ ಅಂತಹ ದೇಶಗಳನ್ನು ತನ್ನ ಬಲೆಯಲ್ಲಿ ಎಳೆದುಕೊಳ್ಳುತ್ತದೆ. ಕೆಲವು ಅಧ್ಯಯನಕಾರರ ಅಭಿಪ್ರಾಯ ದಂತೆ ಚೀನಾ ಆ ದೇಶಗಳಿಗೆ ಸಾಲ ಕೊಡುವಾಗ ಅಲ್ಲಿಯ ರಾಜ ಮನೆತನಕ್ಕೆ ‘ತನಗೆ ಎಷ್ಟು ಬಡ್ಡಿ ಸಿಗಬೇಕು, ಎಂಬುದನ್ನು ತಿಳಿಸಿ ‘ನೀವು ನಿಮ್ಮ ದೇಶದಲ್ಲಿ ಅದರ ಮೇಲೆ ನಿಮಗೆ ಬೇಕಾದಷ್ಟು ಬಡ್ಡಿಯನ್ನು ವಿಧಿಸಲು ಮುಕ್ತರಾಗಿದ್ದೀರಿ, ಎಂದೂ ಹೇಳುತ್ತದೆ. ಈ ರೀತಿ ಅನಾಯಾಸವಾಗಿ ಅವಕಾಶ ದೊರಕಿದ್ದರಿಂದ ಅನೇಕ ರಾಜಮನೆತನದವರಿಗೆ ಭ್ರಷ್ಟಾಚಾರದ ಮೇಯುವ ಗದ್ದೆಯೇ ಸಿಕ್ಕಿದೆ. ಇದರಿಂದ ಈ ರಾಜಮನೆತನಗಳು ಭ್ರಷ್ಟವಾಗಿವೆ; ಆದರೆ ಈ ಸಾಲವನ್ನು ಮರಳಿಸುವ ದಾಖಲೆ (ಒಪ್ಪಂದ) ಇರುವುದರಿಂದ ಈ ಭ್ರಷ್ಟಾಚಾರವನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಇದರ ಆಧಾರದಲ್ಲಿ ಚೀನಾ ಈ ರಾಜಮನೆತನಗಳ ‘ಬ್ಲ್ಯಾಕಮೇಲ್ ಮಾಡುತ್ತದೆ. ಇಂದು ಅನೇಕ ದೇಶಗಳ ಅನೇಕ ರಾಜಮನೆತನಗಳು ಈ ‘ಬ್ಲ್ಯಾಕ್ ಮೇಲಿಂಗ್ಕ್ಕೆ ಬಲಿಯಾಗಿವೆ. ತನ್ಮೂಲಕ ಅನೇಕ ದೇಶಗಳ ಮೇಲೆ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿದೆ.

೬. ಚೀನಾ ಲಂಕೆಯಲ್ಲಿಯೂ ವಿಕಾಸದ ಹೆಸರಿನಡಿಯಲ್ಲಿ ಸಾಲನ್ನು ನೀಡಿ ತನ್ನ ಸೈನ್ಯದ ಕೇಂದ್ರವನ್ನು ಸ್ಥಾಪಿಸುವುದು

