ರೈಲಿನಲ್ಲಿನ ಅಪರಾಧಗಳ ಲೋಪದೋಷಗಳು ಹಾಗೂ ಅದರ ಪರಿಹಾರೋಪಾಯಗಳು !

ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ

೧. ರೈಲ್ವೆಯಲ್ಲಿನ ಅಪರಾಧಗಳನ್ನು ತಡೆಗಟ್ಟಲು ರೈಲುನಿಲ್ದಾಣಗಳಲ್ಲಿ ಜನರಿಗೆ ಸಿಗುವ ಅನಧಿಕೃತ ಪ್ರವೇಶವನ್ನು ನಿಲ್ಲಿಸುವ ಅವಶ್ಯಕತೆ ಹಾಗೂ ಹಾಗೆ ಮಾಡಿದರೆ ಅಪರಾಧಗಳು ಸಿದ್ಧವಾಗಿ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಬಹುದು

ರೈಲ್ವೆ ಪೊಲೀಸರು ನಿರಂತರ ಕರ್ತವ್ಯ ನಿರ್ವಹಿಸುತ್ತಿದ್ದರೂ ಅಪರಾಧಗಳು ಕಡಿಮೆಯಾಗದಿರಲು ಅನೇಕ ಕಾರಣಗಳಿವೆ. ರೈಲ್ವೇ ನಿಲ್ದಾಣ, ರೈಲ್ವೇ ಟ್ರ್ಯಾಕ್ ಪರಿಸರ ಮತ್ತು ರೈಲ್ವೆಯ ವಶದಲ್ಲಿರುವ ವಾಸ್ತುಗಳಲ್ಲಿ ಅನಧಿಕೃತ ಪ್ರವೇಶವನ್ನು ನಿಲ್ಲಿಸಿದರೆ ಅನೇಕ ಅಪರಾಧಗಳಿಗೆ ಕಡಿವಾಣ ಬೀಳಬಹುದು. ಹೇಗೆ ಮೆಟ್ರೋ ರೈಲ್ವೆನಿಲ್ದಾಣದ ಪರಿಸರದಲ್ಲಿ ಟಿಕೇಟ್ ಇಲ್ಲದೆ ಪ್ರವೇಶವಿಲ್ಲವೋ, ಹಾಗೆಯೆ ರೈಲ್ವೇ ನಿಲ್ದಾಣದ ಪರಿಸರದಲ್ಲಿಯೂ ಕಟ್ಟುನಿಟ್ಟಿನ ಭದ್ರತೆಯ ನಿಯಮವನ್ನು ಅನ್ವಯಗೊಳಿಸಿದರೆ, ಅಪರಾಧಗಳು ಕಡಿಮೆಯಾಗಬಹುದು. ರೈಲ್ವೆಯ ಟಿಕೇಟ್ ಪರೀಕ್ಷಕರು ಆವಶ್ಯಕವಿರುವ ಎಲ್ಲ ಸ್ಥಳಗಳಲ್ಲಿ ತಪಾಸಣೆ ಮಾಡುತ್ತಿರಬೇಕು. ಮುಖ್ಯ ಪ್ರವೇಶದ್ವಾರದಲ್ಲಿಯೇ ಅನಧಿಕೃತ ಪ್ರವೇಶಿಸುವವರನ್ನು ತಡೆದರೆ, ಅಲ್ಲಿರುವ ‘ಸಿ.ಸಿ.ಟಿ.ವಿ.’ಯಿಂದ ಅವರ ಅಪರಾಧವು ಸಿದ್ಧವಾಗಲು ಸಹಾಯವಾಗಬಹುದು. ಅದರಿಂದ ಇದರಲ್ಲಿ ಪೊಲೀಸರು ಮತ್ತು ಟಿಕೇಟ್ ಪರೀಕ್ಷಕರಿಗೆ ಭ್ರಷ್ಟಾಚಾರ ಮಾಡಲು ಆಗುವುದಿಲ್ಲ.

