ದೇವಸ್ಥಾನಗಳ ವಿಶ್ವಸ್ಥರ ಮತ್ತು ಅರ್ಚಕರ ಸಂಘಟನೆ ಮಾಡಿ !

ಶ್ರೀ. ಸುನಿಲ ಘನವಟ

ದೇವಸ್ಥಾನಗಳು ಹಿಂದೂ ಧರ್ಮದ ಮೂಲಾಧಾರವಾಗಿವೆ. ಧರ್ಮದ ರಕ್ಷಣೆಯ ದೃಷ್ಟಿಯಿಂದಲೂ ದೇವಸ್ಥಾನಗಳ ಸ್ಥಾನವು ಮಹತ್ವದ್ದಾಗಿವೆ. ಇದುವರೆಗೆ ‘ಸೆಕ್ಯುಲರ್ (ಜಾತ್ಯತೀತ) ಸರಕಾರಗಳು ಭಕ್ತರು ನೀಡುವ ಅರ್ಪಣೆಯ ಮೇಲೆ ಕಣ್ಣಿಟ್ಟು ನೂರಾರು ದೇವಸ್ಥಾನಗಳನ್ನು ಸ್ವಾಧೀನಪಡಿಸಿ ಕೊಂಡಿವೆ. ಸದ್ಯ ಸರಕಾರದ ಅಧೀನದಲ್ಲಿಲ್ಲದ ಸಾರ್ವಜನಿಕ ಅಥವಾ ಖಾಸಗಿ ದೇವಸ್ಥಾನಗಳು ಯಾವಾಗ ಬೇಕಾದರೂ ಸರಕಾರಿಕರಣಕ್ಕೆ ಗುರಿಯಾಗಬಹುದು. ಸರಕಾರದ ಅಧೀನದಲ್ಲಿಲ್ಲದ ಅನೇಕ ದೇವಸ್ಥಾನಗಳ ಮುಂದೆ ಇಂದು ದೇವಸ್ಥಾನಗಳ ರಕ್ಷಣೆ ಮಾಡುವುದು, ನಿತ್ಯ ಪೂಜೆ ಮಾಡುವುದು, ಜೀರ್ಣೋದ್ಧಾರದಂತಹ ಹಲವು ಸಮಸ್ಯೆಗಳಿವೆ. ದೇವಸ್ಥಾನಗಳೆಂದರೆ ಕೇವಲ ಕಲ್ಲು ಅಥವಾ ಅಮೃತಶಿಲೆಯ ರಚನೆಗಳಲ್ಲ, ಅವುಗಳಲ್ಲಿ ಸಾಕ್ಷಾತ್ ಪರಮಾತ್ಮನ ವಾಸವಿರುತ್ತವೆ. ಆದ್ದರಿಂದ ಈ ದೇವಸ್ಥಾನಗಳ ರಕ್ಷಣೆಗಾಗಿ, ದೇವಸ್ಥಾನಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಭವಿಷ್ಯದಲ್ಲಿ ದೇವಸ್ಥಾನಗಳ ಮೇಲೆ ಯಾವುದೇ ಸಂಕಟಗಳು ಬರಬಾರದು, ಅದಕ್ಕಾಗಿ ನಿರಂತರ ಎಚ್ಚರಿಕೆಯಿಂದಿರುವುದು ಅಗತ್ಯವಾಗಿದೆ. ‘ಕಲಿಯುಗದಲ್ಲಿ ಸಂಘಟಿತನದಿಂದ ಇರುವುದರಲ್ಲಿ ಶಕ್ತಿಯಿದೆ ಎಂದು ಹೇಳಲಾಗಿದೆ. ಇಂದು ವ್ಯಾಪಾರಿಗಳು, ಪತ್ರಕರ್ತರ, ಆಧುನಿಕ ವೈದ್ಯರ, ನ್ಯಾಯವಾದಿಗಳ, ಶಿಕ್ಷಕರ, ಕಾರ್ಮಿಕರ ಮುಂತಾದವರ ಸಂಘಟನೆಗಳಿವೆ; ಆದರೆ ದೇವಸ್ಥಾನದ ವಿಶ್ವಸ್ಥರ, ಅರ್ಚಕರ ಸಂಘಟನೆ ಇಲ್ಲ. ಅದೇ ದೃಷ್ಟಿಕೋನದಿಂದ ದೇವಸ್ಥಾನಗಳು ಮತ್ತು ಸಂಸ್ಕೃತಿಯ ರಕ್ಷಣೆಗಳಿಗಾಗಿ ೨೦೧೯ ರಲ್ಲಿ ಗೋವಾದಲ್ಲಿ ನಡೆದ ‘ಎಂಟನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ‘ರಾಷ್ಟ್ರೀಯ ದೇವಸ್ಥಾನ ಮತ್ತು ಸಂಸ್ಕೃತಿ ಸಂರಕ್ಷಣಾ ಅಭಿಯಾನವನ್ನು ಪ್ರಾರಂಭಿಸಲಾಯಿತು. ಸರಕಾರದ ನಿಯಂತ್ರಿತವಿಲ್ಲದ ದೇವಸ್ಥಾನಗಳ ಪದಾಧಿಕಾರಿಗಳ ಸಂಘಟನೆ ಮಾಡುವ ಉದ್ದೇಶದಿಂದ ನಡೆಸಲಾದ ಅಭಿಯಾನಕ್ಕೆ ಭಗವಂತನ ಕೃಪೆಯಿಂದ ಉತ್ತಮ ಬೆಂಬಲ ಸಿಕ್ಕಿತು. ಈ ಬೆಂಬಲವು ದಶಮ ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಹೇಳಲಾಯಿತು. ಈ ಬಗೆಗಿನ ಮಾಹಿತಿಯನ್ನು ವಾಚಕರಿಗಾಗಿ ಇಲ್ಲಿ ಕೊಡುತ್ತಿದ್ದೇವೆ.

