ಭಾರತದ ವ್ಯಸನಾಧೀನ ಯುವ ಪೀಳಿಗೆ !

ಭಾರತದಲ್ಲಿನ ಮಹಾವಿದ್ಯಾಲಯದ ಯುವಕ-ಯುವತಿಯರು, ಶಾಲಾ ವಿದ್ಯಾರ್ಥಿಗಳು ತಂಬಾಖೂ, ಸಿಗರೇಟು, ಮದ್ಯ ಮತ್ತು ಅಮಲೀ ಪದಾರ್ಥ ಇವುಗಳಂತಹ ವ್ಯಸನಗಳಿಗೆ ಬಲಿಯಾಗಿದ್ದಾರೆ. ಗುರುಕುಲದ ಪರಂಪರೆ ಇರುವ ಈ ಭಾರತಕ್ಕೆ ಇದು ತುಂಬಾ ಲಜ್ಜಾಸ್ಪದ ಮತ್ತು ಖೇದಜನಕ ಸಂಗತಿಯಾಗಿದೆ. ಭಾರತದ ಶತ್ರು ರಾಷ್ಟ್ರಗಳು ಭಾರತದ ಯುವ ಪೀಳಿಗೆಯನ್ನು ಅಮಲೀ ಪದಾರ್ಥಕ್ಕೆ ಹೇಗೆ ಬಲಿಯಾಗಿಸಬೇಕು ಎಂಬುದಕ್ಕಾಗಿ ದೊಡ್ಡ ಷಡ್ಯಂತ್ರವನ್ನು ರಚಿಸಿದ್ದಾರೆ ಮತ್ತು ದುರದೃಷ್ಠವಶಾತ್ ಭಾರತದ ಯುವ ಪೀಳಿಗೆಯು ಅದಕ್ಕೆ ಬಲಿಯಾಗಿದೆ. ಪಂಜಾಬ್‌ನಲ್ಲಿ ಅಮಲೀ ಪದಾರ್ಥಗಳ ಸೇವನೆಯಿಂದ ಹಿಂದು ಯುವಕರ ಸರ್ವನಾಶವಾಗಿದೆ. ಮಹಾವಿದ್ಯಾಲಯಗಳ ಮುಂದೆ ತಂಬಾಖೂಗಳ ಕಾನೂನು ಬಾಹಿರ ಅಂಗಡಿಗಳು ಕಂಡುಬರುತ್ತವೆ; ಅದರೆ ಅದರ ಮೇಲೆ ಕಾರ್ಯಾಚರಣೆಯಾಗುತ್ತಿರುವುದು ಕಂಡುಬರುವುದಿಲ್ಲ. ಧರ್ಮಾಚರಣೆಯನ್ನು ಮಾಡುವ ಮಕ್ಕಳು ವ್ಯಸನಗಳಿಗೆ ಬಲಿ ಬೀಳುವ ಅನುಪಾತವು (ಉದಾಹರಣೆ) ಕಡಿಮೆಯಿದೆ. ಅದುದರಿಂದ ವ್ಯಸನದಿಂದ ದೂರವಿರಲು ಯುವಕರು ಧರ್ಮಾಚರಣೆ ಮಾಡುವುದೇ ಯೋಗ್ಯವಾದ ಉಪಾಯವಾಗಿದೆ !

‘ಐಐಟಿ’ ಕಾನಪುರದ ನೂರಾರು ವಿದ್ಯಾರ್ಥಿಗಳು ಅಮಲು ಪದಾರ್ಥಗಳಿಗೆ ಬಲಿ !

‘ಕಾನಪುರದ ‘ಐಐಟಿ ಕಾನಪುರ’ ಎಂಬ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ನೂರಾರು ವಿಧ್ಯಾರ್ಥಿಗಳು ಅಮಲು ಪದಾರ್ಥಗಳಿಗೆ ಬಲಿಯಾಗಿರುವ ಮಾಹಿತಿಯನ್ನು ಆಡಳಿತವರ್ಗವು ಮಾಡಿದ ಆಂತರಿಕ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಇದರ ಬಗೆಗೆ ಐಐಟಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಾ. ಮಣೀಂದ್ರ ಅಗ್ರವಾಲ ಇವರು “ಇದು ನಮಗಾಗಿ ಗಂಡಾಂತರವಾಗಿದೆ. ಇದರ ಬಗ್ಗೆ ಜಿಲ್ಲಾ ನ್ಯಾಯದಂಡಾಧಿಕಾರಿ ಸುರೇಂದ್ರ ಸಿಂಹ ಇವರಿಗೆ ಮಾಹಿತಿಯನ್ನು ನೀಡಲಾಗಿದೆ. ಅವರೂ ಈ ಪ್ರಕರಣದ ಮೇಲೆ ಕಾರ್ಯವನ್ನು ಮಾಡುವ ಆಶ್ವಾಸನೆಯನ್ನು ಕೊಟ್ಟಿದ್ದಾರೆ” ಎಂದು ಹೇಳಿದ್ದಾರೆ.

ಮಹಾವಿದ್ಯಾಲಯದ ತೃತೀಯಾಂಶ ವಿದ್ಯಾರ್ಥಿಗಳು ಮದ್ಯ ಸೇವಿಸುತ್ತಾರೆ !

‘ಮೆಡಿಕಲ್ ಮತ್ತು ಅಪ್ಲಾಡ್ ಸೈನ್ಸ’ ವರದಿ

‘ಗೋವಾದಲ್ಲಿ ಮಹಾವಿದ್ಯಾಲಯಗಳಲ್ಲಿನ ಶೇ ೩೪.೧೦ ರಷ್ಟು (ತೃತೀಯಾಂಶ) ವಿದ್ಯಾರ್ಥಿಗಳು ಮದ್ಯಸೇವನೆಯನ್ನು ಮಾಡುತ್ತಿದ್ದು ಅದರಲ್ಲಿ ವಿದ್ಯಾರ್ಥಿನಿಯರ ಪ್ರಮಾಣವು (ಅನುಪಾತವು) ಶೇ. ೩೧.೮ ರಷ್ಟು ಇದ್ದು ವಿದ್ಯಾರ್ಥಿಗಳ ಪ್ರಮಾಣವು ಶೇ. ೩೯.೧೮ ರಷ್ಟು ಇದೆ. ಮಹಾವಿದ್ಯಾಲಯದ ಸುಮಾರು ಅರ್ಧಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಅವರಿಗೆ ‘ಮದ್ಯದ ದುಷ್ಪರಿಣಾಮದ ಬಗ್ಗೆ ಯಾರು ಏನನ್ನೂ ಹೇಳಿಲ್ಲ’, ಎಂದು ಹೇಳಿದ್ದಾರೆ. ‘ಗೋವಾದಲ್ಲಿನ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಮದ್ಯಸೇವನೆ ಮತ್ತು ಅದರ ಪರಿಣಾಮದ ಬಗೆಗೆ ಅವರಿಗಿರುವ ಅರಿವು ಇದರ ಬಗ್ಗೆ ‘ಮೆಡಿಕಲ್ ಆಂಡ್ ಅಪ್ಲಾಯಡ್ ಸೈನ್ಸ್’ ಈ ಅಂತರರಾಷ್ಟ್ರೀಯ ಜರ್ನಲ್ ನಲ್ಲಿ ಮುದ್ರಿಸಲಾದ ವರದಿಯಲ್ಲಿ ಈ ಮಾಹಿತಿಯನ್ನು ಕೊಡಲಾಗಿದೆ, ಎಂಬ ವಾರ್ತೆಯನ್ನು ‘ದ ಗೋವನ ವಾರ್ತಾ’ ಈ ವರ್ತಮಾನಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು’.