ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಪುನಃ ಪ್ರಶಂಸೆ ಮಾಡಿದ ಇಮ್ರಾನ ಖಾನ

ಲಾಹೋರನ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ ಇವರು ಅಮೇರಿಕಾವನ್ನು ಖಂಡಿಸಿ ಮಾತನಾಡುತ್ತಿರುವ ವಿಡಿಯೋ ತೋರಿಸಿದರು !

ಲಾಹೋರ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ ಖಾನ ಇವರು ಲಾಹೋರನ ಒಂದು ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಇವರ ವಿಡಿಯೋ ತೋರಿಸಿ ಭಾರತದ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಗಿಸಿದರು. ಇಮ್ರಾನ ಖಾನ, ‘ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ತೈಲ ಖರೀದಿ ಮಾಡಿದ್ದರಿಂದ ಅಮೇರಿಕಾದಿಂದ ನಿರಂತರವಾಗಿ ಒತ್ತಡವಿರುವಾಗಲೂ ಜೈಶಂಕರ ಇವರು ತಮ್ಮ ನಿಲುವಿಗೆ ಬದ್ಧವಾಗಿದ್ದರು.” ಇದು ಶ್ಲಾಘನೀಯವಾಗಿದೆ.” ಎಸ್. ಜೈಶಂಕರ ಇವರು ಯುರೋಪಿನ ಸ್ಲೊವ್ಹಾಕಿಯಾ ದೇಶದ ಬ್ರಾತಿಸ್ಲಾವಹಾದಲ್ಲಿ ಆಯೋಜಿಸಿರುವ ಒಂದು ಕಾರ್ಯಕ್ರಮದಲ್ಲಿ ರಷ್ಯಾದಿಂದ ತೈಲ ಖರೀದಿಸುವುದರ ಬಗ್ಗೆ ಅಮೇರಿಕಾವನ್ನು ಖಂಡಿಸಿ ಮಾತನಾಡಿದ್ದರು. ಜೈಶಂಕರ, “ಒಂದು ವೇಳೆ ಯುರೋಪ ರಷ್ಯಾದಿಂದ ಗ್ಯಾಸ ಖರೀದಿಸಬಹುದಾದರೆ, ಭಾರತ ರಷ್ಯಾದಿಂದ ತೈಲವನ್ನು ಏಕೆ ಖರೀದಿಸಬಾರದು ?” ಎಮದು ಹೇಳಿದರು.


ಸಭೆಯಲ್ಲಿ ಮಾತನಾಡುತ್ತಾ ಇಮ್ರಾನ ಖಾನ, ಭಾರತವು ರಷ್ಯಾದಿಂದ ತೈಲ ಖರೀದಿಸಿದರು; ಕಾರಣ ಅದು ಅವರ ಜನರ ಹಿತದ ನಿರ್ಧಾರವಾಗಿತ್ತು. ಪಾಕಿಸ್ತಾನದೊಂದಿಗೆ ಸ್ವಾತಂತ್ರ್ಯ ಪಡೆದಿರುವ ಭಾರತ ಕಠಿಣ ನಿಲುವಿನೊಂದಿಗೆ ತನ್ನ ಜನತೆಯ ಅವಶ್ಯಕತೆಗನುಗುಣವಾಗಿ ವಿದೇಶಾಂಗ ನೀತಿಯನ್ನು ರೂಪಿಸುತ್ತಿದ್ದರೆ, ಪಾಕಿಸ್ತಾನ ಸರಕಾರ ಏಕೆ ಮಾಡಲು ಸಾಧ್ಯವಿಲ್ಲ ? ಎಂದು ಹೇಳಿದರು.