೧. ದೇವಸ್ಥಾನಗಳು ಭಕ್ತರನ್ನು ಧರ್ಮದೊಂದಿಗೆ ಜೊಡಿಸುವ ಕೊಂಡಿ

ಯಾರು ಹಿಂದುತ್ವದ ಕಾರ್ಯದಲ್ಲಿ ಪ್ರತ್ಯಕ್ಷ ಸಕ್ರಿಯವಿರುವು ದಿಲ್ಲವೋ ಅಂತಹವರ ಸಮಾಜದಲ್ಲಿ ಒಂದು ಗುಂಪಿದೆ; ಆದರೆ ಅವರು ಭಕ್ತರಿದ್ದಾರೆ. ಈ ಸಮೂಹವು ಯಾವುದೇ ಹಿಂದುತ್ವನಿಷ್ಠ ಅಥವಾ ಆಧ್ಯಾತ್ಮಿಕ ಸಂಘಟನೆಯೊಂದಿಗೆ ಜೊಡಿಸಲ್ಪಟ್ಟಿಲ್ಲ; ಆದರೆ ಅವರು ನಿಯಮಿತವಾಗಿ ದೇವಸ್ಥಾನಕ್ಕೆ ಹೋಗುತ್ತಾರೆ. ಇಂತಹವರನ್ನು ಧರ್ಮಕಾರ್ಯದೊಂದಿಗೆ ಜೋಡಿಸುವುದಾರೆ, ದೇವಸ್ಥಾನಗಳು ಕೊಂಡಿಯಾಗಿವೆ. ಹಿಂದಿನ ಕಾಲದಲ್ಲಿ ದೇವಸ್ಥಾನ ಗಳಲ್ಲಿ ಧರ್ಮಶಿಕ್ಷಣವನ್ನು ನೀಡಲಾಗುತ್ತಿತ್ತು. ಆದ್ದರಿಂದ, ಸಹಜವಾಗಿ ದೇವಸ್ಥಾನಗಳ ಮಾಧ್ಯಮದಿಂದ ಸಾಮಾನ್ಯ ಭಕ್ತರಲ್ಲಿ ಧರ್ಮದೊಂದಿಗೆ ಇರುವ ಶ್ರದ್ಧೆ ದೃಢವಾಗುತ್ತಿತ್ತು. ಇಂದಿನ ಕಾಲದಲ್ಲಿಯೂ ಇದನ್ನು ಸಾಧಿಸಬೇಕಾದರೆ ನಾವು ಸಂಘಟಿತನದಿಂದ ಪ್ರಯತ್ನಿಸ ಬೇಕಾಗುವುದು.

