‘ಎರಡನೇ ಹಿಂದೂ ರಾಷ್ಟ್ರ ಸಂಸತ್’ನಲ್ಲಿ ಪ್ರತಿವರ್ಷ ಜನಪ್ರತಿನಿಧಿಗಳ ಮೌಲ್ಯ ಮಾಪನ ಮಾಡುವ ಠರಾವು !
ಪಾಶ್ಚಿಮಾತ್ಯ ಸಂವಿಧಾನವನ್ನು ತಯಾರಿಸುವಾಗ, ಕ್ರೈಸ್ತ ದೇಶಗಳಲ್ಲಿ ಬೈಬಲ್ ಮತ್ತು ಇಸ್ಲಾಮಿಕ್ ದೇಶಗಳಲ್ಲಿ ಕುರಾನ್ ಮತ್ತು ಹದೀಸ್ ಅನ್ನು ಆಧರಿಸಿ ತಯಾರಿಸಲಾಗುತ್ತಿದ್ದರೆ, ಭಾರತೀಯ ಸಂವಿಧಾನವನ್ನು ಸಿದ್ಧಪಡಿಸುವಾಗ ಅದು ಜಾತ್ಯತೀತ ಏಕೆ ? ಭಾರತೀಯ ಸಂವಿಧಾನದಲ್ಲಿ ‘ಪಂಥ'(ರಿಲಿಜನ) ಮತ್ತು ‘ಧರ್ಮ’ದ ನಿಖರವಾದ ವ್ಯಾಖ್ಯಾನವನ್ನು ಸ್ಪಷ್ಟಪಡಿಸಬೇಕು.
೧೯೭೬ ರಲ್ಲಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದ ೪೨ ನೇ ತಿದ್ದುಪಡಿಯನ್ನು ಮಾಡಿ ‘ಜಾತ್ಯತೀತ'(ಸೆಕ್ಯುಲರ್) ಮತ್ತು ‘ಸಮಾಜವಾದಿ'(ಸೋಶಲಿಸ್ಟ) ಪದಗಳನ್ನು ತುರುಕಿಸಿದರು. ಈ ಕೃತಿ ಸಂವಿಧಾನಬಾಹಿರವಾಗಿರುವುದರಿಂದ ಸಂವಿಧಾನದಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ತೆಗೆದುಹಾಕಬೇಕು ಎಂದು ಗೋವಾದಲ್ಲಿ ನಡೆಯುತ್ತಿರುವ ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಎರಡನೇ ‘ಹಿಂದೂ ರಾಷ್ಟ್ರ ಸಂಸತ್ತಿ’ನಲ್ಲಿ ಆಗ್ರಹಿಸಲಾಯಿತು. ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ನೀಡಿದ ಆಶ್ವಾಸನೆಗಳಿಗೆ ಶಾಸನಬದ್ಧ ದಾಖಲೆಗಳ ಸ್ಥಾನಮಾನವನ್ನು ನೀಡುವ ಮೂಲಕ ಆ ಆಶ್ವಾಸನೆಗಳನ್ನು ಜಾರಿಗೆ ತರುತ್ತದೆಯೇ ಅಥವಾ ಇಲ್ಲವೇ, ಎಂದು ಚುನಾವಣಾ ಆಯೋಗದಿಂದ ನೋಡಲ್ಪಡಬೇಕು. ಜೊತೆಗೆ ಪ್ರತಿಯೊಬ್ಬ ಜನಪ್ರತಿನಿಧಿಗಳ ಕೆಲಸವನ್ನು ಪ್ರತಿವರ್ಷ ಅವರ ಕ್ಷೇತ್ರದ ನಾಗರಿಕರಿಂದ ಮೌಲ್ಯಮಾಪನ ಮಾಡಲ್ಪಡಬೇಕು ಎಂದು ಠರಾವಿನಲ್ಲಿ ನಿರ್ಧರಿಸಲಾಯಿತು. ‘ಹಿಂದೂ ರಾಷ್ಟ್ರ ಸ್ಥಾಪನೆಯ ಸಾಂವಿಧಾನಿಕ ಮಾರ್ಗ’ ಎಂಬ ವಿಷಯದ ಕುರಿತು ಸಂಸತ್ತಿನ ಸಭಾಪತಿಯಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಉಮೇಶ ಶರ್ಮಾ ಅವರು ಮತ್ತು ಉಪ ಸಭಾಪತಿ ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರಮೇಶ ಶಿಂದೆಯವರು ಹಾಗೂ ಕಾರ್ಯದರ್ಶಿ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಕಲಾಪವನ್ನು ನಡೆಸಿದರು.
ಹಿಂದೂ ರಾಷ್ಟ್ರ ಸಂಸತ್ತು ಎಂದರೇನು ?ಯಾವ ರೀತಿ ಜನಹಿತ ಮತ್ತು ರಾಷ್ಟ್ರಹಿತದ ಬಗ್ಗೆ ವಿವಿಧ ವಿಷಯಗಳ ಚರ್ಚೆ ಮಾಡಲು ಜನಪ್ರತಿನಿಧಿಗಳ ಸಂಸತ್ತು ಅಸ್ತಿತ್ವದಲ್ಲಿದೆಯೋ, ಅದೇ ರೀತಿ ಧರ್ಮಹಿತದ ಬಗ್ಗೆ ಚರ್ಚಿಸಲು ಧರ್ಮಪ್ರತಿನಿಧಿಗಳ ಹಿಂದೂ ರಾಷ್ಟ್ರ ಸಂಸತ್ತು ಇದೆ. ಈ ಸಂಸತ್ತಿನಲ್ಲಿ ಅಂಗೀಕರಿಸಿದ ನಿರ್ಣಯಗಳನ್ನು ಭಾರತೀಯ ಜನಪ್ರತಿನಿಧಿಗಳಿಗೆ ಕಳುಹಿಸಲಾಗುವುದು. ಆ ಆಧಾರದಲ್ಲಿ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಯಾಗಬಹುದು. ತಾತ್ಪರ್ಯವೆಂದರೆ ಈ ಸಂಸತ್ತು ಕೇವಲ ಪ್ರತಿಕಾತ್ಮಕವಾಗಿದೆ. ಈ ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಪ್ರಸ್ತಾವನೆಗಳನ್ನು ಭವಿಷ್ಯದಲ್ಲಿ ಭಾರತೀಯ ಸಂಸತ್ತಿನಲ್ಲಿ ಚರ್ಚಿಸಬಹುದು. ೧. ಸಭಾಧ್ಯಕ್ಷ ಮಂಡಳದ ಸ್ವರೂಪ : ಸಭಾಧ್ಯಕ್ಷ ಮಂಡಳದಲ್ಲಿ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾವೇಶವಿರುತ್ತದೆ. ೨. ವಿಶೇಷ ಸಂಸದೀಯ ಸಮಿತಿ : ವಿಶೇಷ ಸಂಸದೀಯ ಸಮಿತಿ (ಪಾರ್ಲಿಮೆಂಟರಿ ಎಕ್ಸಪರ್ಟ್ ಕಮಿಟಿ) ಗೌರವಾನ್ವಿತ ಸದಸ್ಯರು ಮಂಡಿಸಿದ ಅಂಶಗಳನ್ನು ಆವಶ್ಯಕತೆಗನುಸಾರ ತಿದ್ದುಪಡಿ ಅಥವಾ ನಿರಾಕರಿಸಬಹುದು. ಅದಕ್ಕಾಗಿ ಈ ಸಮಿತಿಯ ಸದಸ್ಯರು ತಮ್ಮ ಸ್ಥಾನದಿಂದ ಎದ್ದು ಸಭಾಧ್ಯಕ್ಷರ ಅನುಮತಿಯಿಂದ ವಿಷಯವನ್ನು ಮಂಡಿಸುವರು. ಇತರ ಸದಸ್ಯರಿಗೆ ಈ ರೀತಿ ಅನುಮತಿಯನ್ನು ಪಡೆಯಲು ಸಾಧ್ಯವಿಲ್ಲ. ಇತರ ಸದಸ್ಯರು ತಮ್ಮ ಅಂಶಗಳನ್ನು ಬರೆದು ಕೊಡುವುದು ಕಡ್ಡಾಯವಾಗಿದೆ. |
ಹಿಂದೂ ರಾಷ್ಟ್ರ ಸಂಸತ್ತಿನಲ್ಲಿ ಅಂಗೀಕರಿಸಿದ ಪ್ರಸ್ತಾವನೆ !ಭಾರತದಲ್ಲಿ ರೊಹಿಂಗ್ಯಾ ನುಸುಳುಕೋರರ ಸಂಖ್ಯೆ, ಬಾಂಗ್ಲಾದೇಶಿ ಮುಸಲ್ಮಾನರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು ಅವರಿಗೆ ನಕಲಿ ಗುರುತಿನ ಚೀಟಿ ಮತ್ತು ನಕಲಿ ಆಧಾರಕಾರ್ಡ್ ನಿರ್ಮಿಸಿ ಕೊಡುವವರ ವಿರುದ್ಧ ದೇಶದ್ರೋಹದ ಅಪರಾಧವನ್ನು ದಾಖಲಿಸಬೇಕು, ‘ಲವ್ ಜಿಹಾದ’ ವಿರುದ್ಧ ರಾಷ್ಟ್ರವ್ಯಾಪಿ ಕಾನೂನನ್ನು ಭಾರತೀಯ ಸಂಸತ್ತಿನಲ್ಲಿ ಅಂಗೀಕರಿಸಬೇಕು. ಅದೇ ರೀತಿ ಯಾವ ಯಾವ ಹಿಂದೂ ಯುವತಿಯರು ಮುಸಲ್ಮಾನರೊಂದಿಗೆ ನಿಕಾಹ ಮಾಡಿಕೊಳ್ಳುತ್ತಾರೆ, ಅವರು ವರ್ಷಕೊಮ್ಮೆ ಮಹಿಳಾ ಆಯೋಗದ ಮುಂದೆ ವಾಸ್ತವಾಂಶಗಳನ್ನು ಸಾದರಪಡಿಸಬೇಕು ಮತ್ತು ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿಲ್ಲವಲ್ಲ, ಅವರಿಗೆ ದೈಹಿಕವಾಗಿ ಶೋಷಣೆ ಮಾಡಲಾಗುತ್ತಿಲ್ಲವಲ್ಲ ಎಂಬುದರ ವಸ್ತುಸ್ಥಿತಿಯನ್ನು ತಿಳಿದುಕೊಳ್ಳಬೇಕು, ೧೯೯೧ ರ ‘ಪ್ಲೆಸಸ್ ಆಫ್ ವರ್ಶಿಪ್ ಆಕ್ಟ’ ರದ್ದು ಪಡಿಸುವ ದೃಷ್ಟಿಯಿಂದ ಪ್ರಯತ್ನಿಸಬೇಕು, ಹೇಗೆ ‘ಮದರಸಾ ಶಿಕ್ಷಣ ಬೋರ್ಡ್’ ಇದೆಯೋ ಅದೇ ರೀತಿ ‘ಗುರುಕುಲ ಶಿಕ್ಷಣ ಬೋರ್ಡ್’ ಸ್ಥಾಪನೆ ಮತ್ತು ಅಲ್ಲಿನ ಶಿಕ್ಷಣ ವಿಭಾಗದ ಮುಖ್ಯಸ್ಥರು ವೇದ ಮತ್ತು ಸಂಸ್ಕೃತ ಭಾಷೆಯಲ್ಲಿ ಪ್ರವೀಣರಾಗಿರಬೇಕು ಈ ಠರಾವುಗಳು ಸೇರಿದಂತೆ ಇತರ ಪ್ರಸ್ತಾವನೆಗಳಿಗೂ ಈ ವೇಳೆ ಅನುಮೋದನೆ ನೀಡಲಾಯಿತು. |