ಸೂಕ್ಷ್ಮದಿಂದ ಜ್ಞಾನ ಪಡೆಯುವ ಸೇವೆ ಮಾಡುವಾಗ ಜ್ಞಾನ ಪಡೆಯುವ ಸಾಧಕ ಶ್ರೀ. ರಾಮ ಹೊನಪ ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರಿಂದ ಕಲಿಯಲು ಸಿಕ್ಕಿದ ವೈಶಿಷ್ಟ್ಯಪೂರ್ಣ ವಿಷಯಗಳು

೧. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸೂಕ್ಷ್ಮದ ಜ್ಞಾನ ಪಡೆಯಲು ಹೇಳಿರುವುದರ ಹಿಂದೆ  ‘ಸಮಾಜಕ್ಕೆ ಸಾಧನೆಯ ಮಹತ್ವ ತಿಳಿಯಬೇಕು’ ಎಂಬ ಉದ್ದೇಶ ಇದೆ

ಪರಾತ್ಪರ ಗುರು ಡಾ. ಆಠವಲೆ

 

‘ದೇವರ ಕೃಪೆಯಿಂದ ಫೆಬ್ರವರಿ ೨೦೦೩ ರಿಂದ ನನಗೆ ಸೂಕ್ಷ್ಮಜ್ಞಾನ ಪ್ರಾಪ್ತಿಯಾಗಲು ಆರಂಭವಾಯಿತು. ಇದು ಸನಾತನ ಸಂಸ್ಥೆಯ ಇತಿಹಾಸದಲ್ಲಿನ ಮೊದಲ ಘಟನೆಯಾಗಿತ್ತು. ಆಗ ಪರಾತ್ಪರ ಗುರು ಡಾಕ್ಟರರು ಅಧ್ಯಾತ್ಮದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಹೊಸ ಹೊಸ ಪ್ರಶ್ನೆಗಳನ್ನು ನನಗೆ ಕೊಟ್ಟು ಅವುಗಳಿಗೆ ಉತ್ತರವನ್ನು ಪಡೆಯಲು ಹೇಳುತ್ತಿದ್ದರು. ಪರಾತ್ಪರ ಗುರು ಡಾಕ್ಟರರು ಈ ಪ್ರಕ್ರಿಯೆಯನ್ನು ಮಾಡುವುದರ ಹಿಂದಿನ ಉದ್ದೇಶ ಈ ಮುಂದಿನಂತೆ ಇತ್ತು, ‘ಅಧ್ಯಾತ್ಮದಲ್ಲಿ ಜಿಜ್ಞಾಸುಗಳ ಮನಸ್ಸಿನಲ್ಲಿ ಬರುವ ಪ್ರಶ್ನೆಗಳಿಗೆ ಅವರಿಗೆ ಅಧ್ಯಾತ್ಮಶಾಸ್ತ್ರೀಯ ಭಾಷೆಯಲ್ಲಿ ಉತ್ತರ ಸಿಗಬೇಕು ಹಾಗೂ ಅದರಿಂದ ಅವರಿಗೆ ‘ಧರ್ಮಪಾಲನೆ’ ಮತ್ತು ‘ಸಾಧನೆಯ ಮಹತ್ವ’ ತಿಳಿಯಬೇಕು, ಹಾಗೂ ಸೂಕ್ಷ್ಮ ಜಗತ್ತಿನ ಪರಿಚಯವಾಗಬೇಕು ಮತ್ತು ಜಿಜ್ಞಾಸುಗಳು ಸಾಧನೆಯತ್ತ ಹೊರಳಿ ತನ್ನ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬೇಕು.