ಶ್ರೀಲಂಕಾದಲ್ಲಿಯೂ ಇದೇ ರೀತಿಯಾಗಿದೆ. ರಾಜಪಕ್ಷೆ ಮನೆತನವು ಚೀನಾಗೆ ಶರಣಾದಂತೆ ನಡೆದುಕೊಳ್ಳುತ್ತಿತ್ತು. ಶ್ರೀಲಂಕೆಯ ಬಹುತೇಕ ವಿಕಾಸದ ಕರ‍್ಯಗಳ ಗುತ್ತಿಗೆಯನ್ನು (ಛಿoಟಿಣಡಿಚಿಛಿಣ) ಈ ಮನೆತನವು ಚೀನಾಕ್ಕೆ ನೀಡುತ್ತಿತ್ತು. ಕೆಲವು ಪ್ರಕರಣಗಳಲ್ಲಿಯಂತೂ ಭಾರತ ಮತ್ತು ಜಪಾನ ದೇಶಗಳಿಗೆ ನೀಡಿದ್ದ ವಿಕಾಸದ ಕಾಮಗಾರಿಗಳ ಗುತ್ತಿಗೆಯನ್ನು (ಛಿoಟಿಣಡಿಚಿಛಿಣ) ಹಿಂಪಡೆದು ಚೀನಾಕ್ಕೆ ನೀಡಲಾಯಿತು. ಇಂದು ಶ್ರೀಲಂಕೆಯ ಅನೇಕ ಭೂಮಿ ಮತ್ತು ಬಂದರುಗಳನ್ನು ಚೀನಾಕ್ಕೆ ನೀಡಲಾಗಿದೆ. ಮೂಲದಲ್ಲಿ ಇದೇ ಚೀನಾದ ರಣನೀತಿಯ ಮುಖ್ಯ ಉದ್ದೇಶವಾಗಿದೆ. ಚೀನಾ ನೀಡಿರುವ ಸಾಲದ ಮರುಪಾವತಿಸಲು ಈ ದೇಶಗಳಿಗೆ ಸಾಧ್ಯವಾಗುವುದಿಲ್ಲ. ಆಗ ಚೀನಾ ಆ ದೇಶದ ಪಾಳು ಭೂಮಿಯನ್ನು ಬಾಡಿಗೆಯ ಆಧಾರದಲ್ಲಿ ಕೊಡುವಂತೆ ಮನವಿ ಮಾಡುತ್ತದೆ ಮತ್ತು ಕಾಲಾಂತರದಲ್ಲಿ ಅಲ್ಲಿ ಚೀನಾ ತನ್ನ ಸೇನಾನೆಲೆಯನ್ನು ನರ‍್ಮಾಣ ಮಾಡುತ್ತದೆ. ಅದು ದಕ್ಷಿಣ ಚೀನಾ ಸಮುದ್ರದಲ್ಲಿ ಈ ರೀತಿ ಯಶಸ್ವಿಯಾಗಿ ಮಾಡಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಮಾನವ ವಸತಿಯಿಲ್ಲದ ದ್ವೀಪಗಳಲ್ಲಿ ಚೀನಾ ಊರುಗಳನ್ನು ನರ‍್ಮಿಸಿದೆ ಮತ್ತು ನಂತರ ಆ ಊರುಗಳನ್ನು ನೌಕಾ ನೆಲೆಯ ಕೇಂದ್ರUಳಾಗಿ ರೂಪಾಂತರಿಸಿದೆ. ಇದೇ ರೀತಿ ಅದು ಶ್ರೀಲಂಕೆಯಲ್ಲಿಯೂ ಮಾಡಿದೆ. ಮಧ್ಯಂತರದಲ್ಲಿ ಬಂದ ಒಂದು ಸುದ್ದಿಯಂತೆ ಶ್ರೀಲಂಕೆಯ ಬಂದರ ಹಂಬನತೋಟಾದಲ್ಲಿ ಚೀನಾ ಅಣ್ವಸ್ತ್ರಗಳಿಂದ ತುಂಬಿರುವ ಜಲಾಂರ‍್ಗಾಮಿಗಳನ್ನು ನಿಲ್ಲಿಸಿತ್ತು. ಪ್ರತ್ಯಕ್ಷದಲ್ಲಿ ಇದು ಭಾರತಕ್ಕೆ ಅಪಾಯಕಾರಿಯೇ ಆಗಿತ್ತು. ಆದುದರಿಂದ ಚೀನಾದ ಈ ಸಾಲದ ಬಲೆಯನ್ನು ವ್ಯಾಪಕ ದೃಷ್ಟಿಕೋನದಿಂದ ನೋಡುವುದು ಆವಶ್ಯಕವಾಗಿದೆ.

೭. ಚೀನಾದೊಂದಿಗಿನ ಸಾಲದ ಒಪ್ಪಂದವನ್ನು ಸರ‍್ವಜನಿಕ ಮಾಡದಂತೆ ಬ್ಯಾಂಕುಗಳಿಗೆ ಷರತ್ತು ಹಾಕುವುದು

ಯಾವುದೇ ದೇಶಕ್ಕೆ ಸಾಲವನ್ನು ಕೊಡುವಾಗ ಚೀನಾ ತಮ್ಮ ಬ್ಯಾಂಕುಗಳಿಗೆ ಬಡ್ಡಿ ದರವನ್ನು ನರ‍್ಧರಿಸುವುದರೊಂದಿಗೆ ಎಲ್ಲ ರೀತಿಯ ಅಧಿಕಾರಗಳನ್ನು ಕೊಡುತ್ತದೆ. ಇದರಲ್ಲಿ ಅತ್ಯಧಿಕ ಆಶ್ರ‍್ಯಕರ ಸಂಗತಿ ಎಂದರೆ ಈ ಸಾಲವನ್ನು ಕೊಡುವಾಗ ‘ಈ ಸಾಲದ ಒಪ್ಪಂದವನ್ನು ಸರ‍್ವಜನಿಕಗೊಳಿಸಬಾರದು, ಎಂದು ಷರತ್ತು ಹಾಕಲಾಗುತ್ತದೆ. ಇದರಿಂದ ಯಾವ ದೇಶವು ಎಷ್ಟು ಸಾಲವನ್ನು ತೆಗೆದುಕೊಂಡಿದೆ? ಎಷ್ಟು ಕಾಲಾವಧಿಗಾಗಿ ತೆಗೆದುಕೊಂಡಿದೆ? ಅದರ ಬಡ್ಡಿದರ ಎಷ್ಟಿದೆ? ಇದರ ನಿಜ ಮಾಹಿತಿ ಯಾವತ್ತೂ ಬಹಿರಂಗವಾಗುವುದಿಲ್ಲ. ಚೀನಾದ ಕೂಟನೀತಿಯ ವಿಷಯವು ಇಂದು ಅನೇಕ ದೇಶಗಳ ಕಣ್ಣುಗಳನ್ನು ತೆರೆಸಿದೆ; ಆದರೆ ಈಗ ಅದು ಬಹಳ ತಡವಾಗಿದೆ. ನೇಪಾಳದಂತಹ ದೇಶ ಗಳನ್ನು ಇದರಲ್ಲಿ ಸಮಾವೇಶಗೊಳಿಸಬಹುದು.

