ಸಮುದ್ರಪೂಜೆ (ಆಗಸ್ಟ್ ೧೧)

ಶ್ರಾವಣ ಹುಣ್ಣಿಮೆಯಂದು ಸಮುದ್ರದಂಡೆಯಲ್ಲಿ ವಾಸಿಸುವ ಜನರು ವರುಣದೇವನ ಪ್ರೀತ್ಯರ್ಥ ಸಮುದ್ರದ ಪೂಜೆಯನ್ನು ಮಾಡಿ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಈ ದಿನ ಅರ್ಪಿಸಲ್ಪಡುವ ತೆಂಗಿನಕಯಿಯು ಶುಭಸೂಚಕವಾಗಿದೆ ಹಾಗೂ ಅದು ಸೃಜನಶಕ್ತಿಯ ಪ್ರತೀಕವೂ ಆಗಿದೆ. ನದಿಗಿಂತ ನದಿಗಳ ಸಂಗಮ ಮತ್ತು ಸಂಗಮಕ್ಕಿಂತ ಸಾಗರವು ಹೆಚ್ಚು ಪವಿತ್ರವಾಗಿದೆ. ‘ಸಾಗರೇ ಸರ್ವ ತೀರ್ಥಾನಿ ಎಂಬ ವಚನವಿದೆ. ಸಾಗರದ ಪೂಜೆಯೆಂದರೆ ವರುಣದೇವನ ಪೂಜೆ. ಹಡಗುಗಳಲ್ಲಿ ಸರಕು ಸಾಗಣೆ ಮಾಡುವಾಗ ವರುಣದೇವನು ಪ್ರಸನ್ನನಾಗಿದ್ದರೆ ಸಹಾಯ ಮಾಡುತ್ತಾನೆ.