೨. ವ್ಯಾಪಾರದ ಸೋಗಿನಲ್ಲಿ ಅಪರಾಧಿಗಳಿಗೆ ಸಹಾಯ ಮಾಡುವುದು ಮತ್ತು ಪಂಚನಾಮೆಯ ಸಂದರ್ಭದಲ್ಲಿಯೂ ದೋಚಿದರೆ ಆರೋಪಿಯು ಅದನ್ನು ದುರುಪಯೋಗಿಸಿಕೊಂಡು ಅಪರಾಧದಿಂದ ಮುಕ್ತನಾಗುತ್ತಾನೆ

ಮುಂಬಯಿಯ ಲೋಕಲ್ ರೈಲು ಅಥವಾ ದೂರದ ಎಕ್ಸ್‌ಪ್ರೆಸ್ಸ್ ಇರಲಿ, ಅನಧಿಕೃತ ವ್ಯಾಪಾರಿಗಳು ಯಾವಾಗಲೂ ನಿಲ್ದಾಣದಲ್ಲಿ ನಮಗೆ ಕಾಣಿಸುತ್ತಾರೆ ಅಥವಾ ರೈಲ್ವೆಯಿಂದ ಪ್ರವಾಸ ಮಾಡುವುದು ಕಾಣಿಸುತ್ತದೆ. ಇದರಲ್ಲಿ ಎಷ್ಟು ಜನರು ನಿಜವಾಗಿ ಈ ವ್ಯಾಪಾರದ ಮೇಲೆ ಜೀವನವನ್ನು ನಡೆಸುತ್ತಾರೆ ಹಾಗೂ ಎಷ್ಟು ಜನರು ಈ ವ್ಯವಸಾಯದ ಮರೆಯಲ್ಲಿ ಅಪರಾಧಿಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದು ಇಲ್ಲಿ ಸಂಬಂಧಪಟ್ಟ ರೈಲ್ವೆನಿಲ್ದಾಣದಲ್ಲಿ ಕಾರ್ಯನಿರತವಾಗಿರುವ ಪೊಲೀಸರು ಮತ್ತು ರೈಲ್ವೇ ಸಿಬ್ಬಂದಿಗಳಲ್ಲಿ ಹೆಚ್ಚಿನವರಿಗೆ ಮಾಹಿತಿ ಇರುತ್ತದೆ. ಈ ವ್ಯಾಪಾರಿಗಳು ವರ್ಷಗಟ್ಟಲೆ ಇಂತಹವರ ಬೆಂಬಲದಿಂದಲೇ ಇಲ್ಲಿ ಅನುಮತಿಯಿಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ, ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ. ಇವರಲ್ಲಿ ಎಷ್ಟೋ ಜನರು ರೈಲ್ವೆಯಲ್ಲಿ ನಡೆಯುವ ಅಪರಾಧಗಳ ಸಮಯದಲ್ಲಿ ಸಾಕ್ಷಿದಾರರು ಅಥವಾ ಪಂಚರೆಂದೂ ನಿಲ್ಲುತ್ತಾರೆ. ಯಾವುದೇ ವ್ಯಕ್ತಿಯು ಪಂಚನಾಗುವುದು ಹಾಗೂ ಪೊಲೀಸರಿಗೆ ಸಹಾಯ ಮಾಡುವುದು, ತಪ್ಪಲ್ಲ, ಆದರೆ ಅನೇಕ ಬಾರಿ ಅರಿವಾದ ಅಂಶವೆಂದರೆ ಇಂತಹ ವ್ಯಕ್ತಿಗಳೊಂದಿಗೆ ಪಂಚನಾಮೆ ಮಾಡದೆಯೇ ಅವರಲ್ಲಿ ಮೊದಲೇ ಸಿದ್ಧವಿರುವ ಪಂಚನಾಮೆಯ ಮೇಲೆ ಕೇವಲ ಸಹಿ ಮಾಡಿಸಿಕೊಳ್ಳಲಾಗುತ್ತದೆ. ನಡೆದ ಅಪರಾಧದ ಮಾಹಿತಿಯೇ ಇಲ್ಲದ ಇಂತಹ ಪಂಚಸಾಕ್ಷಿದಾರರು ನ್ಯಾಯಾಲಯದಲ್ಲಿ ಸಾಕ್ಷಿ ನೀಡಲು ಬಂದಾಗ ಅಲ್ಲಿ ಅವರಿಗೆ ಯೋಗ್ಯ ರೀತಿಯಲ್ಲಿ ಸಾಕ್ಷಿಯನ್ನು ನೀಡಲು ಸಾಧ್ಯವಾಗುವುದಿಲ್ಲ. ಇದರಿಂದ ಆರೋಪಿಗೆ ಅದರ ಲಾಭವಾಗುತ್ತದೆ ಹಾಗೂ ಅವನ ಬಿಡುಗಡೆಯಾಗಲು ಸಾಧ್ಯವಾಗುತ್ತದೆ.

