ಭಾವಜಾಗೃತಿಗಾಗಿ ನಿರಂತರ ಪ್ರಯತ್ನಿಸುವುದು ಏಕೆ ಮಹತ್ವದ್ದಾಗಿದೆ ?

ಸದ್ಗುರು (ಡಾ.) ಮುಕುಲ ಗಾಡಗೀಳ

‘ಸಾಧಕರು ಗಮನದಲ್ಲಿಡಬೇಕಾದ ವಿಷಯವೆಂದರೆ, ನಾವು ಸಾಧನೆಯಲ್ಲಿ ಎಷ್ಟೇ ಮುಂದೆ ಹೋದರೂ, ನಮಗೆ ನಡುನಡುವೆ ಭಾವದ ಸ್ಥಿತಿಯಲ್ಲಿರಲು ಸಾಧ್ಯವಾಗಬೇಕು. ನಮ್ಮ ಮನಸ್ಸಿನಲ್ಲಿ ಭಾವವಿದ್ದರೆ ಈಶ್ವರನ ಕೃಪಾಶೀರ್ವಾದ ಲಭಿಸಲಿಕ್ಕಿದೆ. ಅನೇಕ ವರ್ಷಗಳು ಸಾಧನೆ ಮಾಡಿಯೂ ಉನ್ನತಿಯಾಗದ ಸಾಧಕರು ಹಾಗೂ ಸ್ವಭಾವದೋಷ-ನಿರ್ಮೂಲನೆ ಹಾಗೂ ಅಹಂ-ನಿರ್ಮೂಲನೆ ಪ್ರಕ್ರಿಯೆಗಾಗಿ ಬಂದಿರುವ ಸಾಧಕರು ತಮ್ಮನ್ನು ನಿರೀಕ್ಷಣೆ ಮಾಡಿದಾಗ ಅರಿವಾಗುವುದೇನೆಂದರೆ, ಸಾಧನೆಯ ಆರಂಭದಲ್ಲಿ ಹೇಗೆ ಸಹಜವಾಗಿ ಭಾವಜಾಗೃತಿ ಆಗುತ್ತಿತ್ತೋ, ಹಾಗೆ ಈಗ ಆಗುವುದಿಲ್ಲ. ಆಗ ಪ.ಪೂ. ಭಕ್ತರಾಜ ಮಹಾರಾಜ, ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರ ಅಥವಾ ದೇವತೆಯ ಚಿತ್ರವನ್ನು ನೋಡಿದಾಗ ತಕ್ಷಣ ಕೈಜೋಡಿಸಲ್ಪಡುತ್ತಿತ್ತು ಹಾಗೂ ಪ್ರಾರ್ಥನೆಯಾಗುತ್ತಿತ್ತು; ಆದರೆ ಈಗ ಹಾಗೆ ಆಗುವುದಿಲ್ಲ. ಹಿಂದೆ ನಾಮಜಪ ಮಾಡಲು ನೆನಪಾಗುತ್ತಿತ್ತು; ಆದರೆ ಈಗ ಆಗುವುದಿಲ್ಲ. ಜವಾಬ್ದಾರಿ ವಹಿಸಿ ಸೇವೆ ಮಾಡಲು ಆರಂಭಿಸಿರುವುದರಿಂದ ‘ನಮಗೆ ಎಲ್ಲವೂ ಸಾಧ್ಯವಾಗುತ್ತಿದೆ’, ಎಂದು ಅನಿಸುತ್ತದೆ. ಆದ್ದರಿಂದ ದೇವರ ಸಹಾಯವನ್ನು ಪಡೆಯದಿರುವುದರಿಂದ ಸೇವೆ ಭಾವಪೂರ್ಣ ಆಗುವುದಿಲ್ಲ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ನಮ್ಮಲ್ಲಿ ಭಾವದ ಅಭಾವವಾಗಿದೆ. ಭಾವದ ಅಭಾವದಿಂದ ನಮ್ಮ ಅಹಂ ಹೆಚ್ಚಾಗಿದೆ ಹಾಗೂ ನಮ್ಮಿಂದ ತಪ್ಪುಗಳು ಆಗುತ್ತಿವೆ. ನಿರಂತರ ಭಾವದ ಸ್ಥಿತಿಯಲ್ಲಿರಲು ಪ್ರಯತ್ನಿಸಿದರೆ ಮಾತ್ರ ನಾವು ನಿಯಂತ್ರಣದಲ್ಲಿರಬಹುದು. ಗುರು ಮತ್ತು ಗುರುಸೇವೆಯ ಬಗ್ಗೆ ಭಾವ ಇದ್ದರೆ, ಮಾತ್ರ ನಮ್ಮ ಮೇಲೆ ಗುರುಕೃಪೆಯಾಗುವುದು. ನಮ್ಮಲ್ಲಿ ಕರ್ತೃತ್ವದ ವಿಚಾರ ಬರುವುದಿಲ್ಲ ಹಾಗೂ ನಮ್ಮಿಂದ ತಪ್ಪುಗಳೂ ಆಗಲಿಕ್ಕಿಲ್ಲ. ಆದ್ದರಿಂದ ಸಾಧನೆಯ ಆರಂಭದಲ್ಲಿ ನಾವು ಹೇಗೆ ಭಾವಜಾಗೃತಿಯ ಪ್ರಯತ್ನ ಮಾಡುತ್ತಿದ್ದೆವೋ, ಹಾಗೆಯೇ ಮುಂದೆಯೂ ಪ್ರಯತ್ನಿಸುವುದು ಮುಂದಿನ ಉನ್ನತಿಗಾಗಿ ಆವಶ್ಯಕವಾಗಿದೆ.

– ಸದ್ಗುರು ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ ಗೋವಾ.