ಮಹಾರಾಷ್ಟ್ರದಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನು ಬಂದ ಮರುದಿನವೇ ಲವ್ ಜಿಹಾದಿಗಳ ವಿರುದ್ಧ ಅಪರಾಧಗಳು ದಾಖಲಾಗಬೇಕು ! – ಹಿಂದೂ ಜನಜಾಗೃತಿ ಸಮಿತಿ

ಮುಂಬಯಿ – ಕಳೆದ 4 ವರ್ಷಗಳಿಂದ, ಹಿಂದೂ ಜನಜಾಗೃತಿ ಸಮಿತಿ, ಹಾಗೆಯೇ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನದಂತಹ ಹಿಂದುತ್ವನಿಷ್ಠ ಸಂಘಟನೆಗಳು ಅನೇಕ ಮೆರವಣಿಗೆಗಳನ್ನು ನಡೆಸಿವೆ. ಇದರಲ್ಲಿ ಲಕ್ಷಾಂತರ ಹಿಂದೂಗಳು ಭಾಗವಹಿಸಿದ್ದರು. ಈ ಮೆರವಣಿಗೆಗಳ ನಂತರ, ಕಾನೂನಿನ ಅನಿವಾರ್ಯತೆ ಎಷ್ಟಿದೆ ಎಂದು ಸರಕಾರದ ಗಮನಕ್ಕೆ ಬಂದಿದೆ ! ಇದೀಗ ಸರಕಾರವು ಮುಂದಿನ ಹೆಜ್ಜೆ ಕೈಗೊಂಡಿದೆ. ಸರಕಾರದ ಈ ನಿರ್ಧಾರ ಸ್ವಾಗತಾರ್ಹವಾಗಿದೆ. ಈ ಕಾನೂನು ದೇಶದ 8 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಮಹಾರಾಷ್ಟ್ರದಲ್ಲಿ ಕಾನೂನು ಬರಲಿದೆ, ಅದರ ಮರುದಿನವೇ ಲವ್ ಜಿಹಾದಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು, ಹಾಗೆಯೇ ಎಲ್ಲರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಕೇವಲ ಕಾನೂನು ರೂಪಿಸಿದರೆ ನಡೆಯುವುದಿಲ್ಲ, ಆದರೆ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಕ್ರಮ ಕನಿಷ್ಠ 5 ವರ್ಷಗಳ ಕಾಲ ಇದೇ ರೀತಿ ಮುಂದುವರೆದರೆ ಲವ್ ಜಿಹಾದಿಗಳು ಹಿಂದೂ ಹುಡುಗಿಯರತ್ತ ವಕ್ರದೃಷ್ಟಿಯಿಂದ ನೋಡುವ ಧೈರ್ಯ ಮಾಡಲಾರರು, ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಸುನಿಲ್ ಘನವಟ ಅವರು ಪ್ರತಿಕ್ರೆಯೆ ವ್ಯಕ್ತ ಪಡಿಸಿದ್ದಾರೆ.