ಫಲಕ ಪ್ರಸಿದ್ಧಿಗಾಗಿ
೧. ಹಿಂದೂಗಳಲ್ಲಾದ ಜಾಗೃತಿಯನ್ನು ತಿಳಿಯಿರಿ !
ನವದೆಹಲಿಯ ಪ್ರಸಿದ್ಧ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡುವ ಹಿಂದೂಗಳ ಸಂಖ್ಯೆ ಕಳೆದ ವರ್ಷವಿಡಿ ಶೇ. ೬೦ ಕ್ಕಿಂತ ಕಡಿಮೆಯಾಗಿದೆ ಎಂದು ೮೪ ವರ್ಷದ ದಿವಾನ್ ಅಲಿ ಮೂಸಾ ನಿಜಾಮಿ ಇವರು ಮಾಹಿತಿ ನೀಡಿದ್ದಾರೆ.
೨. ಮತಾಂಧರ ‘ಪ್ರವಾಹ ಜಿಹಾದನ್ನು ತಿಳಿಯಿರಿ !
ಹರ್ದೋಯಿ (ಉತ್ತರಪ್ರದೇಶ) ಎಂಬಲ್ಲಿ ೬ ಮತಾಂಧರು ರಾತ್ರಿಯ ವೇಳೆ ೩ ಮೀಟರ್ ವರೆಗೆ ಒಡ್ಡನ್ನು ಒಡೆದರು. ಇನ್ನೂ ಸ್ವಲ್ಪ ಒಡೆದಿದ್ದರೆ ಭಾರಿ ಪ್ರವಾಹ ಉಂಟಾಗುತ್ತಿತ್ತು. ಶಾರದಾ ನೀರಾವರಿ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿತು.
೩. ಭ್ರಷ್ಟಾಚಾರವನ್ನು ಬೆಂಬಲಿಸುತ್ತಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರ !
ಭರತಪುರದ (ರಾಜಸ್ಥಾನ) ಆದಿಬದ್ರಿ ಧಾಮ್ ಮತ್ತು ಕನಕಾಚಲದಲ್ಲಿ ನಡೆಯುತ್ತಿರುವ ಅಕ್ರಮ ಉತ್ಖನನದ ಪ್ರಕರಣದಲ್ಲಿ ಸಾಧು-ಸಂತರು ೫೫೦ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ೬೫ ವರ್ಷದ ವಿಜಯದಾಸ ಎಂಬ ಸಂತರು ಆತ್ಮಾಹುತಿ ಮಾಡಿಕೊಂಡಿದ್ದಾರೆ.
೪. ಸ್ವಾರ್ಥಕ್ಕಾಗಿ ಜನರಿಗೆ ಕೆಟ್ಟ ಹವ್ಯಾಸ ಬೆಳೆಸುವ ಆಮ್ ಆದ್ಮಿ ಪಕ್ಷ !
ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುಜರಾತ್ ಪ್ರವಾಸದಲ್ಲಿದ್ದಾಗ, ‘ನಾವು ರಾಜ್ಯದಲ್ಲಿ ಆರಿಸಿ ಬಂದ ನಂತರ ದೆಹಲಿ ಮತ್ತು ಪಂಜಾಬಗೆ ನಾವು ಉಚಿತ ವಿದ್ಯುತ್ ನೀಡಿದ ಮಾದರಿಯಲ್ಲಿ ಗುಜರಾತನ ಜನರಿಗೂ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದರು.
೫. ಇಂತಹ ಕ್ರೈಸ್ತ ಶಾಲೆಗಳನ್ನು ನಿಷೇಧಿಸಿ !
ಬರೇಲಿ (ಉತ್ತರಪ್ರದೇಶ)ಯಲ್ಲಿ ಕ್ರೈಸ್ತ ಮಿಶನರಿಗಳ ‘ಸೇಂಟ್ ಫ್ರಾನ್ಸಿಸ್ ಸ್ಕೂಲ್ ಶಾಲೆಯು ಸಿಕ್ಖ್ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಪೇಟಾ, ಕೃಪಾಣ (ಸಣ್ಣ ಚಾಕು) ಮತ್ತು ಕೈಯಲ್ಲಿ ಕಡಗಗಳನ್ನು ಹಾಕಿಕೊಂಡು ಬರುವುದನ್ನು ನಿಷೇಧಿಸಿದೆ.
೬. ಇದು ಸಂಭವಿಸುವ ಮೊದಲೇ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !
ಜಿಹಾದಿ ಭಯೋತ್ಪಾದನಾ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಪರಿಶಿಷ್ಟ ಜಾತಿ-ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಹಿಂದೂಗಳನ್ನು ಸೇರಿಸಿಕೊಂಡು ಇಸ್ಲಾಮಿಕ್ ರಾಷ್ಟ್ರವನ್ನು ರೂಪಿಸುವ ಸಂಚು ಮಾಡಿದೆ.
೭. ಸಂಸ್ಕೃತವನ್ನು ರಾಷ್ಟ್ರಭಾಷೆಯೆಂದು ಘೋಷಿಸಿ !
ಬೂಂದಿ (ರಾಜಸ್ಥಾನ)ದಲ್ಲಿ ಕೆಲವು ಮತಾಂಧರು ಒಂದು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಗೆ ಬೆದರಿಕೆಯೊಡ್ಡುತ್ತಾ ಮೂರನೇ ಭಾಷೆಯೆಂದು ಸಂಸ್ಕೃತದ ಬದಲು ಉರ್ದು ಭಾಷೆಯನ್ನು ಸೇರಿಸುವಂತೆ ಹೇಳಿ ‘ಹೀಗೆ ಮಾಡದಿದ್ದರೆ ಶಾಲೆಗೆ ಬೀಗ ಜಡಿಯುತ್ತೇವೆ, ಎಂದಿದ್ದಾರೆ.