ಸಾಧಕರನ್ನು ಅಂತರ್ಮುಖಗೊಳಿಸಿ ಅವರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಸಂಯೋಜಿಸುವ ಹಾಗೂ ಅಖಂಡ ಭಾವಾವಸ್ಥೆಯಲ್ಲಿರುವ ಸನಾತನದ ೭೫ ನೇ ಸಮಷ್ಟಿ ಸಂತರತ್ನ ಪೂ. ರಮಾನಂದ ಗೌಡ !

೧. ‘ಪ್ರಯಾಣ ಮಾಡುತ್ತಿರುವಚತುಷ್ಚಕ್ರ ವಾಹನ ಅಂದರೆ ಧರ್ಮರಥವೇ ಆಗಿದೆ’, ಈ ಭಾವದಿಂದ ಚತುಷ್ಚಕ್ರವಾಹನದ ಮುತುವರ್ಜಿ ವಹಿಸುವುದು

ಪೂ. ರಮಾನಂದ ಗೌಡ

೧ ಅ. ‘ಪೂ. ರಮಾನಂದಣ್ಣ ಪ್ರಯಾಣಕ್ಕಾಗಿ ಉಪಯೋಗಿಸುವ ಚತುಷ್ಚಕ್ರ ವಾಹನವನ್ನು ‘ಧರ್ಮರಥ’ ಎಂದೇ ಹೇಳುತ್ತಾರೆ’.

೧ ಆ. ಪ್ರಯಾಣಕ್ಕೆ ಹೋಗುವ ಹಿಂದಿನ ದಿನ ರಥದ (ಚತುಷ್ಚಕ್ರ ವಾಹನ) ಸ್ವಚ್ಛತೆಯನ್ನು ಮಾಡಲು ಹೇಳುವುದು ಮತ್ತು ಹೊರಡುವ ದಿನ ಅದರ ಶುದ್ಧೀಕರಣ ಮಾಡಿ ದೃಷ್ಟಿ ತೆಗೆದು ಪ್ರಯಾಣಕ್ಕೆ ಹೋಗುತ್ತಿರುವುದರಿಂದ ಪ್ರಯಾಣದಲ್ಲಿ ಅಡಚಣೆ ಬಾರದಿರುವುದು : ನನಗೆ ದೇವರ ಕೃಪೆಯಿಂದ ಪೂ. ರಮಾನಂದಣ್ಣ ಪ್ರಯಾಣಿಸುವ ರಥದ (ಚತುಷ್ಚಕ್ರ ವಾಹನ) ಚಾಲನೆಯ ಸೇವೆಯು ಸಿಕ್ಕಿತು. ಪ್ರಯಾಣಕ್ಕೆ ಹೋಗುವ ಹಿಂದಿನ ದಿನ ರಥದ ಸ್ವಚ್ಛತೆಯನ್ನು ಮಾಡಲು ಹೇಳುವುದು ಮತ್ತು ಹೊರಡುವ ದಿನ ಅದರ ಶುದ್ಧೀಕರಣ ಮಾಡಿ ದೃಷ್ಟಿ ತೆಗೆದು ಪ್ರಯಾಣಕ್ಕೆ ಹೋಗುತ್ತಿದ್ದರು. ಇದರಿಂದ ಪ್ರಯಾಣದಲ್ಲಿ ಅಡಚಣೆ ಬರುತ್ತಿರಲಿಲ್ಲ.

ಶ್ರೀ. ಸುಕೇಶ ಗುರವ

೧ ಇ. ಅವರು ಪ್ರಯಾಣಕ್ಕೆ ಹೋಗುತ್ತಿರುವಾಗ ‘ರಥದಲ್ಲಿ ಸಾಧಕರ ಎಲ್ಲಾ ವಸ್ತುಗಳನ್ನು ಹೇಗೆ ಇಡಬಹುದು ಮತ್ತು ಒಳ್ಳೆಯ ಸ್ಪಂದನ ಬರಲು ಸಾಹಿತ್ಯಗಳನ್ನು ಹೇಗೆ ಜೋಡಿಸಬೇಕು ?’, ಇದನ್ನು ಕೂಲಂಕುಷವಾಗಿ ಹೇಳುತ್ತಾರೆ.

