‘ನಿಜ ಹೇಳಬೇಕೆಂದರೆ ಮೊಡವೆ, ತುರಿಕೆ ಇದು ನನ್ನ ವಿಷಯವಲ್ಲ; ಆದರೆ ನನ್ನ ಬಳಿ ಬರುವ ರೋಗಿಗಳು ನನಗೆ ಅನೇಕ ರೀತಿಯ ಸಂಶಯಗಳನ್ನು ಕೇಳುತ್ತಾರೆ. ಮುಖದ ಮೇಲಿನ ಮೊಡವೆ ಮತ್ತು ತುರಿಕೆಯ ವಿಷಯದಲ್ಲಿ ಇನ್ನೂ ೨-೩ ರೋಗಿಗಳು ಕೂಡ ಕೇಳಿದರು. ಆಗ ನಾನು ಈ ವಿಷಯದ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿದೆನು. ಆಗ ನನ್ನ ಗಮನಕ್ಕೆ ಬಂದ ಅಂಶವೆಂದರೆ ರೋಗಿಗಳು ಉಪಯೋಗಿಸುತ್ತಿರುವ ಸೌಂದರ್ಯವರ್ಧಕಗಳಲ್ಲಿ ‘ಪ್ಯಾರಾಬೆನ್ಸ (ಸೌಂದರ್ಯವರ್ಧಕಗಳು ಬಾಳಿಕೆ ಬರಲು ಉಪಯೋಗಿಸುವ ಸಂರಕ್ಷಕ ರಾಸಾಯನಿಕ) ಉಪಯೋಗಿಸಲಾಗುತ್ತಿದೆ.
೧. ‘ಪ್ಯಾರಾಬೆನ್ಸ ಇರುವ ಸೌಂದರ್ಯವರ್ಧಕಗಳಿಂದ ದೂರವಿರಿ !
ನಾವು ದಿನನಿತ್ಯ ಉಪಯೋಗಿಸುತ್ತಿರುವ ಬಹಳಷ್ಟು ವಸ್ತು ಗಳಲ್ಲಿ ‘ಪ್ಯಾರಾಬೆನ್ಸಅನ್ನು ಬಾಳಿಕೆ ಬರುವ ವಸ್ತುವೆಂದು ಉಪಯೋಗಿಸಲಾಗುತ್ತದೆ. ಉದಾ. ಸೌಂದರ್ಯವರ್ಧಕ, ಕೂದಲು ಮತ್ತು ‘ಶೇವಿಂಗ ಕ್ರಮ ಇವುಗಳಿಗೆ ಬೇಕಾಗುವ ವಸ್ತುಗಳು, ದುರ್ಗಂಧನಾಶಕ, ಸ್ವಚ್ಛತೆಗಾಗಿ ಬೇಕಾಗುವ ವಿವಿಧ ಉತ್ಪಾದನೆಗಳು, ಡಿಟರ್ಜೆಂಟ ಪೌಡರ ಇತ್ಯಾದಿ. ‘ಪ್ಯಾರಾಬೆನ್ಸ ಈ ರಾಸಾಯನಿಕ ಮಾನವನ ಶರೀರದಲ್ಲಿ ಸಹಜವಾಗಿ ಹೀರಲ್ಪಡುತ್ತದೆ. ಅವುಗಳ ರಾಸಾಯನಿಕ ರಚನೆ ಮಾನವನ ಶರೀರದಲ್ಲಿರುವ ಹಾರ್ಮೊನ್ಸಗಳೊಂದಿಗೆ ಹೊಂದಾಣಿಕೆಯಾಗುವುದರಿಂದ ಅದರಿಂದ
ಶರೀರದಲ್ಲಿರುವ ಹಾರ್ಮೋನ್ಸಗಳ ಸಮತೋಲನ ಅಪಾಯಕ್ಕೆ ಒಳಗಾಗಬಹುದು. ಅದನ್ನು ‘ಇಂಡೊಕ್ರಾಯಿನ್ ಡಿಸ್ರಪ್ಟರ್ (ಅಂತಃಸ್ರಾವ ಅಡ್ಡಿಗಳು) ಎಂದು ಕರೆಯುತ್ತಿದ್ದು, ಅದು ಅಪಾಯಕಾರಿಯಾಗಿರುತ್ತದೆ. ಅದು ನಮ್ಮ ಶರೀರದಲ್ಲಿ ಬಹಳ ಕಾಲದ ವರೆಗೆ ಉಳಿದರೆ ಆರೋಗ್ಯದ ಮೇಲೆ ಗಂಭೀರ ಪರಿ ಣಾಮ ಬೀರಬಹುದು. ಇದು ಪ್ರಜನನಕ್ಷಮತೆಯ ಮೇಲೆ ವಿಪರೀತ ಪರಿಣಾಮ ಬೀರುವುದು, ತ್ವಚೆಯ ವಿವಿಧ ರೋಗ ಗಳಾಗುವುದು ಮತ್ತು ಕೆಲವೊಮ್ಮೆ ಅರ್ಬುದರೋಗವೂ ಬರಬಹುದು. ಇದರಿಂದ ನಮ್ಮ ಶರೀರದ ಸಂಪರ್ಕಕ್ಕೆ ಬರುವ ವಸ್ತುಗಳಲ್ಲಿ ‘ಪ್ಯಾರಾಬೆನ್ಸ ಇಲ್ಲವೆನ್ನುವುದನ್ನು ದೃಢ ಪಡಿಸಿಕೊಳ್ಳುವುದು ಆವಶ್ಯಕವಾಗಿದೆ. ಇತ್ತೀಚೆಗೆ ‘ಪ್ಯಾರಾಬೆನ್ಸ ಫ್ರೀ ಇರುವ ಬಹಳಷ್ಟು ಸೌಂದರ್ಯವರ್ಧಕಗಳು ಲಭ್ಯವಿದೆ. ಆದುದರಿಂದ ಖರೀದಿಸುವಾಗ ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಖರೀದಿಸುವುದು ಮಹತ್ವದ್ದಾಗಿದೆ.
