Temple Renovation in Pakistan : 64 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಜೀರ್ಣೋದ್ಧಾರ

ಪಾಕಿಸ್ತಾನ ಸರಕಾರದಿಂದ ಒಂದು ಕೋಟಿ ರೂಪಾಯಿ ಬಿಡುಗಡೆ

ಲಾಹೋರ್ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿರುವ ಬಾವೊಲಿ ಸಾಹಿಬ್ ಎಂಬ ಹಿಂದೂ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಪಾಕಿಸ್ತಾನ ಸರಕಾರವು 1 ಕೋಟಿ ಪಾಕಿಸ್ತಾನಿ ರೂಪಾಯಿಗಳ ನಿಧಿಯನ್ನು ಅನುಮೋದಿಸಿದೆ. ಈ ದೇವಾಲಯವು 1960 ರಿಂದ ಶಿಥಿಲಾವಸ್ಥೆಯಲ್ಲಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳಿಗೆ ಸಂಬಂಧಿಸಿದ ಸಂಸ್ಥೆಯಾದ ‘ಇವಾಕ್ಯುಯೇಶನ್ ಪ್ರಾಪರ್ಟಿ ಟ್ರಸ್ಟ್’ ದೇವಾಲಯವನ್ನು ನಿರ್ಮಿಸಲಿದೆ. ಈ ದೇವಾಲಯದ ತಳಹದಿ ಅಗೆಯುವ ಕಾರ್ಯವೂ ಆರಂಭವಾಗಿದೆ. ದೇವಾಲಯದ ನಿರ್ಮಾಣ ಪೂರ್ಣಗೊಂಡ ನಂತರ ಅದನ್ನು ಪಾಕ್ ಧರ್ಮಸ್ಥಾನ ಸಮಿತಿಗೆ ಹಸ್ತಾಂತರಿಸಲಾಗುವುದು. 64 ವರ್ಷಗಳ ನಂತರ ಈಗ ಈ ದೇವಸ್ಥಾನದ ನಿರ್ಮಾಣ ಆಗುತ್ತಿರುವುದರಿಂದ ಗ್ರಾಮದಲ್ಲಿನ ಹಿಂದೂಗಳು ಸಂತಸ ವ್ಯಕ್ತಪಡಿಸಿದ್ದಾರೆ.

1. ಈ ಗ್ರಾಮದಲ್ಲಿ ಯಾವುದೇ ದೇವಾಲಯವಿಲ್ಲದ ಕಾರಣ ಹಿಂದೂಗಳು ಪೂಜೆಗಾಗಿ ಲಾಹೋರ್ ಅಥವಾ ಸಿಯಾಲ್ ಕೋಟ್ ನಲ್ಲಿರುವ ದೇವಾಲಯಗಳಿಗೆ ಹೋಗಬೇಕಾಗಿತ್ತು. ಆದ್ದರಿಂದ ಈ ದೇವಸ್ಥಾನದ ನಿರ್ಮಾಣ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದರು.

2. ಪಾಕಿಸ್ತಾನ ಧರ್ಮಸ್ಥಾನ ಸಮಿತಿಯ ಅಧ್ಯಕ್ಷ ಸಾವನ್ ಚಂದ್ ಮಾತನಾಡಿ, ನಾವು ಕಳೆದ 20 ವರ್ಷಗಳಿಂದ ಮಂದಿರದ ನಿರ್ಮಾಣಕ್ಕಾಗಿ ಬೆಂಬೆತ್ತುವಿಕೆ ಮಾಡುತ್ತಿದ್ದೇವೆ. ನಮ್ಮ ಪ್ರಯತ್ನಗಳಿಗೆ ಈಗ ಯಶಸ್ಸು ಕಾಣುತ್ತಿವೆ. ಅದಕ್ಕಾಗಿ ಪಾಕಿಸ್ತಾನ ಸರಕಾರಕ್ಕೆ ಆಭಾರಿಯಾಗಿದ್ದೇವೆ. ಈ ನಿರ್ಧಾರದಿಂದಾಗಿ ಈಗ ಗ್ರಾಮದಲ್ಲಿನ ಹಿಂದೂಗಳು ಪೂಜೆ ಸಲ್ಲಿಸಲು ಸಾಧ್ಯವಾಗುವುದು ಎಂದರು.

ಸಂಪಾದಕೀಯ ನಿಲುವು

ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ನಾವು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗಾಗಿ ಏನನ್ನಾದರೂ ಮಾಡುತ್ತಿದ್ದೇವೆ’, ಎಂದು ಈ ಮೂಲಕ ತೋರಿಸಿ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಲು ಪಾಕಿಸ್ತಾನ ಸರಕಾರ ಹೀಗೆ ಕಾರ್ಯ ಮಾಡುತ್ತಿದೆ. ಹಿಂದೂಗಳು ಇದನ್ನು ಅರ್ಥ ಮಾಡಿಕೊಳ್ಳದಷ್ಟು ಮೂರ್ಖರಲ್ಲ !