೨. ’ರಾಷ್ಟ್ರೀಯ ಮಂದಿರ ಮತ್ತು ಸಂಸ್ಕೃತಿ ಸಂರಕ್ಷಣಾ ಅಭಿಯಾನ’ದ ಅಡಿಯಲ್ಲಿ ಮಾಡಿದ ಪ್ರಯತ್ನಗಳು

‘ರಾಷ್ಟ್ರೀಯ ದೇವಸ್ಥಾನ ಮತ್ತು ಸಂಸ್ಕೃತಿ ಸಂರಕ್ಷಣಾ ಅಭಿ ಯಾನ’ದಡಿ ದೇವಸ್ಥಾನದ ಧರ್ಮದರ್ಶಿಗಳು, ಪದಾಧಿಕಾರಿಗಳು, ಅರ್ಚಕರು ಮತ್ತು ಮಠಾಧೀಶರ ಸಂಘಟನೆಗಾಗಿ ವಿವಿಧ ಹಂತಗಳಲ್ಲಿ ಪ್ರಯತ್ನಗಳನ್ನು ಮಾಡಲಾಯಿತು.

೨ ಅ. ವಿಶ್ವಸ್ಥರ ಸಭೆಗಳು, ಚರ್ಚಾಕೂಟಗಳು, ಮನವಿಗಳು, ಆಂದೋಲನಗಳನ್ನು ನಡೆಸುವುದು : ೧೯ ಮಾರ್ಚ್ ೨೦೨೦ ರಂದು ಭಾರತದಾದ್ಯಂತ ೧ ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ವಿಶ್ವಸ್ಥರ, ಅರ್ಚಕರ, ಪುರೋಹಿತರ ಮತ್ತು ಹಿಂದುತ್ವನಿಷ್ಠರ ರಾಷ್ಟ್ರೀಯ ಮಟ್ಟದಲ್ಲಿ ‘ಆನ್‌ಲೈನ್’ ಅಧಿವೇಶನವಾಯಿತು. ಇದರಲ್ಲಿ ‘ದೇವಸ್ಥಾನಗಳ ಸಮರ್ಪಕ ಕಾರ್ಯನಿರ್ವಹಣೆಯಲ್ಲಿನ ತೊಂದರೆಗಳೇನು ?’, ‘ದೇವಸ್ಥಾನ ಸಂಸ್ಕೃತಿಯನ್ನು ಕಾಪಾಡುವಲ್ಲಿ ಇರುವ ಸವಾಲುಗಳೇನು ?’, ‘ಅದಕ್ಕೆ ಪರಿಹಾರವೇನು ?’ ಇತ್ಯಾದಿಗಳ ಕುರಿತು ಚರ್ಚಿಸಲಾಯಿತು. ಈ ಅಧಿವೇಶನವು ಎಲ್ಲರಿಗೂ ಒಂದು ವ್ಯಾಪಕ ದೃಷ್ಟಿಯನ್ನು ನೀಡಿತು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸ್ಥಳೀಯ ಮಟ್ಟದಲ್ಲಿ ಕ್ರಿಯಾಶೀಲತೆ ಹೆಚ್ಚಿತು. ರಾಷ್ಟ್ರೀಯ ದೇವಸ್ಥಾನಗಳ ಅಧಿವೇಶನದ ನಂತರ, ಅನೇಕ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ದೇವಸ್ಥಾನಗಳ ವಿಶ್ವಸ್ಥರರ ನಿಯಮಿತ ಸಭೆಗಳನ್ನು ನಡೆಸಲಾಯಿತು. ಈ ಸಭೆಗಳಿಂದ ಪ್ರೇರಿತರಾದ ಮಹಾರಾಷ್ಟ್ರದ ಜಳಗಾಂವ್ ಜಿಲ್ಲೆಯ ಅಮಳನೇರದಲ್ಲಿನ ಮಂಗಳ ಗ್ರಹ ದೇವಸ್ಥಾನದ ಅಧಿಕಾರಿಯೊಬ್ಬರು ಉತ್ತರ ಮಹಾರಾಷ್ಟ್ರದ ಇತರ ದೇವಸ್ಥಾನಗಳ ವಿಶ್ವಸ್ಥರಿಗಾಗಿ ಅಧಿವೇಶನವನ್ನು ಆಯೋಜಿಸಿ ಜಾಗೃತಿ ಯನ್ನೂ ಮೂಡಿಸಿದರು. ಜೊತೆಗೆ ಅನೇಕ ಸ್ಥಳ ಗಳಲ್ಲಿ ದೇವಸ್ಥಾನಗಳ ಮೇಲಿನ ದಾಳಿಗಳ ವಿರುದ್ಧ ಆಡಳಿತಕ್ಕೆ ಮನವಿಯನ್ನು ನೀಡಲಾಯಿತು. ದೇವಸ್ಥಾನಗಳ ಮೇಲಿನ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮಾಧ್ಯಮಗಳಿಂದಲೂ ಜಾಗೃತಗೊಳಿಸಲಾಯಿತು.

೨ ಆ. ಸರಕಾರಿಕರಣವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭ್ರಷ್ಟಾಚಾರದ ವಿರುದ್ಧ ಆಂದೋಲನ : ಕರ್ನಾಟಕದಲ್ಲಿ ಸರಕಾರಿಕರಣವಾದ ಸುಪ್ರಸಿದ್ಧ ಮೂಕಾಂಬಿಕಾ ದೇವಸ್ಥಾನದಲ್ಲಿ ಕೋಟ್ಯವಧಿ ರೂಪಾಯಿ ಭ್ರಷ್ಟಾಚಾರವು ಮಾಹಿತಿ ಹಕ್ಕು ಅಧಿಕಾರದಲ್ಲಿ ಬಯಲಾಯಿತು. ಈ ದೇವಸ್ಥಾನದಲ್ಲಿ ಅಪಾರ ಪ್ರಮಾಣದಲ್ಲಿ ಬಂಗಾರ, ಆಸ್ತಿಪಾಸ್ತಿ ಮತ್ತು ಹಣವನ್ನು ಲೂಟಿ ಮಾಡಲಾಗಿದೆ. ‘ರಾಷ್ಟ್ರೀಯ ಮಂದಿರ ಮತ್ತು ಸಂಸ್ಕೃತಿ ಸಂರಕ್ಷಣಾ ಅಭಿಯಾನ’ದಡಿಯಲ್ಲಿ ಸ್ಥಾಪಿಸಲಾದ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ವು ಈ ಬಗ್ಗೆ ಸಭೆಗಳು ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ಜಾಗೃತಿ ಮೂಡಿಸಿತು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿವಿಧ ಸ್ಥಳಗಳಲ್ಲಿ ಆಂದೋಲನಗಳನ್ನು ನಡೆಸಿತು. ಸಚಿವರೊಂದಿಗಿನ ಸಭೆಗೆ ಮಹಾ ಸಂಘದ ಕಾರ್ಯಕರ್ತರನ್ನೂ ಆಹ್ವಾನಿಸಲಾಯಿತು. ಮಹಾಸಂಘವು ನಿರ್ವಹಿಸುತ್ತಿದ್ದ ಈ ಸಮಸ್ಯೆ ರಾಜ್ಯದಲ್ಲಿ ಪ್ರಮುಖ ವಿಷಯವಾಯಿತು.

ಸರಕಾರಿಕರಣವಾದ ದೇವಸ್ಥಾನಗಳಲ್ಲಿ ಯಾವ ರೀತಿ ಅವ್ಯವಹಾರಗಳು ನಡೆಯುತ್ತವೆ? ಅದು ನಮಗೆ ಗೊತ್ತಿದೆ. ಸರಕಾರಿ ಕರಣವಾಗಿರುವ ಅನೇಕ ದೇವಸ್ಥಾನಗಳಲ್ಲಿ ದೇವಸ್ಥಾನದ ಭೂಮಿ, ದೇವನಿಧಿ, ಜೊತೆಗೆ ದೇವರ ಆಭರಣಗಳು, ಗೋಶಾಲೆಗಳಲ್ಲಿನ ಅವ್ಯವಸ್ಥೆ, ದೇವಸ್ಥಾನಗಳ ಪ್ರಾಚೀನ ಪರಂಪರೆಗಳಲ್ಲಿ ಹಸ್ತಕ್ಷೇಪ ಮಾಡುವುದು, ದೇವಸ್ಥಾನಗಳನ್ನು ಕಾನೂನುಬಾಹಿರವೆಂದು ಅವುಗಳನ್ನು ಕೆಡಹುವುದು, ಪರಂಪರಾಗತ ಅರ್ಚಕರನ್ನು ತೆಗೆದು ಸಂಬಳದ ಅರ್ಚಕರನ್ನು ನೇಮಿಸುವುದು, ಆಡಳಿತಮಂಡಳಿಯಲ್ಲಿ ಇತರ ಪಂಥದವರನ್ನು ನೇಮಿಸುವುದು, ದೇವಸ್ಥಾನದ ಪರಿಸರ ದಲ್ಲಿ ಮಾಂಸಮಾರಾಟದ ಅಂಗಡಿಗಳಿರುವುದು ಮುಂತಾದ ಮಾಧ್ಯಮಗಳಿಂದ ದೇವಸ್ಥಾನಗಳ ಪಾವಿತ್ರ್ಯಕ್ಕೆ ಧಕ್ಕೆ ತಂದ ಪ್ರಕರಣಗಳು ನಡೆದಿವೆ. ಇದನ್ನು ತಡೆಯಲು ಪ್ರಯತ್ನಿಸುವುದು ಕೂಡ ‘ರಾಷ್ಟ್ರೀಯ ಮಂದಿರ ಮತ್ತು ಸಂಸ್ಕೃತಿ ಸಂರಕ್ಷಣಾ ಅಭಿಯಾನ’ದ ಮುಖ್ಯ ಉದ್ದೇಶವಾಗಿದೆ.

೩. ‘ರಾಷ್ಟ್ರೀಯ ಮಂದಿರ ಮತ್ತು ಸಂಸ್ಕೃತಿ ಸಂರಕ್ಷಣಾ ಅಭಿಯಾನ’ದ ಫಲಶೃತಿ

೩ ಅ. ಕೊರೊನಾ ಮಹಾಮಾರಿಯ ನಂತರದ ಸಂಚಾರಸಾರಿಗೆ ಆರಂಭ ವಾಗುವ (ಅನಲಾಕ್) ಪ್ರಕ್ರಿಯೆ ಸಮಯದಲ್ಲಿ ದೇವಸ್ಥಾನಗಳನ್ನು ತೆರೆಯಲು ಯಶಸ್ವಿ ಪ್ರಯತ್ನಗಳು : ಕೊರೊನಾ ಮಹಾಮಾರಿಯ ಕಾಲದಲ್ಲಿ, ಎಲ್ಲೆಡೆ ಸಾರಿಗೆಯನ್ನು ನಿಷೇಧಿಸಲಾಗಿತ್ತು. ನಿರ್ಬಂಧ ಗಳು ಸಡಿಲಗೊಂಡಾಗ ಮತ್ತು ಸಂಚಾರ ಸಾರಿಗೆಯನ್ನು ನಡೆಸ ಲಾಗುವ ಪ್ರಕ್ರಿಯೆಗೆ ಪ್ರಾರಂಭವಾದಾಗ, ‘ರಾಷ್ಟ್ರೀಯ ಮಂದಿರ ಮತ್ತು ಸಂಸ್ಕೃತಿ ಸಂರಕ್ಷಣಾ ಅಭಿಯಾನ’ದ ಅಡಿಯಲ್ಲಿ ದೇವಸ್ಥಾನಗಳನ್ನು ತೆರೆಯಲು ಸರಕಾರದ ಬಳಿ ಆಗ್ರಹಿಸಲಾಯಿತು. ಆದರೆ ಮಹಾರಾಷ್ಟ್ರ ಸರ್ಕಾರವು ದೇವಸ್ಥಾನಗಳ ಬದಲು ಮದ್ಯ ದಂಗಡಿ ತೆರೆಯಲು ಆದ್ಯತೆ ನೀಡಿದೆ ! ಆದ್ದರಿಂದ ‘ರಾಷ್ಟ್ರೀಯ ಮಂದಿರ ಮತ್ತು ಸಂಸ್ಕೃತಿ ಸಂರಕ್ಷಣಾ ಅಭಿಯಾನ’ದ ಮೂಲಕ ‘ದೇವಸ್ಥಾನಗಳನ್ನು ತೆರೆಯಬೇಕು’ ಎಂಬ ಬೇಡಿಕೆಗಾಗಿ ಆಂದೋಲನಗಳನ್ನು ನಡೆಸಲಾಯಿತು, ಹಾಗೆಯೇ ಅನೇಕ ಸ್ಥಳ ಗಳಲ್ಲಿ ನಿವೇದನೆಗಳೂ ಕೊಡಲಾಯಿತು. ಸರಕಾರದೊಂದಿಗೆ ಪತ್ರ ವ್ಯವಹಾರ ನಡೆಸಲಾಯಿತು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಪರಿಣಾಮವಾಗಿ, ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಮಹಾರಾಷ್ಟ್ರ ಸರಕಾರವು ಭಕ್ತರಿಗಾಗಿ ದೇವಸ್ಥಾನಗಳನ್ನು ತೆರೆಯಬೇಕಾಯಿತು.

೩ ಆ. ಬೆಳಗಾವಿಯಲ್ಲಿ ದೇವಸ್ಥಾನಗಳನ್ನು ಸರಕಾರಿಕರಣ ಗೊಳಿಸುವ ನಿರ್ಧಾರ ರದ್ದಾಗುವುದು : ಬೆಳಗಾವಿಯಲ್ಲಿ ಸ್ಥಳೀಯ ಆಡಳಿತವು ೧೬ ಸಮಾಜದ ದೇವಸ್ಥಾನಗಳನ್ನು ಸರ ಕಾರಿಕರಣಗೊಳಿಸಲು ಹೊಂಚು ಹಾಕಿತ್ತು. ಇದರ ವಿರುದ್ಧ ‘ರಾಷ್ಟ್ರೀಯ ಮಂದಿರ ಮತ್ತು ಸಂಸ್ಕೃತಿ ರಕ್ಷಣಾ ಅಭಿಯಾನ’ದಡಿ ದೇವಸ್ಥಾನಗಳ ವಿಶ್ವಸ್ಥರು ಹಾಗೂ ಹಿಂದುತ್ವನಿಷ್ಠರು ಒಟ್ಟುಗೂಡಿ ಸಭೆಯನ್ನು ತೆಗೆದುಕೊಂಡರು, ಹಾಗೆಯೇ ಪತ್ರಿಕಾಗೋಷ್ಠಿ ನಡೆಸಿ ನಿರ್ಣಯ ಹಿಂಪಡೆಯುವಂತೆ ಒತ್ತಾಯಿಸಿದರು. ದೇವಸ್ಥಾನಗಳನ್ನು ಸರಕಾರಿಕರಣ ಮಾಡಿದರೆ ಬೃಹತ್ ಹೋರಾಟ ನಡೆಸುವುದಾಗಿ ‘ರಾಷ್ಟ್ರೀಯ ಮಂದಿರ ಮತ್ತು ಸಂಸ್ಕೃತಿ ಸಂರಕ್ಷಣಾ ಅಭಿಯಾನ’ವು ಎಚ್ಚರಿಸಿದೆ. ಇದರಿಂದ ಎರಡು ದಿನಗಳಲ್ಲಿ ಸರಕಾರಕ್ಕೆ ನಿರ್ಧಾರ ವನ್ನು ಹಿಂಪಡೆಯಬೇಕಾಯಿತು.

