೧. ಮಳೆ ಬರಿಸಲು ಗ್ರಾಮೀಣ ಭಾಗದಲ್ಲಿ ಮಾಡಲಾಗುವ ಅಶಾಸ್ತ್ರೀಯ ಕೃತಿಗಳು
ನಗರಗಳಲ್ಲಿ ವಾಸಿಸುವ ಜನರಿಗೆ ಮಳೆಗಾಲ ಬೇಡವೆನಿಸುತ್ತದೆ; ಆದರೆ ಗ್ರಾಮೀಣ ಭಾಗದ ಜನತೆಯ ಜೀವನ ಮಳೆಯನ್ನೇ ಅವಲಂಬಿಸಿರುತ್ತದೆ. ಮಳೆ ಬೀಳದಿದ್ದರೆ ಹೊಲ ಬಂಜರಾಗುತ್ತದೆ, ಅಪೌಷ್ಟಿಕತೆ ಸಮಸ್ಯೆ ಎದುರಾಗುತ್ತದೆ. ಬರಗಾಲದಿಂದ ಪ್ರಾಣಿಗಳೂ ಸಂಕಟಕ್ಕೊಳಗಾಗುವವು. ಅವುಗಳನ್ನು ಹೇಗೆ ಉಳಿಸುವುದು ? ಅಥವಾ ಕಸಾಯಿಖಾನೆಗೆ ಕಳುಹಿಸಬೇಕೇ ? ಎಂಬಂತಹ ಅನೇಕ ಪ್ರಶ್ನೆಗಳು ಕಾಡುತ್ತವೆ. ವರ್ಷದಲ್ಲಿ ಎರಡರಿಂದ ಎರಡುವರೆ ತಿಂಗಳು ಬೀಳುವ ಮಳೆ ಕಡಿಮೆಯಾದರೂ ಹೆಚ್ಚಾದರೂ ಸಮಸ್ಯೆ ಇದ್ದೇ ಇರುತ್ತದೆ. ಮಳೆಯ ಅನಿಯಮಿತತೆಯ ಹೊಡೆತ ರೈತರಿಗೆ ಬೀಳುತ್ತದೆ. ಹೆಚ್ಚಿನ ಬಾರಿ ಬಿತ್ತನೆಯಾಗುತ್ತದೆ, ಬೆಳೆ ಬೆಳೆಯುತ್ತದೆ ಮತ್ತು ಮಳೆ ಕೈ ಕೊಡುತ್ತದೆ. ಕೃಷಿ ಮಾಡಿದ್ದು ವ್ಯರ್ಥವಾಗುತ್ತದೆ.
ಮುಂಗಾರು ಮಳೆಯು ಕೈಕೊಟ್ಟರೆ ಮಳೆಗೆ ಸಂಬಂಧಿಸಿದ ಅನೇಕ ಮೂಢನಂಬಿಕೆಗಳು ಉದ್ರೇಕಗೊಳ್ಳುತ್ತವೆ. ಅಮಾಯಕ ರೈತನು ಕೆಲವೊಮ್ಮೆ ಮೂಢನಂಬಿಕೆಗಳಿಗೆ ಬಲಿಯಾಗುತ್ತಾನೆ. ಮಳೆ ತರಿಸಲು ಒಬ್ಬರು ಕತ್ತೆಗಳ ಮದುವೆ ಮಾಡಿಸಿದರೆ, ಇನ್ನೊಬ್ಬರು ಕಪ್ಪೆಗಳ ಮದುವೆ ಮಾಡಿಸುತ್ತಾರೆ. ಕೆಲವು ಸ್ಥಳಗಳಲ್ಲಿ ಪ್ರಶ್ನೆಗಳನ್ನು ಕೇಳಿ ದೇವರಿಂದ ಆಜ್ಞೆ ಪಡೆಯುವ ಪದ್ಧತಿಯಿದೆ. ಹಳ್ಳಿಯಿಂದ ಕಪ್ಪು ಕುದುರೆ ಅಥವಾ ಹೆಣ್ಣು ಕುರಿಯನ್ನು ಓಡಿಸಲಾಗುತ್ತದೆ. ಒಂದು ವೇಳೆ ಅವು ಓಡುತ್ತಿರುವಾಗ ಮೂತ್ರವಿಸರ್ಜಿಸಿದರೆ ಮಳೆ ಬೀಳುತ್ತದೆ ಎಂದು ತಿಳಿದುಕೊಳ್ಳಲಾಗುತ್ತದೆ. ಇಂತಹ ಅನೇಕ ರೂಢಿಗಳು ಇಂದಿಗೂ ಪ್ರಚಲಿತ ಇವೆ; ಏಕೆಂದರೆ ಮಳೆಯ ಅನಿಯಮಿತತೆ ಎಲ್ಲರನ್ನು ದಿಗಿಲುಗೊಳಿಸುತ್ತಿದೆ. ಆದುದರಿಂದ ಸಮಸ್ಯೆಗಳ ಕಂದಕದಲ್ಲಿ ಸಿಲುಕಿದ ವ್ಯಕ್ತಿಯು ನಂತರ ಇಂತಹ ಮೂಢನಂಬಿಕೆಗಳ ಮೇಲೆ ವಿಶ್ವಾಸವಿಡುತ್ತಾನೆ. ಇಂತಹ ಕೃತಿ ಮಾಡಿದರೆ ವಾಸ್ತವದಲ್ಲಿ ಮಳೆ ಬೀಳುತ್ತದೆಯೇ ? ಇದಕ್ಕೆ ಯಾವುದೇ ಶಾಸ್ತ್ರೀಯ ಆಧಾರವಿಲ್ಲ. ಇಂತಹ ಅನೇಕ ಮೂಢನಂಬಿಕೆಗಳು ಗ್ರಾಮೀಣ ಭಾಗಗಳಲ್ಲಿ ನೋಡಲು ಸಿಗುತ್ತವೆ.
