ವಕ್ತಾರರೇ, ಸಭೆಯಲ್ಲಿ ಮಾತನಾಡುವಾಗ ‘ನಾನಲ್ಲ, ದೇವರೇ ನನ್ನ ಮೂಲಕ ಮಾತನಾಡುತ್ತಿದ್ದಾರೆ’ ಎಂಬ ಭಾವವನ್ನಿಡಿ !

ಹಿಂದೂ ಜನಜಾಗೃತಿ ಸಮಿತಿಯು ಭಾರತದ ವಿವಿಧ ಸ್ಥಳಗಳಲ್ಲಿ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಗಳ ಆಯೋಜನೆ ಮಾಡುತ್ತದೆ. ಅದರಲ್ಲಿ ಸಮಿತಿಯ ಕಾರ್ಯಕರ್ತರು ಹಿಂದೂ ಧರ್ಮದ ಮೇಲಾಗುವ ಹಾನಿಗಳನ್ನು ವಿವರಿಸಿ ಜನಪ್ರಬೋಧನೆ ಮಾಡುತ್ತಾ ಇರುತ್ತಾರೆ. ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡುವ ಸಮಿತಿಯ ಕಾರ್ಯಕರ್ತರು ಸಾಧನೆಯನ್ನು ಮಾಡುತ್ತಾರೆ ಮತ್ತು ಅವರು ಕೂಡ ಸ್ವಭಾವದೋಷ ಹಾಗೂ ಅಹಂಗಳ ನಿರ್ಮೂಲನೆಗಾಗಿ ಪ್ರಯತ್ನಿಸುತ್ತಿರುತ್ತಾರೆ. ವಕ್ತಾರನ ಸಾಧನೆಯಾದಷ್ಟು, ಅವರ ವಾಣಿಯಲ್ಲಿ ಚೈತನ್ಯ ಉಂಟಾಗಿ, ಅವರ ಭಾಷಣ ಪ್ರಭಾವಶಾಲಿಯಾಗುತ್ತದೆ. ಸಾಧನೆಯಿಂದ ವಾಣಿ ಚೈತನ್ಯಮಯವಾಗಿ, ವಕ್ತಾರನು ಹೇಳಿದ ಅಂಶಗಳು ಕೇಳುವವರ ಮನಸ್ಸಿನಲ್ಲಿ ಆಳವಾಗಿ ಮೂಡುತ್ತದೆ.

ಒಬ್ಬ ವಕ್ತಾರರು ಭಾವದ ಸ್ತರದಲ್ಲಿ ಪ್ರಯತ್ನಿಸಿ ಸಭೆಯಲ್ಲಿ ಮಾತನಾಡಿದಾಗ, ಅವರಿಗೆ ತಮ್ಮ ಮಾತಿನಲ್ಲಿ ಒಳ್ಳೆಯ ಬದಲಾವಣೆ ಅನಿಸಿತು. ಹಿಂದೆ, ಅವರಿಗೆ ಸಭೆಯಲ್ಲಿ ಮಾತನಾಡುವಾಗ ‘ತನ್ನ ಮಾತಿನಲ್ಲಿ ಅಹಂ’ ಅನಿಸುತ್ತಿತ್ತು; ಆದರೆ ಭಾವದ ಸ್ತರದಲ್ಲಿ ಪ್ರಯತ್ನಿಸಿದಾಗ, ‘ನಾನು ಸ್ವತಃ ಮಾತನಾಡುತ್ತಿಲ್ಲ, ಆದರೆ ನನ್ನ ಮೂಲಕ ದೇವರೇ ಮಾತನಾಡುತ್ತಿದ್ದಾರೆ’ ಎಂಬ ಭಾವವನ್ನು ಅವರು ಇಟ್ಟಿದ್ದರು.

ಅದಾದ ನಂತರ ಅವರಿಗೆ ತಮ್ಮ ಮಾತಿನಲ್ಲಿ ವ್ಯಾಪಕತೆ ಬಂದಿರುವುದು ಅರಿವಾಯಿತು. ಕೆಲವು ಪ್ರಸಂಗದಲ್ಲಿ, ಅವರಿಗೆ ಪರಾತ್ಪರ ಗುರು ಡಾಕ್ಟರರ ಅಸ್ತಿತ್ವದ್ದೂ ಅರಿವಾಯಿತು. ದೇವರು ಅಥವಾ ಈಶ್ವರನು ಸರ್ವಜ್ಞಾನಿ ಇರುತ್ತಾನೆ. ವಕ್ತಾರನು ಬೌದ್ಧಿಕ ಮಟ್ಟದಲ್ಲಿ ಎಷ್ಟೇ ಪರಿಣಾಮಕಾರಿಯಾಗಿ ವಿಷಯ ಮಂಡಿಸಲು ಪ್ರಯತ್ನಿಸಿದರೂ, ಆದರೆ ಈಶ್ವರನು ಕೇಳುಗರ ಮನಸ್ಸಿನ ಆಳವನ್ನು ಗ್ರಹಿಸಬಲ್ಲನು ಮತ್ತು ಇದರಿಂದ, ಭಾವ ಇಡುವುದರಿಂದ ವಕ್ತಾರರು ಕೇಳುಗರ ಮನಸ್ಸಿನಲ್ಲಿ ಇರುವ ಪ್ರಶ್ನೆಗಳಿಗೆ ಅಥವಾ ಯೋಚನೆಗೆ ಚಾಲನೆ ನೀಡುವ ವಿಷಯವನ್ನು ಪರಿಣಾಮಕಾರಿಯಾಗಿ ಮಂಡಿಸಬಲ್ಲನು. ಅದರ ಫಲವಾಗಿ, ಕೇಳುಗರೊಂದಿಗೆ ಆತ್ಮೀಯತೆ ಬೆಳೆಸುವುದು, ಅವರನ್ನು ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳುವುದು ಮತ್ತು ಸ್ವತಃದಲ್ಲಿ ವ್ಯಾಪಕತೆ ತರುವುದು,  ಮುಂತಾದವುಗಳನ್ನು ಅವನು ಸಹಜವಾಗಿ ಮಾಡಬಲ್ಲನು. ಆದ್ದರಿಂದ, ಸಭೆಯಲ್ಲಿ ಮಾತನಾಡುವಾಗ ‘ನಾನಲ್ಲ, ದೇವರೇ ನನ್ನ ಮೂಲಕ ಮಾತನಾಡುತ್ತಿದ್ದಾರೆ,’ ಎಂಬ ಭಾವವನ್ನಿಡಿ !

– ಒಬ್ಬ ಸಾಧಕ (೨೨.೨.೨೦೨೪)