‘ಯಜ್ಞ ಮಾಡುವುದರಿಂದ ವಾಯುಮಾಲಿನ್ಯವಾಗುವುದಿಲ್ಲ, ತದ್ವಿರುದ್ಧ ವಾತಾವರಣ ಶುದ್ಧವಾಗುತ್ತದೆ’, ಎಂಬುದನ್ನು ಕಂಡುಹಿಡಿದ ಭಾರತೀಯ ಋಷಿಗಳು ಶ್ರೇಷ್ಠರು !’ – ಫ್ರೆಂಚ್ ಸಂಶೋಧನೆ
೧. ಫ್ರಾನ್ಸಿನ ‘ಟ್ರೆಲೆ’ ಎಂಬ ವಿಜ್ಞಾನಿಯು ಯಜ್ಞದ (ಹವನದ) ವಿಷಯದಲ್ಲಿ ಮಾಡಿದ ಸಂಶೋಧನೆ !
೧ ಅ. ಮಾವಿನ ಸಮಿಧೆಗಳಿಂದ ಮಾಡಿದ ಯಜ್ಞದಿಂದ ‘ಫಾರ್ಮಿಕ ಅಲ್ಡಿಹೈಡ್’ ಎಂಬ ಅನಿಲ ಉತ್ಪನ್ನವಾಗುತ್ತಿದ್ದು, ಈ ಅನಿಲದಿಂದ ವಾತಾವರಣದಲ್ಲಿರುವ ಹಾನಿಕರ ವೈರಾಣುಗಳು ಹಾಗೂ ಜೀವಾಣುಗಳು ನಾಶವಾಗಿ ವಾತಾವರಣ ಶುದ್ಧವಾಗುತ್ತದೆ : ‘ಫ್ರಾನ್ಸಿನ ‘ಟ್ರೆಲೆ’ ಎಂಬ ವಿಜ್ಞಾನಿಯು ಯಜ್ಞದ (ಹವನದ) ವಿಷಯದಲ್ಲಿ ಸಂಶೋಧನೆಯನ್ನು ಮಾಡಿದರು. ಆಗ ಅವರಿಗೆ ತಿಳಿದ ಅಂಶವೆಂದರೆ, ಯಜ್ಞವನ್ನು ಮುಖ್ಯವಾಗಿ ಮಾವಿನ ಸಮಿಧೆಗಳಿಂದ ಮಾಡಲಾಗುತ್ತದೆ. ಮಾವಿನ ಕಟ್ಟಿಗೆಗಳನ್ನು ಸುಟ್ಟಾಗ ‘ಫಾರ್ಮಿಕ ಅಲ್ಡಿಹೈಡ್’ ಎಂಬ ಅನಿಲವು (ಗ್ಯಾಸ್) ಉತ್ಪನ್ನವಾಗುತ್ತದೆ. ಅದು ಹಾನಿಕರ ವೈರಾಣು ಹಾಗೂ ಜೀವಾಣುಗಳನ್ನು ನಾಶ ಮಾಡಿ ವಾತಾವರಣವನ್ನು ಶುದ್ಧ ಮಾಡುತ್ತದೆ.’ ಈ ಸಂಶೋಧನೆಯ ನಂತರವೇ ಆ ವಿಜ್ಞಾನಿಗೆ ಈ ಅನಿಲದ ಬಗ್ಗೆ ಹಾಗೂ ಅದನ್ನು ತಯಾರಿಸುವ ಪದ್ದತಿಯ ಬಗ್ಗೆ ತಿಳಿಯಿತು.
೨. ‘ಟೌಟಿಕ್’ ಎಂಬ ವಿಜ್ಞಾನಿಯು ಯಜ್ಞದ ಬಗ್ಗೆ ಮಾಡಿದ ಸಂಶೋಧನೆ !
೨ ಅ. ಯಜ್ಞದ ಸಮಯದಲ್ಲಿ ಯಜ್ಞದ ಸಮೀಪ ಅರ್ಧ ಗಂಟೆ ಕುಳಿತರೆ ಅಥವಾ ಶರೀರಕ್ಕೆ ಹವನದ ಧೂಮದ ಸಂಪರ್ಕವಾದರೆ ಗಾಳಿಯಲ್ಲಿನ ಹಾನಿಕರ ರೋಗಗಳನ್ನು ಹರಡುವ ಜೀವಾಣುಗಳು ನಾಶವಾಗಿ ಶರೀರ ಶುದ್ಧವಾಗುತ್ತದೆ : ‘ಟೌಟಿಕ್’ ಎಂಬ ವಿಜ್ಞಾನಿಯು ಯಜ್ಞದ ವಿಷಯದಲ್ಲಿ ಮಾಡಿದ ಸಂಶೋಧನೆಯಲ್ಲಿ, ಯಜ್ಞ ನಡೆದಾಗ ಅರ್ಧ ಗಂಟೆ ಯಜ್ಞದ ಸಮೀಪ ಕುಳಿತುಕೊಂಡರೆ ಅಥವಾ ಹವನದ ಧೂಮವು ಶರೀರಕ್ಕೆ ಸ್ಪರ್ಶವಾದರೆ, ‘ಟೈಫಾಯಿಡ್’ನಂತಹ (ವಿಷಮಶೀತಜ್ವರದಂತಹ) ಹಾನಿಕರ ರೋಗಗಳನ್ನು ಹರಡುವ ಜೀವಾಣುಗಳು ನಾಶವಾಗುತ್ತವೆ ಮತ್ತು ಶರೀರ ಶುದ್ಧವಾಗುತ್ತದೆ.
