ಲಡಾಖ್ ಗಡಿ ಭಾಗದಿಂದ ಯುದ್ಧವಿಮಾನಗಳು ದೂರ ಇರಿಸಬೇಕು ! – ಚೀನಾಗೆ ಎಚ್ಚರಿಕೆ ನೀಡಿದ ಭಾರತ

ಹೊಸ ದೆಹಲಿ – ಲಡಾಖ್ ಗಡಿಯಲ್ಲಿ ಚೀನಾ ತನ್ನ ಯುದ್ಧವಿಮಾನ ಹಾರಿಸಿದ ಪ್ರಕರಣದಲ್ಲಿ ಚೀನಾಗೆ ಎಚ್ಚರಿಕೆ ನೀಡಿದೆ. ಚೀನಾ ಅದರ ವಿಮಾನಗಳನ್ನು ಗಡಿಯಿಂದ ದೂರ ಇರಿಸಬೇಕೆಂದು ಭಾರತ ಚೀನಾಗೆ ತಿಳಸಿದೆ. ಈ ಸಂದರ್ಭದಲ್ಲಿ ಆಯೋಜಿಸಲಾದ ಎರಡೂ ದೇಶಗಳ ಸೈನ್ಯಧಿಕಾರಿಗಳ ಬೈಠಕಿನಲ್ಲಿ ಈ ಎಚ್ಚರಿಕೆ ನೀಡಲಾಯಿತು. ಕೆಲವು ದಿನಗಳ ಹಿಂದೆ ಚೀನಾದ ಯುದ್ಧ ವಿಮಾನ ಭಾರತದ ಗಡಿಯ ಹತ್ತಿರ ಬಂದಿತ್ತು. ಚೀನಾ ತೈವಾನ ಗಡಿಯ ಹತ್ತಿರ ೧೬ ಕಿಲೋಮೀಟರ್ ಅಂತರದಲ್ಲಿ ಸೈನ್ಯ ಅಭ್ಯಾಸ ನಡೆಸುತ್ತಿತ್ತು.

ಭಾರತ ಸತತವಾಗಿ ಚೀನಾ ಗಡಿಯ ಮೇಲೆ ಗಮನ ಇಟ್ಟಿದೆ. ನಾವು ಅಲ್ಲಿ ನಮ್ಮ ಯುದ್ಧವಿಮಾನ ಹಾಗೂ ರಡಾರ ಸಿದ್ಧವಾಗಿಟ್ಟಿದ್ದೇವೆ, ಅದರ ಮೂಲಕ ಆಕಾಶದಲ್ಲಿ ನಡೆಯುವ ಚಲನವಲನಗಳ ಮೇಲೆ ಗಮನ ಇಡಲಾಗುವುದು ಎಂದು ಈ ಸಂದರ್ಭದಲ್ಲಿ ವಾಯುದಳದ ಪ್ರಮುಖ ವಿ ಆರ್ ಚೌಧರಿ ಇವರು ಹೇಳಿದರು.

ಸಂಪಾದಕೀಯ ನಿಲುವು

ಚೀನಾ ಇಂತಹ ಎಚ್ಚರಿಕೆ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ಭಾರತ ಕೂಡ ತನ್ನ ಯುದ್ಧವಿಮಾನಗಳನ್ನು ಗಡಿಯ ಹತ್ತಿರ ಹಾರಿಸಬೇಕು ಮತ್ತು ಸೇರಿಗೆ ಸವ್ವಾಸೇರು ಪ್ರತ್ಯುತ್ತರ ನೀಡಬೇಕು.