೨. ನಿತ್ಯೋಪಯೋಗಿ ವಸ್ತುಗಳಲ್ಲಿ ಚರ್ಮದ ಮೇಲೆ ದುಷ್ಪರಿಣಾಮ ಬೀರುವ ‘ಸೋಡಿಯಮ್ ಲಾಯರ್ಲ ಸಲ್ಫೇಟ ರಾಸಾಯನಿಕ ಇಲ್ಲವಲ್ಲ ಎಂದು ಪರಿಶೀಲಿಸಿ !
‘ಪ್ಯಾರಾಬೆನ್ಸನಂತಹುದೇ ಮತ್ತೊಂದು ರಾಸಾಯನಿಕವೆಂದರೆ ‘ಸೋಡಿಯಂ ಲಾಯರ್ಲ ಸಲ್ಫೇಟ. ಇದು ‘ಸರಫೆಕ್ಟೆಂಟ್ ಆಗಿ ನಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುತ್ತಿರುವ ಬಹಳಷ್ಟು ವಸ್ತುಗಳಲ್ಲಿರುತ್ತದೆ. ನೀರು ಮತ್ತು ಎಣ್ಣೆಯನ್ನು ಒಂದು ಗೂಡಿಸುವುದಿದ್ದರೆ, ‘ಸರಫೆಕ್ಟಂಟ ಉಪಯೋಗ ಆವಶ್ಯಕವಿರುತ್ತದೆ. ಇದರಿಂದ ಸಿದ್ಧವಾಗುವ ಪದಾರ್ಥಗಳಿಗೆ ನೊರೆ ಬರುತ್ತದೆ. ಟೂತಪೇಸ್ಟ, ಶಾಂಪೂ, ಸೌಂದರ್ಯವರ್ಧಕಗಳು ಇತ್ಯಾದಿ ವಸ್ತುಗಳಲ್ಲಿ ‘ಸೋಡಿಯಮ್ ಲಾಯರ್ಲ ಸಲ್ಫೇಟ ಉಪಯೋಗಿಸಲಾಗುತ್ತದೆ, ಈ ರಾಸಾಯನಿಕದಿಂದ ಬಹಳಷ್ಟು ಜನರ ತ್ವಚೆಯ ಮೇಲೆ ತುರಿಕೆ, ಗುಳ್ಳೆಗಳು ಏಳುವುದು, ಬಾವು ಬರುವುದು ಮುಂತಾದ ಪರಿಣಾಮ ಕಂಡು ಬರುತ್ತದೆ. ಯಾರಿಗೆ ಇಂತಹ ತೊಂದರೆಗಳು ಆಗುತ್ತವೆಯೋ, ಅವರು ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ತಪ್ಪದೇ ಪರಿಶೀಲಿಸಬೇಕು. ಜೀವಸತ್ವ ತೆಗೆದುಕೊಂಡರೂ ನಿರಂತರವಾಗಿ ಮುಖದ ಮೇಲೆ ಮೊಡವೆಗಳು ಬರುತ್ತಿದ್ದರೆ ‘ಸೋಡಿಯಮ್ ಲಾಯರ್ಲ ಸಲ್ಫೇಟ ಇಲ್ಲದಿರುವ ಟೂತಪೇಸ್ಟ ಉಪಯೋಗಿಸಿ ಪರಿಶೀಲಿಸಬಹುದು.
೩. ‘ಸ್ಯಾಟೈಸರ್ನ ‘ಟ್ರೈಕ್ಲೋಸನ್ ಎಂಬ ರಾಸಾಯನಿಕ ಆರೋಗ್ಯಕ್ಕೆ ಹಾನಿಕರವಾಗಿದ್ದು, ಅದರ ಉಪಯೋಗದಿಂದ ಬಾಲಕಿಯರಲ್ಲಿ ಮಾಸಿಕ ಸರದಿ ಬೇಗನೇ ಆಗುವುದು !
ಕಳೆದ ೨ ವರ್ಷಗಳಲ್ಲಿ ಕೊರೊನಾ ಮಹಾಮಾರಿಯಿಂದ ‘ಸ್ಯಾನಿಟೈಸರ್ ಮನೆಮನೆಗೆ ತಲುಪಿತು. ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಈಗಲೂ ‘ಸ್ಯಾನಿಟೈಸರ್ ಉಪ ಯೋಗಿಸುತ್ತಿದ್ದಾರೆ. ‘ಸ್ಯಾನಿಟೈಸರ ಖರೀದಿಸುವಾಗಲೂ ಅದನ್ನು ಸರಿಯಾಗಿ ಪರಿಶೀಲಿಸಿ ಖರೀದಿಸುವುದು ಅತ್ಯಾವಶ್ಯಕವಾಗಿದೆ. ಕಾರಣ ಅದರಲ್ಲಿ ‘ಟ್ರೈಕ್ಲೊಸನ ಹೆಸರಿನ ರಾಸಾಯನಿಕ ಇದ್ದರೆ ಅದು ಅಪಾಯಕಾರಿಯಾಗಿದೆ. ‘ಟ್ರೈಕ್ಲೊಸನ ಇದು ಮಾನವನ ಶರೀರದಲ್ಲಿ ಹಾಮೋನ್ಸ ಮೇಲೆ ಪರಿಣಾಮ ಬೀರಬಹುದು. ಇದೂ ‘ಇಂಡೋಕ್ರಾಯಿನ್ ಡಿಸ್ರಪ್ಟರ ವರ್ಗಕ್ಕೆ ಸೇರುತ್ತದೆ.
ಡಾ. ವಾಮನ ಖಾಡಿಲಕರ ಇವರು ಪುಣೆಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ಮಾಡುವ ಹಾರ್ಮೋನ್ಸ ತಜ್ಞರಾಗಿದ್ದಾರೆ. ಅವರು ಕೈಕೊಂಡ ಸಂಶೋಧನೆಯ ಅನುಸಾರ ಕಳೆದ ೨ ವರ್ಷಗಳಲ್ಲಿ ಕೊರೊನಾ ಮಹಾಮಾರಿಯ ಕಾಲದಲ್ಲಿ ಬಾಲಕಿಯರಲ್ಲಿ ಮಾಸಿಕ ಸರದಿಯು ಅವಧಿಯ ಮೊದಲೇ ಪ್ರಾರಂಭ ವಾಗುವ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆ. ಇದರ ಕಾರಣವನ್ನು ಅಧ್ಯಯನ ಮಾಡಿದಾಗ ಗಮನಕ್ಕೆ ಬಂದಿರುವುದೇನೆಂದರೆ, ಬಾಲಕಿ ಮನೆಯಲ್ಲಿ ಬಂಧಿಸಲ್ಪಟ್ಟಿದ್ದರಿಂದ ಮಾನಸಿಕ ಪರಿಣಾಮ, ವ್ಯಾಯಾಮದ ಕೊರತೆ, ಹೆಚ್ಚಿದ ತೂಕ ಇದರೊಂದಿಗೆ ‘ಟ್ರೈಕ್ಲೊಸನ್ ಮಿಶ್ರಿತ ‘ಸ್ಯಾನಿಟೈಸರ ಬಳಕೆಯ ಪರಿಣಾಮ ಕಂಡುಬಂದಿತು. ಇದು ಅಪಾಯಕಾರಿ ಯಾಗಿದೆ. ಈ ವಿಷಯದಲ್ಲಿ ಜನರಲ್ಲಿ ಜಾಗರೂಕತೆ ಮೂಡುವುದು ಅತ್ಯಂತ ಆವಶ್ಯಕವಾಗಿದೆ. ಇದರಿಂದ ‘ಸ್ಯಾನಿಟೈಸರ್ ಖರೀದಿಸುವಾಗ ಅದರಲ್ಲಿ ‘ಟ್ರೈಕ್ಲೊಸನ ಇಲ್ಲವೆನ್ನುವುದನ್ನು ತಪ್ಪದೇ ಪರಿಶೀಲಿಸಿರಿ.
೪. ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ರಾಸಾಯನಿಕಗಳ ವಿಷಯದಲ್ಲಿ ಜಾಗರೂಕರಾಗಿದ್ದರೆ, ವಿವಿಧ ರೋಗಗಳಿಂದ ರಕ್ಷಣೆಯಾಗುವುದು !
ಸದ್ಯದ ಮಾಲಿನ್ಯಗ್ರಸ್ತ ವಾತಾವರಣದಲ್ಲಿ ಈಗಲೂ ಕೆಲವು ‘ಇಂಡೊಕ್ರಾಯಿನ್ ಡಿಸ್ರಪ್ಟರ ಸ್ವತಃ ನಮಗೆ ಹಾನಿಯುಂಟು ಮಾಡಬಹುದು. ಅದರಲ್ಲಿ ಪ್ಲಾಸ್ಟಿಕ್ ವಸ್ತು, ನೀರಿನ ಬಾಟಲಿಗಳು, ಹಾಳಾಗಿರುವ ನಾನ್‌ಸ್ಟಿಕ್ ಪ್ಯಾನ್ ಮತ್ತು ಬಾಣಲೆ ಇವುಗಳ ಸೇರ್ಪಡೆಗೊಂಡಿದೆ. ಹೊಸ ವಾಹನದ ಪ್ಲಾಸ್ಟಿಕ್‌ನ ಹೊದಿಕೆಯನ್ನು ತಪ್ಪದೇ ತೆಗೆದುಹಾಕಬೇಕು. ವಾಹನದಲ್ಲಿ ಬಿಸಿಯಾಗಿರುವ ಬಾಟಲಿಯ ನೀರನ್ನು ಎಂದಿಗೂ ಕುಡಿಯಬಾರದು. ಒಂದು ಮಹತ್ವದ ಅಂಶವೆಂದರೆ ಈ ರಾಸಾಯನಿಕಗಳು ‘ಇಂಡೋ ಕ್ರಾಯಿನ್ ಡಿಸ್ರಪ್ಟರ ಎಂದು ಕೆಲಸ ಮಾಡುತ್ತವೆ. ಅದರಿಂದ ಅದರ ದುಷ್ಪರಿಣಾಮವಾಗುತ್ತದೆ. ಇದರರ್ಥ ‘ಹಾರ್ಮೋನ್ಸ ಹಾ ನಿಕರವೇ ಆಗಿರುತ್ತವೆ ಎಂದೇನೂ ಇಲ್ಲ. ನಾವು ಸ್ತ್ರೀರೋಗ ತಜ್ಞರು ಬಹಳಷ್ಟು ರೋಗಗಳಲ್ಲಿ ಹಾರ್ಮೊನ್ಸಗಳಿರುವ ಔಷಧಿ ಗಳನ್ನು ಉಪಯೋಗಿಸುತ್ತೇವೆ. ಅದು ಸಂಪೂರ್ಣವಾಗಿ ವೈದ್ಯಕೀಯ ಸಂಶೋಧನೆಯನುಸಾರ ಇರುತ್ತದೆ ಮತ್ತು ರೋಗ ಕಡಿಮೆ ಯಾಗಲು ಅತ್ಯಾವಶ್ಯಕವಾಗಿರುತ್ತದೆ. ಹಾರ್ಮೊನ್ಸನ್ನು ಕೇವಲ ತಜ್ಞ ಡಾಕ್ಟರರ ಸಲಹೆಗನುಸಾರವೇ ಉಪಯೋಗಿಸಬೇಕು. ಇಂತಹ ತೆರೆಮರೆಯ ಶತ್ರು ನಮ್ಮ ಆರೋಗ್ಯದ ಮೇಲೆ ಅಪಾಯಕಾರಿ ಆಕ್ರಮಣ ಮಾಡಲು ಹೊಂಚು ಹಾಕುತ್ತಿರುತ್ತವೆ; ಆದರೆ ನಾವು ಸ್ವಲ್ಪ ಜಾಗರೂಕತೆಯೊಂದಿಗೆ ಕಾಳಜಿಯನ್ನು ತೆಗೆದುಕೊಂಡರೆ, ನಾವು ನಮ್ಮ ಮತ್ತು ನಮ್ಮ ಆತ್ಮೀಯರನ್ನು ಸಂರಕ್ಷಿಸಬಹುದು.
– ಡಾ. ಶಿಲ್ಪಾ ಚಿಟ್ನೀಸ-ಜೋಶಿ, ಸ್ತ್ರೀರೋಗ ಮತ್ತು ಬಂಜೆತನ ನಿವಾರಣೆ ತಜ್ಞರು, ಕೊಥರೂಡ, ಪುಣೆ