ಮಕ್ಕಳು ಮಣ್ಣಿನ ಮುದ್ದೆಯಂತಿರುತ್ತಾರೆ, ಅದಕ್ಕೆ ಹೇಗೆ ಆಕಾರವನ್ನು ಕೊಡುತ್ತೇವೋ ಹಾಗೆ ಅದರಿಂದ ಮೂರ್ತಿ ತಯಾರಾಗುತ್ತದೆ. ಇದಕ್ಕಾಗಿ ಮಕ್ಕಳನ್ನು ರೂಪಿಸುವಾಗ ಪಾಲಕರ ಜೊತೆಗೆ ಸಮಾಜದ ಪಾಲು ಬಹುದೊಡ್ಡದಾಗಿರುತ್ತದೆ. ಸಮಾಜದ ಪ್ರತಿಭಾವಂತರ ಪ್ರಭಾವವು ಮನಸ್ಸಿನ ಮೇಲಾಗುತ್ತಿರುತ್ತದೆ, ಹಾಗೆ ಅಯೋಗ್ಯ ಕೃತ್ಯಗಳನ್ನು ಮಾಡುವವರ ಪ್ರಭಾವವೂ ಆಗುತ್ತಿರುತ್ತದೆ. ಕೆಲವು ಪಾಲಕರು ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಬಹಳಷ್ಟು ಸುಖ ಸೌಲಭ್ಯಗಳನ್ನು ಮತ್ತು ಸುಖ ವಸ್ತುಗಳನ್ನು ಉಪಲಬ್ಧ ಮಾಡಿ ಕೊಡುತ್ತಾರೆ, ಅದರಿಂದ ಮಕ್ಕಳಿಗೆ ಅದರ ಅಭ್ಯಾಸವಾಗಿ ಅದು ಮೂಲಭೂತ ಅವಶ್ಯಕತೆಯಾಗಿಬಿಡುತ್ತದೆ. ಒಂದು ವೇಳೆ ಈ ಅನಾವಶ್ಯಕ ಬೇಕಾಗಿರುವಿಕೆಯನ್ನು ಪೂರೈಸದಿದ್ದರೆ ಅಥವಾ ಪಾಲಕರು ಕೆಲವು ಬಂಧನಗಳನ್ನು ಹಾಕಿದರೆ, ‘ಪಾಲಕರು ನಮ್ಮ ಮೇಲೆ ಅನ್ಯಾಯ ಮಾಡುತ್ತಿದ್ದಾರೆ’, ಎಂದೆನಿಸುತ್ತದೆ. ಪಾಲಕರ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ದ್ವೇಷಭಾವನೆಯು ನಿರ್ಮಾಣವಾಗುತ್ತದೆ. ಇಂತಹ ಮಕ್ಕಳು ಆತ್ಮಹತ್ಯೆಯನ್ನು ಮಾಡುತ್ತಾರೆ.
ಈ ಎಲ್ಲಾ ಘಟನೆಗಳನ್ನು ತಡೆಗಟ್ಟಲು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಸುಸಂಸ್ಕಾರವನ್ನು ಮಾಡುವುದೊಂದೇ ಪರ್ಯಾಯವಾಗಿದೆ. ಮಕ್ಕಳಿಗೆ ಅವಶ್ಯಕವಿರುವ ಹಾಗೂ ಯೋಗ್ಯ ಬೆಲೆಯ ವಸ್ತುಗಳನ್ನು ಕೊಡಬೇಕು. ಮಕ್ಕಳ ಜೀವನದಲ್ಲಿ ನಿಜವಾಗಿ ಆ ವಸ್ತುಗಳ ಅವಶ್ಯಕತೆ ಇದೆಯೇ, ಎಂದು ನೋಡಬೇಕು ಹಾಗಿಲ್ಲದಿದ್ದರೆ, ಯಾಕೆ ಎಂಬುದರ ಅರಿವನ್ನು ಅವರಿಗೆ ಮಾಡಿಕೊಡಬೇಕು. ಅವರ ಗಮನವು ದುಂದುವೆಚ್ಚದಿಂದ ಕಡಿಮೆಯಾಗಲು ಅವರ ಜೀವನಕ್ಕೆ ಮತ್ತು ಮನಸ್ಸಿಗೆ ನಿಗ್ರಹಿತ ಜೀವನದ ಶಿಸ್ತನ್ನು ಹಚ್ಚುವುದು ಅವಶ್ಯಕವಾಗಿದೆ. ಅದಕ್ಕಾಗಿ ಮಕ್ಕಳ ಮುಂದೆ ಅವರ ಧ್ಯೇಯವನ್ನು ಸತತವಾಗಿ ಇಡಬೇಕು.
ಮಕ್ಕಳ ಮನಸ್ಸಿನ ದೃಢತೆ ಮತ್ತು ಸಹನಶೀಲತೆಯನ್ನು ಹೆಚ್ಚಿಸಲು ರಾಷ್ಟ್ರಪುರುಷರು, ದೇಶಭಕ್ತರು ಮತ್ತು ಕ್ರಾಂತಿಕಾರರು ಇವರ ಜೀವನಚರಿತ್ರೆಯ ಸಹಾಯವಾಗುವುದು. ಅದರ ಜೊತೆಗೆ ಮುಂದಿನ ಪೀಳಿಗೆಗೆ ಹಿಂದೂ ಧರ್ಮದ ಮಹಾನ ಪರಂಪರೆಯ ಪರಿಪಾಠ ಮಾಡಿದ್ದಲ್ಲಿ ಮಕ್ಕಳ, ಜೊತೆಗೆ ರಾಷ್ಟ್ರದ ಉಜ್ವಲ ಭವಿಷ್ಯದ ಪ್ರಾರಂಭವಾಗುವುದು, ಇದರಲ್ಲಿ ಸಂದೇಹವೇ ಇಲ್ಲ. ಮಕ್ಕಳಲ್ಲಿ ಧರ್ಮಾಚರಣೆಯ ರೂಢಿಯನ್ನು ಮೂಡಿಸುವುದರಿಂದ ಅವರ ಜೀವನವು ಸಂಯಮೀ ಮತ್ತು ಸುಸಂಸ್ಕರಿತವಾಗುವುದಕ್ಕೆ ಸಹಾಯವಾಗುತ್ತವೆ; ಆದರೆ ಅದಕ್ಕಾಗಿ ಮೊದಲು ಪಾಲಕರು ಆ ರೀತಿಯ ಜೀವನವನ್ನು ಅಂಗೀಕರಿಸವುದು ಅವಶ್ಯಕವಾಗಿದೆ.’
– ಸೌ. ಪ್ರೀತಿ ಜಾಖೋಟಿಯಾ, ದೆಹಲಿ (ಪೂರ್ವಾಶ್ರಮದ ಕು. ಋತುಜಾ ಶಿಂದೆ, ಪುಣೆ) (೨೨.೧. ೨೦೧೬)