ಅಲ್ಪಸಂಖ್ಯಾತ ಹಿಂದೂ, ಕ್ರೈಸ್ತ ಮತ್ತು ಸಿಖ್ ಧರ್ಮದ ಕೈದಿಗಳಿಗೆ ಅವರ ಧರ್ಮಗ್ರಂಥವನ್ನು ಪಠಿಸಿದರೇ ಅವರ ಶಿಕ್ಷೆಯಲ್ಲಿ ೩ ರಿಂದ ೬ ತಿಂಗಳ ರಿಯಾಯತಿ ಸಿಗಲಿದೆ !

ಪಾಕಿಸ್ತಾನದ ಪಂಜಾಬ ಸರಕಾರದ ಪ್ರಸ್ತಾಪ

ಲಾಹೋರ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬನಲ್ಲಿ ನೂತನ ಸರಕಾರವು ರಾಜ್ಯದ ಕಾರಾಗೃಹದ ಕೈದಿಗಳಲ್ಲಿ ಹಿಂದು, ಕ್ರೈಸ್ತ ಮತ್ತು ಸಿಖ್ ಈ ಅಲ್ಪಸಂಖ್ಯಾತ ಧರ್ಮದ ಕೈದಿಗಳಿಗೆ ಒಂದು ಪ್ರಸ್ತಾಪವನ್ನು ನೀಡಲಿದ್ದಾರೆ. ‘ಒಂದು ವೇಳೆ ಅವರು ಅವರ ಧರ್ಮದ ಧರ್ಮಗ್ರಂಥವನ್ನು (ಶ್ರೀಮದಭಗವದ್ಗೀತೆ, ಬೈಬಲ್ ಮತ್ತು ಗುರುಗ್ರಂಥ ಸಾಹಿಬ) ಪಠಿಸಿದರೆ, ಅವರಿಗೆ ಅವರ ಶಿಕ್ಷೆಯಲ್ಲಿ ೩ ರಿಂದ ೬ ತಿಂಗಳುಗಳ ರಿಯಾಯತಿ ನೀಡಲಾಗುವುದು’, ಪಂಜಾಬ ಪ್ರಾಂತ್ಯದ ಗೃಹಸಚಿವಾಲಯದ ಓರ್ವ ಅಧಿಕಾರಿಯು, ‘ಈ ಸಂದರ್ಭದಲ್ಲಿ ಪ್ರಸ್ತಾಪವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ. ಮಂತ್ರಿಮಂಡಳದ ಸಮ್ಮತಿಯ ಬಳಿಕ ಈ ಯೋಜನೆ ಜಾರಿಗೊಳಿಸಲಾಗುವುದು’, ಸಧ್ಯಕ್ಕೆ ಪಂಜಾಬ ಪ್ರಾಂತ್ಯದ ೩೪ ಕಾರಾಗೃಹಗಳಲ್ಲಿ ೧ ಸಾವಿರ ೧೮೮ ಅಲ್ಪಸಂಖ್ಯಾತ ಸಮಾಜದ ಕೈದಿಗಳು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

೧. ಮಾರ್ಚ ತಿಂಗಳಿನಲ್ಲಿ ಓರ್ವ ಕ್ರೈಸ್ತ ಕೈದಿಯು ಲಾಹೋರ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಅಲ್ಪಸಂಖ್ಯಾತ ಸಮಾಜದ ಕೈದಿಗಳಿಗೆ ಶಿಕ್ಷೆಯಲ್ಲಿ ರಿಯಾಯತಿ ನೀಡುವಂತೆ ಮನವಿ ಸಲ್ಲಿಸಿದ್ದನು. ಅದರಲ್ಲಿ ಆತ ‘ಪಾಕಿಸ್ತಾನ ಕಾರಾಗೃಹ ನಿಯಮ ೧೯೭೮’ನ ಕಲಂ ೨೧೫ ರ ಪ್ರಕಾರ ‘ಮುಸಲ್ಮಾನ ಕೈದಿಗಳಿಗೆ ಶಿಕ್ಷೆಯಲ್ಲಿ ರಿಯಾಯತಿ ನೀಡಲಾಗುತ್ತದೆ, ಅದೇ ರೀತಿ ಅಲ್ಪಸಂಖ್ಯಾತ ಧರ್ಮದ ಕೈದಿಗಳಿಗೂ ಸಿಗಬೇಕು’, ಎಂದು ಹೇಳಿದ್ದರು.

೨. ಮುಸಲ್ಮಾನ ಕೈದಿಗಳಿಗೆ ಕುರಾನ ಪಠಿಸಿದರೆ ೬ ತಿಂಗಳಿನಿಂದ ೨ ವರ್ಷಗಳ ವರೆಗೆ ಶಿಕ್ಷೆಯಲ್ಲಿ ರಿಯಾಯತಿ ನೀಡುವ ಪ್ರಸ್ತಾವನೆಯಿದೆ. ಈ ಪ್ರಸ್ತಾವನೆಗೆ ಮಂತ್ರಿಮಂಡಳದ ಅನುಮತಿ ಪಡೆಯುವುದು ಆವಶ್ಯಕವಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಹಿಂದೂ ಕೈದಿಗಳಿಗೆ ಸಾಧನೆಯನ್ನು ಕಲಿಸಿ ಅವರಿಂದ ಧರ್ಮಾಚರಣೆಯನ್ನು ಮಾಡಿಸಿಕೊಳ್ಳುವುದು ಆವಶ್ಯಕವಿದೆ ! ಹೀಗೆ ಮಾಡುವುದರಿಂದ ಅವರಲ್ಲಿರುವ ಅಪರಾಧದ ವೃತ್ತಿ ಬದಲಾವಣೆಗೊಂಡು ಅವರಲ್ಲಿ ಸುಧಾರಣೆಯಾಗಬಹುದು !