|
ಲಾಹೋರ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ ಮುಖ್ಯಮಂತ್ರಿ ಮರಿಯಮ ನವಾಜ ಇವರು ಗುರುನಾನಕ ಜಯಂತಿ ಮತ್ತು ದೀಪಾವಳಿಯ ಮೊದಲು ರಾಜ್ಯದ 2 ಸಾವಿರದ 200 ಸಿಖ್ಖರು ಮತ್ತು ಹಿಂದೂ ಕುಟುಂಬಗಳಿಗೆ ತಲಾ 10 ಸಾವಿರ ಪಾಕಿಸ್ತಾನಿ ರೂಪಾಯಿ (ಸುಮಾರು 3 ಸಾವಿರ ಭಾರತೀಯ ರೂಪಾಯಿ) ನೀಡಲು ನಿರ್ಧರಿಸಿದ್ದಾರೆ. ಇದಲ್ಲದೇ ಬಲೂಚಿಸ್ತಾನ ಸರಕಾರವೂ ಹಿಂದೂ ನೌಕರರಿಗೆ ದೀಪಾವಳಿಯ ನಿಮಿತ್ತ 3 ದಿನಗಳ ರಜೆಯನ್ನು ಘೋಷಿಸಿದೆ.
1. ಪಂಜಾಬ ಸರಕಾರದ ವಕ್ತಾರರು, ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಹಿಂದೂ ಮತ್ತು ಸಿಖ್ ಸಹೋದರರಿಗೆ ‘ಉತ್ಸವ್ ಕಾರ್ಡ್’ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ವರ್ಷದಿಂದ ಹಿಂದೂ ಮತ್ತು ಸಿಖ್ ಕುಟುಂಬಗಳಿಗೆ ಉತ್ಸವ್ ಕಾರ್ಡ್ ಕಾರ್ಯಕ್ರಮದ ಭಾಗವಾಗಿ ವಾರ್ಷಿಕ ಆರ್ಥಿಕ ನೆರವು ಸಿಗಲಿದೆ. ಇದಕ್ಕೆ ಪಂಜಾಬ ಸರಕಾರದ ಸಚಿವ ಸಂಪುಟ ಸಮ್ಮತಿಸಿದೆ.
2. ಪಾಕಿಸ್ತಾನದಲ್ಲಿ ಈ ಬಾರಿ ದೀಪಾವಳಿಯನ್ನು ಅಕ್ಟೋಬರ್ 31 ರಿಂದ ನವೆಂಬರ್ 2 ರವರೆಗೆ ಆಚರಿಸಲಾಗುತ್ತದೆ. ನವೆಂಬರ್ 15ರಂದು ಗುರುನಾನಕ ಜಯಂತಿ ಇದೆ. ಈ ಜಯಂತಿ ನಿಮಿತ್ತ ಬರುವ ವಿದೇಶಿ ಯಾತ್ರಿಕರಿಗಾಗಿಯೂ ವಿಶೇಷ ವ್ಯವಸ್ಥೆಯನ್ನು ಮಾಡಲಾಗುತ್ತಿದೆಯೆಂದು ಅಧಿಕಾರಿ ಹೇಳಿದರು.
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಸಿಖ್ಕರ ರಕ್ಷಣೆಯಾಗಲಿದೆಯೇ ? ಇದೇ ಪ್ರಶ್ನೆಯಾಗಿದೆ ! |