ಗಜವಾ-ಎ-ಗಢವಾ !

ಮತಾಂಧರು ಶತಮಾನಗಳಿಂದ ಭಾರತವನ್ನು ಇಸ್ಲಾಮೀಕರಣಗೊಳಿಸುವ ಕನಸು ಕಾಣುತ್ತಿದ್ದಾರೆ. ಇದನ್ನೇ ‘ಗಜವಾ-ಎ-ಹಿಂದ್’ ಎಂದು ಕರೆಯಲಾಗುತ್ತದೆ. ಅದಕ್ಕಾಗಿ ಇಂದಿಗೂ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರೆ ತಪ್ಪಾಗದು. ಭಾರತವು ವೇಗವಾಗಿ ಇಸ್ಲಾಮೀಕರಣಗೊಳ್ಳುತ್ತಿದೆ ಎಂದು ಹೇಳಿದರೆ ಅವರಿಗೆ ಹುಚ್ಚರೆನ್ನಬಹುದು. ಆದರೆ, ಇತ್ತೀಚೆಗೆ ಝಾರ್ಖಂಡ್‌ನ ಗಢವಾದಲ್ಲಿ ನಡೆದ ಘಟನೆ ಇದು ನಿಜ ಎಂಬುದನ್ನು ಸಾಬೀತುಪಡಿಸುತ್ತದೆ.

ಗಢವಾದ ಶಾಲೆಯೊಂದರಲ್ಲಿ ಮುಸಲ್ಮಾನ ವಿದ್ಯಾರ್ಥಿಗಳ ಸಂಖ್ಯೆ ಶೇ.೭೫ ಕ್ಕೆ ತಲುಪಿದ್ದರಿಂದ ಮುಸಲ್ಮಾನ ಸಮುದಾಯದ ಯುವಕರು ಶಾಲೆಯಲ್ಲಿ ಇಸ್ಲಾಮಿಕ್ ನಿಯಮಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಶಾಲೆಯ ಮುಖ್ಯೋಪಾಧ್ಯಾಯ ಯುಗೇಶ ರಾಮ ಮೇಲೆ ಒತ್ತಡ ಹೇರಿದ್ದರು. ಈ ಯುವಕರು ಶಾಲೆಯಲ್ಲಿ ಸಾಕಷ್ಟು ಗಲಾಟೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ಪ್ರಾರ್ಥನೆಯನ್ನು ‘ದಯಾ ಕರ ದಾನ ವಿದ್ಯಾ ಕಾ’ ಎಂಬ ಪ್ರಾರ್ಥನೆಯಲ್ಲಿ ‘ತೂ ಹಿ ರಾಮ ಹೈ, ತೂ ರಹೀಮ್ ಹೈ’ ಎಂದು ಬದಲಾಯಿಸುವಂತೆ ಒತ್ತಾಯಿಸಿದರು. ಈ ಪ್ರಾರ್ಥನೆಯನ್ನು ಹಿಂದಿನಂತೆ ಕೈ ಮುಗಿದು ಮಾಡಲಾಗುವುದಿಲ್ಲ, ಬದಲಾಗಿ ಕೈ ಕಟ್ಟಿ ಮಾಡಲಾಗುತ್ತದೆ. ಇದನ್ನೆಲ್ಲ ನೋಡಿದಾಗ ‘ಗಢವಾ ಭಾರತದಲ್ಲಿದೆಯಾ ಪಾಕಿಸ್ತಾನದಲ್ಲಿದೆಯಾ ?’ ಎಂಬ ಪ್ರಶ್ನೆ ಮೂಡುತ್ತದೆ. ಪ್ರಾರ್ಥನೆಗೆ ಕೈ ಮುಗಿಯುವುದು ಹಿಂದೂ ಧರ್ಮ ಮಾತ್ರವಲ್ಲ, ಅಧ್ಯಾತ್ಮಶಾಸ್ತ್ರವೂ ಹೌದು. ಪ್ರಾರ್ಥನೆ, ಹಾಗೆಯೇ ಯಾಚಕನ ಭಾವವು ಕೈಜೋಡಿಸುವುದರ ಮೂಲಕ ವ್ಯಕ್ತವಾಗುತ್ತದೆ. ಕೈಕಟ್ಟಿದರೆ ಅದು ಉದ್ಧಟತನವಾಗುತ್ತದೆ. ಅದರಲ್ಲಿ ಪ್ರಾರ್ಥನೆಯ ಭಾವ ಎಲ್ಲಿಂದ ಬರುತ್ತದೆ ? ಆದರೆ ಇದನ್ನು