ಡಾನ್ಸ್ (ನೃತ್ಯ)ದಿಂದ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ !

ಸುಲಭ ನೃತ್ಯ

ನೀವು ಅಧಿಕ ತೂಕದ ವಸ್ತುಗಳನ್ನು ಎತ್ತುವುದಿಲ್ಲವಾದರೆ ಮತ್ತು ಹೆಚ್ಚು ವ್ಯಾಯಾಮ ಮಾಡದಿದ್ದರೆ, ಡಾನ್ಸ್ (ನೃತ್ಯ)ವು ಅತ್ಯುತ್ತಮ ವ್ಯಾಯಾಮವಾಗಿದೆ. ದೈಹಿಕಕ್ಕೆ ಉಪಯುಕ್ತವಾಗಿರುವಂತೆಯೇ ನೃತ್ಯವು ಮಾನಸಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ನೃತ್ಯ ಮಾಡುವುದರಿಂದ ತಕ್ಷಣವೇ ಮನಸ್ಥಿತಿಯು ಸುಧಾರಿಸುತ್ತದೆ ಮತ್ತು ಇದು ಉತ್ತಮ ಆರೋಗ್ಯ ನೀಡುವ ಚಟುವಟಿಕೆಯಾಗಿದೆ. ನೃತ್ಯವು ಹೃದಯ ಬಡಿತಕ್ಕೆ ಸಮತೋಲಿತ ರೀತಿಯ ವ್ಯಾಯಾಮವಾಗಿರುವುದು ಮತ್ತು ಇದರಿಂದಾಗಿ ಕಾರ್ಯಕ್ಷಮತೆ ಉತ್ತಮವಾಗಿರುವುದು.

ನೃತ್ಯವು ಕಾರ್ಡಿಯೋ ವರ್ಕೌಟ್‌ನ (ಹೃದಯ ಮತ್ತು ರಕ್ತನಾಳಗಳಿಗೆ) ಉತ್ತಮ ಪ್ರಕಾರವಾಗಿದೆ ಎಂದು ಅನೇಕ ಜನರು ಹೇಳುವುದನ್ನು ನೀವು ಕೇಳಿರಬಹುದು. ಇದನ್ನು ಸುಮ್ಮನೇ ಹೇಳಿರುವುದಿಲ್ಲ. ನಿಯಮಿತವಾಗಿ ನೃತ್ಯ ಮಾಡಿದರೆ ಹೃದಯ ಬಡಿತವನ್ನು ಸಮತೋಲನಗೊಳಿಸುತ್ತದೆ ಮತ್ತು ‘ಕೊಲೆಸ್ಟ್ರಾಲ್’ ಅನ್ನು ಕಡಿಮೆ ಮಾಡುತ್ತದೆ. ವಾರದಲ್ಲಿ ೩ ರಿಂದ ೪ ಬಾರಿ ಅರ್ಧ ಗಂಟೆಗೂ ಹೆಚ್ಚು ಕಾಲ ನೃತ್ಯ ಮಾಡುವ ಜನರು ಉತ್ತಮ ಕಾರ್ಯಕ್ಷಮತೆ (ಸ್ಟೆಮಿನಾ) ಮತ್ತು ಉತ್ತಮ ಉಸಿರಾಟವನ್ನು ಹೊಂದಿರುತ್ತಾರೆ. ಆದ್ದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ನೃತ್ಯವು ಭಾರೀ ಚಲನೆಗಳು ಮತ್ತು ಬೆವರುವಿಕೆಯನ್ನು ಒಳಗೊಂಡಿರುತ್ತದೆ, ಇದು ತೂಕ ಕಡಿಮೆಯಾಗಲು ಕಾರಣವಾಗುತ್ತದೆ.

ನೃತ್ಯವು ಒತ್ತಡವನ್ನು ಕಡಿಮೆ ಮಾಡುತ್ತದೆ

ನೀವು ಒತ್ತಡದಲ್ಲಿದ್ದರೆ, ನಿಮ್ಮ ನೆಚ್ಚಿನ ಸಂಗೀತವನ್ನು ಹಾಕಿ ಅದರ ಮೇಲೆ ನೃತ್ಯ ಮಾಡಬಹುದು. ಇದು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ, ನೀವು ಒತ್ತಡದಿಂದ ಸ್ವಲ್ಪ ಪರಿಹಾರವನ್ನು ಪಡೆಯುತ್ತೀರಿ ಮತ್ತು ಸ್ವಲ್ಪ ಸಮಯದವರೆಗೆ ನಿಮ್ಮ ಒತ್ತಡವನ್ನು ಮರೆತುಬಿಡುತ್ತೀರಿ.

(ಕೃಪೆ : ದೈನಿಕ ‘ಲೋಕಸತ್ತಾ’)