ಸರಕಾರದ ಮೇಲೆ ಹಿಂದೂ ಸಮಾಜದ ಹಿತವನ್ನು ಗಮನದಲ್ಲಿಟ್ಟು ಕಾರ್ಯವನ್ನು ಮಾಡುವಂತೆ ಒತ್ತಡವನ್ನು ಹೇರುವುದು !

ವಿರೋಧಿಪಕ್ಷಗಳ ಆಡಳಿತಾವಧಿಯಲ್ಲಿ ವಿಧಾನಸೌಧದಲ್ಲಿ ಕ್ರೈಸ್ತ ಪಾದ್ರಿಗಳು, ನನ್‌ಗಳು ನಿರಂತರವಾಗಿ ತಿರುಗಾಡುವುದು ಕಾಣಿಸುತ್ತದೆ. ಅವರ ಈ ಪ್ರಯತ್ನದಿಂದ ಕ್ರೈಸ್ತರಿಗೆ ಹೊಸ ಹೊಸ ಶಾಲೆಗಳನ್ನು, ಆ ಸ್ಪತ್ರೆ ಇತ್ಯಾದಿಗಳನ್ನು ಪ್ರಾರಂಭಿಸಲು ಅನುಮತಿ ಸಿಗುತ್ತದೆ. ಇದರಿಂದ ಅವರ ಮತಾಂತರದ ಕಾರ್ಯ ಸಹಜವಾಗಿ ಸಾಧ್ಯವಾಗುತ್ತದೆ. ಇದರೊಂದಿಗೆ ಮುಸಲ್ಮಾನರಿಗೆ ಮದರಸಾಗಳಿಂದ ಸೌಲಭ್ಯಗಳನ್ನು ನೀಡಲಾಗುತ್ತದೆ, ಉದಾ. ಮೌಲ್ವಿಗಳಿಗೆ ಸಂಬಳವನ್ನು ನೀಡುವುದು ಇತ್ಯಾದಿ. ಇವೆಲ್ಲವುಗಳಿ ಗಾಗಿ ಮುಸಲ್ಮಾನ ಮೌಲ್ವಿಗಳು ಜನಪ್ರತಿನಿಧಿಗಳನ್ನು ಪದೇಪದೇ ಭೇಟಿಯಾಗಿ ಅವರ ಮೇಲೆ ಒತ್ತಡ ಹೇರಿ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ. ಈ ದೃಷ್ಟಿಯಿಂದ ಹಿಂದೂಗಳ ಸರಕಾರ ಅಧಿಕಾರದಲ್ಲಿರುವಾಗ ಹಿಂದೂಗಳು ಮಾಡಬೇಕಾದ ಕೆಲವು ಪ್ರಯತ್ನಗಳನ್ನು ಇಲ್ಲಿ ಕೊಡುತ್ತಿದ್ದೇನೆ .

೧. ಹಿಂದೂಗಳ ದೇವಸ್ಥಾನಗಳಿಗಾಗಿ ಮತ್ತು ಹಿಂದೂಗಳ ಸಂಘಟನೆ ಗಳಿಗಾಗಿ ಭೂಮಿಯನ್ನು ಪಡೆಯಲು ಪ್ರಯತ್ನಿಸುವುದು

೨. ವೇದಪಾಠಶಾಲೆಗಳಿಗೆ ಸಹಾಯ, ಹಾಗೆಯೇ ಸಂಸ್ಕೃತ ಭಾಷೆಗೆ ಪ್ರೋತ್ಸಾಹ ಸಿಗಲು ಪ್ರಯತ್ನಿಸುವುದು

೩. ಹಿಂದೂ ದೇವಸ್ಥಾನಗಳ ಅರ್ಚಕರಿಗೂ ಸರಕಾರದಿಂದ ಆರ್ಥಿಕ ಸಹಾಯ ಸಿಗಲು ಪ್ರಯತ್ನಿಸುವುದು

೪. ಹಿಂದೂಗಳ ಶಾಲೆಗಳು ಆರಂಭವಾಗಲು, ಹಾಗೆಯೇ ಸತ್ಯ ಇತಿಹಾಸವನ್ನು ಕಲಿಸುವಂತೆ ಪ್ರಯತ್ನಿಸುವುದು

೫. ಹಿಂದೂ ಸ್ಥಳಗಳಿಗೆ ನೀಡಿದ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಲು ಪ್ರಯತ್ನಿಸುವುದು