ಮಹರ್ಷಿಗಳ ದಿವ್ಯ ವಾಣಿ

ಮನುಷ್ಯನು ಈಶ್ವರನು ಹಾಕಿ ಕೊಟ್ಟಿರುವ ಧರ್ಮಸಿದ್ಧಾಂತಗಳ ವಿರುದ್ಧ ಕಾರ್ಯವನ್ನು ಮಾಡುತ್ತಿರುವುದರಿಂದ ಅವನು ಅಧರ್ಮಿಯಾಗುವುದು !

ನಾಡಿವಾಚಕ ಪೂ. ಡಾ. ಓಂ ಉಲಗನಾಥ

ಜಗತ್ತಿನಲ್ಲಿನ ನೈಸರ್ಗಿಕ ಸಿಹಿ ಪದಾರ್ಥವೆಂದರೆ ‘ಜೇನುತುಪ್ಪ’. ಅದರಲ್ಲಿನ ಸಿಹಿಯನ್ನು ಈಶ್ವರನೇ ನಿರ್ಮಿಸಿದ್ದಾನೆ. ಅನೇಕ ಯುಗಗಳಿಂದ ಜೇನುನೊಣಗಳು ಜೇನುತುಪ್ಪವನ್ನು ಸಂಗ್ರಹಿಸುತ್ತವೆ. ಆ ಜೇನುನೊಣಗಳಿಗೆ ಯಾರೂ ಸಂಬಳ ಕೊಡುವುದಿಲ್ಲ. ಈಶ್ವರನು ಅವುಗಳಿಗೆ ಯಾವ ಕಾರ್ಯವನ್ನು ಒಪ್ಪಿಸಿದ್ದಾನೆಯೋ, ಅವು ಅಷ್ಟು ಕಾರ್ಯವನ್ನು ಸರಿಯಾಗಿ ಮಾಡುತ್ತವೆ; ಆದರೆ ಮನುಷ್ಯನು ಮಾತ್ರ ಈಶ್ವರನು ಹಾಕಿ ಕೊಟ್ಟಿರುವ ಧರ್ಮಸಿದ್ಧಾಂತಗಳ ವಿರುದ್ಧ ಕಾರ್ಯವನ್ನು ಮಾಡುತ್ತಾನೆ; ಆದುದರಿಂದ ಅವನು ಅಧರ್ಮಿಯಾಗಿದ್ದಾನೆ.

ಅಧ್ಯಾತ್ಮದಲ್ಲಿನ ಚೈತನ್ಯವನ್ನು ಸ್ವತಃ ಅನುಭವಿಸಬೇಕು !

ಯಾವ ರೀತಿ ಹೂವಿನ ಪರಿಮಳವನ್ನು (ಸುಗಂಧ) ಅನುಭವಿಸದ ಹೊರತು ಅದರ ಪರಿಮಳವು ಗೊತ್ತಾಗುವುದಿಲ್ಲವೋ, ಅದೇ ರೀತಿ ಸಾಧನೆಯನ್ನು ಮಾಡಿ ಅಧ್ಯಾತ್ಮದ ಅನುಭವವನ್ನು ಪಡೆಯದ ಹೊರತು ಅಧ್ಯಾತ್ಮ ಗೊತ್ತಾಗುವುದಿಲ್ಲ, ಆದುದರಿಂದ  ಮನುಷ್ಯನು ಅದರ ಬಗ್ಗೆ ಮಾತನಾಡಬಾರದು. ಹೂವಿನ ಪರಿಮಳವನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲದಂತೆಯೇ ಅಧ್ಯಾತ್ಮದಲ್ಲಿನ ಚೈತನ್ಯದ ವರ್ಣನೆಯನ್ನು ಶಬ್ದಗಳಲ್ಲಿ ಮಾಡಲು ಬರುವುದಿಲ್ಲ.

ಆಸ್ತಿಕ ಮನುಷ್ಯನು ನಾಸ್ತಿಕನ ಸಹವಾಸ ಮಾಡಬಾರದು !

ಬಿದಿರು ಕಬ್ಬಿನಂತೆ ಕಾಣಿಸುತ್ತದೆ; ಆದರೆ ನಾವು ಕಬ್ಬನ್ನು ತಿಂದ ಹಾಗೆ ಬಿದಿರನ್ನು ತಿನ್ನಲಾಗುವುದಿಲ್ಲ. ಬಿದಿರು ಎಂದರೆ ‘ನಾಸ್ತಿಕ’ ಮತ್ತು ಕಬ್ಬು ಎಂದರೆ ‘ಆಸ್ತಿಕ’. ದೇವರ ಮೇಲೆ ಶ್ರದ್ಧೆ ಇರುವವರು ಎಂದರೆ ‘ಜೇನುತುಪ್ಪ’ ಮತ್ತು ದೇವರ ಮೇಲೆ ಶ್ರದ್ಧೆ ಇಲ್ಲದವರು ಎಂದರೆ ‘ಸಕ್ಕರೆ’. ಜೇನುತುಪ್ಪವನ್ನು ತಿನ್ನುವುದರಿಂದ ರೋಗಗಳು ಬರುವುದಿಲ್ಲ. ಸಕ್ಕರೆಯನ್ನು ಹೆಚ್ಚು ಪ್ರಮಾಣದಲ್ಲಿ ತಿಂದರೆ ರೋಗಗಳಾಗುತ್ತವೆ. ಈ ಉದಾಹರಣೆಯಿಂದ ಗಮನಕ್ಕೆ ಬರುವುದೇನೆಂದರೆ, ಆಸ್ತಿಕ ಮನುಷ್ಯನು ನಾಸ್ತಿಕನ ಸಹವಾಸವನ್ನು ಮಾಡಬಾರದು !

– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೨ (೨೯.೧೦.೨೦೨೧)

ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ

‘ಕಾಲದ ಆವಶ್ಯಕತೆಯನ್ನು ಗುರುತಿಸಿ ಮಾತೃಭೂಮಿ ಮತ್ತು ಮಾತೃಭಾಷೆಯನ್ನು ತಾಯಿಯಂತೆ ಪ್ರೀತಿಸಿರಿ ಮತ್ತು ತಾಯಿಯ ಸಂದರ್ಭದಲ್ಲಿನ ಎಲ್ಲ ಕರ್ತವ್ಯಗಳನ್ನು ಜಾಗೃತವಾಗಿಡಿ !’

– ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ, ಕಲ್ಯಾಣ, ಠಾಣೆ ಜಿಲ್ಲೆ.