‘ಯಾರಾದರೊಬ್ಬ ಆಧುನಿಕ ವೈದ್ಯನಿಗೆ (ಡಾಕ್ಟರರಿಗೆ) ಒಂದೇ ಔಷಧಿಯು ಗೊತ್ತಿದ್ದರೆ ಆ ಔಷಧಿಯಿಂದ ಎಲ್ಲ ರೋಗಿಗಳು ಗುಣಮುಖರಾಗುವುದಿಲ್ಲ; ಏಕೆಂದರೆ ಕೆಲವು ರೋಗಿಗಳಿಗೆ ಅವರ ಕಾಯಿಲೆಗಳಿಗನುಸಾರ ಬೇರೆ ಔಷಧಿಗಳ ಅವಶ್ಯಕತೆ ಇರುತ್ತದೆ. ಸಾಧನೆಯಲ್ಲಿಯೂ ಹೀಗೆಯೇ ಇರುತ್ತದೆ. ಎಲ್ಲರಿಗೂ ಒಂದೇ ಸಾಧನಾಮಾರ್ಗವು ಉಪಯುಕ್ತವಾಗಿರುವುದಿಲ್ಲ. ಪ್ರಾರಬ್ಧ, ಹಿಂದಿನ ಜನ್ಮದ ಸಾಧನೆ, ಸಾಧನೆ ಮಾಡುವ ಕ್ಷಮತೆ ಇವುಗಳಂತಹ ವಿವಿಧ ಅಂಶಗಳಿಗನುಸಾರ ಪ್ರತಿಯೊಬ್ಬರ ಸಾಧನಾಮಾರ್ಗವು ನಿಶ್ಚಿತವಾಗಿರುತ್ತದೆ. ಹೆಚ್ಚಿನ ಸಂಪ್ರದಾಯದವರಿಗೆ ಒಂದೇ ಸಾಧನಾಮಾರ್ಗವು ಗೊತ್ತಿರುವುದರಿಂದ ಅವರು ತಮ್ಮ ಬಳಿಗೆ ಬರುವ ಪ್ರತಿಯೊಬ್ಬನಿಗೆ ಒಂದೇ ಸಾಧನೆಯನ್ನು ಹೇಳುತ್ತಾರೆ. ಇದರಿಂದಾಗಿ ಕಾಲಾಂತರದಲ್ಲಿ ಆ ಸಾಧನೆಯ ಪದ್ಧತಿಯಿಂದ ಪರಿವರ್ತನೆಯಾಗದಿರುವುದರಿಂದ ಅನೇಕ ಜನರು ಸಾಧನೆ ಮಾಡುವುದನ್ನು ಬಿಟ್ಟುಬಿಡುತ್ತಾರೆ ಅಥವಾ ಅವರು ಹೇಳಿದ ಸಾಧನೆಯನ್ನು ಮಾಡುತ್ತಿದ್ದರೂ, ಅವರ ಸಾಧನೆಯಲ್ಲಿ ಪ್ರಗತಿ ಆಗುವುದಿಲ್ಲ. ಇದನ್ನು ತಡೆಗಟ್ಟಲು ಸರ್ವಸಂಪ್ರದಾಯದವರು ‘ಎಷ್ಟು ವ್ಯಕ್ತಿಗಳು, ಅಷ್ಟು ಪ್ರಕೃತಿ, ಅಷ್ಟೇ ಸಾಧನಾ ಮಾರ್ಗಗಳು’, ಈ ನಿಯಮವನ್ನು ಗಮನದಲ್ಲಿಡಬೇಕು. ಅವರ ಬಳಿಗೆ ಬರುವ ಜಿಜ್ಞಾಸುವಿಗೆ ಅವನಿಗೆ ಆವಶ್ಯಕವಾಗಿರುವ ಸಾಧನೆಯನ್ನು ಕಲಿಸಬೇಕು. ಸನಾತನದ ಸಾವಿರಾರು ಸಾಧಕರಲ್ಲಿ ಯಾರಿಬ್ಬರ ಸಾಧನೆಯು ಒಂದೇ ತರಹ ಇಲ್ಲದಿರುವುದಕ್ಕೆ ಇದು ಒಂದು ಕಾರಣವಾಗಿದೆ.
– (ಪರಾತ್ಪರ ಗುರು) ಡಾ. ಆಠವಲೆ (೭.೯.೨೦೨೧)
ಭಾವಸೂಚನೆರಾಮನಾಥಿ ಆಶ್ರಮದ ಸೌ. ಸ್ವಾತಿ ಶಿಂದೆ (ಆಧ್ಯಾತ್ಮಿಕ ಮಟ್ಟ ೬೬) ಇವರು ಹೇಳಿದ ಸ್ವಯಂಸೂಚನೆ ಮುಂದಿನಂತಿದೆ. ‘ಪ್ರತಿಯೊಂದು ಕೃತಿಯನ್ನು ಭಾವಕ್ಕೆ ಜೋಡಿಸಿ ಭಾವಪೂರ್ಣ ಮಾಡಿದ ನಂತರವೇ ‘ನಾನು’ ಇದರ ಅಂದರೆ ಅಹಂನ ಪ್ರಮಾಣ ಕಡಿಮೆಯಾಗಿ ನನ್ನ ಭಾವ ಹೆಚ್ಚಾಗಲಿದೆ. ಅದರಿಂದ ನನಗೆ ಈಶ್ವರನ ಅಸ್ತಿತ್ವದ ಅರಿವಾಗಲಿದೆ, ಎಂಬುದನ್ನು ಗಮನದಲ್ಲಿಟ್ಟು ನಾನು ಪ್ರತಿಯೊಂದು ಕೃತಿಗೆ ಭಾವವನ್ನು ಜೋಡಿಸಿ ಅದನ್ನು ಭಾವಪೂರ್ಣವಾಗಿ ಮಾಡುವೆನು.’ |
ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿಯನ್ನು ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮದಲ್ಲಿನ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಅನುಭೂತಿ : ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |