೧. ಜೀವಾತ್ಮದಶೆ
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾರೆ, ಹಾಗೆಯೇ ರಾಷ್ಟ್ರ ಮತ್ತು ಧರ್ಮಗಳ ಬಗೆಗಿನಕಾರ್ಯಗಳನ್ನು ಮಾಡುತ್ತಾರೆ, ಆಗ ಅವರ ಅವಸ್ಥೆ ‘ಜೀವಾತ್ಮದಶೆ’ಯಲ್ಲಿರುತ್ತದೆ. ಈ ಅವಸ್ಥೆಯಲ್ಲಿ ಪರಾತ್ಪರ ಗುರು ಡಾಕ್ಟರರು ಈಶ್ವರನೊಂದಿಗೆ ಅಖಂಡ ಅನುಸಂಧಾನದಲ್ಲಿದ್ದು ಅವರಿಗೆ ಅಪೇಕ್ಷಿತವಿರುವ ಕಾರ್ಯವನ್ನು ಮಾಡುತ್ತಿರುತ್ತಾರೆ. ಈ ಅವಸ್ಥೆಯಲ್ಲಿ ಅವರು ಈಶ್ವರ ಅಥವಾ ಗುರುಗಳ ಬಗ್ಗೆ ‘ನಮ್ರತೆ, ಪ್ರೇಮ ಮತ್ತು ಅವರ ಶ್ರೇಷ್ಠತೆ’ಯನ್ನು ತಿಳಿದುಕೊಂಡು ಕಾರ್ಯವನ್ನು ಮಾಡುತ್ತಾರೆ. ಈ ವಿಷಯವು ಅವರಲ್ಲಿನ ಶಿಷ್ಯತ್ವಕ್ಕೆ ಸಂಬಂಧಿಸಿದೆ.
೨. ಶಿವಾತ್ಮದಶೆ
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಯಾವಾಗ ಸಮಷ್ಟಿಗೆ ಸಂಬಂಧಿಸಿದ ಸ್ಥೂಲದಲ್ಲಿ ಪ್ರತ್ಯಕ್ಷ ಕಾರ್ಯ ಇರುವುದಿಲ್ಲವೋ, ಆಗ ಅವರು ಶಿವಾತ್ಮದಶೆಯಲ್ಲಿರುತ್ತಾರೆ. ಆಗ ಅವರು ಈಶ್ವರನೊಂದಿಗೆ ದೊಡ್ಡ ಪ್ರಮಾಣದಲ್ಲಿ ಏಕರೂಪವಾಗಿರುತ್ತಾರೆ. ಆ ಸಮಯದಲ್ಲಿ ಅವರಿಗೆ ಶಿಷ್ಯತ್ವದ ಅರಿವು ಇರುವುದಿಲ್ಲ.
೩. ಮೇಲಿನ ವಿಷಯದ ಸಾರಾಂಶ
ಯಾವಾಗ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸಮಷ್ಟಿ ಕಾರ್ಯ ಇರುತ್ತದೆಯೋ, ಆಗ ಅವರು ‘ಈಶ್ವರ’ ಅಥವಾ ‘ಗುರು’ ಈ ತತ್ವಗಳ ಸೇವೆಯನ್ನು ಶಿಷ್ಯಭಾವದಲ್ಲಿ ಮಾಡುತ್ತಾರೆ. ಅದಕ್ಕನುಸರಿಸಿ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಿದ ಲೇಖನದಲ್ಲಿ ‘ಪರಾತ್ಪರ ಗುರು ಡಾಕ್ಟರರು ಸತತ ಶಿಷ್ಯಭಾವದಲ್ಲಿರುತ್ತಾರೆ’, ಎಂಬುದಾಗಿ ಹೇಳಲಾಗಿದೆ. ಅಷ್ಟೇ ಅಲ್ಲದೇ ಅವರು ಈಶ್ವರನೊಂದಿಗೆ ಏಕರೂಪತೆಯ ಅನುಭೂತಿಯನ್ನು ಸತತವಾಗಿ ಪಡೆಯುತ್ತಿರುತ್ತಾರೆ.