೩. ರೈಲ್ವೆಯ ಪರಿಸರದಲ್ಲಿರುವ ‘ಸಿ.ಸಿ.ಟಿ.ವಿ.’ ಕ್ಯಾಮೆರಾಗಳನ್ನು ಉಪಯೋಗಿಸಿ ಅಪರಾಧಿಗಳ ಮೇಲಿನ ಆರೋಪವನ್ನು ಸಿದ್ಧಪಡಿಸಲು ಪ್ರಯತ್ನಿಸುವ ಅವಶ್ಯಕತೆಯಿದೆ !

ಸದ್ಯ ರೈಲ್ವೇ ನಿಲ್ದಾಣದ ಪರಿಸರದಲ್ಲಿ ಭದ್ರತೆಗಾಗಿ ಅಲ್ಲಲ್ಲಿ ‘ಸಿ.ಸಿ.ಟಿ.ವಿ.’ಗಳನ್ನು ಅಳವಡಿಸಲಾಗಿದೆ. ಅಪರಾಧಗಳನ್ನು ಪತ್ತೆಹಚ್ಚಲು ಮತ್ತು ಆರೋಪಿಗಳನ್ನು ಹಿಡಿಯಲು ಅದರ ಲಾಭವಾಗುತ್ತದೆ; ಆದರೆ ಹೆಚ್ಚಿನ ಪ್ರಸಂಗಗಳಲ್ಲಿ ಇಂತಹ ‘ಸಿ.ಸಿ.ಟಿ.ವಿ.’ಗಳ ಚಿತ್ರೀಕರಣವು ನ್ಯಾಯಾಲಯದಲ್ಲಿ ಸಿದ್ಧವಾಗುವುದಿಲ್ಲ. ಅನೇಕ ಘಟನೆಗಳಲ್ಲಿ ಈ ಚಿತ್ರೀಕರಣಗಳನ್ನು ನ್ಯಾಯಾಲಯಕ್ಕೆ ಕೊಡುವುದೇ ಇಲ್ಲ. ಅದನ್ನು ಕೊಟ್ಟರೂ ತನಿಖಾಧಿಕಾರಿಗಳಿಗೆ ಇಲೆಕ್ಟ್ರಾನಿಕ್ ಪುರಾವೆಗಳನ್ನು ಸಿದ್ಧಪಡಿಸುವ ಪದ್ಧತಿಯ ಮಾಹಿತಿಯಿರುವುದಿಲ್ಲ. ಆದ್ದರಿಂದ ಹೆಚ್ಚಾಗಿ ಆರೋಪವನ್ನು ಸಿದ್ಧಪಡಿಸಲು ಪೊಲೀಸರು ವಿಫಲರಾಗುತ್ತಾರೆ. ಯಾವ ಕಂಪನಿಗೆ ‘ಸಿ.ಸಿ.ಟಿ.ವಿ.’ಯ ಗುತ್ತಿಗೆಯನ್ನು ನೀಡಲಾಗಿರುತ್ತದೋ, ಅದು ನಿಯಮಿತವಾಗಿ ‘ಸಿ.ಸಿ.ಟಿ.ವಿ.’ಯ ನಿರ್ವಹಣೆಯನ್ನು ಮಾಡಬೇಕು.

೪. ಪೊಲೀಸರಲ್ಲಿನ ತಾಂತ್ರಿಕ ಜ್ಞಾನದ ಅಭಾವ ಹಾಗೂ ಕಂಪನಿಗಳ ಸಿಬ್ಬಂದಿಗಳು ಕಾಗದಪತ್ರಗಳಲ್ಲಿ ತಜ್ಞರಾಗಿಲ್ಲದ ಕಾರಣ ಅಪರಾಧದಲ್ಲಿ ಅಡಚಣೆಯುಂಟಾಗುತ್ತದೆ.

ರೈಲ್ವೆಯ ಪ್ರಕರಣಗಳಲ್ಲಿ ಬಂದಿರುವ ಅನೇಕ ಅನುಭವಕ್ಕನುಸಾರ ಪೊಲೀಸರಿಗೆ ತಾಂತ್ರಿಕ ಜ್ಞಾನ ಇರುವುದಿಲ್ಲ. ನಿರ್ವಹಣೆಗಾಗಿ ಇಟ್ಟಿರುವ ಕಂಪನಿಗಳ ಸಿಬ್ಬಂದಿಗಳು ಕಾಗದಪತ್ರದಲ್ಲಿ ತಜ್ಞರಾಗಿರುವುದಿಲ್ಲ. ‘ಸಿ.ಸಿ.ಟಿ.ವಿ.’ಗಳ ಸಂಖ್ಯೆ, ಅವುಗಳು ಎಲ್ಲೆಲ್ಲಿ ಇವೆ ?’, ಅವುಗಳು ಸುಸ್ಥಿತಿಯಲ್ಲಿವೆಯೇ ? ಅವುಗಳ ಕೊನೆಯ ತಪಾಸಣೆ ಯಾವಾಗ ಮಾಡಲಾಗಿತ್ತು?’, ಇಂತಹ ಮಹತ್ವದ ಪ್ರಶ್ನೆಗಳಿಗೆ ಅವರಲ್ಲಿ ಯಾವುದೇ ಕಾಗದಪತ್ರಗಳ ಉತ್ತರಗಳಿರುವುದಿಲ್ಲ. ಅದರ ಪರಿಣಾಮವೆಂದು ‘ಘಟನೆಯ ಸಮಯದಲ್ಲಿ ಅಲ್ಲಿನ ‘ಕ್ಯಾಮೆರಾ ಸುಸ್ಥಿತಿಯಲ್ಲಿತ್ತು’, ಎಂಬುದನ್ನು ಸರಕಾರಿ ಪಕ್ಷ ಸಿದ್ಧಪಡಿಸಲು ಸಾಧ್ಯವಿಲ್ಲ. ಅದರಿಂದ ಅಪರಾಧಿಗೆ ಲಾಭವಾಗುತ್ತದೆ.

೫. ನ್ಯಾಯಾಂಗ ಪ್ರಕ್ರಿಯೆಯಿಂದ ಮುಕ್ತರಾಗಲು ಕುಶಲ ಅಪರಾಧಿಗಳಿಂದ ಮಾಡಲ್ಪಡುವ ಪ್ರಕ್ರಿಯೆಗಳು !

ಕುಶಲ ಅಪರಾಧಿಗಳಿಗೆ ನ್ಯಾಯಾಂಗ ಪ್ರಕ್ರಿಯೆಯಿಂದ ಹೇಗೆ ಬಿಡುಗಡೆಯಾಗಬೇಕೆಂದು ತಿಳಿದಿರುತ್ತದೆ. ಅನೇಕಬಾರಿ ದೋಷಾ ರೋಪಪತ್ರ ದಾಖಲಾಗುವವರೆಗೆ ಅವರು ಶಾಂತರೀತಿಯಿಂದ ಸೆರೆಮನೆಯಲ್ಲಿರುತ್ತಾರೆ. ಅನಂತರ ಅಪರಾಧವನ್ನು ಒಪ್ಪಿಕೊಂಡು ಸ್ವಲ್ಪ ಶಿಕ್ಷೆಯೊಂದಿಗೆ ಬಿಡುಗಡೆಯಾಗಿ ಪುನಃ ಅದೇ ಉದ್ಯೋಗವನ್ನು ಆರಂಭಿಸುತ್ತಾರೆ. ಪೊಲೀಸರಿಗೆ ಇವೆಲ್ಲ ಮಾಹಿತಿ ಇರುತ್ತದೆ. ಪೊಲೀಸರು ಅನೇಕ ಬಾರಿ ಇಂತಹ ಆರೋಪಿಗಳನ್ನು ಗಡಿಪಾರು ಮಾಡಿ ಸ್ವಖರ್ಚಿನಿಂದ ವಿಶಿಷ್ಟ ಸ್ಥಳಗಳಲ್ಲಿ ಬಿಟ್ಟು ಬರುತ್ತಾರೆ; ಆದರೆ ಕೆಲವೊಮ್ಮೆ ಪೊಲೀಸರು ಹಿಂತಿರುಗುವ ಮೊದಲೇ ಆರೋಪಿ ಹಿಂತಿರುಗಿ ಬಂದು ತನ್ನ ಚಟುವಟಿಕೆಗಳನ್ನು ಆರಂಭಿಸುತ್ತಾನೆ.

೬. ರೈಲ್ವೆಯಲ್ಲಿ ಕಳ್ಳತನ ಆಗಿರುವ ವಸ್ತುಗಳ ಬಗ್ಗೆ ಪ್ರವಾಸಿಗಳಿಗೆ ಜಟಿಲವಾದ ನ್ಯಾಯಾಂಗ ಪ್ರಕ್ರಿಯೆಯನ್ನು ಎದುರಿಸಬೇಕಾಗುವುದರಿಂದ ಅವರು ಪೊಲೀಸರಲ್ಲಿ ದೂರು ನೀಡಲು ಮುಂದಾಗುವುದಿಲ್ಲ