ಇಂತಹವರಿಗೆ ಯಾರು ಹೇಳುವರು ? ಹೇಳಬೇಕಾದವರು ಹಿಂದೂಗಳಿಗೆ ಮಾತ್ರ ಉಪದೇಶ ಮಾಡುವುದನ್ನು ಧನ್ಯರೆಂದು ತಿಳಿದುಕೊಳ್ಳುತ್ತಾರೆ. ನಮ್ಮದು ಜಾತ್ಯತೀತ ದೇಶವಾಗಿದೆ. ಇಲ್ಲಿನ ವ್ಯವಸ್ಥೆಯೂ ಜಾತ್ಯತೀತವಾಗಿದೆ. ನಾಯಕ ಮತ್ತು ಪ್ರಗತಿಪರರು ಹಿಂದೂಗಳಿಗೆ ಸರ್ವಧರ್ಮಸಮಭಾವದ ಬಗ್ಗೆ ಉಪದೇಶ ನೀಡುತ್ತಾರೆ. ಅಂತಹ ಜನರು ಮತಾಂಧರಿಗೆ ಸರ್ವಧರ್ಮಸಮಭಾವದ ಉಪದೇಶ ನೀಡುವುದಿಲ್ಲ ಎಂಬುದು ಗಮನದಲ್ಲಿಡಬೇಕು. ಅಂತಹ ಮತಾಂಧರ ಸಂದರ್ಭದಲ್ಲಿ ಅವರಿಗೆ ಅಭಿವ್ಯಕ್ತಿಸ್ವಾತಂತ್ರ್ಯ ಮಾತ್ರ ನೆನಪಾಗುತ್ತದೆ !

ಗಢವಾದ ಶಾಲೆಯಲ್ಲಿ ನಡೆದದ್ದು ರಾಷ್ಟ್ರೀಯ ಮತ್ತು ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಅತ್ಯಂತ ಭಯಾನಕವಾಗಿದೆ. ಗ್ರಾಮೀಣ ಪ್ರದೇಶದ ಶಾಲೆಯೊಂದರಲ್ಲಿ ಇಷ್ಟೊಂದು ಗೂಂಡಾಗಿರಿ ನಡೆಯುತ್ತಿದ್ದರೆ ಉಳಿದೆಡೆ ಏನಾಗುತ್ತಿರಬಹುದು ? ಈ ಬಗ್ಗೆ ವಿಚಾರ ಮಾಡದಿರುವುದೇ ಒಳಿತು ! ಮತಾಂಧರಿಗೆ ಭಾರತವನ್ನು ‘ಗಜವಾ-ಎ-ಹಿಂದ್’ ಮಾಡುವುದಿದೆ. ಗಢವಾದಲ್ಲಿನ ಶಾಲೆಯಲ್ಲಿ ನಡೆದದ್ದು ಅದರ ಕಿರುರೂಪವಾಗಿದೆ; ಆದುದರಿಂದಲೇ ಅವರನ್ನು ‘ಗಜವಾ-ಎ-ಗಢವಾ’ ಎಂದು ಕರೆದರೆ ಅತಿಶಯೋಕ್ತಿಯಾಗಬಾರದು. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಇಡೀ ಜಗತ್ತು ಕೈ ಜೋಡಿಸುವ ವಿಧಾನವನ್ನು ಅಳವಡಿಸಿಕೊಂಡಿದೆ. ಇಲ್ಲಿ ಝಾರ್ಖಂಡ್‌ನಲ್ಲಿ ಕೈ ಜೋಡಿಸುವ ಬದಲು ಕೈ ಕಟ್ಟಿ ಪ್ರಾರ್ಥಿಸುವ ಪವಾಡದ ವಿಧಾನವನ್ನು ಆರಂಭಿಸಲಾಯಿತು. ಮತಾಂಧರು ಕೇವಲ ಹಿಂದೂಗಳ ಧಾರ್ಮಿಕಶ್ರದ್ಧೆಯ ಮೇಲೆಯೇ ಆಕ್ಷೇಪಿಸಿದರೆ, ಅವರಿಗೆ ಕಷ್ಟವಾಗುತ್ತದೆ; ಏಕೆಂದರೆ ಹಿಂದೂಗಳು ಸೂರ್ಯನನ್ನು ತಮ್ಮ ದೇವರೆಂದು ನಂಬುತ್ತಾರೆ. ಆಗ ‘ಹಿಂದೂಗಳಿಗೆ ಯಾವುದು ಪವಿತ್ರವೋ ಅದು ಮತಾಂಧರಿಗೆ ನಿಷಿದ್ಧ ಎಂಬ ತತ್ತ್ವದ ಮೇಲೆ ಸೂರ್ಯನ ಬೆಳಕಿನ ವಿರುದ್ಧವೂ ಪ್ರತಿಭಟಿಸಬೇಕು. ಹಿಂದೂಗಳು ಪ್ರಕೃತಿಯನ್ನು ಆರಾಧಿಸಿದರೆ ಮತಾಂಧರು ಪ್ರಕೃತಿಯ ಹತ್ತಿರ ಹೋಗಬಾರದು. ಎಲ್ಲಿ ಒಳ್ಳೆಯದನ್ನು ಸ್ವೀಕರಿಸಲು ಕಲಿಸುವ ಹಿಂದೂ ಧರ್ಮ ಮತ್ತು ಎಲ್ಲಿ ಹಿಂದೂ ಧರ್ಮದ್ದೇನಿದ್ದರೂ ಅದು ತ್ಯಾಜ್ಯವೆಂಬ ಸಂಕುಚಿತ ಮಾನಸಿಕತೆಯಿರುವ ಮತಾಂಧರು ! ಇದೆಲ್ಲದರ ಬಗ್ಗೆ ಪ್ರಗತಿಪರರು ಬಾಯಿ ಮುಚ್ಚಿದ್ದಾರೆ.

ಅಲ್ಪಸಂಖ್ಯಾತರ ಓಲೈಕೆಯೇ ಇದಕ್ಕೆ ಕಾರಣ !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಂಸದರಾಗಿದ್ದಾಗ ಮಾಡಿದ ಭಾಷಣವೊಂದರಲ್ಲಿ ಗರ್ಜಿಸಿದ್ದರು. ಅದರಲ್ಲಿ ಅವರು ‘ಒಂದು ಪ್ರದೇಶದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಾದಂತೆ ಅವರ ನಡವಳಿಕೆಯಲ್ಲಿಯೂ ಬದಲಾವಣೆಯಾಗುತ್ತದೆ’, ಎಂದಿದ್ದರು. ಗಢವಾದಲ್ಲಿ ಇದೇ ರೀತಿಯದ್ದನ್ನು ಕಾಣಬಹುದು. ಅಲ್ಪಸಂಖ್ಯಾತರ ಪರಾಕಾಷ್ಠೆಯ ಓಲೈಕೆ ಮಾಡಿದರೆ ಏನಾಗುತ್ತದೆ, ಎಂಬುದು ಸದ್ಯ ಗಢವಾದಲ್ಲಿ ಕಂಡು ಬರುತ್ತಿದೆ. ಈ ಅಲ್ಪಸಂಖ್ಯಾತರು ಯಾವುದೇ ಪ್ರದೇಶ, ಶಾಲೆ, ಸಂಸ್ಥೆ ಇತ್ಯಾದಿಗಳಲ್ಲಿ ಬಹುಸಂಖ್ಯಾತರಾದರೆ, ತಕ್ಷಣವೇ ಅಲ್ಲಿ ಅವರ ಧರ್ಮದ ಪ್ರಕಾರ ನಿಯಮಗಳನ್ನು ಬಯಸುತ್ತಾರೆ. ಪ್ರಾರ್ಥನೆಗೆ ಪ್ರತ್ಯೇಕ ಸ್ಥಳದ ಅಗತ್ಯ ಇರುತ್ತದೆ. ಅವರ ಬೇಡಿಕೆಗಳು ಈಡೇರದಿದ್ದರೆ, ಅವರು ಆಕ್ರಮಣಕಾರಿಯಾಗುತ್ತಾರೆ. ಅಲ್ಪಸಂಖ್ಯಾತರು ಬಹುಸಂಖ್ಯಾತರಾದಾಗ ಸರಕಾರಿ ಶಾಲೆಗಳೂ ಮದರಸಾಗಳಾಗಿ ಪರಿವರ್ತನೆಯಾಗುತ್ತವೆ ಎಂಬುದಕ್ಕೆ ಗಢವಾದಲ್ಲಿ ನಡೆದ ಘಟನೆ ಉತ್ತಮ ಉದಾಹರಣೆಯಾಗಿದೆ. ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದ ಹಲವು ಶಾಲೆಗಳಲ್ಲಿ ಶ್ರೀ ಸರಸ್ವತಿ ದೇವಿಯ ಚಿತ್ರಕ್ಕೆ ಆಕ್ಷೇಪವಿತ್ತು. ಶ್ರೀ ಸರಸ್ವತಿದೇವಿಯು ವಿದ್ಯೆಯ ದೇವತೆಯಾಗಿರುವುದರಿಂದ ಶಾಲೆಯಲ್ಲಿ ದೇವಿಯ ಚಿತ್ರ ಇರುವುದು ಸಹಜವಿದೆ. ಇಲ್ಲಿಯವರೆಗೆ ಯಾರೂ ಅದನ್ನು ವಿರೋಧಿಸಿಲ್ಲ; ಆದರೆ ಕೆಲವು ಕೊಳಕು ಮೆದುಳಿನಲ್ಲಿ ಈ ಚಿತ್ರಗಳನ್ನು ತೆಗೆದುಹಾಕುವಂತೆ ಮಂಡಿಸಿದರು ಮತ್ತು ಅನೇಕರು ಅವರ ಕೆಲಸಕ್ಕೆ ಹೊರಗಿನಿಂದ ಬೆಂಬಲಿಸಿದರು. ಇದು ಕೆಲವು ಧರ್ಮದ್ರೋಹಿ ಹಿಂದೂಗಳು ಮಾಡುತ್ತಿರುವ ‘ಗಜವಾ-ಎ-ಹಿಂದ್’ ಎಂದು ಹೇಳಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮತಾಂಧರಿಗೆ ಏನು ಬೇಕೋ ಅದೇ ಧರ್ಮದ್ರೋಹಿ ಹಿಂದೂಗಳಿಗೂ ಬೇಕಾಗಿದೆ. ಇಬ್ಬರ ನಿಲುವು ಹಿಂದೂವಿರೋಧಿಯೇ ಆಗಿರುತ್ತದೆ. ಇಂತಹ ಧರ್ಮದ್ರೋಹಿ ಹಿಂದೂಗಳು ಮತಾಂಧರನ್ನು ಅನುಕರಿಸುತ್ತಾರೆ ಮತ್ತು ಮತಾಂಧರು ಧರ್ಮದ್ರೋಹಿ ಹಿಂದೂಗಳ ‘ಕಾಲು’ ಎಳೆಯುತ್ತಾರೆ.

ಕೇವಲ ಶಾಲೆಗಳಲ್ಲಿ ಶ್ರೀಮದ್ಭಗವದ್ಗೀತೆಯನ್ನು ಕಲಿಸಿ ಎಂದು ಬೇಡಿಕೆ ಮಾಡಿದರೂ ಶಿಕ್ಷಣವನ್ನು ಕೇಸರಿಕರಣಗೊಳಿಸಲಾಗುತ್ತಿದೆ ಎಂದು ಕೂಗುತ್ತಿರುವ ಪ್ರಗತಿಪರರು, ತಥಾಕಥಿತ ಶಿಕ್ಷಣತಜ್ಞರು, ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು, ಜಾತ್ಯತೀತರು ಮುಂತಾದವರು ಗಢವಾದ ಶಾಲೆ ಇಸ್ಲಾಮೀಕರಣ ಆಗುತ್ತಿರುವ ಬಗ್ಗೆ ಚಕಾರವೆತ್ತುವುದಿಲ್ಲ ? ಈ ನಿಟ್ಟಿನಲ್ಲಿ ಎಲ್ಲಾ ಹಿಂದೂಗಳು ಒಗ್ಗೂಡಿ ಸರಕಾರಿ ವ್ಯವಸ್ಥೆಗೆ ಕಾನೂನುಬದ್ಧವಾಗಿ ಬುದ್ಧಿ ಕಲಿಸಬೇಕು; ಇಂದು ಶಾಲೆಯಲ್ಲಿ ಮುಸಲ್ಮಾನರ ಸಂಖ್ಯೆ ಶೇಕಡಾ ೭೫ ರಷ್ಟಿದೆ ಎಂದು ಶಾಲೆಯಲ್ಲಿ ಇಸ್ಲಾಮಿಕ್ ನಿಯಮಗಳನ್ನು ಅನ್ವಯಿಸಲು ಬೇಡಿಕೆ ಮಾಡಲಾಯಿತು. ನಾಳೆ ಅವರ ಸಂಖ್ಯೆ ಹೆಚ್ಚಾದರೆ, ಪಠ್ಯಕ್ರಮವನ್ನು ವಿರೋಧಿಸಿ ಇಸ್ಲಾಂ ಧರ್ಮದ ಪ್ರಕಾರ ನಡೆಯಬೇಕೆಂದು ಒತ್ತಾಯಿಸುತ್ತಾರೆ, ನಂತರ ಅವರು ಶಾಲೆಯ ಸಮವಸ್ತ್ರವನ್ನು ವಿರೋಧಿಸುತ್ತಾರೆ ಮತ್ತು ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಧರಿಸಬೇಕೆಂದು ಒತ್ತಾಯಿಸುತ್ತಾರೆ ಮತ್ತು ಮುಂದೊಂದು ದಿನ ಅವರು ಶಾಲೆಯ ಹೆಸರನ್ನು ಬದಲಾಯಿಸುತ್ತಾರೆ. ‘ಇದೆಲ್ಲ ಗಢವಾದಿಂದ ಆರಂಭವಾಯಿತು’, ಎಂದು ಹೇಳಿದರೆ ತಪ್ಪಾಗದು. ಈಗಿನ ಕಾಲದ ತಥಾಕಥಿತ ಜಾತ್ಯತೀತ ಶಿಕ್ಷಣ ಪದ್ದತಿಯು ಶಾಲೆಯಲ್ಲಿ ‘ನ’ ಅನ್ನು ನಾರಾಯಣ ಎಂದು ಕಲಿಸದೇ ‘ನ’ಅನ್ನು ನಾಯಿ ಎಂದು ಕಲಿಸುತ್ತಿರುವುದರ ಪರಿಣಾಮ ಇದು, ಇನ್ನೇನು !

ನ್ಯಾಯಾಲಯಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿರುವುದು ಆಡಳಿತಕ್ಕೆ ಲಜ್ಜಾಸ್ಪದ !

‘ನಾನು ಮುಖ್ಯನ್ಯಾಯಾಧೀಶನಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಹಾಗೂ ಮೂಲಸೌಕರ್ಯಗಳ ಸುಧಾರಣೆಗೆ ಗಮನ ನೀಡುತ್ತಿದ್ದೇನೆ. ನ್ಯಾಯಾಲಯಗಳ ಸಂಖ್ಯೆ ಸಮರ್ಪಕವಾಗಿದ್ದರೆ ಮತ್ತು ಸೂಕ್ತ ಮೂಲಸೌಕರ್ಯಗಳಿದ್ದಾಗ ಮಾತ್ರ ಜನರಿಗೆ ನ್ಯಾಯ ನೀಡಲು ಸಾಧ್ಯವಿದೆ. ಆದ್ದರಿಂದ ನಾನು ಅದರತ್ತ ಗಮನ ಹರಿಸುತ್ತಿದ್ದೇನೆ. ಜಿಲ್ಲಾ ನ್ಯಾಯಾಲಯ, ಉಚ್ಚನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಇವುಗಳಲ್ಲಿ ಯಾವುದೇ ಖಾಲಿ ಹುದ್ದೆಗಳು ಇರಬಾರದು, ಎಂದು ನಾನು ಬಯಸುತ್ತೇನೆ’, ಎಂದು ಭಾರತದ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣ ಅವರು ಭಾಗ್ಯನಗರದಲ್ಲಿ (ತೆಲಂಗಾಣ) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಇತರ ಧರ್ಮಗಳ ನರಮೇಧ

‘ಪಾಕಿಸ್ತಾನದ ನಿರ್ಮಿತಿಯಾದಾಗಿನಿಂದ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಇತರ ಧರ್ಮದವರ ನರಮೇಧ ನಡೆಯುತ್ತಲೇ ಇದೆ. ಪಾಕಿಸ್ತಾನದಲ್ಲಿ ಶೇ. ೯ ರಷ್ಟಿದ್ದ ಹಿಂದೂಗಳು ಈಗ ಕೇವಲ ಶೇ.೧ ರಷ್ಟಿದ್ದರೆ, ಭಾರತದಲ್ಲಿ ಆಗ ಶೇ. ೩ ರಷ್ಟಿದ್ದ ಮುಸಲ್ಮಾನರು ಈಗ ಶೇ. ೧೫ ರಷ್ಟಿದ್ದಾರೆ.