೩ ಇ. ಕರ್ನಾಟಕದ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗುವುದು : ‘ರಾಷ್ಟ್ರೀಯ ಮಂದಿರ ಮತ್ತು ಸಂಸ್ಕೃತಿ ಸಂರಕ್ಷಣಾ ಅಭಿಯಾನ’ದ ಮೂಲಕ ಎಲ್ಲೆಡೆ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವ ಪ್ರಯತ್ನವೂ ನಡೆದಿದೆ. ದೇವಸ್ಥಾನದ ಧರ್ಮ ದರ್ಶಿಗಳು ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಕರ್ನಾಟಕ ರಾಜ್ಯದ ಪ್ರತಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಮನವಿ ನೀಡಿದವು. ಇದರ ಫಲವಾಗಿ ಕರ್ನಾಟಕದ ಹಲವು ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಿದೆ. ಅಂದರೆ ದೇವಸ್ಥಾನಗಳಲ್ಲಿ ತುಂಡುಡುಗೆ ಅಥವಾ ಅಸಭ್ಯವಾದ ವಸ್ತ್ರಗಳನ್ನು ಧರಿಸಿ ಬರಬಾರದು. ಸಭ್ಯ ವಸ್ತ್ರಗಳಿದ್ದರೆ ಮಾತ್ರ ದೇವಸ್ಥಾನದಲ್ಲಿ ಪ್ರವೇಶ ಸಿಗಲಿದೆ.

೩ ಈ. ಪುರಿ (ಒಡಿಶಾ)ದ ಪ್ರಸಿದ್ಧ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ರಥಯಾತ್ರೆಗೆ ನಿಷೇಧ ಹಿಂಪಡೆಯುವುದು : ಪುರಿ (ಒಡಿಶಾ) ನಲ್ಲಿರುವ ಸುಪ್ರಸಿದ್ಧ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಹಿಂದುತ್ವನಿಷ್ಠರು ರಥಯಾತ್ರೆಯ ಪರಂಪರೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿ ಯಾದರು. ಕೊರೊನಾ ಮಹಾಮಾರಿಯ ಸಮಯದಲ್ಲಿ ಸರಕಾರದ ಎಲ್ಲಾ ನಿಯಮಗಳನ್ನು ಅನುಸರಿಸಿ ಶ್ರೀ ಜಗನ್ನಾಥ ಮಂದಿರವು ನೂರಾರು ವರ್ಷಗಳ ರಥಯಾತ್ರೆಯ ಪರಂಪರೆಯು ಭಗ್ನವಾಗದಂತೆ ನೋಡಿಕೊಂಡಿದೆ; ಆದರೆ, ರಥಯಾತ್ರೆ ವಿರುದ್ಧ ಒಡಿಶಾ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನಂತರ ನ್ಯಾಯಾಲಯವು ಮೆರವಣಿಗೆಯನ್ನು ನಿಷೇಧಿಸಿತು. ಈ ಕುರಿತು ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಹಿಂದೂಪರ ಕಾರ್ಯಕರ್ತರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ರಥಯಾತ್ರೆ ಪರಂಪರೆಯ ರಕ್ಷಣೆಗಾಗಿ ನೀಡಲಾದ ಕಾನೂನು ಹೋರಾಟಕ್ಕೆ ಶ್ರೀ ಜಗನ್ನಾಥನ ಕೃಪೆಯಿಂದ ಯಶಸ್ವಿಯಾಗಿ ಮತ್ತು ರಥಯಾತ್ರೆಯ ಮೇಲಿನ ನಿಷೇಧ ತೆರವುಗೊಂಡಿದೆ.

೩ ಉ. ಮಹಾರಾಷ್ಟ್ರದ ನಗರ ಎಂಬಲ್ಲಿ ಮತಾಂಧರ ಹಿಂದೂವಿರೋಧಿ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆಗೆ ಮನವಿ ನೀಡುವುದು : ನಗರ ಜಿಲ್ಲೆಯ (ಮಹಾರಾಷ್ಟ್ರ) ನಂದಗಾಂವ್‌ನಲ್ಲಿರುವ ಶ್ರೀ ಹನುಮಾನ ದೇವಸ್ಥಾನದಲ್ಲಿ ಮತಾಂಧರು ಕೆಲವು ವಸ್ತುಗಳನ್ನು ಸುಟ್ಟು ಹಾಕಿದ್ದಾರೆ. ಈ ಪ್ರಕರಣದಲ್ಲಿ ದೇವಸ್ಥಾನದ ಧರ್ಮದರ್ಶಿ ಹಾಗೂ ಹಿಂದುತ್ವನಿಷ್ಠರು ಪೊಲೀಸ್ ಇಲಾಖೆಗೆ ಮನವಿ ನೀಡಿದರು.