೪. ಗುರು ಮತ್ತು ಶಿಷ್ಯ
ಶಿಷ್ಯನು ಉತ್ತಮ ಸಾಧನೆಯನ್ನು ಮಾಡಿ ಕಾಲಾಂತರದಿಂದ ‘ಗುರುಪದವಿ’ಯಲ್ಲಿ ವಿರಾಜಮಾನನಾಗುತ್ತಾನೆ. ಆ ಸಮಯದಲ್ಲಿ ‘ಗುರು’ ಮತ್ತು ‘ಶಿಷ್ಯ’ ಇವರು ಆಧ್ಯಾತ್ಮಿಕದೃಷ್ಟಿಯಿಂದ ಏಕರೂಪರಾಗುತ್ತಾರೆ; ಆದರೆ ನಿಜವಾದ ಶಿಷ್ಯನು ಅವನ ‘ಶಿಷ್ಯತ್ವ’ ಎಂದರೆ ಶಿಷ್ಯನಲ್ಲಿರುವ ‘ಗುಣ’ ಮತ್ತು ‘ವೃತ್ತಿ’ ಎಂದಿಗೂ ಬಿಡುವುದಿಲ್ಲ. ಗುರುಪದವಿಯಲ್ಲಿದ್ದರೂ, ನಿಜವಾದ ಶಿಷ್ಯನು ಜೀವನವಿಡಿ ಅವನ ‘ಶಿಷ್ಯತ್ವ’ವನ್ನು ಕಾಪಾಡುತ್ತಾನೆ.
೫. ಗುರುಗಳೊಂದಿಗೆ ಏಕರೂಪವಾಗಿರುವ ಶಿಷ್ಯನು ಜೀವನವಿಡಿ ‘ಶಿಷ್ಯತ್ವ’ವನ್ನು ಕಾಪಾಡುವುದರಿಂದಾಗುವ ಲಾಭ
ಅ. ಶಿಷ್ಯಭಾವದಲ್ಲಿರುವುದರಿಂದ ಜೀವಕ್ಕೆ ಸತತ ಆನಂದ ಸಿಗುತ್ತದೆ.
ಆ. ಗುರುಪದವಿಯು ಪ್ರಾಪ್ತವಾದರೂ ಅವನಲ್ಲಿ ಅಹಂ ಎಂದಿಗೂ ನಿರ್ಮಾಣವಾಗುವುದಿಲ್ಲ.
ಇ. ಶಿಷ್ಯನು ಆಧ್ಯಾತ್ಮಿಕ ಪ್ರಗತಿಯ ಶಿಖರವನ್ನು ತಲುಪುತ್ತಾನೆ ಮತ್ತು ಅವನ ಸ್ಥಾನವು ಅಲ್ಲಿಂದ ಎಂದಿಗೂ ಕೆಳಗೆ ಬರುವುದಿಲ್ಲ ಅಥವಾ ಕುಸಿಯುವುದಿಲ್ಲ.
ಈ. ಗುರುಗಳೊಂದಿಗೆ ಏಕರೂಪವಾದ ನಂತರವೂ ಶಿಷ್ಯ ಭಾವದಲ್ಲಿರುವ ಗುರುಗಳು ಸಮಷ್ಟಿಗಾಗಿ ಯಾವಾಗಲೂ ಆದರ್ಶವಾಗಿರುತ್ತಾರೆ. ಇದರ ಒಂದು ಉದಾಹರಣೆಯೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು.’
– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೬.೨೦೨೨)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶಿಷ್ಯಭಾವದಲ್ಲಿರುವ ಒಂದು ಉದಾಹರಣೆ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಶಿಷ್ಯಭಾವದಲ್ಲಿ ಹೇಗಿರುತ್ತಾರೆ ?’ ಎಂಬ ಒಂದು ಉದಾಹರಣೆಯನ್ನು ಮುಂದೆ ಕೊಡಲಾಗಿದೆ. ರಾಮನಾಥಿ (ಗೋವಾ) ಸನಾತನದ ಆಶ್ರಮದ ಧ್ಯಾನಮಂದಿರದಲ್ಲಿ ಸನಾತನ ಸಂಸ್ಥೆಯ ಗುರುಪರಂಪರೆಯ ಗುರುಗಳ ಛಾಯಾಚಿತ್ರಗಳನ್ನು ಇಡಲಾಗಿವೆ. ಅವುಗಳಲ್ಲಿರುವ ತಮ್ಮ ಛಾಯಾಚಿತ್ರದ ಕೆಳಗೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ‘ಶಿಷ್ಯ ಡಾ. ಆಠವಲೆ’, ಎಂದು ಬರೆದಿದ್ದಾರೆ.’ – ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೬.೨೦೨೨) |