೩. ‘ರಾಷ್ಟ್ರೀಯ ವನಸ್ಪತಿ ಅನುಸಂಧಾನ ಸಂಸ್ಥಾನ, ಲಖನೌ’ನ ವಿಜ್ಞಾನಿಗಳು ಹವನದ ಬಗ್ಗೆ ಮಾಡಿದ ಸಂಶೋಧನೆ !
೩ ಅ. ಸಂಶೋಧನೆಯ ನಂತರ ‘ಯಜ್ಞದಿಂದ ವಾತಾವರಣದಲ್ಲಿನ ಹಾನಿಕರ ವೈರಾಣುಗಳು ಮತ್ತು ಜೀವಾಣುಗಳು ನಾಶವಾಗುತ್ತವೆ’, ಎಂಬುದು ಗಮನಕ್ಕೆ ಬರುವುದು : ಯಜ್ಞದ (ಹಮವನದ) ಮಹತ್ವವನ್ನು ಕೇಳಿ ‘ರಾಷ್ಟ್ರೀಯ ವನಸ್ಪತಿ ಅನುಸಂಧಾನ ಸಂಸ್ಥಾನ, ಲಖನೌ’ನಲ್ಲಿನ ವಿಜ್ಞಾನಿಗಳು ‘ನಿಜವಾಗಿಯೂ ಯಜ್ಞದಿಂದ ವಾತಾವರಣವು ಶುದ್ಧವಾಗುತ್ತದೆಯೇ ? ಜೀವಾಣುಗಳು ನಾಶವಾಗುತ್ತವೆಯೇ?’, ಎಂಬುದರ ಸಂಶೋಧನೆಯನ್ನು ಮಾಡಿದರು. ಅವರು ಗ್ರಂಥಗಳಲ್ಲಿ ವರ್ಣಿಸಿರುವ ಯಜ್ಞಸಾಮಗ್ರಿಗಳನ್ನು ಸಂಗ್ರಹಿಸಿದರು ಮತ್ತು ಅವುಗಳನ್ನು ಸುಟ್ಟ ನಂತರ, ‘ಯಜ್ಞದಿಂದ ಅಲ್ಲಿನ ವಾತಾವರಣದಲ್ಲಿರುವ ಜೀವಾಣುಗಳು ಹಾಗೂ ವೈರಾಣುಗಳು ನಾಶವಾಗುತ್ತವೆ’ ಎಂಬುದು ಅವರ ಗಮನಕ್ಕೆ ಬಂದಿತು.
೩ ಆ. ‘ಕೇವಲ ಮಾವಿನ ಕಟ್ಟಿಗೆಗಳನ್ನು ಸುಟ್ಟರೆ ಜೀವಾಣುಗಳು ನಾಶ ವಾಗುವುದಿಲ್ಲ, ಯಜ್ಞಸಾಮಗ್ರಿಗಳನ್ನು ಉಪಯೋಗಿಸಿ ಯಜ್ಞವನ್ನು (ಹವನವನ್ನು) ಮಾಡಿದರೆ ಮಾತ್ರ, ಅಲ್ಲಿನ ವಾತಾವರಣದಲ್ಲಿನ ಜೀವಾಣುಗಳು ಮತ್ತು ವೈರಾಣುಗಳು ನಾಶವಾಗುತ್ತವೆ : ಅನಂತರ ಅವರು ವಿವಿಧ ರೀತಿಯ ಕಟ್ಟಿಗೆಗಳ ಹೊಗೆಯ ಮೇಲೆ ಸಂಶೋಧನೆಯನ್ನು ಮಾಡಿದರು. ಆಗ, ‘ಕೇವಲ ೧ ಕಿಲೋ ಮಾವಿನ ಕಟ್ಟಿಗೆಗಳನ್ನು ಸುಡುವುದರಿಂದ ಅಲ್ಲಿನ ವಾತಾವರಣದಲ್ಲಿದ್ದ ವೈರಾಣುಗಳು ಹೆಚ್ಚೇನೂ ಕಡಿಮೆಯಾಗುವುದಿಲ್ಲ, ಆದರೆ ಅದಕ್ಕೆ ಅರ್ಧ ಕಿಲೋ ಯಜ್ಞದ ಸಾಮಗ್ರಿಗಳನ್ನು ಹಾಕಿ ಸುಟ್ಟರೆ, ಕೇವಲ ಒಂದು ಗಂಟೆಯೊಳಗೆ ಆ ಕೋಣೆಯಲ್ಲಿನ ವಾತಾವರಣದಲ್ಲಿದ್ದ ಜೀವಾಣುಗಳು (ಬೆಕ್ಟೇರಿಯಾ) ಮತ್ತು ವೈರಾಣುಗಳ (ವೈರಸ) ಪ್ರಮಾಣ ಶೇ. ೯೫ ರಷ್ಟು ಕಡಿಮೆಯಾಗುತ್ತದೆ ಎಂಬುದು ಅವರ ಗಮನಕ್ಕೆ ಬಂದಿತು.’
೩ ಆ. ಯಜ್ಞದ ಪರಿಣಾಮವು ಒಂದು ತಿಂಗಳವರೆಗೆ ಉಳಿಯುತ್ತದೆ ಎಂಬುದು ಸಿದ್ಧವಾಗುವುದು : ವಿಜ್ಞಾನಿಗಳು ನಂತರವೂ ಯಜ್ಞದ ಕೋಣೆಯಲ್ಲಿನ ವಾತಾವರಣದಲ್ಲಿನ ಜೀವಾಣುಗಳ ಪರೀಕ್ಷಣೆಯನ್ನು ಮಾಡುತ್ತಿದ್ದರು. ಆಗ ಅವರಿಗೆ, ಕೋಣೆಯ ಬಾಗಿಲನ್ನು ತೆರೆದ ನಂತರ ಯಜ್ಞದ ಧೂಮವು ಪೂರ್ಣ ಹೊರಗೆ ಹೋದ ನಂತರ ೨೪ ಗಂಟೆಗಳ ನಂತರವೂ ಕೋಣೆಯಲ್ಲಿನ ಗಾಳಿಯಲ್ಲಿನ ಜೀವಾಣುಗಳ ಪ್ರಮಾಣ ಬೇರೆ ಸ್ಥಳಗಳಿಗಿಂತ ಶೇ. ೮೬ ರಷ್ಟು ಕಡಿಮೆಯಿರುವುದು ಗಮನಕ್ಕೆ ಬಂದಿತು. ಮುಂದೆ, ಕೋಣೆಯಲ್ಲಿನ ಗಾಳಿಯಲ್ಲಿ ವೈರಾಣುಗಳ ಪ್ರಮಾಣವು ೩೦ ದಿನಗಳ ನಂತರವೂ ಇತರ ಸ್ಥಳಗಳಿಗಿಂತ ಬಹಳ ಕಡಿಮೆಯಿರುವುದು ಅನುಭವಕ್ಕೆ ಬಂದಿತು. ಇದರಿಂದ ಒಮ್ಮೆ ಮಾಡಿದ ಯಜ್ಞದ ಧೂಮದ ಪರಿಣಾಮವು ಒಂದು ತಿಂಗಳವರೆಗೆ ಉಳಿಯುತ್ತದೆ ಎಂಬುದೂ ಅವರಿಗೆ ತಿಳಿಯಿತು.’
೩ ಇ. ‘ಎಥ್ನೋಫಾರ್ಮಾಕೊಲೋಜಿಯ (ಮಾನವವಂಶಶಾಸ್ತ್ರದ) ಸಂಶೋಧನಾಪತ್ರಿಕೆಯಲ್ಲಿ (ರಿಸರ್ಚ್ ಜರ್ನಲ್ ಆಫ್ ಎಥ್ನೋಫಾರ್ಮಾಕೊಲೋಜೀ ೨೦೦೭) ಈ ವರದಿಯನ್ನು (ರಿಪೋರ್ಟ್) ಪ್ರಕಟಿಸಲಾಯಿತು : ಡಿಸೆಂಬರ್ ೨೦೦೭ ರಲ್ಲಿ ‘ಎಥ್ನೋಫಾರ್ಮಾಕೊಲೋಜಿಯ ಸಂಶೋಧನಾಪತ್ರಿಕೆಯಲ್ಲಿ (ರಿಸರ್ಚ್ ಜರ್ನಲ್ ಆಫ್ ಎಥ್ನೋಫಾರ್ಮಾಕೊಲೋಜೀ ೨೦೦೭) ಪ್ರಕಟಿಸಿದ್ದೇನೆಂದರೆ, ಯಜ್ಞದಿಂದ ಕೇವಲ ಮನುಷ್ಯರಿಗೆ ಮಾತ್ರವಲ್ಲ, ವನಸ್ಪತಿ ಮತ್ತು ಬೆಳೆಗಳನ್ನು ನಾಶ ಮಾಡುವ ಜೀವಾಣುಗಳು ಕೂಡ ನಾಶವಾಗುತ್ತವೆ. ಈ ಸಂಶೋಧನೆಯಿಂದ ಬೆಳೆಗಳಿಗಾಗಿ ಉಪಯೋಗಿಸುವ ರಾಸಾಯನಿಕ ಗೊಬ್ಬರಗಳ ಬಳಕೆಯ ಪ್ರಮಾಣವು ಕಡಿಮೆಯಾಗುವುದು.
(ಆಧಾರ : ಮಾಸಿಕ, ‘ವೈದಿಕ ಉಪಾಸನಾ’, ವರ್ಷ ೨, ಸಂಚಿಕೆ ೬, ಆಗಸ್ಟ್-ಸೆಪ್ಟೆಂಬರ್ ೨೦೧೮)