ಪರಾತ್ಪರ ಗುರುದೇವ ಡಾ. ಆಠವಲೆಯವರ ರಥೋತ್ಸವ ಮಹೋತ್ಸವದ ಲಾಭವನ್ನು ನಿಜವಾದ ಅರ್ಥದಲ್ಲಿ ಪಡೆದ ಶೇ. ೬೬ ರಷ್ಟು ಆಧ್ಯಾತ್ಮಿಕ ಮಟ್ಟದ ದೈವೀ ಬಾಲಕಿ ಕು. ಶ್ರೀಯಾ ಅನಿರುದ್ಧ ರಾಜಂದೇಕರ (ವಯಸ್ಸು ೧೧ ವರ್ಷ) !

ಕು. ಶ್ರೀಯಾ ರಾಜಂದೇಕರ

ರಥೋತ್ಸವ ಸಮಾರಂಭವು ಸಂಪನ್ನವಾದಾಗಿನಿಂದ ಮನಸ್ಸು ಶಾಂತ, ಆನಂದ ಮತ್ತು ನಿರ್ವಿಚಾರ ಸ್ಥಿತಿಯಲ್ಲಿರುವುದೆಂದು ಅನುಭವಿಸುವುದು

‘೨೨.೫.೨೦೨೨ ರಂದು ಪರಾತ್ಪರ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಜನ್ಮೋ ತ್ಸವದ ನಿಮಿತ್ತವಾಗಿ ರಾಮನಾಥಿ ಆಶ್ರಮದಲ್ಲಿ ರಥೋತ್ಸವ ಮಹೋತ್ಸವವು ನೆರವೇರಿತು. ಆ ದಿನದಿಂದ ನನ್ನ ಮನಸ್ಸು ಪೂರ್ಣವಾಗಿ ಶಾಂತ, ಆನಂದ ಮತ್ತು ಸ್ಥಿರವಾಗಿದೆ. ನನ್ನ ಮನಸ್ಸು ಅಖಂಡ ನಿರ್ವಿಚಾರ ಸ್ಥಿತಿಯಲ್ಲಿದ್ದು ಮನಸ್ಸಿನಲ್ಲಿ ಅಖಂಡವಾಗಿ ‘ನಿರ್ವಿಚಾರ’ ಈ ನಾಪಜಪವು ನಡೆಯುತ್ತಿರುತ್ತದೆ. ಮನಸ್ಸಿನಲ್ಲಿ ಬೇರೆ ಯಾವುದೇ  ವಿಷಯದ ಬಗ್ಗೆ ವಿಚಾರಗಳು ಬಂದರೆ, ತಕ್ಷಣ ರಥದಲ್ಲಿರುವ ಗುರುದೇವರ ಸುಂದರ ರೂಪವು ಕಣ್ಣುಗಳ ಮುಂದೆ ಬಂದು ನನ್ನ ಮನಸ್ಸು ಶಾಂತವಾಗುತ್ತದೆ. ಗುರುದೇವರ ಕೃಪೆಯಿಂದಲೇ ನಾನು ಇದನ್ನು ಅನುಭವಿಸಲು ಸಾಧ್ಯವಾಯಿತು.

೨. ಅನುಭೂತಿಯ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಪ್ರಶಂಸೆಯುಕ್ತ ನುಡಿ

ಪರಾತ್ಪರ ಗುರುದೇವರಿಗೆ ಈ ಅನುಭೂತಿಯನ್ನು ತಿಳಿಸಿದ ನಂತರ ಅವರು, “ಬಹಳ ಒಳ್ಳೆಯ ಅನುಭೂತಿ ಇದೆ. ನಿನಗೆ ಬಂದ ಹಾಗೆ, ಅನುಭೂತಿಯು ಬೇರೆ ಯಾರಿಗೂ ಬರುವುದಿಲ್ಲ. ನೀನೊಬ್ಬಳೇ ನಿಜವಾದ ಅರ್ಥದಿಂದ ಈ ರಥೋತ್ಸವದ ಲಾಭವನ್ನು ಪಡೆದಿರುವೆ”, ಎಂದು ಸಂದೇಶ ನೀಡಿದರು.

೩. ಕೃತಜ್ಞತೆ

‘ಗುರುದೇವರೆ ನನ್ನಿಂದ ಈ ಅನುಭೂತಿಯನ್ನು ಬರೆಸಿಕೊಂಡರು ಮತ್ತು ನನಗೆ ಅವರನ್ನು ಅನುಭವಿಸುವ ಅವಕಾಶವನ್ನು ಕೊಟ್ಟರು. ಅದಕ್ಕಾಗಿ ನಾನು ಅವರ ಚರಣಗಳಲ್ಲಿ ಎಷ್ಟೇ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಇದೆ.’

– ಕು. ಶ್ರೀಯಾ ಅನಿರುದ್ಧ ರಾಜಂದೇಕರ (ಆಧ್ಯಾತ್ಮಿಕ ಮಟ್ಟ ಶೇ. ೬೬, ವಯಸ್ಸು ೧೧ ವರ್ಷ), ಫೋಂಡಾ, ಗೋವಾ. (೧.೭.೨೦೨೨)