ಜಗತ್ತಿನಲ್ಲಿರುವ ಎಲ್ಲಕ್ಕಿಂತ ಉದ್ದ, ಅಂದರೆ ೩೪೬ ಕಿ.ಮಿ ಉದ್ದದ ಥೇಮ್ಸ ನದಿಯ ತೀರವು ಶುಷ್ಕವಾಗುವ ಹಾದಿಯಲ್ಲಿ !

ಬ್ರಿಟನ್‌ನಲ್ಲಿ ೧೪ ರಲ್ಲಿ ೮ ಭಾಗಗಳು ಬರಪೀಡಿತವೆಂದು ಘೋಷಣೆ

ಲಂಡನ್‌ (ಬ್ರಿಟನ್‌) – ಬ್ರಿಟನ್‌ನ ಪರಿಸರ ಸಂಸ್ಥೆಯು ಅವರ ದೇಶದಲ್ಲಿನ ೧೪ರಲ್ಲಿ ೮ ಭಾಗಗಳು ಬರಪೀಡಿತವಾಗಿವೆ ಎಂದು ಘೋಷಿಸಿದೆ. ಇವುಗಳಲ್ಲಿ ಡೆವೋನ, ಕಾರ್ನವಾಲ, ಸಾಲೆಂಟ, ಸೌಥ ಟಾಊ, ಕೆಂಟ, ದಕ್ಷಿಣ ಲಂಡನ, ಹರ್ಟಸ, ಉತ್ತರ ಲಂಡನ, ಈಸ್ಟ ಎಂಗ್ಲೀಯಾ, ಥೇಮ್ಸ್‌, ಲಿಂಕನಶಾಯರ, ನಾರ್ಥಮ್ಪ್ಟನಶಾಯರ ಹಾಗೂ ಮಿಡಲೆಡಸ ಈ ಭಾಗಗಳೂ ಸೇರಿವೆ. ೧೯೩೫ರ ನಂತರ ಬ್ರಿಟನ್‌ನಲ್ಲಿ ಜುಲೈ ಅತ್ಯಂತ ಭೀಕರ ಬರದ ಮಾಸವೆಂದು ಘೋಷಿತವಾಗಿದೆ. ಇಲ್ಲಿ ಸರಾಸರಿ ಕೇವಲ ಶೇ. ೩೫ರಷ್ಟು ಮಳೆ ಬಿದ್ದಿದೆ.

ಬ್ರಿಟನ್ನಿನ ಜಲಮಂತ್ರಿ ಸ್ಟೀವ್ಹ ಡಬಲರವರು ಮಾತನಾಡುತ್ತ, ಈ ಸಂಕಟವನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಪರಿಸ್ಥಿತಿಯ ಮೇಲೆ ನಮ್ಮ ಗಮನವಿದೆ. ಹೆಚ್ಚುತ್ತಿರುವ ಉಷ್ಣತೆ, ಉಷ್ಣತೆಯ ಅಲೆ ಹಾಗೂ ಕಡಿಮೆ ಮಳೆಯಿಂದಾಗಿ ಜಗತ್ತಿನಲ್ಲಿರುವ ಎಲ್ಲಕ್ಕಿಂತ ಉದ್ದ ಅಂದರೆ ೩೪೬ ಕಿ.ಮಿ ಉದ್ದವಿರುವ ಥೇಮ್ಸ್‌ ನದಿಯ ದಡವು ಶುಷ್ಕವಾಗುವ ಹಾದಿಯಲ್ಲಿದೆ. ಇದು ಮೊಟ್ಟ ಮೊದಲ ಬಾರಿಗೆ ಆಗಿರುವುದರಿಂದ ತಜ್ಞರೂ ಆಶ್ಚರ್ಯಗೊಂಡಿದ್ದಾರೆ.