ಸದ್ಗುರು ಪದವಿಯಲ್ಲಿ ವಿರಾಜಮಾನರಾದ ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಪೂ. ನೀಲೇಶ ಸಿಂಗಬಾಳ

ಸದ್ಗುರು ನೀಲೇಶ ಸಿಂಗಬಾಳ

ಫೋಂಡಾ (ಗೋವಾ) – ಉತ್ತರ ಭಾರತದಲ್ಲಿ, ಪ್ರತಿಕೂಲ ಪರಿಸ್ಥಿತಿಯಲ್ಲೂ ಧರ್ಮಪ್ರಚಾರದ ಕಾರ್ಯವನ್ನು ಅತ್ಯಂತ ತಳಮಳದಿಂದ ಮಾಡುವ ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಪೂ. ನೀಲೇಶ ಸಿಂಗಬಾಳ ಅವರು ಸದ್ಗುರು ಪದದಲ್ಲಿ ವಿರಾಜಮಾನರಾಗಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಘೋಷಿಸಿದರು. ಈ ವೇಳೆ ಪರಾತ್ಪರ ಗುರು ಡಾ. ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಮತ್ತು ಸದ್ಗುರು ನೀಲೇಶ ಸಿಂಗಬಾಳ ಅವರ ಪತ್ನಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಅವರನ್ನು ಸನ್ಮಾನಿಸಿದರು.