ಶ್ರೀ. ರಾಮ ಹೊನಪ

೨. ಸೂಕ್ಷ್ಮಜ್ಞಾನವನ್ನು ಯಾವತ್ತೂ ಸಾಧಕರ ವ್ಯಾವಹಾರಿಕ ಅಡಚಣೆಗಳ ನಿವಾರಣೆಗಾಗಿ ಉಪಯೋಗಿಸದಿರುವುದು

ಪರಾತ್ಪರ ಗುರು ಡಾಕ್ಟರರು ಇಷ್ಟರ ವರೆಗೆ ನನಗೆ ಅಧ್ಯಾತ್ಮದಲ್ಲಿನ ವಿವಿಧ ವಿಷಯಗಳ ನಾವೀನ್ಯಪೂರ್ಣ ಹಾಗೂ ಅಸಂಖ್ಯ ಪ್ರಶ್ನೆಗಳನ್ನು ನೀಡಿ ಸೂಕ್ಷ್ಮದಿಂದ ಉತ್ತರಗಳನ್ನು ಹುಡುಕಲು ಹೇಳಿದರು. ಅದರಲ್ಲಿ ಸಾಧಕರ ವ್ಯಾವಹಾರಿಕ ಅಡಚಣೆಗಳನ್ನು ನಿವಾರಿಸುವ ಯಾವುದೇ ಪ್ರಶ್ನೆಯನ್ನು ಕೇಳಿರಲಿಲ್ಲ, ಉದಾ. ಯಾರ ಕೌಟುಂಬಿಕ ಅಥವಾ ಆರ್ಥಿಕ ಅಡಚಣೆಗಳನ್ನು ದೂರಗೊಳಿಸುವುದು ಇತ್ಯಾದಿ.

೩. ಪರಾತ್ಪರ ಗುರು ಡಾ. ಆಠವಲೆಯವರ ‘ಸಮಷ್ಟಿ’ಗಾಗಿ ಜ್ಞಾನವನ್ನು ಗಳಿಸುವ ಧ್ಯಾಸ, ಜಿಜ್ಞಾಸೆ ಹಾಗೂ ಪ್ರಶ್ನೆ ಕೇಳುವ ಗತಿ ಸ್ಪಷ್ಟವಾಗಿರುತ್ತದೆ

೨೦೦೩ ರಿಂದ ನನಗೆ ಸೂಕ್ಷ್ಮದಿಂದ ಜ್ಞಾನ ಸಿಗಲು ಆರಂಭವಾಯಿತು, ಆಗ ಪರಾತ್ಪರ ಗುರು ಡಾಕ್ಟರರು ನನಗೆ ಮೊದಲು ಅಧ್ಯಾತ್ಮದಲ್ಲಿನ ವಿವಿಧ ವಿಷಯಗಳನ್ನು ಆಧರಿಸಿ ಕೆಲವು ಪ್ರಶ್ನೆಗಳನ್ನು ನೀಡಿದ್ದರು. ನನಗೆ ಸೂಕ್ಷ್ಮದಿಂದ ಅವುಗಳಿಗೆ ಉತ್ತರ ಸಿಕ್ಕಿದಾಗ ಪರಾತ್ಪರ ಗುರು ಡಾಕ್ಟರರು ತಕ್ಷಣ ಉಪಪ್ರಶ್ನೆಗಳನ್ನು ಕೊಡುತ್ತಿದ್ದರು. ಅದರ ಜೊತೆಗೆ ಅವರಲ್ಲಿ ಇನ್ನೂ ಹೊಸ ಹೊಸ ಪ್ರಶ್ನೆಗಳು ಸಿದ್ಧವಿರುತ್ತಿದ್ದುವು. ಹೀಗೆ ನಿರಂತರ ೧ ವರ್ಷ ನಡೆಯಿತು. ಪರಾತ್ಪರ ಗುರು ಡಾಕ್ಟರರಲ್ಲಿ ಸಮಾಜಕ್ಕಾಗಿ ಸಾಧಕರ ಮೂಲಕ ಸೂಕ್ಷ್ಮ ಜ್ಞಾನವನ್ನು ಗಳಿಸುವ ‘ಧ್ಯಾಸ, ಜಿಜ್ಞಾಸೆ ಹಾಗೂ ಪ್ರಶ್ನೆ ಕೇಳುವ ಗತಿ’ ಸ್ಪಷ್ಟವಾಗಿತ್ತು. ಅದರಿಂದ ಈಶ್ವರ ‘ಪರಾತ್ಪರ ಗುರು ಡಾಕ್ಟರರಿಗೆ ಕಾಲಾನುಸಾರ ‘ಯಾವ ವಿಷಯದಲ್ಲಿ ಸೂಕ್ಷ್ಮ ಜ್ಞಾನವನ್ನು ಪಡೆಯಲಿಕ್ಕಿದೆಯೊ’ ಅದಕ್ಕೆ ಬೇಕಾಗುವ ಪ್ರಶ್ನೆಗಳನ್ನೇ ಸೂಚಿಸುತ್ತಿದ್ದಾನೆ’, ಎಂದು ನನಗೆ ಅರಿವಾಗುತ್ತಿತ್ತು.