೩ ಊ. ದೇವಸ್ಥಾನಗಳಲ್ಲಿ ಗಂಟೆ ಬಾರಿಸುವುದಕ್ಕೆ ಪೊಲೀಸರು ಹಾಕಿದ ನಿಷೇಧವನ್ನು ಹಿಂಪಡೆಯಬೇಕಾಗುವುದು : ಕರ್ನಾಟಕದಲ್ಲಿ ಒಂದು ದೇವಸ್ಥಾನದಲ್ಲಿ ಗಂಟೆ ಬಾರಿಸಲು ಪೊಲೀಸರು ನಿಷೇಧಿಸಿದ್ದರು. ಇದರ ವಿರುದ್ಧ ಧ್ವನಿ ಎತ್ತಿದ ನಂತರ ನಿಷೇಧವನ್ನು ಹಿಂಪಡೆಯಲಾಯಿತು. ದೇವಸ್ಥಾನ-ಸಂಸ್ಕೃತಿ ಸಂರಕ್ಷಣೆಗೆ ನಾವು ಕೃತಿಶೀಲರಾದರೆ, ಸರಕಾರದ ಆಶ್ರಯವಿಲ್ಲದಿದ್ದರೂ ಭಗವಂತನು ಅದನ್ನು ಹೇಗೆ ಯಶಸ್ವಿಗೊಳಿಸುತ್ತಾನೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಇಂದು ದೇವಸ್ಥಾನಗಳನ್ನು ಪ್ರವಾಸಿತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವಾಗ, ಯಾರಾದರೂ ದೇವಸ್ಥಾನಗಳ ಚೈತನ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅವರ ಮೇಲೆ ದೇವರ ಕೃಪೆ ಏಕೆ ಆಗಬಾರದು ?

೪. ದೇವಸ್ಥಾನಗಳು ಆರಾಧನೆಯ ಕೇಂದ್ರಗಳಾಗಬೇಕು !

ದೇವಸ್ಥಾನಗಳು ಚೈತನ್ಯದ ಮೂಲವಾಗಿವೆ. ಇಂದು ಮಸೀದಿಗಳಲ್ಲಿ ಅಕ್ರಮ ಧ್ವನಿವರ್ಧಕಗಳ ವಿರುದ್ಧ ಪ್ರತಿಭಟನೆಯ ನಿಮಿತ್ತದಿಂದಾಗಿಯಾದರೂ ದೇವಸ್ಥಾನಗಳಲ್ಲಿ ಹನುಮಾನ ಚಾಲೀಸಾವನ್ನು ಪಠಿಸಲಾಗುತ್ತಿದೆ. ಅನೇಕ ದೇವಸ್ಥಾನಗಳಲ್ಲಿ ಮಹಾಆರತಿಯನ್ನು ಮಾಡಲಾಗುತ್ತಿದೆ. ಈಗ ದೇವಸ್ಥಾನಗಳನ್ನು ಸಾಮೂಹಿಕ ಆರಾಧನೆಯ ಕೇಂದ್ರವನ್ನಾಗಿ ಮಾಡಲು ಸಂಘಟಿತವಾಗಿ ಪ್ರಯತ್ನಿಸೋಣ. ದೇವಸ್ಥಾನಗಳು ಉಪಾಸನೆಯ ಕೇಂದ್ರಗಳಾದರೆ, ಆ ಮಾಧ್ಯಮದಿಂದ ಸಮಾಜಕ್ಕೆ ಆಧ್ಯಾತ್ಮಿಕ ಬಲವೂ ಹೆಚ್ಚುತ್ತದೆ. ‘ದೇವಸ್ಥಾನಗಳು ಉಳಿದರೆ ಧರ್ಮ ಉಳಿಯುತ್ತದೆ !’

– ಶ್ರೀ. ಸುನೀಲ ಘನವಟ, ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ.