ಇಂದಿನ ಯುವಕರ ದಯನೀಯ ಸ್ಥಿತಿಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯಯೋಜನೆಗಳು !

(ಪ್ರತಿನಿಧಿಕ ಛಾಯಾಚಿತ್ರ)

೧. ಯುವಕರು ಸ್ವಾವಲಂಬಿಯಾಗಿ ತಮ್ಮ ಸ್ವತಃದ ವ್ಯವಸಾಯವನ್ನು ಮಾಡಬೇಕು

 

ಇಂದಿನ ಯುವಕರು ಪದವಿಗಳ ಕಾಗದಗಳ ಬಂಡಲ್‌ನ್ನು ಕೈಯಲ್ಲಿ ಹಿಡಿದುಕೊಂಡು ಕಾರ್ಯಾಲಯಗಳ ಬಾಗಿಲನ್ನು ಬಡಿಯುವುದಕ್ಕಿಂತ ತಮ್ಮ ಸ್ವಂತ ವ್ಯವಸಾಯವನ್ನು ಪ್ರಾರಂಭಿಸಬೇಕು. ಯುವಕರು ಕೆಲಸವನ್ನು ಮಾಡುವಾಗ ಯಾವುದನ್ನೂ ಶ್ರೇಷ್ಠ ಅಥವಾ ಕನಿಷ್ಠವೆಂದು ತಿಳಿಯಬಾರದು. ಕರ್ಮವೀರ ಭಾವೂರಾವ್ ಪಾಟೀಲ ಇವರು, ‘ನನ್ನ ವಿಶ್ವವಿದ್ಯಾಲಯದಲ್ಲಿನ ಪದವೀಧರನು ಹವಾನಿಯಂತ್ರಿತ  (ಏರಕಂಡಿಶನ್) ಕಚೇರಿಯಲ್ಲಿ ಹೇಗೆ ಕೆಲಸವನ್ನು ಮಾಡಿ ಆನಂದ ಪಡುತ್ತಾನೆಯೋ ಹಾಗೆಯೇ, ಅವನು ದನಗಳ ಕೊಟ್ಟಿಗೆಯಲ್ಲಿನ ಸೆಗಣಿಯನ್ನು ತೆಗೆಯುವಾಗಲೂ ಆನಂದ ಪಡುತ್ತಾನೆ’ ಎಂದು ಹೇಳುತ್ತಿದ್ದರು. ಇಂದಿನ ಯುವಕರು ಅವರ ಈ ಹೇಳಿಕೆಯನ್ನು ಈಗ ಸಂಪೂರ್ಣ ಮರೆತಿದ್ದಾರೆ.

೨. ದೇಶದ ಸೇವೆಯನ್ನು ಮಾಡಲು ಸೈನ್ಯದಲ್ಲಿ ಸೇರಿಕೊಳ್ಳಬೇಕು

ಸ್ವಾಮಿ ವಿವೇಕಾನಂದರು ಒಂದು ಪ್ರಸಂಗದಲ್ಲಿ, ‘ಇಂದಿನ ಯುವಕರಿಗೆ ದೇಶದ ರಕ್ಷಣೆಯನ್ನು ಹೇಗೆ ಮಾಡಬೇಕು, ಎಂಬುದಕ್ಕಿಂತ ಕೂದಲುಗಳ ರಕ್ಷಣೆಯನ್ನು ಹೇಗೆ ಮಾಡಬೇಕು ?’, ಎಂಬುದರ ಬಗ್ಗೆ ಜಾಸ್ತಿ ಚಿಂತೆಯಿದೆ’ ಎಂದು ಹೇಳಿದ್ದರು. ಶಿಕ್ಷಣ ಪೂರ್ಣವಾದ ನಂತರ ಯುವಕರು ಅಂತರ್ಮುಖರಾಗಿ ದೇಶದ ಸೇವೆಯನ್ನು ಮಾಡಲು ಸೈನ್ಯದಲ್ಲಿ ಸೇರಿಕೊಳ್ಳಬೇಕು. ‘ದೇಶವು ನನಗೆ ಏನು ಕೊಟ್ಟಿದೆ ?’, ಎಂಬುದಕ್ಕಿಂತ ನಾನು ದೇಶಕ್ಕೆ ಏನು ಕೊಡಬಹುದು ?’, ಎಂಬ ವಿಚಾರವನ್ನು ಯುವಕರು ಮಾಡಬೇಕು.’

೩. ಸಮಾಜತಜ್ಞರು ಮತ್ತು ವಿಚಾರವಂತರು ಇಂದು ‘ಯುವಕರು ಹೀಗೇಕೆ ಆಗಿದ್ದಾರೆ ?’, ಎಂಬುದನ್ನು ಅಂತರ್ಮುಖರಾಗಿ ವಿಚಾರ ಮಾಡುವುದು ಆವಶ್ಯಕವಾಗಿದೆ !

ಕುಟುಂಬದಲ್ಲಿನ, ಹಾಗೆಯೇ ಸಮಾಜದಲ್ಲಿನ ತಜ್ಞರು, ವಿಚಾರವಂತರು, ರಾಜಕಾರಣಿಗಳು ಮುಂತಾದವರು ಇಂದು ‘ಯುವಕರು ಹೀಗೇಕೆ ಆಗಿದ್ದಾರೆ ?’, ಎಂಬುದರ ವಿಚಾರವನ್ನು ಮಾಡಬೇಕು. ಅವರಿಗೆ ಅವರ ಹಕ್ಕುಗಳಿಗಿಂತ ಕರ್ತವ್ಯದ ಅರಿವನ್ನು ಮಾಡಿಕೊಡಬೇಕು. ನಾವು ಆತ್ಮಪರೀಕ್ಷಣೆಯನ್ನು ಮಾಡುವುದು ಆವಶ್ಯಕವಾಗಿದೆ. ಎಲ್ಲ ದೋಷಗಳನ್ನು ಯುವಕರಿಗೆ ಕೊಟ್ಟು ನಾವು ಮುಕ್ತರಾಗಲು ಸಾಧ್ಯವಿಲ್ಲ. ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರರನ್ನು ಅವಲಂಬಿಸಿರುವುದರಿಂದ ಯುವಕರು ದೊಡ್ಡವರ, ಶ್ರೇಷ್ಠರ ವರ್ತನೆಯನ್ನು ನೋಡಿ ವರ್ತಿಸುತ್ತಾರೆ. ‘ಯುವಕರು ಏಕೆ ಕೆಟ್ಟು ಹೋದರು ?’, ಎಂಬುದರ ಚಿಂತನೆಯನ್ನು ಮಾಡಿ ಅದರ ಮೇಲೆ ಯೋಗ್ಯ ಉಪಾಯಯೋಜನೆಯನ್ನು ಮಾಡಬೇಕು.’

– ಪ್ರ. ದಿ. ಕುಲಕರ್ಣಿ, ಪಂಢರಾಪುರ, ಜಿಲ್ಲೆ. ಸೊಲ್ಲಾಪುರ.