೧ ಈ. ಸಾಧಕರಿಗೆ ರಥವನ್ನು ಉತ್ತಮವಾಗಿ ನಡೆಸಲು ಮಾರ್ಗದರ್ಶನ ಮಾಡುವುದು : ನಾನು ರಥವನ್ನು ಓಡಿಸುವಾಗ ಅವರು ನನಗೆ ‘ರಥವನ್ನು ಉತ್ತಮವಾಗಿ ಹೇಗೆ ನಡೆಸಬೇಕು ? ರಸ್ತೆಯಲ್ಲಿ ತಿರುವು ಮತ್ತು ಘಟ್ಟ ಇದ್ದರೆ ರಥವನ್ನು ಹೇಗೆ ನಡೆಸಬೇಕು ? ರಾತ್ರಿಯ ಸಮಯದಲ್ಲಿ ಯಾವ ಅಂಶಗಳ ಕಡೆ ನಿಗಾವಹಿಸಬೇಕು ಮತ್ತು ಎದುರಿನಿಂದ ವಾಹನಗಳು ಬರುತ್ತಿದ್ದರೆ ಅವರಿಗೆ ಯಾವ ರೀತಿಯಲ್ಲಿ ‘ಫೋಕಸ್’ ಅಥವಾ ಲೈಟ್ ಮೇಲೆ-ಕೆಳಗೆ (ಅಪ್ಪರ್-ಡಿಪ್ಪರ್) ಮಾಡಬೇಕು ?’, ಹೀಗೆ ಅನೇಕ ಸೂಕ್ಷ್ಮ ಅಂಶಗಳನ್ನು ಹೇಳುತ್ತಾರೆ.

೧ ಉ. ‘ದೂರದ ಪ್ರಯಾಣದಲ್ಲಿ ಸಾಧಕರಿಗೆ ವಿಶ್ರಾಂತಿ ಸಿಗಬೇಕು’, ಎಂದು ಸ್ವತಃ ಬೆನ್ನುನೋವು ಇದ್ದರೂ ರಥವನ್ನು ನಡೆಸುತ್ತಿರುವಾಗ ರಥದಲ್ಲಿ ಒಂದು ವಿಭಿನ್ನ ಚೈತನ್ಯ ಮತ್ತು ಊರ್ಜೆಯ ಅರಿವಾಗುತ್ತದೆ : ‘ಸಾಧಕರಿಗೆ ರಥ ನಡೆಸುತ್ತಿರುವಾಗ ನಿದ್ರೆ ಬರುತ್ತಿಲ್ಲವಲ್ಲ ?’, ಈ ಬಗ್ಗೆ ಪೂ. ಅಣ್ಣರವರು ಜಾಗರೂಕತೆಯಿಂದ ಇರುತ್ತಾರೆ. ಸಾಧಕರಿಗೆ ನಿದ್ರೆ ಬರುತ್ತಿದ್ದರೆ ಆಗ ಅವರು ರಥವನ್ನು ಪಕ್ಕದಲ್ಲಿ ನಿಲ್ಲಸಲು ಹೇಳಿ ಅವರಿಗೆ ಮುಖ ತೊಳೆಯಲು ಮತ್ತು ಕರ್ಪೂರ ಹಾಗೂ ಅತ್ತರನ ಉಪಾಯ ಮಾಡಲು ಹೇಳುತ್ತಾರೆ. ದೂರದ ಪ್ರಯಾಣದಲ್ಲಿ ‘ಸಾಧಕರಿಗೆ ವಿಶ್ರಾಂತಿ ಸಿಗಬೇಕು’, ಎಂದು ಪೂ. ಅಣ್ಣನವರಿಗೆ ಬೆನ್ನುನೋವಿನ ತೊಂದರೆಯಿದ್ದರೂ ಅವರು ಸ್ವತಃ ರಥವನ್ನು ನಡೆಸುತ್ತಾರೆ. ಪೂ. ಅಣ್ಣ ರಥವನ್ನು ಓಡಿಸುತ್ತಿರುವಾಗ ಒಂದು ವಿಭಿನ್ನ ಚೈತನ್ಯ ಮತ್ತು ಊರ್ಜೆಯ ಅರಿವಾಗುತ್ತದೆ. ಅವರು ರಥವನ್ನು ಓಡಿಸುವಾಗ ಮತ್ತು ನಾನು ಓಡಿಸುವಾಗ ವಾತಾವರಣದಲ್ಲಿನ ವ್ಯತ್ಯಾಸ ಕೂಡಲೇ ಅರಿವಾಗುತ್ತದೆ.

೨. ಗುಣವೈಶಿಷ್ಟ್ಯಗಳು

೨ ಅ. ‘ಸಾಧಕರ ಶೀಘ್ರ ಪ್ರಗತಿಯಾಗಬೇಕು’, ಎಂಬುದರ ತಳಮಳ ಇರುವುದು

೨ ಅ ೧. ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಆಯೋಜನೆ ಮಾಡುವುದು : ಪೂ. ರಮಾನಂದಣ್ಣ ಸಾಧಕರ ಮನಸ್ಸಿನಲ್ಲಿ ಗುರುದೇವರ ಮಹಾನತೆಯನ್ನು ಬಿಂಬಿಸುತ್ತಾರೆ. ‘ಸಾಧಕರು ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು’, ಎಂದು ಅವರು ಸಾಧಕರನ್ನು ನಿರಂತರ ಅಂತರ್ಮುಖಗೊಳಿಸಿ ಅವರ ವ್ಯಷ್ಟಿ- ಸಮಷ್ಟಿ ಸಾಧನೆಯ ಆಯೋಜನೆಯನ್ನು ಮಾಡಿಕೊಡುತ್ತಾರೆ. ಅವರು ಸಾಧಕರನ್ನು ನಿರಂತರ ಆನಂದ ಮತ್ತು ಉತ್ಸಾಹದಲ್ಲಿಯೂ ಇಡುತ್ತಾರೆ.

೨ ಅ ೨. ಸಾಧಕರು ಮಾಡಿದ ಆಯೋಜನೆಯಲ್ಲಿ ತಪ್ಪಿದ್ದರೆ ‘ಸಾಧಕರಿಂದ ಆ ತಪ್ಪು ಮತ್ತೊಮ್ಮೆ ಆಗಬಾರದು’, ಅದಕ್ಕಾಗಿ ಪೂ. ರಮಾನಂದಣ್ಣ ಸಾಧಕರಿಗೆ ದೃಷ್ಟಿಕೋನ ನೀಡುತ್ತಾರೆ.

