ಪಾಕಿಸ್ತಾನ ಸೈನ್ಯದ ಹೆಲಿಕಾಪ್ಟರ್ ಹೊಡೆದುರುಳಿಸಿದ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಘಟನೆ !

ಭಾರತವಿರೋಧಿ ಸೈನ್ಯದ ಅಧಿಕಾರಿ ಸೇರಿ ೬ ಅಧಿಕಾರಿಗಳು ಸಾವನ್ನಪ್ಪಿದ್ದಾರೆ !

ಪಾಕಿಸ್ತಾನಿ ಸೈನ್ಯದ ಹೆಲಿಕಾಪ್ಟರಿನ ಅವಶೇಷ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನಿ ಸೈನ್ಯದ ಒಂದು ಹೆಲಿಕಾಪ್ಟರ್ ಆಗಸ್ಟ್ ಒಂದರಂದು ಸಂಜೆ ನಾಪತ್ತೆ ಆಗಿತ್ತು. ಮರುದಿನ ಅದು ಬಲೂಚಿಸ್ತಾನದಲ್ಲಿ ಪತನವಾಗಿದ್ದು ತಿಳಿದು ಬಂತು. ಇದರಲ್ಲಿ ಪಾಕಿಸ್ತಾನದ ಕ್ವೆಟಾದ ೧೨ ನೇ ಕೊರ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸರಫರಾಜ ಅಲಿ ಪ್ರಯಾಣಿಸುತ್ತಿದ್ದರು. ಅವರು ಭಾರತವನ್ನು ಕಟುವಾಗಿ ದ್ವೇಷಿಸುವ ಸೈನ್ಯಾಧಿಕಾರಿಯಾಗಿದ್ದರು. ಈ ಹೆಲಿಕಾಪ್ಟರ್ ಹೊಡೆದುರುಳಿಸಿದ ಹೊಣೆಯನ್ನು ಬಲೂಚಿಸ್ತಾನದ ಸ್ವಾತಂತ್ರಕ್ಕಾಗಿ ಹೋರಾಡುವ ‘ಬಲೂಚ ರಾಜ ಆಜೋಯಿ ಸಂಘ’ ಹೊತ್ತುಕೊಂಡಿದೆ ಎಂದು ಸಂಘಟನೆಯ ‘ದಿ ಬಲೂಚಿಸ್ತಾನ್ ಪೋಸ್ಟ್’ ಜಾಲತಾಣದಲ್ಲಿ ವರದಿಯಾಗಿದೆ.


ಈ ಘಟನೆಯ ಹಿಂದೆ ಅಲ್ ಕೈದಾ ಮತ್ತು ಬಲೂಚ ಸಂಘಟನೆಗಳ ಕೈವಾಡ ಇರುವುದು ಹೇಳಲಾಗುತ್ತಿದೆ. ಒಂದು ದಿನ ಮೊದಲು ಅಮೆರಿಕಾ ಅಲ್ ಕೈದಾದ ಮುಖಂಡ ಅಲ್ ಜವಾಹಿರಿಯ ಹತ್ಯೆ ಮಾಡಿತ್ತು. ಅದಕ್ಕಾಗಿ ಪಾಕಿಸ್ತಾನವು ಅಮೆರಿಲಾಕ್ಕೆ ಸಹಾಯ ನೀಡಿರುವುದಾಗಿ ಅನುಮಾನಿಸಲಾಗುತ್ತಿದೆ. ಆದ್ದರಿಂದ ಅಲ್ ಕೈದಾ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನದ ಸೈನ್ಯದ ಅಧಿಕಾರಿಗಳ ಹೆಲಿಕಾಪ್ಟರ್ ಉರುಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.