ಅನೇಕ ರೈಲ್ವೆ ನಿಲ್ದಾಣದ ಹೊರಗೆ ‘ಸೆಕೆಂಡ್ ಹ್ಯಾಂಡ್’ (ಇತರರು ಉಪಯೋಗಿಸಿದಂತಹ ವಸ್ತು) ಸಂಚಾರಿವಾಣಿ ಉಪಕರಣದ ಅಂಗಡಿಗಳಿರುತ್ತವೆ. ಆ ಸ್ಥಳದಲ್ಲಿ ಅನುಮತಿಯಿಲ್ಲದೆ ಬಹಿರಂಗವಾಗಿ ಸಂಚಾರಿವಾಣಿ ಉಪಕರಣಗಳನ್ನು ಮಾರಲಾಗುತ್ತದೆ. ಪ್ರತಿಯೊಂದು ಸಂಚಾರಿವಾಣಿ ಉಪಕರಣಕ್ಕೆ ‘ಐ.ಎಮ್.ಇ.ಐ.’ ಕ್ರಮಾಂಕ ಹಾಗೂ ಬಹಳಷ್ಟು ಉಪಕರಣಗಳಿಗೆ ‘ಟ್ರ್ಯಾಕರ್’ ಸಹ (ಸಂಚಾರಿವಾಣಿ ಉಪಕರಣವನ್ನು ಹುಡುಕುವ ಪದ್ಧತಿ) ಇರುತ್ತದೆ. ಆದರೂ ರೈಲ್ವೆನಿಲ್ದಾಣದ ಹೊರಗೆ ಇಂತಹ ಸಂಚಾರಿವಾಣಿ ಉಪಕರಣಗಳ ಮಾರಾಟ ನಿಂತಿಲ್ಲ. ಪ್ರವಾಸಿಗಳ ಸಂಚಾರಿವಾಣಿ ಉಪಕರಣ, ಪರ್ಸ್ ಅಥವಾ ಬ್ಯಾಗ್ ಇತ್ಯಾದಿ ಕಳ್ಳತನವಾದಾಗ ‘ಎಲ್ಲರೂ ಪೊಲೀಸರಲ್ಲಿ ದೂರನ್ನು ದಾಖಲಿಸುತ್ತಾರೆ’ ಎಂದು ಹೇಳಲು ಸಾಧ್ಯವಿಲ್ಲ. ಯಾರು ಪೊಲೀಸರಲ್ಲಿ ದೂರನ್ನು ದಾಖಲಿಸುತ್ತಾರೆ, ಅವರಿಗೆ ದೂರಿನ ನಂತರ ಅನೇಕ ಕಠಿಣ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ. ಪ್ರಾರಂಭದಿಂದಲೇ ಅವರಿಗೆ ಸಲಹೆ ಸಿಗಲು ಪ್ರಾರಂಭವಾಗುತ್ತದೆ. ಸಂಚಾರಿವಾಣಿ ಉಪಕರಣವನ್ನು ಹೇಗೆ ಜೋಪಾನ ಮಾಡಬೇಕೆಂದು ಹೇಳಲಾಗುತ್ತದೆ. ಅನಂತರ ಅದು ತನ್ನದೇ ಆಗಿದೆಯೆಂದು ಪೊಲೀಸರಿಗೆ ಪುರಾವೆ ನೀಡಲಾಗುತ್ತದೆ. ಪೊಲೀಸರು ಆರೋಪಿಯನ್ನು ಹಿಡಿಯುತ್ತಾರೆ ಹಾಗೂ ಉಪಕರಣವನ್ನು ವಶಪಡಿಸಿಕೊಂಡರೆ, ಅದನ್ನು ಗುರುತಿಸಲು ಹೋಗಬೇಕಾಗುತ್ತದೆ. ಅನಂತರ ಸ್ವಖರ್ಚಿನಿಂದ ಆ ಪ್ರಕರಣಕ್ಕಾಗಿ ನ್ಯಾಯವಾದಿಗಳ ಜೊತೆ ನ್ಯಾಯಾಲಯದ ಮಾಧ್ಯಮದಿಂದ ತನ್ನ ಕಳುವಾದ ವಸ್ತು ಹಿಂತಿರುಗಿ ಪಡೆಯಲು ಆದೇಶವನ್ನು ಪಡೆಯಬೇಕಾಗುತ್ತದೆ. ನ್ಯಾಯಾಲಯದಲ್ಲಿ ಖಟ್ಲೆ ಆರಂಭವಾದಾಗ ಸಾಕ್ಷಿ ನೀಡಲು ನ್ಯಾಯಾಲಯಕ್ಕೂ ಹೋಗಬೇಕಾಗುತ್ತದೆ, ಹಾಗೆಯೇ ವಿವಿಧ ಕಾರಣಗಳಿಗಾಗಿ ಒಂದಕ್ಕಿಂತ ಹೆಚ್ಚು ಬಾರಿ ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ. ಎದುರಾಳಿ ಪಕ್ಷದ ನ್ಯಾಯವಾದಿಗಳ ಅಡ್ಡಾದಿಡ್ಡಿ ಪ್ರಶ್ನೆಗಳಿಗೂ ಉತ್ತರಿಸಬೇಕಾಗುತ್ತದೆ. ಇದೆಲ್ಲ ಮಾಡಲು ಕೆಲವೊಮ್ಮೆ ಕಾರ್ಯಾಲಯದಲ್ಲಿ ರಜೆ ಪಡೆದು ಇವೆಲ್ಲ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಅನಂತರ ದೂರನ್ನು ದಾಖಲಿಸಿ ನಾವು ತಪ್ಪು ಮಾಡಿದೆವೋ ?’, ಎಂಬ ಪ್ರಶ್ನೆ ನಿರ್ಮಾಣವಾಗುತ್ತದೆ.

೭. ರೈಲ್ವೆಯಲ್ಲಿನ ಅಪರಾಧಗಳನ್ನು ಕಡಿಮೆಗೊಳಿಸಲು ವಿಶೇಷ ಉಪಾಯಯೋಜನೆ ಆವಶ್ಯಕವಾಗಿದೆ

ಅ. ರೈಲ್ವೆಯಲ್ಲಿ ನಡೆಯುವ ಅಪರಾಧಗಳನ್ನು ಕಡಿಮೆಗೊಳಿಸಲಿಕ್ಕಿದ್ದರೆ ವರ್ಷಗಟ್ಟಲೆ ಒಂದೇ ಸ್ಥಳದಲ್ಲಿ ಕಾರ್ಯನಿರತರಾಗಿರುವ ಪೊಲೀಸ್ ಮತ್ತು ರೈಲ್ವೆ ಸಿಬ್ಬಂದಿಗಳನ್ನು ನಿಯಮಾನುಸಾರ ವರ್ಗಾಯಿಸಬೇಕು.

ಆ. ಅನಧಿಕೃತ ವ್ಯಾಪಾರಿಗಳ ಪ್ರವೇಶವನ್ನು ನಿಲ್ಲಿಸಬೇಕು. ಅಧಿಕೃತ ಟಿಕೇಟ್ ಇದ್ದವರಿಗಷ್ಟೇ ರೈಲ್ವೆಯ ಪರಿಸರದಲ್ಲಿ ಪ್ರವೇಶ ನೀಡಬೇಕು.

ಇ. ಪ್ರವಾಸಿಗಳೂ ಅವರ ವಸ್ತುಗಳನ್ನು ವಿಶೇಷವಾಗಿ ಸಂಚಾರಿವಾಣಿಯನ್ನು ಜೋಪಾನ ಮಾಡಬೇಕು.

ಈ. ಅಪರಾಧಗಳ ತನಿಖೆ ಯೋಗ್ಯ ರೀತಿಯಲ್ಲಿ ಆಗುತ್ತದೆಯೇ ? ಅಥವಾ ಅದು ಹೇಗಾಗುತ್ತದೆ ? ಎಂಬುದನ್ನು ಮೇಲಧಿಕಾರಿಗಳು ಗಮನಿಸಬೇಕು. ಅವಶ್ಯಕತೆಯಿದ್ದರೆ ಆ ವಿಷಯದಲ್ಲಿ ಪೊಲೀಸರಿಗೆ ತರಬೇತಿ ನೀಡಬೇಕು. ಇವೆಲ್ಲವೂ ಯೋಗ್ಯರೀತಿಯಲ್ಲಿ ಆದರೆ ಮಾತ್ರ ರೈಲ್ವೆಯಲ್ಲಿನ ಅಪರಾಧಗಳು ಕಡಿಮೆಯಾಗಿ ದೋಷ ಸಿದ್ಧವಾಗುವ ಪ್ರಮಾಣ ಹೆಚ್ಚಾಗಲು ಸಹಾಯವಾಗಬಹುದು.

– ನ್ಯಾಯವಾದಿ ಪ್ರಕಾಶ ಸಾಳಸಿಂಗಿಕರ, ವಿಶೇಷ ಸರಕಾರಿ ನ್ಯಾಯವಾದಿಗಳು, ಮುಂಬಯಿ.