೨ ಆ. ಪ್ರತಿಯೊಂದು ಕೃತಿ ಸಾತ್ತ್ವಿಕವಾಗಲು ಪ್ರಯತ್ನಿಸುವುದು

೨ ಆ ೧. ಕಲ್ಲಂಗಡಿ ಹಣ್ಣಿನ ಸಣ್ಣ ತುಂಡುಗಳನ್ನು ತಿನ್ನಲು ನೀಡಿದ್ದ ‘ಸ್ಟಿಕ್ಸ್’ (ಹಣ್ಣುಗಳ ತುಂಡುಗಳನ್ನು ತಿನ್ನಲು ಕೊಡಲಾಗುವ ಚೂಪಾದ ಕಡ್ಡಿ) ಹಿಂತಿರುಗಿಸಿ ಚಮಚದಿಂದ ತಿನ್ನುವುದು : ಒಂದು ದಿನ ಅವರ ಊಟವಾದ ಮೇಲೆ ನಾನು ಅವರಿಗೆ ಕಲ್ಲಂಗಡಿ ಹಣ್ಣಿನ ಸಣ್ಣ ತುಂಡುಗಳನ್ನು ಮತ್ತು ಅದನ್ನು ತಿನ್ನಲು ‘ಸ್ಟಿಕ್ಸ್’ (ತುಂಡುಗಳನ್ನು ತಿನ್ನಲು ಕೊಡಲಾಗುವ ಚೂಪಾದ ಕಡ್ಡಿ) ಕೊಡಲು ಹೋದೆ ಆಗ ಪೂ. ಅಣ್ಣನವರು ನನಗೆ “ಸ್ಟಿಕ್ಸ್ ನಿಂದ ಹಣ್ಣನ್ನು ಚುಚ್ಚಿ ತಿನ್ನಬಾರದು. ಹಣ್ಣುಗಳಿಗೆ ಚುಚ್ಚಿದರೆ ಒಳ್ಳೆಯ ಸ್ಪಂದನ ಬರುವುದಿಲ್ಲ’’ ಎಂದು ಹೇಳಿ ಸ್ಟಿಕ್ಸ್ಅನ್ನು ಹಿಂದಿರುಗಿಸಿ ಚಮಚ ತರಲು ಹೇಳಿದರು.

೨ ಇ. ಭಾವದ ಸಗುಣ ರೂಪ

೨ ಇ ೧. ಪೂ. ರಮಾನಂದಣ್ಣರವರಲ್ಲಿ ಇಷ್ಟು ಭಾವ ಇದೆ ಎಂದರೆ ಎಲ್ಲಾ ಸಾಧಕರು ಅವರ ಸ್ವಾಗತಕ್ಕಾಗಿ ಆತುರರಾಗಿರುತ್ತಾರೆ. ಪೂ. ಅಣ್ಣನವರನ್ನು ನೋಡುತ್ತಲೇ ಸಾಧಕರ ಕಣ್ಣುಗಳಿಂದ ಭಾವಾಶ್ರು ಬರುತ್ತದೆ ಮತ್ತು ಪೂ. ಅಣ್ಣನವರಿಗೂ ಸಾಧಕರ ಕಡೆ ನೋಡಿ ಭಾವಜಾಗೃತವಾಗುತ್ತದೆ.

೨ ಇ ೨. ಸಾಧಕರ ಮನಸ್ಸಿನಲ್ಲಿ ಸಾಧನೆ ಮಾಡುವ ಮಹತ್ವವನ್ನು ಭಾವಪೂರ್ಣವಾಗಿ ಬಿಂಬಿಸುವುದು : ಪೂ. ಅಣ್ಣ ಹಿಂದಿನ ದಿನ ‘ಸಾಧಕರ ಮಾರನೇ ದಿನದ ಆಯೋಜನೆ ಹೇಗೆ ಇರಲಿದೆ ?’, ಇದರ ವರದಿಯನ್ನು ತೆಗೆದುಕೊಂಡು ‘ಸಾಧಕರು ಇನ್ನು ಏನು ಮಾಡುವುದು ಅಪೇಕ್ಷಿತವಿದೆ ?’, ಇದರ ಬಗ್ಗೆ ಚಿಂತನೆ ಮಾಡಲು ಹೇಳುತ್ತಾರೆ. ಪೂ. ಅಣ್ಣ ಸಾಧಕರ ಮನಸ್ಸಿನಲ್ಲಿ ಸಾಧನೆ ಮಾಡುವ ಮಹತ್ವವನ್ನು ಯಾವ ರೀತಿಯಲ್ಲಿ ಬಿಂಬಿಸುತ್ತಾರೆ ಎಂದರೆ ಅದನ್ನು ಕೇಳಿಸಿಕೊಳ್ಳುವಾಗ ಸಾಧಕ ಮತ್ತು ಧರ್ಮಪ್ರೇಮಿಗಳಿಗೆ ಭಾವಜಾಗೃತಿಯಾಗುತ್ತದೆ. ಆ ಸಮಯದಲ್ಲಿ ಎಲ್ಲಾ ಸಾಧಕರು ಭಾವಾವಸ್ಥೆಯನ್ನು ಅನುಭವಿಸುತ್ತಾರೆ ಮತ್ತು ಪೂ. ಅಣ್ಣರವರಿಗೂ ಭಾವಜಾಗೃತಿ ಆಗುತ್ತದೆ.