೪. ಪರಾತ್ಪರ ಗುರು ಡಾ. ಆಠವಲೆಯವರು ನಡು-ನಡುವೆ ಸೂಕ್ಷ್ಮದಿಂದ ಉತ್ತರಗಳನ್ನು ಪಡೆಯುವ ವೇಗವನ್ನು ಹೆಚ್ಚಿಸುವಂತೆ ಹೇಳುತ್ತಿದ್ದರು

ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮದಿಂದ ಜ್ಞಾನ ಪಡೆಯಲು ನನಗೆ ಪ್ರಶ್ನೆಗಳನ್ನು ಕೊಡುವ ವೇಗದ ಪ್ರಮಾಣ ಹೆಚ್ಚು ಇರುತ್ತಿತ್ತು. ಅದರ ತುಲನೆಯಲ್ಲಿ ನಾನು ಸೂಕ್ಷ್ಮದಿಂದ ಪಡೆಯುವ ಉತ್ತರಗಳ ಪ್ರಮಾಣ  ಕಡಿಮೆಯಿರುತ್ತಿತ್ತು; ಅದರ ತುಲನೆಯಲ್ಲಿ ನನಗೆ ಸೂಕ್ಷ್ಮದಿಂದ ಸಿಗುವ ಉತ್ತರಗಳ ವೇಗ ಕಡಿಮೆ ಇರುತ್ತಿತ್ತು; ಏಕೆಂದರೆ ಆ ಸಮಯದಲ್ಲಿ ನನಗೆ ತೀವ್ರ ಸ್ವರೂಪದಲ್ಲಿ ಆಯಾಸವಾಗುತ್ತಿತ್ತು, ಪ್ರಾಣಶಕ್ತಿ ಕಡಿಮೆಯಿರುತ್ತಿತ್ತು. ವಿಷಯಗಳು ಹೊಳೆಯದಿರುವುದು ಇತ್ಯಾದಿ ತೊಂದರೆಗಳಿರುತ್ತಿದ್ದವು. ಆದ್ದರಿಂದ ನನಗೆ ಸೂಕ್ಷ್ಮದಿಂದ ಉತ್ತರಗಳನ್ನು ಪಡೆಯಲು ಹೆಚ್ಚು ಸಮಯ ತಗಲುತ್ತಿತ್ತು. ಪರಾತ್ಪರ ಗುರು ಡಾಕ್ಟರರು ನಡು-ನಡುವೆ ನನಗೆ ಸೂಕ್ಷ್ಮದಿಂದ ಉತ್ತರ ಪಡೆಯುವ ವೇಗವನ್ನು ಹೆಚ್ಚಿಸುವಂತೆ ಹೇಳುತ್ತಿದ್ದರು. ಅದರ ಹಿಂದೆ ‘ಸೂಕ್ಷ್ಮದಲ್ಲಿನ ಜ್ಞಾನವನ್ನು ಪಡೆಯುವ ಸೇವೆಯಿಂದ ನನ್ನ ಆಧ್ಯಾತ್ಮಿಕ ಪ್ರಗತಿಯಾಗಬೇಕು ಹಾಗೂ ಸಮಷ್ಟಿಗೂ ಈ ಜ್ಞಾನದ ಲಾಭವಾಗಬೇಕು’, ಎಂಬ ಉದ್ದೇಶವಿರುತ್ತಿತ್ತು.

೫. ಪರಾತ್ಪರ ಗುರು ಡಾ. ಆಠವಲೆಯವರು ಸೂಕ್ಷ್ಮದಿಂದ ಪಡೆಯುವ ಜ್ಞಾನದ ಆಧ್ಯಾತ್ಮಿಕ ಮಹತ್ವವನ್ನು ಗುರುತಿಸಿದ್ದರು

ವಜ್ರದ ವ್ಯಾಪಾರಿಗೆ ವಜ್ರದ ಪರಿಚಯವಿರುತ್ತದೆ, ಅಲ್ಲದೆ ಅವನಿಗೆ ಅದರ ಮೌಲ್ಯವೂ ತಿಳಿದಿರುತ್ತದೆ, ಅದೇ ರೀತಿ ಪರಾತ್ಪರ ಗುರು ಡಾಕ್ಟರರು ನನಗೆ ಸೂಕ್ಷ್ಮದಿಂದ ಸಿಗುವ ಜ್ಞಾನದ ಮಹತ್ವವನ್ನು ಗುರುತಿಸಿದ್ದರು. ಆದ್ದರಿಂದ ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮದಿಂದ ಸಿಗುವ ಜ್ಞಾನವನ್ನು ‘ಅಪರೂಪ’ದ, ಅಮೂಲ್ಯ ಅಥವಾ ‘ಇದುವರೆಗೆ ಪೃಥ್ವಿಯ ಮೇಲೆ ಯಾವುದೇ ಗ್ರಂಥದಲ್ಲಿ ಇಲ್ಲದಿರುವ ಜ್ಞಾನ’, ಎಂದು ಉಲ್ಲೇಖಿಸುತ್ತಿದ್ದರು. ನಾನು ಸನಾತನ ಸಂಸ್ಥೆಗೆ ಬರದೆ ಇರುತ್ತಿದ್ದರೆ, ನನಗೆ ಸಿಗುವ ಸೂಕ್ಷ್ಮ ಜ್ಞಾನವನ್ನು ನನ್ನ ಸಾಧನೆಗೆ ಹಾಗೂ ಸಮಾಜಕ್ಕಾಗಿ ಉಪಯೋಗಿಸಲು ಸಾಧ್ಯವಾಗುತ್ತಿರಲಿಲ್ಲ.

೬. ಪರಾತ್ಪರ ಗುರು ಡಾ. ಆಠವಲೆಯವರ ಪ್ರಶ್ನೆಗಳಿಂದ ಅವರ ಅಹಂಶೂನ್ಯ ಅವಸ್ಥೆ ಹಾಗೂ ಕಲಿಯುವ ಸ್ಥಿತಿ ವ್ಯಕ್ತವಾಗುವುದು

೨೦೦೩ ರಲ್ಲಿ ನನಗೆ ಸೂಕ್ಷ್ಮದಿಂದ ಶ್ರೀದುರ್ಗಾದೇವಿ ಜ್ಞಾನ ಕೊಡುತ್ತಿದ್ದಳು, ಆಗ ಪರಾತ್ಪರ ಗುರು ಡಾಕ್ಟರರು ಶ್ರೀ ದುರ್ಗಾದೇವಿಗೆ ತಮ್ಮ ಸಾಧನೆ, ಸಾಧನೆಯಲ್ಲಿನ ಕೊರತೆ ಅಥವಾ ಅಡಚಣೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಂದ ಪರಾತ್ಪರ ಗುರು ಡಾಕ್ಟರರ ಅಹಂಶೂನ್ಯ ಅವಸ್ಥೆ ಹಾಗೂ ಕಲಿಯುವ ಸ್ಥಿತಿಯ ಅರಿವಾಗುತ್ತದೆ.

೭. ಪರಾತ್ಪರ ಗುರು ಡಾಕ್ಟರರು ಸಂದರ್ಭಾನುಸಾರ ಸೂಕ್ಷ್ಮದಿಂದ ಸಿಗುವ ಜ್ಞಾನಕ್ಕಿಂತ ಸಾಧಕರ ಆಧ್ಯಾತ್ಮಿಕ ತೊಂದರೆಗಳು ದೂರವಾಗಿ ಆಧ್ಯಾತ್ಮಿಕ ಪ್ರಗತಿಯಾಗುವುದಕ್ಕೆ ಪ್ರಾಧಾನ್ಯತೆಯನ್ನು ನೀಡುವುದು

೨೦೦೪ ರಲ್ಲಿ ನನಗೆ ಆಧ್ಯಾತ್ಮಿಕ ತೊಂದರೆ ತುಂಬಾ ಹೆಚ್ಚಾಗಿದ್ದ ಕಾರಣ ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮ ಜ್ಞಾನ ಪಡೆಯುವ ಸೇವೆಯನ್ನು ನಿಲ್ಲಿಸಿ ನನಗೆ ಬೇರೆ ಸೇವೆ ಮಾಡಲು ಹೇಳಿದ್ದರು. ಅದೇ ವರ್ಷ ನಾಶಿಕ್‌ನಲ್ಲಿ ಭಾರತದ ವಿವಿಧ ಅಖಾಡಗಳ ಪ್ರಮುಖರ ‘ಅಖಿಲ ಭಾರತೀಯ ಅಖಾಡಾ ಪರಿಷತ್ತಿ’ನ ಸಮ್ಮೇಳನವಿತ್ತು. ಈ ಕಾರ್ಯಕ್ರಮಕ್ಕೆ ಪರಾತ್ಪರ ಗುರು ಡಾಕ್ಟರರು ಗೋವಾದಿಂದ ನಾಶಿಕ್‌ಗೆ ಬಂದಿದ್ದರು. ಆಗ ಅವರು ‘ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಬೇಕು ಹಾಗೂ ನನ್ನ ಮುಂದಿನ ಸಾಧನೆ ಚೆನ್ನಾಗಿ ಆಗಬೇಕೆಂದು’ ಪರಾತ್ಪರ ಗುರು ಡಾಕ್ಟರರು ನನ್ನನ್ನು ನಾಶಿಕನಿಂದ ತಮ್ಮ ಜೊತೆಗೆ ಗೋವಾಕ್ಕೆ ಕರೆದುಕೊಂಡು ಹೋದರು.

೮. ಆಧ್ಯಾತ್ಮಿಕ ತೊಂದರೆಯು ದೀರ್ಘಕಾಲದ ನಂತರ ಕಡಿಮೆಯಾದಾಗ ಸೂಕ್ಷ್ಮದಿಂದ ಜ್ಞಾನವನ್ನು ಪಡೆಯುವ ಸೇವೆ ಪುನಃ ಪ್ರಾರಂಭವಾಯಿತು

೨೦೦೪ ರಿಂದ ೨೦೧೫ ಈ ದೀರ್ಘ ಕಾಲಾವಧಿಯಲ್ಲಿ ಪಾಕಶಾಲೆಯಲ್ಲಿ ವಿವಿಧ ಸೇವೆ ಮಾಡುವುದು, ಧಾನ್ಯವನ್ನು ಸ್ವಚ್ಛ ಗೊಳಿಸುವುದು, ಕಟ್ಟಡನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಶಾರೀರಿಕ ಸೇವೆ ಮಾಡುವುದು ಇತ್ಯಾದಿ ಸೇವೆಗಳನ್ನು ದೇವರು ನನ್ನಿಂದ ಮಾಡಿಸಿಕೊಂಡರು. ೨೦೧೬ ರಲ್ಲಿ ನನ್ನ ಆಧ್ಯಾತ್ಮಿಕ ತೊಂದರೆ ಕಡಿಮೆಯಾದವು, ಆಗ ನನಗೆ ಆರಂಭದಲ್ಲಿ ಸಂಗೀತಕ್ಕೆ ಸಂಬಂಧಿಸಿದ ಸೂಕ್ಷ್ಮಜ್ಞಾನ ಸಿಗಲು ಆರಂಭವಾಯಿತು. ಆಗ ಪರಾತ್ಪರ ಗುರು ಡಾಕ್ಟರರು ನನಗೆ ಬೇರೆ ಸೇವೆಗಳನ್ನು ನಿಲ್ಲಿಸಿ ಸೂಕ್ಷ್ಮ ಜ್ಞಾನ ಪಡೆಯುವ ಸೇವೆಯನ್ನು ಪುನಃ ಪ್ರಾರಂಭಿಸಲು ಹೇಳಿದರು.

೯. ಪರಾತ್ಪರ ಗುರು ಡಾ. ಆಠವಲೆಯವರ ಅಧ್ಯಾತ್ಮಶಾಸ್ತ್ರವನ್ನು ಕಲಿಯುವ ದೃಷ್ಟಿ ವ್ಯಾಪಕವಾಗಿದೆ

ಧ್ಯಾನಯೋಗ, ಜ್ಞಾನಯೋಗ ಇತ್ಯಾದಿ ಯೋಗಗಳಲ್ಲಿನ ಸಂತರಿಗೆ ಆಯಾಯ ಯೋಗಮಾರ್ಗದಲ್ಲಿ ಆಳವಾದ ಅಭ್ಯಾಸ ಇರುತ್ತದೆ; ಆದರೆ ಪರಾತ್ಪರ ಗುರು ಡಾಕ್ಟರರಿಗೆ ಅಧ್ಯಾತ್ಮದಲ್ಲಿನ ಪ್ರತಿಯೊಂದು ವಿಷಯದಲ್ಲಿ ಆಳವಾದ ಅಭ್ಯಾಸ ಮಾಡುವ ವಿಚಾರವಿರುತ್ತದೆ, ಉದಾ. ಸಂಗೀತ, ಗಾಯನ, ನೃತ್ಯ, ವಾಸ್ತು, ವಿವಿಧ ಯೋಗಮಾರ್ಗಗಳು, ಸಪ್ತಲೋಕ, ಸಪ್ತಪಾತಾಳ, ಸಾಧನೆಯಿಂದ ಸಾಧಕರು ಮತ್ತು ಸಂತರ ಶರೀರದಲ್ಲಿ ಆಗುವ ದೈವೀ ಬದಲಾವಣೆ, ಅನಿಷ್ಟ ಶಕ್ತಿಗಳ ಆಕ್ರಮಣಗಳಿಂದ ವ್ಯಕ್ತಿಗಳ ಶರೀರದಲ್ಲಾಗುವ ತೊಂದರೆದಾಯಕ ಬದಲಾವಣೆ, ಸಾಧನೆಯಿಂದ ಬಂದ ವೈಶಿಷ್ಟ್ಯ ಪೂರ್ಣ ಅನುಭೂತಿಗಳು, ಸನಾತನ ಧರ್ಮದಲ್ಲಿ ಇಷ್ಟರವರೆಗೆ ಹೇಳಿರುವ ಧಾರ್ಮಿಕ ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ, ಆಪತ್ಕಾಲದಲ್ಲಿ ಜೀವಂತವಿರಲು ಮಾಡಬೇಕಾದ ನಿವಾರಣೋಪಾಯ ಇತ್ಯಾದಿ.

ಪ್ರತಿಯೊಬ್ಬರ ಪ್ರಕೃತಿ ಭಿನ್ನವಾಗಿರುವುದರಿಂದ ಅವರ ಸಾಧನಾ ಮಾರ್ಗ ಭಿನ್ನವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರಿಗೂ ಒಂದೇ ವಿಷಯದ ಜ್ಞಾನ ಉಪಯೋಗವಾಗುವುದಿಲ್ಲ. ಆದ್ದರಿಂದ ಪ್ರತಿಯೊಂದು ಪ್ರಕೃತಿಗೆ ಉಪಯೋಗವಾಗುವ ಅಧ್ಯಾತ್ಮದಲ್ಲಿನ ಜ್ಞಾನವನ್ನು ಸಂಗ್ರಹಿಸುವುದು ಪರಾತ್ಪರ ಗುರು ಡಾಕ್ಟರರ ಪ್ರಯತ್ನವಾಗಿದೆ. ಆದ್ದರಿಂದ ಈ ವಿಷಯಗಳನ್ನು ಅನುಸರಿಸಿ ಪರಾತ್ಪರ ಗುರು ಡಾಕ್ಟರರು ಪ್ರಶ್ನೆಗಳನ್ನು ಹುಡುಕಿ ಉತ್ತರವನ್ನು ಹುಡುಕುವ ಸೇವೆಯನ್ನು ಅವರು ಜ್ಞಾನಪ್ರಾಪ್ತಕರ್ತ ಸಾಧಕರಿಂದ ಮಾಡಿಸಿಕೊಳ್ಳುತ್ತಿದ್ದಾರೆ.