೮. ಶ್ರೀಲಂಕೆಯ ವಿದೇಶಿ ಮೀಸಲು ಹಣ ಕಡಿಮೆಯಾಗಿ ರ‍್ಥಿಕ ಸ್ಥಿತಿ ಹದಗೆಡುವುದು ಮತ್ತು ದೇಶದಲ್ಲಿನ ಕೊರತೆಗಳ ಕಾರಣದಿಂದ ನಾಗರಿಕರಲ್ಲಿ ಅಸಂತೋಷ ಉಮ್ಮಳಿಸುವುದು

ಶ್ರೀಲಂಕೆಯ ವಿಚಾರವನ್ನು ಮಾಡಿದರೆ ಇಂದು ಅವರ ಮೇಲೆ ಒಟ್ಟು ೫೫ ಅಬ್ಜ ಡಾರ‍್ಸಗಳಷ್ಟು ಸಾಲವಿದೆ. ಇದರಲ್ಲಿನ ೨೦ ರಿಂದ ೨೫ ಅಬ್ಜ ಡಾರ‍್ಸಗಳಷ್ಟು ಸಾಲವನ್ನು ಅದು ಚೀನಾದಿಂದ ಪಡೆದುಕೊಂಡಿದೆ. ಈ ಸಾಲದ ಕಂತುಗಳನ್ನು ಡಾರ‍್ಸಗಳಲ್ಲಿ ಭರಿಸಬೇಕಾಗುತ್ತದೆ. ಡಾರ‍್ಸಗಳ ಬೆಲೆ ಸತತವಾಗಿ ಏರುತ್ತಿರುತ್ತದೆ ಮತ್ತು ಸ್ಥಳೀಯ ಹಣದ ಅಪಮೌಲ್ಯವಾಗುತ್ತಿರುತ್ತದೆ. ಇದರಿಂದ ಬಡ್ಡಿಯ ಮೊತ್ತವನ್ನು ಯಾವಾಗಲೂ ಅಧಿಕ ಪ್ರಮಾಣದಲ್ಲಿ ಕೊಡ ಬೇಕಾಗುತ್ತದೆ. ಈ ಬಡ್ಡಿಯ ಕಾರಣದಿಂದ ಸರಕಾರಿ ಖಜಾನೆಯ ವಿದೇಶಿ ಮೀಸಲು (ಫಾರನ ರಿರ‍್ವ್) ಹಣ ಕಡಿಮೆಯಾಗುತ್ತದೆ. ಇದರಿಂದ ಆ ದೇಶಗಳ ಜಾಗತಿಕ ಸ್ತರದ ಆಮದಿನ ಮೇಲೆ ಪರಿಣಾಮ ಆಗುತ್ತದೆ. ಸಾಕಾಗುವಷ್ಟು ಡಾರ‍್ಸಗಳು ಇಲ್ಲದ ಕಾರಣ ಅವರಿಗೆ ಈ ಆಮದನ್ನು ಕಡಿಮೆ ಮಾಡದೇ ಬೇರೆ ರ‍್ಯಾಯ ಇರುವುದಿಲ್ಲ. ಇದರ ಪರಿಣಾಮವಾಗಿ ದೇಶದ ಆಂತರಿಕ ಮಾರುಕಟ್ಟೆಯಲ್ಲಿ ಕೊರತೆಗಳು ಕಾಣಿಸತೊಡಗುತ್ತವೆ ಮತ್ತು ಪೂರೈಕೆಯ ಕೊರತೆಯಿಂದ ಬೆಲೆಯೇರಿಕೆ ಹೆಚ್ಚುತ್ತದೆ. ಇದರಿಂದ ನಾಗರಿಕರಲ್ಲಿ ಅಸಂತೋಷ ಉಮ್ಮಳಿಸತೊಡಗುತ್ತದೆ. ಶ್ರೀಲಂಕೆಯಲ್ಲಿ ಇದೇ ಆಗಿದೆ. ಪಾಕಿಸ್ತಾನವೂ ಇದೇ ಹಾದಿಯಲ್ಲಿದೆ. ಪಾಕಿಸ್ತಾನದ ಒಬ್ಬ ಮಂತ್ರಿ ಇತ್ತೀಚೆಗಷ್ಟೇ ಅಲ್ಲಿಯ ನಾಗರಿಕರಿಗೆ ಚಹಾ ಕಡಿಮೆ ಕುಡಿಯುವಂತೆ ಸಲಹೆ ನೀಡಿದ್ದನು. ಇದರ ಕಾರಣ ಚಹಾಹುಡಿ ಖರೀದಿ ಮಾಡಲು ಡಾರ‍್ಸಗಳನ್ನು ಎಣಿಸ ಬೇಕಾಗುತ್ತದೆ. ನೇಪಾಳವೂ ಇದೇ ಕಾರಣದಿಂದ ೨೧ ವಿದೇಶಿ ವಸ್ತುಗಳ ಮೇಲೆ ಬಹಿಷ್ಕಾರ ಹೇರಿದೆ.

೯. ಚೀನಾದ ಸಾಲದ ಬಲೆ : ಸಾಲಪಡೆದ ದೇಶಗಳು ಜಾಗೃತವಾಗುವುದು ಆವಶ್ಯಕ

ಒಟ್ಟು ಸಾರಾಂಶವೇನೆಂದರೆ, ಚೀನಾದ ಸಾಲದ ಬಲೆಗೆ ಸಿಲುಕಿರುವ ಬಹುತೇಕ ದೇಶಗಳ ಸಾಲದ ಮೇಲಿನ ಬಡ್ಡಿಯಿಂದಾಗಿ ವಿದೇಶಿ ಮೀಸಲು ಹಣ ಕಡಿಮೆಯಾಗುತ್ತಾ ಹೋಗುತ್ತಿದೆ. ಆದುದರಿಂದಲೇ ಇಂದಲ್ಲ ನಾಳೆ ಶ್ರೀಲಂಕೆಯಂತಹ ಸ್ಥಿತಿ ಇತರ ಕೆಲವು ದೇಶಗಳಲ್ಲಿಯೂ ಕಂಡು ಬರಬಹುದು, ಎಂಬ ಹೆದರಿಕೆ ವ್ಯಕ್ತವಾಗುತ್ತಿದೆ. ಆದ್ದರಿಂದಲೇ ಈಗ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು ಪಾಕಿಸ್ತಾನ ಮತ್ತು ಶ್ರೀಲಂಕಾ ಇವುಗಳಿಗೆ, ನಿಮಗೆ ಒಂದು ವೇಳೆ ‘ಬೇಲ ಔಟ ಪ್ಯಾಕೇಜ(ರ‍್ಥವ್ಯವಸ್ಥೆ ಸಂಕುಚಿತ ಆಗುವುದರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನೀಡುವ ರ‍್ಥಿಕ ಸಹಾಯ) ಇದರ ಅಂರ‍್ಗತ ನಿಧಿ ಬೇಕಾಗಿದ್ದರೆ, ಚೀನಾದಿಂದ ಸಾಲ ಪಡೆಯುವುದನ್ನು ಸ್ಥಗಿತಗೊಳಿಸಬೇಕಾಗುವುದು ಎಂದು ಸ್ಪಷ್ಟವಾಗಿ ಹೇಳಿದೆ. ಹೊಸ ವಿಸ್ತಾರವಾದದ ಮತ್ತು ಸಾಮ್ರಾಜ್ಯ ವಾದದ ಸಾಧನವಾಗಿರುವ ಚೀನಾದ ಸಾಲದ ಬಲೆಯ ಈ ಕಥೆಯು ಜಗತ್ತಿಗೆ ಅಪಾಯದ ಗಂಟೆಯಾಗಿದ್ದು ಈ ವಿಷಯದಲ್ಲಿ ಈ ದೇಶಗಳು ಸಮಯವಿರುವಾಗಲೇ ಜಾಗೃತವಾಗುವುದು ಆವಶ್ಯಕವಾಗಿದೆ. – ಡಾ. ಶೈಲೇಂದ್ರ ದೇವಳಾಣಕರ, ವಿದೇಶ ನೀತಿಯ ವಿಶ್ಲೇಷಕರು (ಆಧಾರ: ಡಾ. ಶೈಲೇಂದ್ರ ದೇವಳಾಣಕರ ಇವರ ಸಾಮಾಜಿಕ ಮಾಧ್ಯಮದಲ್ಲಿನ ಲೇಖನ)