‘ಭಾರತ ಭೂಮಿಯ ಮೇಲೆ ಅನೇಕ ಗುರು-ಶಿಷ್ಯರು ಆಗಿ ಹೋದರು. ಈಗಲೂ ಇದ್ದಾರೆ ಮತ್ತು ಮುಂದೆಯೂ ಇರುತ್ತಾರೆ; ಆದರೆ ಪ.ಪೂ. ಭಕ್ತರಾಜ ಮಹಾರಾಜರು ಬೋಧನೆಗನುಸಾರ ಮತ್ತು ಅವರ ಸಂಕಲ್ಪಕ್ಕನುಸಾರ ರಾಷ್ಟ್ರ ಮತ್ತು ಧರ್ಮದ ಉದ್ಧಾರದ ಸಂಕಲ್ಪ ಮಾಡುವ, ಗುರುಕಾರ್ಯದ ಮಹತ್ವವನ್ನು ಎಲ್ಲೆಡೆ ಹರಡುವ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ (ರಾಮರಾಜ್ಯದ ಸ್ಥಾಪನೆಯ) ಸಂಕಲ್ಪ ಮಾಡಿ ಹಿಂದೂ ರಾಷ್ಟ್ರದ ಧ್ವಜವನ್ನು ಹಾರಿಸುವ ಅವರ ಪರಮಶಿಷ್ಯ (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಇವರು ಏಕಮೇವಾದ್ವಿತೀಯ ‘ಪಿತಾಮಹ’ ಆಗಿದ್ದಾರೆ.
ಪರಾತ್ಪರ ಗುರು ಡಾ. ಆಠವಲೆಯವರು ಗುರುಗಳ ಸಂಕಲ್ಪವನ್ನು ಪೂರ್ಣಗೊಳಿಸುವುದಕ್ಕಾಗಿಯೇ ತಮ್ಮ ಸರ್ವಸ್ವವನ್ನು ಗುರುಚರಣಗಳಿಗೆ ಸಮರ್ಪಿಸಿದ್ದಾರೆ. ಮಾನಸೋಪಚಾರತಜ್ಞರಾಗಿ, ವಿದೇಶದಲ್ಲಿ ವಾಸವಾಗಿದ್ದರೂ ಅವರು ಸರ್ವಸ್ವವನ್ನು ತ್ಯಾಗ ಮಾಡಿ ಗುರುಕಾರ್ಯಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಕೆಲವು ಜನರು ಭೋಗ ಭೂಮಿಗೆ ಹೋಗಿ ಪ್ರಪಂಚವನ್ನು ಮಾಡಿ ಬಳಿಕ ಪರಮಾರ್ಥ ಮಾಡುತ್ತಿದ್ದಾರೆ; ಆದರೆ ಪರಾತ್ಪರ ಗುರು ಡಾ. ಆಠವಲೆಯವರು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅವರ ಅವತಾರವೇ ಈ ಭೂಮಿಯ ಮೇಲೆ ರಾಮರಾಜ್ಯ ಸ್ಥಾಪನೆಗಾಗಿಯೇ (ಹಿಂದೂ ರಾಷ್ಟ್ರ ಸ್ಥಾಪನೆಗಾಗಿ) ಆಗಿದೆ. ಈ ಭಾರತಭೂಮಿಯ ಮೇಲಿನ ತಾಮ್ರದ ಫಲಕದ ಮೇಲೆ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಹೆಸರು ‘ಹಿಂದೂ ರಾಷ್ಟ್ರದ ಪಿತಾಮಹ’ ಎಂದು ಸುವರ್ಣಾಕ್ಷರಗಳಲ್ಲಿ ಹೊಳೆಯಲಿದೆ’.
ತಮ್ಮ ಚರಣಸೇವಕ ದಾಸ,
ಪ.ಪೂ. ದಾಸ ಮಹಾರಾಜ, ಪಾನವಳ-ಬಾಂದಾ, ಜಿಲ್ಲಾ ಸಿಂಧುದುರ್ಗ (೫.೭.೨೦೨೧)