೨. ‘ಪರ್ಜನ್ಯಯಾಗ’ವನ್ನು ಮಾಡಿದರೆ ಮಳೆ ಬೀಳುವುದು
ಕೃತಕ ಮಳೆ ತರಿಸಲು ಅನೇಕ ಪ್ರಯೋಗಗಳನ್ನು ಮಾಡಲಾಗಿದೆ. ಯಜುರ್ವೇದದಲ್ಲಿ ‘ಕಾರೀರೀ ಇಷ್ಟಿ’ ಹೆಸರಿನ ಯಜ್ಞವನ್ನು ಹೇಳಲಾಗಿದೆ. ಪುರಾತನ ಕಾಲದಲ್ಲಿಯೂ ಮಳೆ ಬರಿಸಲು ವಿವಿಧ ಯಜ್ಞಗಳನ್ನು ಮಾಡಲಾಗುತ್ತಿತ್ತು. ಇದಕ್ಕೆ ಶಾಸ್ತ್ರೀಯ ಆಧಾರವೂ ಇದೆ.
ತಯಾ ಪರ್ಜನ್ಯಾ ಯಜ್ಞೀಂ ಜನ್ಮ |
ಯಜ್ಞಾತೇಂ ಪ್ರಗಟೀ ಕರ್ಮ |
ಕರ್ಮಾಸಿ ಆದಿ ಬ್ರಹ್ಮ | ವೇದರೂಪ ||
– ಜ್ಞಾನೇಶ್ವರಿ, ಅಧ್ಯಾಯ ೩, ಶ್ಲೋಕ ೧೩೫
ಅರ್ಥ : ಆ ಮಳೆಯು ಯಜ್ಞದಿಂದ ಉತ್ಪನ್ನವಾಗುತ್ತದೆ, ಆ ಯಜ್ಞವು ಕರ್ಮದಿಂದ ಪ್ರಕಟವಾಗುತ್ತದೆ ಮತ್ತು ವೇದರೂಪ ಬ್ರಹ್ಮ ಇದು ಕರ್ಮದ ಮೂಲವಾಗಿದೆ.
ಯಜ್ಞದಲ್ಲಿ ಮಾವಿನಮರ, ಆಲದ ಮರ, ಮುತ್ತುಗದ ಮರ, ಅರಳೀ ಮರ, ನೇರಳೆ, ಅತ್ತಿ ಮರ ಮುಂತಾದ ರಾಳ ಉತ್ಪಾದಿಸುವ ಮರಗಳ ಗೆಲ್ಲುಗಳನ್ನು ಬಳಸಲಾಗುತ್ತದೆ. ಇದರಲ್ಲಿ ಉಪ್ಪು, ನವ ಸಾಗರವನ್ನು (ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಮಾಡಿಸುವಾಗ ಉಪಯೋಗಿಸವ ರಸಾಯನ, ಅಮೋನಿಯಂ ಕ್ಲೋರೈಡ್) ಅರ್ಪಿಸಲಾಗುತ್ತದೆ. ಇದಕ್ಕೆ ‘ಪರ್ಜನ್ಯಯಾಗ’ವೆಂದು ಹೇಳಲಾಗುತ್ತದೆ. ಇದರಿಂದ ಮಳೆ ಬರುತ್ತದೆ.
೩. ಪರ್ಜನ್ಯಯಾಗದಿಂದಾಗುವ ರಾಸಾಯನಿಕ ಪ್ರಕ್ರಿಯೆ ಮತ್ತು ಅದರಿಂದ ಕೃತಕ ಮಳೆ ಬೀಳುವುದು
ಇದೇ ಶಾಸ್ತ್ರೀಯ ಆಧಾರದ ಮೇಲೆ ಮಹಾರಾಷ್ಟ್ರದಲ್ಲಿ ಕೆಲವು ವರ್ಷಗಳ ಹಿಂದೆ ಡಾ. ರಾಜಾ ಮರಾಠೆ ಇವರು ‘ವರುಣಯಂತ್ರ’ದ ಪ್ರಯೋಗವನ್ನು ನಡೆಸಿದ್ದರು. ಮೋಡ ಕವಿದ ವಾತಾವರಣದ ಸಮಯದಲ್ಲಿ ಈ ಯಜ್ಞ ಮಾಡಿ ಮಳೆಯನ್ನು ತರಿಸಲಾಯಿತು. ಸಾದಾ ಉಪ್ಪು ೮೦೧ ಅಂಶ ಸೆಲ್ಸಿಯಸ್‌ಗೆ ಕರಗುತ್ತದೆ ಮತ್ತು ೧ ಸಾವಿರದ ೪೬೫ ಅಂಶ ಸೆಲ್ಸಿಯಸ್‌ಗೆ ಕುದಿಯುತ್ತದೆ. ಯಜ್ಞದಲ್ಲಿ ಉಪ್ಪನ್ನು ಹಾಕಿದಾಗ ಅದು ಕರಗುತ್ತದೆ. ಕರಗಿ ಆವಿಯಾದ ಉಪ್ಪು ತೀವ್ರವಾದ ಜ್ಞಾಲೆಯ ಮೂಲಕ ಆಕಾಶಕ್ಕೆ ಹೋಗುತ್ತದೆ. ವಾತಾವರಣದಲ್ಲಿ ಈ ರೂಪದ ಉಪ್ಪಿನ ಮುಕ್ತ ಸಂಚಾರವಾಗುತ್ತದೆ. ಈ ಅಯನು (ioಟಿ) ಉಷ್ಣ ಮೋಡಗಳ ವರೆಗೆ ತಲುಪಿದಾಗ ಆ ಮೋಡಗಳು ನೀರಿನಲ್ಲಿ ರೂಪಾಂತರಗೊಂಡು ಮಳೆ ಬೀಳುತ್ತದೆ. ಈ ರೀತಿ ರಾಸಾಯನಿಕ ಸಮೀಕರಣವಿದೆ. ಹಿಂದಿನ ಕಾಲದಲ್ಲಿ ಯಜ್ಞವು ಇದೇ ರಾಸಾಯನಿಕ ಅಧ್ಯಯನದ ಮೇಲಾಧರಿಸಿತ್ತು. ‘ಯಜ್ಞ ದಿಂದ ಮಳೆ ಬೀಳುತ್ತದೆ’, ಎಂಬುದಕ್ಕೆ ಇಂತಹ ಶಾಸ್ತ್ರೀಯ ಆಧಾರವಿದೆ.
ಚೀನಾದಲ್ಲಿ ಡಾಪಲರ್ ರಡಾರ್‌ನ (ಮಳೆ, ಅತಿವೃಷ್ಟಿ, ಗಾರಪೀಟ ಮತ್ತು ಹವಾಮಾನ ಇವುಗಳ ಖಾತ್ರಿಯುಕ್ತ ಮಾಹಿತಿ ಮತ್ತು ನಿಖರವಾಗಿ ಅಂದಾಜು ನೀಡುವ ಆಪತ್ಕಾಲೀನ ವ್ಯವಸ್ಥೆ) ಉಪಯೋಗಿಸಿ ಕೃತಕ ಮಳೆಯನ್ನು ಬರಿಸಲಾಗುತ್ತದೆ. ಸದ್ಯ ಇಂತಹ ಅನೇಕ ಪ್ರಯೋಗಗಳ ವಿಕಾಸ ಮಾಡಲಾಗುತ್ತಿದೆ.
– ರಾಜೇಂದ್ರ ಕೃಷ್ಣರಾವ ಘೋರಪಡೆ, ಸಂಪಾದಕರು, ‘ಇಯೆ ಮರಾಠಿಚಿಯೆ ನಗರಿ’ ಜಾಲತಾಣ (ಕೃಪೆ : ‘ಇಯೆ ಮರಾಠಿಚಿಯೆ ನಗರಿ’)
ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚ ಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಸಾಮಾನ್ಯವಾಗಿ ಕಣ್ಣಿಗೆ ಕಾಣದಂತಹವುಗಳು ಅವರಿಗೆ ಸೂಕ್ಷ್ಮದಲ್ಲಿ ಗೋಚರಿಸುತ್ತವೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ. ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳು. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿರುವುದು ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿಯಾದ ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಜ್ಞಾನದ ಬಗ್ಗೆ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |