ಕೇರಳ ಪೊಲೀಸರ ವಾಹನಗಳ ಮೇಲೆ ಇಸ್ಲಾಮಿ ಚಿಹ್ನೆಗಳಿರುವ ಸ್ಟಿಕರ್ಸ್ !

ಪೊಲೀಸರ ವಾಹನಗಳ ಮೇಲೆ ಚಂದ್ರ – ನಕ್ಷತ್ರ ಇಸ್ಲಾಮಿ ಚಿಹ್ನೆಗಳು ಇರುವ ಸ್ಟಿಕ್ಕರ್ಸ್ ಅಂಟಿಸಿರುವುದು

ಕೊಚ್ಚಿ (ಕೇರಳ) : ಶಬರಿಮಲೆ ದೇವಸ್ಥಾನಕ್ಕೆ ಹೋಗುವ ಹಿಂದೂ ಭಕ್ತರ ಸುರಕ್ಷತೆಗಾಗಿ ಇಲ್ಲಿಯ ಪೊಲೀಸರನ್ನು ನೇಮಿಸಲಾಗಿದೆ .ಈ ಪೊಲೀಸರ ವಾಹನಗಳ ಮೇಲೆ ಚಂದ್ರ – ನಕ್ಷತ್ರ ಇಸ್ಲಾಮಿ ಚಿಹ್ನೆಗಳು ಇರುವ ಸ್ಟಿಕ್ಕರ್ಸ್ ಅಂಟಿಸಿರುವುದು ಹಿಂದೂ ಭಕ್ತರ ಗಮನಕ್ಕೆ ಬಂದಿದೆ. ಕೆಲವು ಭಕ್ತರು ಇದರ ಛಾಯಾಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ. ಅದನ್ನು ಗಮನಿಸಿ ಆ ಸ್ಟಿಕ್ಕರ್ ಗಳನ್ನು ತೆಗೆದುಹಾಕುವ ಆದೇಶ ಕೇರಳದ ಪೊಲೀಸ್ ಮಹಾ ಸಂಚಾಲಕರಾದ ಅನಿಲ್ ಕಾಂತ್ ಇವರು ನೀಡಿದ್ದಾರೆ. ಇಂತಹ ಸ್ಟಿಕರ್ಸ್ ಹಚ್ಚುವವರ ಮೇಲೆ ಕ್ರಮಕೈಗೊಳ್ಳಲಾಗುವುದು, ಎಂದು ಕಾಂತ ಇವರು ಸ್ಪಷ್ಟಪಡಿಸಿದ್ದಾರೆ. ಕಾನೂನಿನ ಪ್ರಕಾರ ಪೊಲೀಸರ ವಾಹನಗಳ ಮೇಲೆ ಧಾರ್ಮಿಕ ಅಥವಾ ರಾಜಕೀಯ ಬರವಣಿಗೆ ಅಥವಾ ಚಿಹ್ನೆಗಳು ಹಚ್ಚುವುದು ನಿಷಿದ್ಧವಾಗಿದೆ, ಹೀಗಿರುವಾಗ ಸಹ ಪೊಲೀಸರು ವಾಹನಗಳ ಮೇಲೆ ಚಂದ್ರ ನಕ್ಷತ್ರ ಇರುವ ಸ್ಟಿಕರ್ ಗಳನ್ನು ಹಚ್ಚಲಾಗಿತ್ತು.

ಸಂಪಾದಕೀಯ ನಿಲುವು

* ಸಾಮ್ಯವಾದಿ ಕೇರಳ ರಾಜ್ಯದ ಪೊಲೀಸ್ ದಳದ ಇಸ್ಲಾಮೀಕರಣ ಆಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.