೨ ಇ ೩. ಪರಾತ್ಪರ ಗುರುದೇವರ ಬಗೆಗಿನ ಅಪಾರ ಭಾವ ! : ಪರಮಪೂಜ್ಯರವರ ಬಗೆಗಿನ ಪೂ. ಅಣ್ಣರವರ ಭಾವ ಇಷ್ಟು ಇದೆ ಎಂದರೆ, ಅವರು ಪ್ರತಿಯೊಂದು ಮಾರ್ಗದರ್ಶನದ ಸಮಯದಲ್ಲಿ ‘ಹಮಾರೆ ಗುರುದೇವಜಿ’ (ನಮ್ಮ ಗುರುದೇವರು), ‘ಹಮಾರೆ ಗುರುಜಿ’, ‘ಹಮಾರೆ ಪರಮ ಪೂಜ್ಯ ಡಾಕ್ಟರ’, ಎಂದು ಹೇಳುತ್ತಿರುತ್ತಾರೆ. ‘ಸಬಕುಛ ಗುರು ಕಿ ಆಜ್ಞಾಸೆ ಹೊ ರಹಾ ಹೆ’ (ಎಲ್ಲವೂ ಗುರುಗಳ ಆಜ್ಞೆಯಿಂದ ಆಗುತ್ತಿದೆ), ಎಂದು ಪದೇ ಪದೇ ಹೇಳುತ್ತಿರುತ್ತಾರೆ. ‘ಪರಮ ಪೂಜ್ಯ ಗುರುದೇವ’, ಎಂದು ಹೇಳಿದಾಗಲೂ ಅವರಿಗೆ ಭಾವ ಜಾಗೃತಿ ಆಗುತ್ತದೆ.

೩. ಪ್ರಾರ್ಥನೆ

‘ಪೂ. ಅಣ್ಣ, ‘ನಮ್ಮನ್ನು ಸತತ ನಿಮ್ಮ ಸಾನಿಧ್ಯದಲ್ಲಿ ಇಟ್ಟುಕೊಳ್ಳಿ. ಸಾಧಕರಿಗೆ ನಿಮ್ಮ ಮಾರ್ಗದರ್ಶನವು ಅಖಂಡವಾಗಿ ಸಿಗಲಿ. ಈ ಘೋರ ಆಪತ್ಕಾಲದಲ್ಲಿ ನಮ್ಮಲ್ಲಿಯ ಸ್ವಭಾವದೋಷ ಮತ್ತು ಅಹಂಗಳ ಲಯವಾಗಲಿ ಮತ್ತು ಗುರುಗಳು ಹೇಳಿದ ತುತ್ತತುದಿಯ ತನಕ ನಮಗೆ ಕರೆದುಕೊಂಡು ಹೋಗಿ’, ಎಂದು ನಿಮ್ಮ ಚರಣಗಳಲ್ಲಿ ಶರಣಾಗತಭಾವದಿಂದ ಪ್ರಾರ್ಥನೆ ಮಾಡುತ್ತೇನೆ.’

– ಶ್ರೀ. ಸುಕೇಶ ಗುರವ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೬.೨೦೨೧)