ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಈಶ್ವರನೊಂದಿಗೆ ಏಕರೂಪವಾಗಲು ವ್ಯಷ್ಟಿ ಅಲ್ಲ, ಸಮಷ್ಟಿ ಸಾಧನೆಯೇ ಆವಶ್ಯಕ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಈಶ್ವರನು ಎಲ್ಲ ಜೀವಿಗಳ ಉದ್ಧಾರಕ್ಕಾಗಿ ಕಾರ್ಯನಿರತನಾಗಿರುತ್ತಾನೆ. ಇದು ಅವನ ವ್ಯಷ್ಟಿ ಅಲ್ಲ ಅದು ಸಮಷ್ಟಿ ಕಾರ್ಯವಾಗಿದೆ. ಅಂತಹ ಈಶ್ವರನೊಂದಿಗೆ ಏಕರೂಪವಾಗಬೇಕಾದರೆ ನಾವೂ ಸಮಷ್ಟಿ ಸಾಧನೆ ಮಾಡುವುದು (ಸಮಾಜದ ಉದ್ಧಾರಕ್ಕಾಗಿ ಪ್ರಯತ್ನಿಸುವುದು) ಆವಶ್ಯಕವಾಗಿದೆ.

– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ (೧೫.೬.೨೦೨೨)

ವೃದ್ಧ ತಂದೆ-ತಾಯಿಯವರ ಸಂದರ್ಭದಲ್ಲಿ ‘ಬಳಸಿ ಮತ್ತು ಎಸೆಯಿರಿ’ ಎಂಬ ತತ್ವವನ್ನು ಬಳಸುವ ಯುವ ಪೀಳಿಗೆ !

‘ಬಳಸಿ ಮತ್ತು ಎಸೆಯಿರಿ’ (Use and Throw) ಎಂಬುದು ಆಧುನಿಕ ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು ಇದನ್ನು ಅನೇಕ ಯುವಕರು ಅಳವಡಿಸಿಕೊಂಡಿದ್ದಾರೆ. ಹಾಗಾಗಿ ಜನ್ಮ ನೀಡಿದ ತಂದೆ-ತಾಯಿಗಳು ಹುಟ್ಟಿನಿಂದ ಹಿಡಿದು ಸ್ವಾವಲಂಬಿಯಾಗುವ ವರೆಗೆ ಎಲ್ಲ ರೀತಿಯಿಂದ ಕಾಳಜಿ ವಹಿಸಿದರೂ, ಉದಾ. ಅನಾರೋಗ್ಯದಲ್ಲಿ ಎಲ್ಲವನ್ನು ಮಾಡಿದರು, ಶಿಕ್ಷಣ ಕಲಿಸಿದರು, ಅವರ ಬಗ್ಗೆ ಕೃತಜ್ಞತೆ ಎನಿಸದೇ ಇಂದಿನ ಆಂಗ್ಲೀಕೃತ ಯುವಕರು ತಂದೆ-ತಾಯಿಯವರನ್ನು ಪಾಶ್ಚಿಮಾತ್ಯ ಸಂಸ್ಕೃತಿಯಂತೆ ‘ಬಳಸಿ ಮತ್ತು ಎಸೆಯಿರಿ’ ಈ ಪಾಶ್ಚಾತ್ಯರ ಆಧುನಿಕ ಸಂಸ್ಕೃತಿಗನುಸಾರ ವೃದ್ಧಾಶ್ರಮಕ್ಕೆ ಕಳುಹಿಸುತ್ತಾರೆ ಅಥವಾ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ. ಇದರ ಪಾಪವನ್ನು ಅವರು ಜನ್ಮಜನ್ಮಾಂತರದಲ್ಲಿ ಭೋಗಿಸಲೇಬೇಕಾಗುತ್ತದೆ.’

– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ

ಜೀವನದ ಸಮಸ್ಯೆಗಳನ್ನು ಸಕಾರಾತ್ಮಕ ಮತ್ತು ಕೃತಜ್ಞತೆಯುಕ್ತ ದೃಷ್ಟಿಯಿಂದ ನೋಡುವ ಸನಾತನದ ಓರ್ವ ಸಾಧಕನ ದೃಷ್ಟಿಕೋನ !

‘ಇತ್ತೀಚೆಗೆ ಓರ್ವ ವಯಸ್ಕರ ಸಾಧಕರ ಬಗ್ಗೆ ವಿಚಾರಿಸಿದಾಗ, ‘ಅವರು ಬಿದ್ದಿರುವುದರಿಂದ ಕೈಗೆ ಅಸ್ತಿಭಂಗವಾಗಿದೆ,’ ಎಂದು ತಿಳಿಯಿತು. ಆಗ ಆ ಸಾಧಕರು ಹತ್ತಿರದ ಸಾಧಕರಿಗೆ ಸಹಜವಾಗಿ ಹೇಳುತ್ತಾ, “ಒಳ್ಳೆದಾಯಿತು ! ಗುರುದೇವರ ಕೃಪೆಯಿಂದ ಯಾವುದೋ ಒಂದು ದೊಡ್ಡ ಸಂಕಟವು ಕೇವಲ ಅಸ್ತಿಭಂಗವಾಗಿ ಪಾರಾಗಿರಬಹುದು !’, ಎಂದರು. ಈ ಸಾಧಕರು ‘ಜೀವನದಲ್ಲಿ ಎಷ್ಟೇ ದೊಡ್ಡ ಸಮಸ್ಯೆಗಳು ಬಂದರೂ ಸಾಧಕರು ಸಕಾರಾತ್ಮಕವಾಗಿದ್ದು ಈಶ್ವರನ ಅನುಸಂಧಾನದಲ್ಲಿದ್ದು ಸಮಸ್ಯೆಗಳಿಂದ ಹೊರಬರಬಹುದು’ ಎಂಬುದನ್ನು ತೋರಿಸಿಕೊಟ್ಟರು.

– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ (೯.೧೦.೨೦೨೧)